Pregnancy Myths: ಗರ್ಭಿಣಿಯರ ಆಹಾರದ ಬಗ್ಗೆ ಎಷ್ಟು ಮೂಢನಂಬಿಕೆಗಳಿವೆ ಗೊತ್ತಾ?

Food Habits: ಆಹಾರ ಮತ್ತು ಪೌಷ್ಠಿಕಾಂಶದ ವಿಚಾರಕ್ಕೆ ಬಂದಾಗ ಹಲವು ವಿಚಾರಗಳನ್ನು ಒಪ್ಪಿಕೊಳ್ಳಬಹುದು, ಆದರೆ ಉಳಿದ ವಿಚಾರಗಳನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಗರ್ಭಿಣಿಯರ ಆಹಾರದ ವಿಚಾರದಲ್ಲಿ ಹಲವು ಮೂಢನಂಬಿಕೆಗಳಿವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Pregnancy ಒಂದು ಅದ್ಭುತವಾದ ಪ್ರಯಾಣ. ಈ ಸಮಯದಲ್ಲಿ  ಮಹಿಳೆ ದೈಹಿಕವಾಗಿ ಹಾಗೂ ಭಾವನಾತ್ಮಕವಾಗಿ ಕೆಲವು ಅಗಾಧ ಬದಲಾವಣೆಗಳನ್ನು ಅನುಭವಿಸಬೇಕಾಗುತ್ತದೆ. ಈ ಬದಲಾವಣೆಗಳೊಂದಿಗೆ, ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ.

ಪ್ರತಿ ಸಂಸ್ಕೃತಿಯು ಗರ್ಭಾವಸ್ಥೆಯಲ್ಲಿ ಹಲವು  ನಿರ್ಬಂಧಗಳನ್ನು ಹಾಕಲಾಗಿದೆ.  ವಿಶೇಷವಾಗಿ ಆಹಾರ ಮತ್ತು ಪೌಷ್ಠಿಕಾಂಶದ ವಿಚಾರಕ್ಕೆ ಬಂದಾಗ ಹಲವು ವಿಚಾರಗಳನ್ನು ಒಪ್ಪಿಕೊಳ್ಳಬಹುದು, ಆದರೆ ಉಳಿದ ವಿಚಾರಗಳನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಗರ್ಭಿಣಿಯರ ಆಹಾರದ ವಿಚಾರದಲ್ಲಿ ಹಲವು ಮೂಢನಂಬಿಕೆಗಳಿವೆ. ಆ ಮೂಢನಂಬಿಕೆಗಳು ಯಾವುದೂ ಮತ್ತು ವಾಸ್ತವವೇನು ಎಂಬುದು ಇಲ್ಲಿದೆ.

ಪಪ್ಪಾಯಿ ತಿನ್ನುವುದು ಗರ್ಭಪಾತಕ್ಕೆ ಕಾರಣವಾಗಬಹುದು.

ಚೆನ್ನಾಗಿ ಹಣ್ಣಾದ ಪಪ್ಪಾಯಿ ಸುರಕ್ಷಿತ ಮತ್ತು ಇದು ವಿಟಮಿನ್ ಎ, ಬಿ ಮತ್ತು ಪೊಟ್ಯಾಸಿಯಮ್‌ನ ಅತ್ಯುತ್ತಮ ಮೂಲ ಕೂಡ ಎಂದು ವೈದ್ಯರು ಹೇಳುತ್ತಾರೆ.  ಇದು ಫೋಟಸ್‌ನ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ. ಆದರೆ, ಹಣ್ಣಾಗದ ಅಂದರೆ ಪಪ್ಪಾಯಿ ಕಾಯಿಗಳನ್ನು ಸೇವನೆ ಮಾಡಬಾರದು.ಅದು ಆಕ್ಸಿಟೋಸಿನ್ ಮತ್ತು ಪ್ರೊಸ್ಟಗ್ಲಾಂಡಿನ್ ನಂತಹ ಹಾರ್ಮೋನುಗಳ ಸ್ರಾವವನ್ನು ಹೆಚ್ಚಿಸುತ್ತದೆ. ಈ ಹಾರ್ಮೋನುಗಳು ಗರ್ಭಾಶಯದ ಕುಗ್ಗುವಿಕೆಗೆ ಕಾರಣವಾಗಬಹುದು ಮತ್ತು  ಬೇಗ ಹೆರಿಗೆಗೆ ಕಾರಣವಾಗುತ್ತದೆ.

ಇಬ್ಬರ ಆಹಾರ ಸೇವನೆ ಮಾಡಬೇಕು

ಗರ್ಭಿಣಿಯಾಗಿದ್ದಾಗ ಒಬ್ಬರು ಎರಡರಷ್ಟು ತಿನ್ನಬೇಕು ಎಂಬ ಈ ಮಾತು ವಾಸ್ತವವಾಗಿ ನಿಜವಲ್ಲ. ಇದನ್ನು ಅನುಸರಿಸುವುದು ಅನಾರೋಗ್ಯಕರ ಮತ್ತು ಅನಗತ್ಯ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ವಾಸ್ತವದಲ್ಲಿ, ನೀವು ಒಂದು ಮಗುವಿನೊಂದಿಗೆ ಗರ್ಭಿಣಿಯಾಗಿದ್ದರೆ ಮತ್ತು ನಿಮ್ಮ ಎತ್ತರ ಮತ್ತು ತೂಕಕ್ಕೆ ಅನುಗುಣವಾಗಿ  ಆಹಾರ ಸೇವನೆ ಮಾಡಬೇಕು. ನೀವು ಸೇವಿಸುವ ಕ್ಯಾಲೊರಿಗಳಿಗಿಂತ ನೀವು ತಿನ್ನುವ ಆಹಾರದ ಗುಣಮಟ್ಟದ ಮೇಲೆ ಗಮನ ಹರಿಸುವುದು ಮುಖ್ಯ.

ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದ ನಂತರ ಈ ಆಹಾರಗಳ ಸೇವನೆ ಆರೋಗ್ಯಕ್ಕೆ ಉತ್ತಮ

ಗರ್ಭಿಣಿಯಾಗಿದ್ದಾಗ ಕೇಸರಿ ಸೇವನೆ ಮಗುವಿನ ಬಣ್ಣವನ್ನು ಹೆಚ್ಚಿಸುತ್ತದೆ

ಕೇಸರಿ ಅನೇಕ ಪ್ರಯೋಜನಗಳನ್ನು ಹೊಂದಿದೆ.  ಅದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿರುತ್ತವೆ, ಗರ್ಭಾವಸ್ಥೆಯಲ್ಲಿ ಮೂಡ್ ಸ್ವಿಂಗ್ ಮತ್ತು ಸೆಳೆತವನ್ನು ನಿವಾರಣೆ ಮಾಡಲು ಇದು ಸಹಾಯ ಮಾಡುತ್ತದೆ. ಆದರೆ  ಯಾವುದೇ ರೀತಿಯಲ್ಲಿ ಇದು ಚರ್ಮದ ಬಣ್ಣದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಚರ್ಮದ ಬಣ್ಣವನ್ನು ಜೆನೆಟಿಕ್ಸ್ ನಿರ್ಧರಿಸುತ್ತದೆ.

ಒಂಬತ್ತನೇ ತಿಂಗಳಲ್ಲಿ ಹೆಚ್ಚು ತುಪ್ಪ ಸೇವನೆ ಹೆರಿಗೆಯನ್ನು ಸರಾಗಗೊಳಿಸುತ್ತದೆ

ಗರ್ಭಧಾರಣೆಯ ಒಂಬತ್ತನೇ ತಿಂಗಳಲ್ಲಿ ತುಪ್ಪಹೆಚ್ಚು ಸೇವನೆ ಮಾಡುವುದು, ಸರಾಗ ಹೆರಿಗೆಗೆ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ, ಆದರೆ ಅದು ಸುಳ್ಳು, ತುಪ್ಪ ಹಲವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ.ಆದರೆ ಇದು ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತದೆ.

ಮಸಾಲೆಯುಕ್ತ ಆಹಾರವನ್ನು ಸೇವನೆ ಮಾಡಬೇಡಿ

ಇದು ನಿಜ, ಆದರೆ ಕಾರಣ ಬೇರೆ ಇದೆ. ಕೆಲವರು ಹೇಳುವಂತೆ ನೀವು ಗರ್ಭಿಣಿಯಾಗಿದ್ದಾಗ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ನಿಮ್ಮ ಮಗು ಕುರುಡನಾಗುವುದಿಲ್ಲ. ಆದರೆ ಇದು ನಿಮಗೆ ಕೆಲವು ಅಜೀರ್ಣ ಮತ್ತು ಎದೆಯುರಿಯನ್ನು ಉಂಟುಮಾಡಬಹುದು. ಗರ್ಭಾವಸ್ಥೆಯಲ್ಲಿ ನಿಮಗೆ ಅನಾನುಕೂಲತೆ ಉಂಟುಮಾಡುವ ಆಹಾರಗಳನ್ನು ನೀವು ಸೇವಿಸಬಾರದು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: