Women Health: ಪಿರಿಯಡ್ಸ್​ ಸಮಯದ ನೋವುಗಳಿಗೆ ಇಲ್ಲಿದೆ ಪರಿಹಾರ, ಶಿಲ್ಪಾ ಶೆಟ್ಟಿ ನೀಡಿದ ಸಲಹೆ ಫಾಲೋ ಮಾಡಿ

ಮುಟ್ಟಿನ ಸಮಯದ ನೋವನ್ನು ಹೇಗೆ ನಿಭಾಯಿಸಬಹುದು ಎಂದು ಬಾಲಿವಡ್ ನಟಿ, ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಸಲಹೆ ನೀಡಿದ್ದಾರೆ. ಯೋಗಾಸನದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ

  • Share this:
    ಸದಾ ಯೋಗ (Yoga), ಫಿಟ್ನೆಸ್ (Fitness) ಬಗ್ಗೆ ಒಲವು ತೋರುವ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ (Shilpa Shetty) ತನ್ನ ಯೋಗದಿಂದಲೇ ಹೆಸರುವಾಸಿ. ಸರಿಯಾದ ಆಹಾರ ಕ್ರಮ, ಪ್ರತಿನಿತ್ಯದ ಉತ್ತಮ ಆಹಾರ, ವರ್ಕೌಟ್‌ಗಳಿಂದ ಫಿಟ್ ಆಗಿದ್ದಾರೆ. 2 ಮಕ್ಕಳ ತಾಯಿ ಆದರೂ ಅದೇ ಫಿಟ್ನೆಸ್ ಕಾಪಾಡಿಕೊಂಡು ಬಂದ ಶಿಲ್ಪಾ ಆರೋಗ್ಯದ ವಿಷಯದಲ್ಲೂ ಅಷ್ಟೇ ಕಾಳಜಿ ವಹಿಸುತ್ತಾರೆ. ಪ್ರಸ್ತುತ ಶಿಲ್ಪಾ ಮುಟ್ಟಿನ ಅವಧಿಯಲ್ಲಿ (Periods Time) ಕಾಣಿಸಿಕೊಳ್ಳುವ ಸೆಳೆತವನ್ನು ನಿಭಾಯಿಸುವ ಬಗ್ಗೆ ಸಲಹೆ ಒಂದನ್ನು ನೀಡಿದ್ದಾರೆ. ಫಿಟ್ನೆಸ್ ಫ್ರೀಕ್‌ ಎಂದೇ ಹೇಳಬಹುದಾದ ಶಿಲ್ಪಾ ನೀಡಿರುವ ಸಲಹೆಗಳೇನು.? ಹೇಗೆ ಮುಟ್ಟಿನ ಸಮಯದ ಸೆಳೆತವನ್ನು ಕಡಿಮೆ ಮಾಡಬಹುದು ಇಲ್ಲಿದೆ ವರದಿ.

    ತಿಂಗಳಿಗೊಮ್ಮೆ ಪ್ರತಿಯೊಬ್ಬ ಮಹಿಳೆಯು ಋತುಚಕ್ರದ ಸಂದರ್ಭದಲ್ಲಿ ಹೊಟ್ಟೆ ನೋವು, ಸೊಂಟ ನೋವು, ಮಾನಸಿಕ ಬದಲಾವಣೆಗಳು, ಸುಸ್ತು, ಕಡು ಬಯಕೆ ಇವೆಲ್ಲವನ್ನೂ ಅನುಭವಿಸುತ್ತಾಳೆ. ಇವು ಮುಟ್ಟಿನ ಸಮಯದಲ್ಲಿ ಸಾಮಾನ್ಯವೆನಿಸಿದೂ ಅದನ್ನು ತಡೆದುಕೊಳ್ಳುವುದು ಕಷ್ಟವಾಗುತ್ತದೆ. ಇದು ಕೆಲವೇ ನಿಮಿಷಗಳು ಅಥವಾ ಗಂಟೆಗಳವರೆಗೆ ಇರಬಹುದು, ಕೆಲವೊಮ್ಮೆ ದಿನವಿಡೀ ಸತಾಯಿಸಬಹುದು.

    ಋತುಚಕ್ರದ ವೇಳೆ ಕಾಲು ಸೆಳೆತ

    ಈ ಅವಧಿಯ ಸೆಳೆತವನ್ನು ಯೋಗದ ಮೂಲಕ ಹೇಗೆ ನಿಭಾಯಿಸಬಹುದು ಎಂದು ಬಾಲಿವಡ್ ನಟಿ, ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಒಂದು ವಿಡಿಯೋವನ್ನು ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಿಮಗೆಲ್ಲಾ ತಿಳಿದಿರುವಂತೆ ಯೋಗವು ಒಂದು ಪ್ರತಿನಿತ್ಯದ ದೈಹಿಕ ಚಟುವಟಿಕೆಯಲ್ಲಿ ಪ್ರಧಾನವಾಗಿದೆ. ಅನೇಕ ರೋಗಗಳಿಗೂ ಇದು ಚಿಕಿತ್ಸಾಕಾರಿ ವ್ಯಾಯಾಮ. ಹೀಗೆ ಶಿಲ್ಪಾ ಶೆಟ್ಟಿ ಹಂಚಿಕೊಂಡಿರುವ ಯೋಗ ಭಂಗಿಗಳು ನಿಮ್ಮ ಮುಟ್ಟಿನ ಸಮಯದಲ್ಲಿ ಉಂಟಾಗುವ ಸೆಳೆತ, ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

    ಇದನ್ನೂ ಓದಿ: Women's Health: ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರಲ್ಲಿ ತೂಕ ಹೆಚ್ಚಾಗುವುದು ಯಾಕೆ ಗೊತ್ತಾ?

    ನೋವು ತಡೆಯುವ ಯೋಗ ಭಂಗಿಗಳು 

    ನಟಿ ಶಿಲ್ಪಾ ಶೆಟ್ಟಿ ಇತ್ತೀಚೆಗೆ ಯೋಗದೊಂದಿಗೆ ಮುಟ್ಟಿನ ಸೆಳೆತವನ್ನು ಹೇಗೆ ಎದುರಿಸಬೇಕೆಂದು ಸಲಹೆಯನ್ನು ಹಂಚಿಕೊಂಡಿದ್ದಾರೆ.

    "ವರ್ಷಗಳ ಕಾಲ ಮುಟ್ಟಿನ ಸೆಳೆತವನ್ನು ನಿಭಾಯಿಸುವುದು ಎಂದಿಗೂ ಸುಲಭವಲ್ಲ.. ವಿಶೇಷವಾಗಿ ನೀವು ಅನೇಕ ಜವಾಬ್ದಾರಿಗಳನ್ನು ಹೊಂದಿರುವಾಗ ನೋವನ್ನು ಸಹಿಸಿಕೊಳ್ಳುವುದು ಅಸಾಧ್ಯದ ಮಾತು. ಯೋಗವು ನಿಮಗೆ ಸಹಕಾರಿಯಾಗುತ್ತದೆ ಎಂದು ನಟಿ ಶಿಲ್ಪಾ ಶೆಟ್ಟಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: Women Health: ಪಿರಿಯಡ್ಸ್ ಸಮಯದಲ್ಲಿ ಈ ಆಹಾರಗಳನ್ನು ತಿನ್ನಲೇಬೇಡಿ

    ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡುವುದು ಮತ್ತು ಸತತವಾಗಿ ಯೋಗವನ್ನು ಅಭ್ಯಾಸ ಮಾಡುವುದು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಲೋ ಇಂಪ್ಯಾಕ್ಟ್ ಯೋಗಗಳು ಮಹಿಳೆಯರ ಋತುಚಕ್ರದ ನೋವನ್ನು ನಿವಾರಿಸುತ್ತವೆ ಎಂದಿದ್ದಾರೆ.

    1) ಮ್ಯಾಟ್ ಮೇಲೆ ಕುಳಿತು ಎರಡೂ ಕೈಗಳನ್ನು ಮತ್ತು ಕಾಲುಗಳನ್ನು ಕೆಳಗೆ ಚಾಚಿ ಮುಖ ಕೆಳಗೆ ಮಾಡಿ ಮಲಗುವುದರಿಂದ ಸೆಳೆತವನ್ನು ಕಡಿಮೆಯಾಗುವ ಸಾಧ್ಯತೆ ಇದೆ.
    2) ಪದ್ಮಾಸನದಲ್ಲಿ ಕೂತು ಎರಡೂ ಕೈಗಳನ್ನು ನಿಮ್ಮ ಭುಜದ ನೇರಕ್ಕೆ ಎತ್ತುವ ಯೋಗ ಭಂಗಿ ನಿಮ್ಮ ಮುಟ್ಟಿನ ಸೆಳೆತ ಕಡಿಮೆ ಮಾಡುತ್ತದೆ. 5, 10 ಸೆಕೆಂಡು ಕೈಗಳನ್ನು ಭುಜದ ಸಮನಾಗಿ ಮೇಲೆತ್ತಿಕೊಳ್ಳಬೇಕು.

    3) ಯೋಗ ಮ್ಯಾಟ್ ಮೇಲೆ ಕುಳಿತು, ಎರಡೂ ಕೂಲುಗಳನ್ನು ಚಾಚಬೇಕು. ನಂತರ ಕೈಯನ್ನು ಹಿಂದಕ್ಕೆ ಇಟ್ಟುಕೊಂಡು ಕುಳಿತುಕೊಳ್ಳುವುದರಿಂದ ನಿಮ್ಮ ಮುಟ್ಟಿನ ಬಹುದೊಡ್ಡ ಸಮಸ್ಯೆ ನೋವನ್ನು ಕಡಿಮೆ ಮಾಡುತ್ತದೆ ಎಂದು ನಟಿ ಶಿಲ್ಪಾ ಹೇಳಿದ್ದಾರೆ.

    ಈ ಯೋಗ ಭಂಗಿಗಳು ನಿಮ್ಮ ಹೊಟ್ಟೆ ನೋವು, ಕೈ ಕಾಲು ನೋವು, PCOD ಅಂತ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂದಿದ್ದಾರೆ.

    ಇನ್ನು ಸಿನಿಮಾದಿಂದ ಅಂತರ ಕಾಯ್ದುಕೊಂಡಿದ್ದ ಶಿಲ್ಪಾ ಶೆಟ್ಟಿ ಕಳೆದ ವರ್ಷ ಹಂಗಾಮ್ 2 ಮತ್ತು ‘ಸೂಪರ್ ಡ್ಯಾನ್ಸರ್ 4’ ರಿಯಾಲಿಟಿ ಶೋ ಸೆಟ್‌ನಲ್ಲಿದ್ದರು. ಮತ್ತು ಹಿರಿಯ ನಟಿ ಕಿರಣ್ ಖೇರ್, ರ‍್ಯಾಪ್ ಕಿಂಗ್ ಬಾದ್‌ಶಾ ಮತ್ತು ಬರಹಗಾರ ಮನೋಜ್ ಮುಂತಾಶಿರ್ ಅವರೊಂದಿಗೆ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಶೋನಲ್ಲಿ ಶಿಲ್ಪಾ ತೀರ್ಪುಗಾರರಾಗಿದ್ದಾರೆ.
    Published by:Pavana HS
    First published: