• Home
  • »
  • News
  • »
  • lifestyle
  • »
  • Day Time Sleep: ಹಗಲಿನಲ್ಲಿ ನಿದ್ರೆ ಮಾಡೋದು ಆತಂಕದ ಸಮಸ್ಯೆಗೆ ಕಾರಣ ಅಂತಾರೆ ವಿಜ್ಞಾನಿಗಳು

Day Time Sleep: ಹಗಲಿನಲ್ಲಿ ನಿದ್ರೆ ಮಾಡೋದು ಆತಂಕದ ಸಮಸ್ಯೆಗೆ ಕಾರಣ ಅಂತಾರೆ ವಿಜ್ಞಾನಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Daytime Sleep Can Cause Fear Memories: ಒಟ್ಟಾರೆ, ಆತಂಕ, ಕಾಡುವ ನೆನಪುಗಳು, ಮಾನಸಿಕ ದ್ವಂದ್ವ, ಅಶಾಂತಿ ಇವೆಲ್ಲ ಮನಸಿನ ಒತ್ತಡದಿಂದಲೇ ಹೆಚ್ಚಾಗುತ್ತದೆ. ಆದಷ್ಟು ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದು ಇಂಥ ಮಾನಸಿಕ ಗೊಂದಲಗಳಿಂದ ಹೊರಬಹುದಾದ ನೈಸರ್ಗಿಕ ವಿಧಾನವಾಗಿದೆ.

  • Share this:

ಕೆಲವರಿಗೆ ಹಗಲು (Day Time)  ಹೊತ್ತು ಒಂದು ಸಣ್ಣ ನಿದ್ದೆ (Sleep) ಮಾಡುವುದೆಂದರೆ ಇಷ್ಟದ ಕೆಲಸ. ಅರ್ಧ ಗಂಟೆಯಾದರೂ ಬೆಕ್ಕಿನ ನಿದ್ದೆ ಮಾಡಿದರೆ ರಿಫ್ರೆಶ್‌ ಆಗಿರೋ ಫೀಲ್‌ ಸಿಗುತ್ತೆ ಅನ್ನೋದು ಹಲವರ ಅಭಿಪ್ರಾಯ. ಆದ್ರೆ ಕೆಲವರಿಗೆ ಇದರಿಂದ ನಕಾರಾತ್ಮಕ ಪರಿಣಾಮಗಳೂ ಇವೆ ಅನ್ನೋದು ಅಧ್ಯಯನದಿಂದ ತಿಳಿದುಬಂದಿದೆ. ಹೌದು, ಹಗಲಿನ ಒಂದು ಸಣ್ಣ ನಿದ್ದೆ ಆತಂಕದ ನೆನಪುಗಳನ್ನು ಹೆಚ್ಚಿಸುತ್ತದೆ ಎಂದು ನರವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಕೆಲವೊಮ್ಮೆ ನಮ್ಮ ಮನಸ್ಸಿನಲ್ಲಿ ಒಂದಷ್ಟು ಘಟನೆಗಳ ನೆನಪು ಅಚ್ಚೊತ್ತಿಬಿಟ್ಟಿರುತ್ತದೆ. ಯಾರಿಗೋ ಏನೋ ಆಗಿದ್ದು, ಹತ್ತಿರದವರ ಸಾವು, ಅಪಘಾತದಂತಹ ಘಟನೆಗಳು, ಕೆಲವೊಮ್ಮೆ ಘರ್ಷಣೆ-ಹಿಂಸಾಚಾರದಂತಹ ಸನ್ನಿವೇಶಗಳು ಹೀಗೆ ಮನಸ್ಸಿನಿಂದ ಅಳಿಸಲಾಗದಂತಹ ನೆನಪುಗಳಿರುತ್ತವೆ. ಮಧ್ಯಾಹ್ನದ ನಿದ್ರೆಯಿಂದ (Afternoon Nap) ಇಂಥ ಆತಂಕದ ನೆನಪುಗಳು, ಅವುಗಳಿಂದಾಗುವ ಒತ್ತಡಗಳು ಹೆಚ್ಚಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಂದಹಾಗೆ ಈ ಸಂಶೋಧನೆಯು ಕಾಗ್ನೇಟಿವ್‌, ಅಫೆಕ್ಟಿವ್‌ ಹಾಗೂ ಬಿಹೇವಿಯರಲ್‌ ನ್ಯೂರೋಸೈನ್ಸ್‌ ನಲ್ಲಿ ಪ್ರಕಟವಾಗಿದೆ.


ನೆನಪಿನ ಬಲವರ್ಧನೆ ಅನ್ನೋದು ಅಲ್ಪಾವಧಿಯ ನೆನಪಿನಿಂದ ದೀರ್ಘಾವಧಿಯ ನೆನಪಿಗೆ ಪರಿವರ್ತನೆ ಆಗುವುದಾಗಿದೆ. ಇದು ಸಂಭವಿಸುವುದು ನಿದ್ರೆಯ ಸಮಯದಲ್ಲಿ. ಕಲಿಕೆಯ ನಂತರ, ಅಥವಾ ಇನ್ಯಾವುದೋ ನೆನಪನ್ನು ಮನಸ್ಸಿನಲ್ಲಿ ಮನನ ಮಾಡಿ ನಿದ್ರಿಸುವುದು ನಿಷ್ಕ್ರಿಯವಾಗಿ ಎಚ್ಚರವಾಗಿರುವುದಕ್ಕಿಂತ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದಾಗಿ ಅಧ್ಯಯನಗಳು ಹೇಳುತ್ತವೆ. ಪ್ರಮುಖ ನೆನಪುಗಳನ್ನು ಪುನಃ ಸಕ್ರಿಯಗೊಳಿಸುವಿಕೆಯ ಮೂಲಕ ಇದು ನಡೆಯುತ್ತದೆ. ಅಲ್ಲದೇ ಇದು ಕನಸಿನಲ್ಲಿಯೂ ಮುಂದುವರೆಯುವ ಸ್ಥಿತಿಯಾಗಿದೆ.


ವಿಜ್ಞಾನಿಗಳು ಹೇಳುವುದೇನು?


ನರವಿಜ್ಞಾನಿಗಳ ಈ ಅಧ್ಯಯನದ ಮೂಲಕ ನಿದ್ರೆ ಮತ್ತು ಎಚ್ಚರದ ಅವಧಿಯ ಮಧ್ಯದಲ್ಲಿ ಭಯದ ನೆನಪುಗಳೊಂದಿಗೆ ಏನಾಗುತ್ತದೆ ಎಂಬುದಕ್ಕೆ ಉತ್ತರ ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ. ಅಧ್ಯಯನದ ಪ್ರಕಾರ ಎರಡು ಗಂಟೆಗಳ ಹಗಲಿನ ನಿದ್ರೆ ಮೊದಲಿನ ಭಯದ ನೆನಪುಗಳನ್ನು ಬಲಪಡಿಸುತ್ತದೆ. ಅಲ್ಲದೇ ಎಚ್ಚರವಾದ ನಂತರ ಇದೇ ರೀತಿಯ ಪರಿಣಾಮವನ್ನು ಬೀರುತ್ತದೆ ಎಂದಿದೆ.


ಅದರಲ್ಲೂ ಹೆಚ್ಚಾಗಿ ಭಯ ಹುಟ್ಟಿಸುವ ಸಿನಿಮಾಗಳನ್ನು ನೋಡುವುದು ಅಥವಾ ವಿಡಿಯೋ ಗೇಮ್‌ ಗಳನ್ನು ಆಡಿ ಮಲಗುವುದರಿಂದ ಭಯದ ನೆನಪುಗಳು ಹೆಚ್ಚಾಗುತ್ತವೆ. ಹಾಗಾಗಿ ಇಂಥ ಭಯದ ನೆನಪುಗಳನ್ನು ಹೊಂದಿರುವವರು ಹಗಲಿನ ಹೊತ್ತು ನಿದ್ದೆ ಮಾಡದಿರುವುದೇ ಉತ್ತಮ ಎಂಬುದಾಗಿ UrFU ನ ನ್ಯೂರೋಟೆಕ್ನಾಲಜಿ ಮತ್ತು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈಕಾಲಜಿಯ ಪ್ರಯೋಗಾಲಯದ ಸಂಶೋಧಕ ಯುರಿ ಪಾವ್ಲೋವ್ ಹೇಳುತ್ತಾರೆ.


ಇದನ್ನೂ ಓದಿ: ಸಮಯಕ್ಕೆ ಸರಿಯಾಗಿ ಪಿರಿಯಡ್ಸ್​ ಆಗ್ತಿಲ್ಲ ಅಂತ ಚಿಂತೆ ಬಿಡಿ, ಇಲ್ಲಿದೆ ಸರಳ ಪರಿಹಾರ


ಭಯದ ಪ್ರತಿಕ್ರಿಯೆಗಳನ್ನು 2-ಗಂಟೆಯ ಹಗಲಿನ ನಿದ್ರೆಯ ಮೊದಲು ಮತ್ತು ನಂತರ ಎಲೆಕ್ಟ್ರೋ ಎನ್ಸೆಫಾಲೋಗ್ರಫಿಯಿಂದ ಅಧ್ಯಯನ ಮಾಡಲಾಯಿತು. ಅಧ್ಯಯನದಲ್ಲಿ ಪಾಲ್ಗೊಂಡ 18 ಆರೋಗ್ಯವಂತ ಯುವಕರಲ್ಲಿ ನಿದ್ರೆಯು ಅವರ ಆತಂಕ ಹಾಗೂ ಭಯದ ನೆನಪುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ಮಾಡಲಾಯಿತು.
ಇನ್ನು, ಜನರು ಸಾಮಾನ್ಯವಾಗಿ ನಿದ್ದೆಯಲ್ಲಿರುವಾಗ ಕೇಳುವ ದೊಡ್ಡ ಶಬ್ದ ಕರೆಂಟ್‌ ಸಾಕ್‌ ನೀಡಿದ್ದಕ್ಕಿಂತ ಹೆಚ್ಚು ಆಘಾತ ನೀಡುತ್ತದೆ ಎಂದಿದ್ದಾರೆ. ಇದನ್ನು ಭಯದ ಸಂಶೋಧನೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಆತಂಕದ ಅಸ್ವಸ್ಥತೆಗಳು, ಆಘಾತಕಾರಿ ಒತ್ತಡದ ಅಸ್ವಸ್ಥತೆ (PTSD) ಅಥವಾ ನಿರ್ದಿಷ್ಟ ಫೋಬಿಯಾಗಳು ಆತಂಕ ಮತ್ತು ಭಯದ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಇದು ಕಾಲಾನಂತರದಲ್ಲಿ ಹೆಚ್ಚಾಗಬಹುದು ಎಂಬುದಾಗಿ ಹೇಳುತ್ತಾರೆ ವಿಜ್ಞಾನಿಗಳು. ಆದಾಗ್ಯೂ, ಈ ಸಮಯದಲ್ಲಿ ನಿದ್ರೆ ಭಯದ ನೆನಪನ್ನು ಹೆಚ್ಚಿಸುತ್ತದೆಯೇ ಎಂದು ತನಿಖೆ ಮಾಡುವ ಯಾವುದೇ ಅಧ್ಯಯನಗಳಿಲ್ಲ ಎಂಬುದಾಗಿ ಅವರು ಹೇಳುತ್ತಾರೆ.


ಒಟ್ಟಾರೆ, ಆತಂಕ, ಕಾಡುವ ನೆನಪುಗಳು, ಮಾನಸಿಕ ದ್ವಂದ್ವ, ಅಶಾಂತಿ ಇವೆಲ್ಲ ಮನಸಿನ ಒತ್ತಡದಿಂದಲೇ ಹೆಚ್ಚಾಗುತ್ತದೆ. ಆದಷ್ಟು ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದು ಇಂಥ ಮಾನಸಿಕ ಗೊಂದಲಗಳಿಂದ ಹೊರಬಹುದಾದ ನೈಸರ್ಗಿಕ ವಿಧಾನವಾಗಿದೆ.


ಇದನ್ನೂ ಓದಿ: ಜ್ಯೇಷ್ಠಮಧುವಿಲ್ಲದೇ ಚಳಿಗಾಲವಿಲ್ಲ, ಸುಳ್ಳಲ್ಲ ಹಿರಿಯರ ಈ ಮಾತು: ಪ್ರಯೋಜನಗಳು ಒಂದೆರೆಡಲ್ಲ


ನಿದ್ರೆಯು ಭಯದ ನೆನಪನ್ನು ಹೆಚ್ಚಿಸುತ್ತದೆ ಅನ್ನೋದು ವಿಜ್ಞಾನಿಗಳ ಅಭಿಪ್ರಾಯವಾದರೂ ಭಯದ ನೆನಪನ್ನು ಹೆಚ್ಚಿಸುವಂಥ ಮನಸ್ಥಿತಿಯನ್ನು ಮೀರಿ ಅದನ್ನು ಮರೆಯುವ ಹಾಗೂ ಮನಸ್ಸನ್ನು ಶಾಂತಗೊಳಿಸುವ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಬಹಳ ಮುಖ್ಯ.

Published by:Sandhya M
First published: