ಹೀಗೆ ಮಾಡಿದ್ರೆ ಹೆಚ್ಚಾಗುತ್ತಂತೆ ಆಯಸ್ಸು!

ಸಂಶೋಧಕರು ಸ್ವಿಡ್ಜರ್ಲೆಡ್​ನಲ್ಲಿ ಒಟ್ಟು 3462 ಮಂದಿಯನ್ನು ಸಂಶೋಧನೆಗೆ ಒಳಪಡಿಸಿದ್ದಾರೆ. ಇವರೆಲ್ಲ 35 ರಿಂದ 75 ವರ್ಷ ವಯಸ್ಸಿನವರು.

news18-kannada
Updated:September 15, 2019, 6:04 PM IST
ಹೀಗೆ ಮಾಡಿದ್ರೆ ಹೆಚ್ಚಾಗುತ್ತಂತೆ ಆಯಸ್ಸು!
.
news18-kannada
Updated: September 15, 2019, 6:04 PM IST
ಮಧ್ಯಾಹ್ನದ ಊಟವಾದ ಬಳಿಕ ಹತ್ತು ನಿಮಿಷವಾದರು ಮಲಗೋದು ಸಾಮಾನ್ಯವಾಗಿ ಅಣೆಕರ ಹವ್ಯಾಸ. ಇನ್ನು ಕೆಲವರು ದಣಿವು ಕಮ್ಮಿ ಮಾಡಲು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ಆದರೆ ಈ ರೀತಿ ಹಗಲು ನಿದ್ದೆ ಮಾಡೋದರಿಂದ ಹಲವು ಲಾಭಗಳಿವೆ ಎಂದು ಸಂಶೋಧನೆಯೊಂದು ಬಹಿರಂಗ ಪಡಿಸಿದೆ.

ಸ್ವಿಡ್ಜರ್ಲೆಂಡ್​​ ಸಂಶೋಧಕರು ಈ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹಗಲು ನಿದ್ದೆ ಮಾಡಿದರೆ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ. ಹಗಲು ಮಾಡುವ ನಿದ್ದೆ ಹೃದಯ ಸಂಬಂಧಿ ಖಾಯಿಲೆಗಳಿಂದ ದೂರವಿಡುತ್ತದೆ ಎಂದು ಸಂಶೋಕರ ಸಂಶೋಧನೆಯಿಂದ ದೃಢಪಟ್ಟಿದೆ.

ಸಂಶೋಧಕರು ಸ್ವಿಡ್ಜರ್ಲೆಡ್​ನಲ್ಲಿ ಒಟ್ಟು 3462 ಮಂದಿಯನ್ನು ಸಂಶೋಧನೆಗೆ ಒಳಪಡಿಸಿದ್ದಾರೆ. ಇವರೆಲ್ಲ 35 ರಿಂದ 75 ವರ್ಷ ವಯಸ್ಸಿನವರು. ಸಂರಶೊಧನೆಯ ಮೂಲಕ ಈ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. 2003 ರಿಂದ ಈ ಬಗ್ಗೆ ಸಂಶೋಧನೆ ಆರಂಭವಾಗಿತ್ತು.

ಇದನ್ನೂ ಓದಿ: 7 ಎಸೆತಗಳಲ್ಲಿ 7 ಸಿಕ್ಸರ್ ಸಿಡಿಸಿದ ಬ್ಯಾಟ್ಸ್​ಮನ್ಸ್​; ಇಲ್ಲಿದೆ ರೋಚಕ ಕ್ಷಣದ ವಿಡಿಯೋ!

ನಿದ್ದೆಯ ಅವಧಿ ಮತ್ತು ಸಮಯ ಎಲ್ಲವನ್ನೂ ಮಾನಿಟರ್ ಮಾಡಲಾಗಿದೆ. ಒಂದು ವಾರದಲ್ಲಿ 3-7 ಬಾರಿ ಹಗಲು ಹೊತ್ತು ನಿದ್ದೆ ಮಾಡಿರುವವರ ಪೈಕಿ ಬಹುತೇಕರು ವೃದ್ಧರು, ಪುರುಷರು, ಧೂಮಪಾನಿಗಳು ಹಾಗೂ ಅತಿಯಾದ ತೂಕ ಹೊಂದಿರುವವರೇ ಆಗಿದ್ದರು.

ಶೇ.58 ಮಂದಿ ಹಗಲು ನಿದ್ದೆ ಮಾಡುತ್ತಿರಲಿಲ್ಲ. 667 ಜನರು ವಾರದಲ್ಲಿ ಒಂದೆರಡು ಬಾರಿ ಹಗಲು ಮಲಗುವ ಅಭ್ಯಾಸ ಇಟ್ಟುಕೊಂಡಿದ್ದರು. 411 ಮಂದಿ 3 ರಿಂದ 5 ಬಾರಿ ಹಗಲಲ್ಲಿ ನಿದ್ದೆ ಹೋಗುತ್ತಿದ್ದರು. ಇವರ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು, ಹಗಲು ನಿದ್ದೆ ಹೃದಯದ ಆರೋಗ್ಯಕ್ಕೆ ಪೂರಕ ಎಂದು ಹೇಲಿದ್ದಾರೆ.
First published:September 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...