HOME » NEWS » Lifestyle » DATA SHOWS 22 AUSTRALIAN MEN GAVE BIRTH LAST YEAR ZP

ಮಕ್ಕಳಿಗೆ ಜನ್ಮ ನೀಡಿದ ಪುರುಷರು..! ಅಚ್ಚರಿಯಾದರೂ ಇದು ಸತ್ಯ

ಇಲ್ಲಿ ಸಾಂಪ್ರದಾಯಿಕ ದೃಷ್ಟಿಕೋನಗಳು ಪರಿಗಣನೆಗೆ ಬರುವುದಿಲ್ಲ. ಮಗು ಆರೋಗ್ಯವಾಗಿದ್ದರೆ, ಇದರಲ್ಲಿ ಏನು ಸಮಸ್ಯೆ ಇಲ್ಲ. ಹಾಗೆಯೇ ಇಲ್ಲಿ  ಪುರುಷತ್ವವನ್ನು ಪ್ರಶ್ನಿಸುವುದು ಕೂಡ ಸರಿಯಲ್ಲ.

zahir | news18-kannada
Updated:August 8, 2019, 3:15 PM IST
ಮಕ್ಕಳಿಗೆ ಜನ್ಮ ನೀಡಿದ ಪುರುಷರು..! ಅಚ್ಚರಿಯಾದರೂ ಇದು ಸತ್ಯ
ಸಾಂದರ್ಭಿಕ ಚಿತ್ರ
  • Share this:
ಪುರುಷರ ಗರ್ಭಧಾರಣೆಯ ವಿಷಯ ಇದೀಗ ಯಾವುದೇ ಸಿನಿಮಾ ಅಥವಾ ಕಾದಂಬರಿಗೆ ಸೀಮಿತವಾಗಿಲ್ಲ. ಇಂತಹದೊಂದು ಕಲ್ಪನೆ ಅನೇಕ ವರ್ಷಗಳ ಹಿಂದೆ ಕೇಳಿ ಬಂದಿದ್ದರೂ ಇದೀಗ 22 ಪುರುಷರು ಮಕ್ಕಳಿಗೆ ಜನ್ಮ ನೀಡಿದ್ದಾರೆಂಬ ಅಚ್ಚರಿಯ ಮಾಹಿತಿಯೊಂದು ಹೊರ ಬಿದ್ದಿದೆ.

ಆಸ್ಟ್ರೇಲಿಯಾದಲ್ಲಿ 22 ಪುರುಷರು ತಾಯ್ತನದೊಂದಿಗೆ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. ಕಾಂಗರೂ ನಾಡಿನ 2018 - 2019 ರ ಜನಗಣತಿಯ ಅಂಕಿಅಂಶಗಳ ಮಾಹಿತಿ ಪ್ರಕಾರ ಒಟ್ಟು 22 ಮಂದಿ ಪುರುಷರು ತಾಯಿಯಾಗಿದ್ದಾರೆ. ಮಾನವ ಸೇವಾ ಇಲಾಖೆ ಬಿಡುಗಡೆ ಮಾಡಿದ ಜನನ ಪ್ರಮಾಣ ಡೇಟಾ ಪ್ರಕಾರ 22 ಪುರುಷ ಟ್ರಾನ್ಸ್​ಜೆಂಡರ್​ (ಮಂಗಳಮುಖಿ)ಗಳು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಇವರಲ್ಲದೆ ಕಳೆದ ಒಂದು ದಶಕದಲ್ಲಿ 228 ಪುರುಷರು ಸಹ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿಯನ್ನು ಬಿಡುಗಡೆಯಾಗಿಲ್ಲ. ಇದರಲ್ಲಿ ಹಲವರು ಲಿಂಗ ಪರಿವರ್ತನೆ ಮಾಡಿಸಿಕೊಂಡವರು. ಇದು ವಿವಾದಕ್ಕೆ ಕಾರಣವಾಗುವ ಸಾಧ್ಯತೆಯಿರುವುದರಿಂದ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.

ಇನ್ನು ಕೆಲವರು ಈ ಕುರಿತು ಜನ್ಮ ನೀಡಿದ  ಪುರುಷರ ಪುರುಷತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ಪುರುಷರು ಜನ್ಮ ನೀಡಿದರೆ ಆತನನ್ನು ಪುರುಷ ಎನ್ನಲಾಗುವುದಿಲ್ಲ. ಹೀಗಾಗಿ ಸರ್ಕಾರ ಕೂಡ ಈ ಬಗ್ಗೆ ಗಮನ ಹರಿಸಬೇಕೆಂಬ ಕೂಗುಗಳು ಕೇಳಿ ಬಂದಿದೆ. ಈ ಬಗ್ಗೆ ಮಾತನಾಡಿರುವ ಮೆಲ್ಬೋರ್ನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಪುರುಷತ್ವದ ಬಗ್ಗೆ ಎಲ್ಲರ ದೃಷ್ಟಿಕೋನವೂ ಬದಲಾಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಮಕ್ಕಳಿಗೆ ಜನ್ಮ ನೀಡಿದ ಪುರುಷರು ತಮ್ಮ ಲಿಂಗವನ್ನು ಬದಲಾಯಿಸಿರಬಹುದು ಎಂದು ಅಭಿಪ್ರಾಯಪಟ್ಟಿರುವ ಫ್ರೊಫೆಸರ್, ಅವರ ದೃಷ್ಟಿಕೋನವು ಇತರಿಗಿಂತ ಬಹಳ ಭಿನ್ನವಾಗಿರುತ್ತದೆ. ಹಾಗಾಗಿ ಇಲ್ಲಿ ಸಾಂಪ್ರದಾಯಿಕ ದೃಷ್ಟಿಕೋನಗಳು ಪರಿಗಣನೆಗೆ ಬರುವುದಿಲ್ಲ. ಮಗು ಆರೋಗ್ಯವಾಗಿದ್ದರೆ, ಇದರಲ್ಲಿ ಏನು ಸಮಸ್ಯೆ ಇಲ್ಲ. ಹಾಗೆಯೇ ಇಲ್ಲಿ  ಪುರುಷತ್ವವನ್ನು ಪ್ರಶ್ನಿಸುವುದು ಕೂಡ ಸರಿಯಲ್ಲ. ಸಮಾಜವು ಲಿಂಗದ ಬಗೆಗಿನ ತನ್ನ ಮನೋಭಾವದಲ್ಲಿ ಸಕಾರಾತ್ಮಕ ದೃಷ್ಟಿಯಲ್ಲಿ ನೋಡಬೇಕೆಂದು ತಿಳಿಸಿದ್ದಾರೆ.


 
First published: August 8, 2019, 3:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading