• Home
  • »
  • News
  • »
  • lifestyle
  • »
  • Feet Care: ಕೈ ಮತ್ತು ಪಾದಗಳ ಮೇಲಿನ ಕಪ್ಪು ಕಲೆ ಹೋಗಲಾಡಿಸಲು ಈ ಮನೆಮದ್ದು ಟ್ರೈ ಮಾಡಿ ನೋಡಿ

Feet Care: ಕೈ ಮತ್ತು ಪಾದಗಳ ಮೇಲಿನ ಕಪ್ಪು ಕಲೆ ಹೋಗಲಾಡಿಸಲು ಈ ಮನೆಮದ್ದು ಟ್ರೈ ಮಾಡಿ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೈ ಮತ್ತು ಪಾದದ ಕಾಳಜಿಯು ಮುಖದ ಕಾಳಜಿಯಷ್ಟೇ ಮುಖ್ಯವಾಗಿದೆ. ಸನ್ ಬರ್ನ್, ಸನ್ ಟ್ಯಾನ್, ಮುಖಕ್ಕೆ ಹೋಲಿಸಿದರೆ ಕೈ ಮತ್ತು ಕಾಲುಗಳಲ್ಲಿ ಹೆಚ್ಚು ಕಂಡು ಬರುತ್ತದೆ. ಹೀಗಾಗಿ ಕೈ ಮತ್ತು ಕಾಲು, ಪಾದದ ಕೆಲ ಸ್ಕಿನ್ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ.

  • Share this:

    ಸುಂದರವಾಗಿ (Beautiful) ಕಾಣಬೇಕು ಅನ್ನೋದು ಎಲ್ಲರ ಇಷ್ಟ (Like). ತಮ್ಮ ಸೌಂದರ್ಯ ಕಾಪಾಡಲು ಮತ್ತು ಸುಂದರವಾಗಿ ಕಾಣಲು ಜನರು (People) ಸಾಕಷ್ಟು ಪ್ರಯತ್ನಗಳನ್ನು (Try) ಮಾಡುತ್ತಲೇ ಇರುತ್ತಾರೆ. ಸೌಂದರ್ಯ ಹಾಗೂ ಸುಂದರವಾಗಿ ಕಾಣುವ ಜರ್ನಿ (Journey) ಜೀವನದುದ್ದಕ್ಕೂ ನಡೆಯುತ್ತಲೇ ಇರುತ್ತದೆ. ನಾವು ಆಗಾಗ್ಗೆ ದೇಹವನ್ನು ಹೊರಗಿನಿಂದ ಸುಂದರವಾಗಿಸಲು ಪ್ರಯತ್ನಿಸುತ್ತೇವೆ. ಆದರೆ ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಕೈ ಮತ್ತು ಪಾದಗಳನ್ನು ನಿರ್ಲಕ್ಷಿಸುತ್ತೇವೆ. ಸ್ಲೀವ್‌ಲೆಸ್ ಡ್ರೆಸ್ ಅಥವಾ ಶಾರ್ಟ್ಸ್ ಅಥವಾ ಥಾಯ್ ಹೈ ಸ್ಲಿಟ್ ಡ್ರೆಸ್ ಧರಿಸಿದಾಗ ಮಾತ್ರ ಕೈ ಮತ್ತು ಪಾದಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಸಾಮಾನ್ಯವಾಗಿ ಹೆಚ್ಚಿನವರು ಮಾಡುವ ತಪ್ಪು ಕೆಲಸವಾಗಿದೆ.


    ಕೈ ಮತ್ತು ಕಾಲುಗಳು, ಪಾದಗಳ ಮೇಲೆ ಕಾಣಿಸಿಕೊಳ್ಳುವ ಕಪ್ಪು ಕಲೆ


    ಯಾಕೆಂದರೆ ಕೈ ಮತ್ತು ಪಾದದ ಕಾಳಜಿಯು ಮುಖದ ಕಾಳಜಿಯಷ್ಟೇ ಮುಖ್ಯವಾಗಿದೆ. ಸನ್ ಬರ್ನ್, ಸನ್ ಟ್ಯಾನ್, ಮುಖಕ್ಕೆ ಹೋಲಿಸಿದರೆ ಕೈ ಮತ್ತು ಕಾಲುಗಳಲ್ಲಿ ಹೆಚ್ಚು ಕಂಡು ಬರುತ್ತದೆ. ಹೀಗಾಗಿ ಕೈ ಮತ್ತು ಕಾಲು, ಪಾದದ ಕೆಲ ಸ್ಕಿನ್ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ.


    ಹೈಪರ್ಪಿಗ್ಮೆಂಟೇಶನ್, ದದ್ದು, ರೇಜರ್ ಗುರುತುಗಳಂತಹ ಸಮಸ್ಯೆ ಇದು ಒಳಗೊಂಡಿದೆ. ಕೈ ಮತ್ತು ಕಾಲುಗಳ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಗಂಭೀರ ಸಮಸ್ಯೆಗಳಿಗೆ, ಚರ್ಮದ ತಜ್ಞರನ್ನು ಸಂಪರ್ಕಿಸಬೇಕಾಗುತ್ತದೆ. ಜೊತೆಗೆ ಸಾಮಾನ್ಯವಾಗಿ ಕಂಡು ಬರುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ನಾವು ಕೆಲವು ಮನೆಮದ್ದು ಟ್ರೈ ಮಾಡಬಹುದು.


    ಇದನ್ನೂ ಓದಿ: ಹೊಟ್ಟೆಯ ಬೊಜ್ಜು ಕರಗಿಸಲು ಬೆಳಗಿನ ಉಪಹಾರ, ರಾತ್ರಿಯ ಊಟವನ್ನು ಹೇಗೆ? ಯಾವಾಗ ಮಾಡ್ಬೇಕು?


    ಇಂದು ನಾವು ಕೈ ಮತ್ತು ಕಾಲುಗಳು, ಪಾದಗಳ ಮೇಲೆ ಕಾಣಿಸಿಕೊಳ್ಳುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ಕೆಲವು ಮನೆಮದ್ದುಗಳ ಬಗ್ಗೆ ಇಲ್ಲಿ ತಿಳಿಯೋಣ. ಇದನ್ನು ಸ್ನಾನ ಮಾಡುವ ಮೊದಲು ಅಥವಾ ಬಿಡುವಿನ ವೇಳೆ ಅಪ್ಲೈ ಮಾಡಿಕೊಂಡು ಉತ್ತಮ ಫಲಿತಾಂಶ ಪಡೆಯಬಹುದು.


    ಓಟ್ಮೀಲ್ ತೆಂಗಿನ ಎಣ್ಣೆ ಸ್ಕ್ರಬ್


    ನೈಸರ್ಗಿಕ ವಸ್ತುಗಳಿಗಿಂತ ತ್ವಚೆಗೆ ಉತ್ತಮವಾದದ್ದು ಬೇರೊಂದಿಲ್ಲ. ಓಟ್ ಮೀಲ್ ಒಂದು ಉತ್ತಮ ದೇಹದ ಸ್ಕ್ರಬ್ ಆಗಿದೆ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುತ್ತದೆ. ಮತ್ತು ಚರ್ಮವನ್ನು ಮೃದುಗೊಳಿಸುತ್ತದೆ. ತೆಂಗಿನ ಎಣ್ಣೆಯು ಚರ್ಮವನ್ನು ಆರ್ಧ್ರಕಗೊಳಿಸಲು ಬಹಳಷ್ಟು ಸಹಾಯ ಮಾಡುತ್ತದೆ.


    ಕೊಂಜಾಕ್ ಸ್ಪಾಂಜ್


    ಕೊಂಜಾಕ್ ಸ್ಪಾಂಜ್ ಮೃದುವಾದ ಎಕ್ಸ್‌ಫೋಲಿಯೇಟಿಂಗ್ ಸ್ಪಾಂಜ್ ಆಗಿದೆ. ಸ್ಕ್ರಬ್ಬಿಂಗ್ ಸಮಯದಲ್ಲಿ ಇದು ನಿಮ್ಮ ಚರ್ಮಕ್ಕೆ ಹಾನಿ ಮಾಡಲ್ಲ. ಒಣ ಚರ್ಮವು ನಿಮ್ಮ ಚರ್ಮದ ಮೇಲೆ ಕಪ್ಪು ಕಲೆಗಳನ್ನು ಉಂಟು ಮಾಡಿದರೆ, ಸ್ಕ್ರಬ್ಬಿಂಗ್ ಕಲೆ ತೆಗೆದು ಹಾಕುತ್ತದೆ. ಒಂದು ತಿಂಗಳ ಕಾಲ ನಿಯಮಿತವಾಗಿ ಮಾಡಿ.


    ಜೇನುತುಪ್ಪ ಮತ್ತು ಆಲಿವ್ ಎಣ್ಣೆಯ ಮಸಾಜ್


    ಜೇನುತುಪ್ಪ ಮತ್ತು ಆಲಿವ್ ಎಣ್ಣೆಯ ಮಿಶ್ರಣವು ಚರ್ಮವನ್ನು ತೇವಗೊಳಿಸುತ್ತದೆ. ಹಾನಿ ಮತ್ತು ಒಣ ತ್ವಚೆಯಿಂದಾಗಿ ನಿಮ್ಮ ಚರ್ಮದ ಮೇಲೆ ಉಂಟಾಗುವ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. ಮಸಾಜ್ ಮಾಡುವುದು ಹೆಚ್ಚಿನ ಪ್ರಯೋಜನ ನೀಡುತ್ತದೆ. ಎರಡನ್ನೂ ಮಿಶ್ರಣ ಮಾಡಿ ಮತ್ತು ಸ್ನಾನ ಮಾಡುವ ಮೊದಲು ಕಲೆ ಇರುವ ಸ್ಥಳಗಳಲ್ಲಿ ಮಸಾಜ್ ಮಾಡಿ. ನಿಯಮಿತವಾಗಿ ಬಳಸಿದರೆ ಚರ್ಮ ಮೃದುವಾಗುತ್ತದೆ. ಕಲೆ ಮಾಯವಾಗುತ್ತದೆ.


    ನಿಂಬೆ ರಸ ಮತ್ತು ಸಕ್ಕರೆ ಸ್ಕ್ರಬ್


    ನಿಂಬೆ ವಿಟಮಿನ್ ಸಿ ಯ ಅತ್ಯುತ್ತಮ ಮೂಲ. ಚರ್ಮದ ಮೇಲೆ ವಿಶೇಷವಾಗಿ ಗೋಚರಿಸುವ ಕಪ್ಪು ಕಲೆಗಳನ್ನು ತೆಗೆದು ಹಾಕುವಲ್ಲಿ ಇದು ಉತ್ತಮ. ಸೂಕ್ಷ್ಮ ಚರ್ಮ ಹೊಂದಿದ್ದರೆ ನೇರವಾಗಿ ಚರ್ಮದ ಮೇಲೆ ಅನ್ವಯಿಸಿ. ಅಥವಾ ಸಕ್ಕರೆಯು ಎಫ್ಫೋಲಿಯೇಟ್ ಮಾಡಿ. ನಿಂಬೆಯು ಕಲೆಗಳನ್ನು ತೆಗೆದು ಹಾಕಲು ಕೆಲಸ ಮಾಡುತ್ತದೆ.


    ಇದನ್ನೂ ಓದಿ: ಥೈರಾಯ್ಡ್ ನಿಯಂತ್ರಣಕ್ಕೆ ಆಯುರ್ವೇದ ವಿಧಾನ! ಇದು ಅತ್ಯಂತ ಪ್ರಯೋಜನಕಾರಿ


    ಅಲೋವೆರಾ ಜೆಲ್ ಮತ್ತು ಮಸಾಜ್


    ಅಲೋವೆರಾ ಜೆಲ್ ಚರ್ಮವನ್ನು ಆರ್ಧ್ರಕಗೊಳಿಸುತ್ತದೆ. ಅತ್ಯುತ್ತಮ ಉರಿಯೂತದ ಗುಣಲಕ್ಷಣ ಹೊಂದಿದೆ. ಕೂಲಿಂಗ್ ಜೆಲ್ ಆಗಿದೆ. ಮಸಾಜ್ ಮಾಡಿದರೆ ಚರ್ಮವು ತುಂಬಾ ರಿಲ್ಯಾಕ್ಸ್ ಆಗುತ್ತದೆ. ಅಲರ್ಜಿ ಅಥವಾ ದದ್ದುಗಳನ್ನು ತೆಗೆದು ಹಾಕಲು, ಪಾದಗಳು ಮತ್ತು ಕೈಗಳ ಮೇಲೆ ಕಪ್ಪು ಕಲೆ ಹೋಗಲಾಡಿಸಲು ಅಲೋವೆರಾ ಜೆಲ್ನಿಂದ ಮಸಾಜ್ ಮಾಡಿ.

    Published by:renukadariyannavar
    First published: