ಕಿವಿಯನ್ನು ಇಯರ್​ ಬಡ್​ ಬಳಸಿ ಸ್ವಚ್ಛಗೊಳಿಸುವ ಮುನ್ನ ಎಚ್ಚರ!

ಪ್ಲಾಸ್ಟಿಕ್​ ಸ್ಟಿಕ್​​​​​​​​ವೊಂದರ ಎರಡು ತುದಿಗಳಿಗೆ ಹತ್ತಿಯನ್ನು ಸುತ್ತಿ ಇಯರ್​ ಬಡ್​ಗಳನ್ನು ತಯಾರಿಸಲಾಗುತ್ತದೆ. ​ಕೆಲವೊಮ್ಮೆ ಇಯರ್​ ಬಡ್​ಗಳನ್ನು ಕಿವಿಗೆ ಹಾಕುವ ಮೂಲಕ ಪ್ಲಾಸ್ಟಿಕ್​ ಸ್ಟಿಕ್​ ಹರಿತವಾದ ತುದಿಯಿಂದ ಕಿವಿಗೆ ಗಾಯಗಳಾಗ ಬಹುದು. ಇದರಿಂದ ಕಿವಿ ನೋವಿಗೆ ಕಾರಣವಾಗಬಹುದು. ಅತಿಯಾಗಿ ಇಯರ್​ ಬಳಕೆ ಮಾಡಿದರೆ ಕಿವಿಯ ಸೋರುವಿಕೆಗೂ ಕಾರಣವಾಗಬಹುದು.

news18
Updated:August 21, 2019, 10:13 AM IST
ಕಿವಿಯನ್ನು ಇಯರ್​ ಬಡ್​ ಬಳಸಿ ಸ್ವಚ್ಛಗೊಳಿಸುವ ಮುನ್ನ ಎಚ್ಚರ!
ಇಯರ್​ ಬಡ್
  • News18
  • Last Updated: August 21, 2019, 10:13 AM IST
  • Share this:
ಅನೇಕರು ಕಿವಿಯನ್ನು ಇಯರ್​ ಬಡ್​ ಬಳಸಿ ಸ್ವಚ್ಚಗೊಳಿಸುತ್ತಾರೆ. ಆದರೆ ಇಯರ್​ ಬಡ್​ ಬಳಕೆಯಿಂದ ವ್ಯಕ್ತಿ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತವೆ. ಮಾನವನ ದೇಹದಲ್ಲಿ ಕಿವಿ ಸೂಕ್ಷ್ಮವಾದ ಅಂಗವಾಗಿದೆ. ಹಾಗಾಗೀ ಕಿವಿ ತುರಿಸುವಿಕೆ ಉಂಟಾದರೆ ಅಥವಾ ಕಿವಿಯನ್ನು ಸ್ವಚ್ಛಗೊಳಿಸಲು ಇಯರ್​ ಬಡ್​ ಬಳಸುವ ಮುನ್ನ ಎಚ್ಚರಿಕೆ ವಹಿಸುವುದು ಅಗತ್ಯ.

ಆಸ್ಟ್ರೇಲಿಯ ಮೂಲದ 37 ವರ್ಷದ​ ಮಹಿಳೆಯೊಬ್ಬಳು ಪ್ರತಿ ದಿನ ರಾತ್ರಿ ಹತ್ತಿಯ ಇಯರ್​ ಬಡ್​ಗಳಿಂದ ತನ್ನ ಕಿವಿಯನ್ನು ಸ್ಪಚ್ಛಗೊಳಿಸುತ್ತಿದ್ದಳು. ಇದರಿಂದಾಗಿ ಎಡಗಿವಿಯಲ್ಲಿ ಸಹಿಸಲಾಧ್ಯ ನೋವು ಕಾಣಿಸಿಕೊಂಡಿದೆ. ನೋವು ತಡೆಯಲಾರದೆ ಆಕೆ ವೈದ್ಯರನ್ನು ಭೇಟಿ ಮಾಡಿದಾಗ ಕಿವಿ ಸೋಂಕಿನ ಬಗ್ಗೆ ಗೊತ್ತಾಗಿತ್ತು. ಇಯರ್​ ಬಡ್​ನಲ್ಲಿರುವ ಹತ್ತಿಯ ಎಳೆಗಳು ಆಕೆಯ ಕಿವಿಯಲ್ಲಿ ಸಂಗ್ರಹವಾಗಿ ಸೋಂಕಿಗೆ ಕಾರಣವಾಗಿದೆ. ಇದರಿಂದ ನೋವು ಪ್ರಾರಂಭವಾಗಿದೆ. ನಂತರ ಶಸ್ತ್ರ ಚಿಕಿತ್ಸೆ ಮೂಡಬೇಕಾದ ಅನಿವಾರ್ಯತೆಗೆ ಎದುರಾಗಿದೆ. ಹಾಗಾಗಿ ಕಿವಿಗೆ ಇಯರ್​ ಬಡ್​ ಬಳಸುವ ಮುನ್ನ ಎಚ್ಚರಿಕೆಯಿಂದಿರುವುದು ಉತ್ತಮ.

ಇನ್ನು ಪ್ಲಾಸ್ಟಿಕ್​ ಸ್ಟಿಕ್​​​​​​​​ವೊಂದರ ಎರಡು ತುದಿಗಳಿಗೆ ಹತ್ತಿಯನ್ನು ಸುತ್ತಿ ಇಯರ್​ ಬಡ್​ಗಳನ್ನು ತಯಾರಿಸಲಾಗುತ್ತದೆ. ​ಕೆಲವೊಮ್ಮೆ ಇಯರ್​ ಬಡ್​ಗಳನ್ನು ಕಿವಿಗೆ ಹಾಕುವ ಮೂಲಕ ಪ್ಲಾಸ್ಟಿಕ್​ ಸ್ಟಿಕ್​ ಹರಿತವಾದ ತುದಿಯಿಂದ ಕಿವಿಗೆ ಗಾಯಗಳಾಗಬಹುದು. ಇದರಿಂದ ಕಿವಿ ನೋವಿಗೆ ಕಾರಣವಾಗಬಹುದು. ಅತಿಯಾಗಿ ಇಯರ್​ ಬಡ್​ ಬಳಕೆ ಮಾಡಿದರೆ ಕಿವಿಯ ಸೋರುವಿಕೆಗೂ ಕಾರಣವಾಗಬಹುದು.ಕಿವಿಗಳು ಶರೀರದ ಅತ್ಯಂತ ನಾಜೂಕು ಅಂಗಗಳಾಗಿರುವುದರಿಂದ ಸುಲಭವಾಗಿ ಹಾನಿಗೊಳಗಾಗುತ್ತವೆ. ಹೀಗಾಗಿ ಹತ್ತಿಯ ಇಯರ್​ ಬಡ್​ಗಳನ್ನು ಕಿವಿಗೆ ಹಾಕಿಕೊಳ್ಳುವ ಕೊಂಚ ಎಚ್ಚರಿಕೆಯಿಂದಿರುವುದು ಉತ್ತಮ.

ಹಾಗಿದ್ದರೆ, ಕಿವಿಯನ್ನು ಸ್ವಚ್ಚಗೊಳಿಸುವುದು ಹೇಗೆ?

-ಮೃದುವಾದ ಇಯರ್​ ಬಡ್​ಗಳಿಗೆ ಬಳಸಿ ಕಿವಿಯನ್ನು ಸ್ವಚ್ಚಗೊಳಿಸಬಹುದು.-ಅತಿಯಾಗಿ ಬಳಕೆ ಮಾಡುವುದರಿಂದ ಕಿವಿ ಸೋಂಕಿಗೆ ಕಾರಣವಾಗಬಹುದು.

- ಕಿವಿ ನೋವು ಕಾಣಿಸಿಕೊಂಡರೆ ವೈದ್ಯರನ್ನು ಭೇಟಿಯಾಗಿ ಸೂಕ್ತ ಸಲಹೆ ಪಡೆಯಿರಿ

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ
First published:August 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading