• Home
  • »
  • News
  • »
  • lifestyle
  • »
  • Health Tips: ನೀವು ನಿತ್ಯ ಗ್ರೀನ್ ಟೀ ಕುಡೀತಿರಾ, ಅತಿಯಾಗಿ ಕುಡಿದ್ರೆ ಏನ್ ಆಗುತ್ತೆ ಗೊತ್ತಾ?

Health Tips: ನೀವು ನಿತ್ಯ ಗ್ರೀನ್ ಟೀ ಕುಡೀತಿರಾ, ಅತಿಯಾಗಿ ಕುಡಿದ್ರೆ ಏನ್ ಆಗುತ್ತೆ ಗೊತ್ತಾ?

ಸಂಜೆ ಟೀ ಬದಲಾಗಿ ಲೆಮನ್ ಅಥವಾ ಗ್ರೀನ್ ಟೀ  ಸೇವನೆ ಮಾಡೋದನ್ನು ಅಭ್ಯಾಸ ಮಾಡಿಕೊಳ್ಳಿ.

ಸಂಜೆ ಟೀ ಬದಲಾಗಿ ಲೆಮನ್ ಅಥವಾ ಗ್ರೀನ್ ಟೀ  ಸೇವನೆ ಮಾಡೋದನ್ನು ಅಭ್ಯಾಸ ಮಾಡಿಕೊಳ್ಳಿ.

ಜೀರ್ಣಕ್ರಿಯೆ ಉತ್ತೇಜಿಸುವುದು, ಕೊಬ್ಬು ಕರಗಿಸಲು ಬಹುತೇಕರು ಗ್ರೀನ್​ ಟೀ ಕುಡೀತಾರೆ. ಆದ್ರೆ ಇದನ್ನೇ ಹೆಚ್ಚಾಗಿ ಕುಡಿದ್ರೆ ಅಪಾಯ ಕೂಡ ಕಟ್ಟಿಟ್ಟ ಬುತ್ತಿ

  • Share this:

ಇತ್ತೀಚೆಗೆ ಗ್ರೀನ್ ಟೀ (Green tea) ಆರೋಗ್ಯವರ್ಧಕ ಡ್ರಿಂಕ್​ ಆಗಿದೆ. ಆರೋಗ್ಯಕರ ಜೀವನಶೈಲಿ (Life Style) ರೂಢಿಸಿಕೊಳ್ಳಲು ಅಧಿಕ ಮಂದಿ ಗ್ರೀನ್​ ಟೀ ಕುಡೀತಾರೆ. ಸಿನಿಮಾ ನಟರಿಂದ ಹಿಡಿದು ಸಾಮ್ಯಾನ ಜನರ ವರೆಗೆ ಅಧಿಕರು ಗ್ರೀನ್​ ಟೀ ಕುಡಿಯೋದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಕಾಫಿ, ಟೀ ಒಳ್ಳೆಯದಲ್ಲ ಅಂತ ಬಹುತೇಕರು ಗ್ರೀನ್​ ಕುಡಿತಾರೆ. ಆರೋಗ್ಯಕ್ಕೆ (Health) ಗ್ರೀನ್ ಟೀ ಅತ್ಯಂತ ಪ್ರಯೋಜನಕಾರಿಯಾಗಿದೆ. ಆದ್ರೆ ಅತಿಯಾಗಿ ಕುಡಿದ್ರೆ ಅಮೃತ ಕೂಡ ವಿಷವಾಗುತ್ತೆ ಅನ್ನೋ ಹಾಗೇ ಅತಿಯಾಗಿ ಗ್ರೀನ್​ ಕುಡಿಯೋದು ಸಹ ಅಪಾಯಕಾರಿಯಾಗಿದೆ. ಆಫೀಸ್​ನಲ್ಲಿರಲಿ ಅಥವಾ ಮನೆಯಲ್ಲೇ ಇರಲಿ ಕೆಲವರು ಗಂಟೆಗೊಮ್ಮೆ ಗ್ರೀನ್ ಟೀ ಕುಡೀತಾರೆ. ​ಅತಿಯಾದರೆ ಇದು ಕೂಡ ವಿಷವಾಗಿಯೇ ಪರಿಣಮಿಸುತ್ತದೆ. ಜೀರ್ಣಕ್ರಿಯೆ ಉತ್ತೇಜಿಸುವುದು, ಕೊಬ್ಬು (Fat) ಕರಗಿಸುವ ಹಾಗೂ ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ಇದರ ಪಾತ್ರ ಮುಖ್ಯ. ಆದರೆ ಹೆಚ್ಚಾಗಿ ಅವಲಂಬಿತರಾಗಿದ್ರೆ ಎಚ್ಚರವಹಿಸಿ. ಏಕೆಂದರೆ ಅತಿಯಾದ ಸೇವನೆ ಹಲವು ಅಡ್ಡ ಪರಿಣಾಮಗಳನ್ನು (Side effect) ಉಂಟು ಮಾಡುತ್ತದೆ.


ಕಬ್ಬಿಣಾಂಶ ಹೀರಿಕೊಳ್ಳುವಿಕೆ ಕಡಿಮೆ ಮಾಡುತ್ತೆ


ಹೆಚ್ಚಿನ ಪ್ರಮಾಣದಲ್ಲಿ ಗ್ರೀನ್​ ಟೀ ಸೇವಿಸೋದ್ರಿಂದ ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯ ಪ್ರಭಾವ ಕಡಿಮೆ ಆಗಬಹುದು ಎಂಬುದನ್ನು ಸಂಶೋಧನೆ ಹೇಳಿದೆ. ಇದು ದೇಹದಲ್ಲಿ ಕಬ್ಬಿಣದ ಮಟ್ಟವನ್ನು ಕಡಿಮೆ ಮಾಡುತ್ತದೆ. ಊಟದ ನಂತರ ಗ್ರೀನ್ ಟೀ ಕುಡಿದರೆ ಇದರಲ್ಲಿರುವ ಕೆಲವು ಸಂಯುಕ್ತಗಳು ಕಬ್ಬಿಣದೊಂದಿಗೆ ಸಂಯೋಜಿಸುತ್ತವೆ. ಇದು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಮಾತ್ರ ಕಡಿಮೆ ಮಾಡುವುದಿಲ್ಲ, ಆ್ಯಂಟಿ ಆಕ್ಸಿಡೆಂಟ್ ಕೂಡ ದೇಹಕ್ಕೆ ಸರಿಯಾಗಿ ಸಿಗುವುದಿಲ್ಲ. ಆದ್ದರಿಂದ ಗ್ರೀನ್ ಟೀ ಕುಡಿಯುವಾಗ ಅದಕ್ಕೆ ಲಿಂಬು ಹನಿ ಸೇರಿಸಿಕೊಂಡು ಸೇವಿಸಿ.


ಗ್ರೀನ್​ ಟೀನಲ್ಲೂ ಇರುತ್ತೆ ಕೆಫೀನ್​


ಗ್ರೀನ್ ಟೀ ಕೂಡ ಕೆಫೀನ್ ಅಂಶವನ್ನು ಹೊಂದಿರುತ್ತದೆ. ಈ ಚಹಾದಲ್ಲಿನ ಕೆಫೀನ್ ಪ್ರಮಾಣವು ಕಾಫಿಯಲ್ಲಿರುವ ಪ್ರಮಾಣಕ್ಕಿಂತ ಕಡಿಮೆಯಿರಬಹುದಾದರೂ ಇದರ ಅಡ್ಡ ಪರಿಣಾಮವನ್ನು ಕಡೆಗಣಿಸುವಂತಿಲ್ಲ. ಅಲರ್ಜಿಯ ರೋಗಲಕ್ಷ ಣಗಳಿಗೆ ಕಾರಣವಾಗಬಹುದು. ಕೆಫೀನ್ ಸೇವನೆಯು ತಲೆನೋವು, ಹೆದರಿಕೆ, ಅಸಹಜ ಹೃದಯ ಬಡಿತ, ಕಿರಿಕಿರಿ, ಆತಂಕ ಮತ್ತು ಎದೆಯುರಿ ಸೇರಿದಂತೆ ಇತರೇ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.


ಇದನ್ನೂ ಓದಿ: Signature Therapy: ಭೇದಿ, ತಲೆನೋವು ಸೇರಿದಂತೆ ನಾನಾ ಖಾಯಿಲೆಗಳಿಗೆ ಹೊಸಾ ಟ್ರೀಟ್ಮೆಂಟ್, ಸಿಗ್ನೇಚರ್ ಥೆರಪಿ ಬಗ್ಗೆ ತಿಳ್ಕೊಳಿ


ಇದು ನಿದ್ರೆಯ ಕೊರತೆಯನ್ನು ಉಂಟು ಮಾಡಬಹುದು ಮತ್ತು ನಿಮ್ಮ ನಿದ್ರೆಯ ಚಕ್ರವನ್ನು ಏರುಪೇರು ಮಾಡಬಹುದು. ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ದೇಹದಲ್ಲಿ ಕ್ಯಾಲ್ಷಿಯಂ ಹೀರುವಿಕೆಗೆ ಕಾರಣವಾಗಬಹುದು. ಇದರರ್ಥ ನೀವು ಕ್ಯಾಲ್ಷಿಯಂ ಸಮೃದ್ಧ ಆಹಾರಗಳನ್ನು ಸೇವಿಸುತ್ತಿದ್ದರೂ ಸಹ ಅದರಿಂದ ಸಿಗುವ ಅಂಶಗಳನ್ನು ದೇಹ ಹೀರಿಕೊಳ್ಳಲು ಆಗುವುದಿಲ್ಲ.


ತಲೆನೋವು


ಅಧ್ಯಯನಗಳ ಪ್ರಕಾರ, ಇದು ವಿವಿಧ ರೀತಿಯ ತಲೆನೋವುಗಳಿಗೆ ಕಾರಣವಾಗಬಹುದು. ಕಬ್ಬಿಣಂಶದ ಕೊರತೆಯಿಂದಾಗಿ ಈ ತಲೆನೋವು ಮತ್ತಷ್ಟು ಉಲ್ಬಣಗೊಳ್ಳಬಹುದು. ತಲೆನೋವುಗಳ ಹೊರತಾಗಿಯೂ ತಲೆತಿರುಗುವಿಕೆ ಉಂಟಾಗುತ್ತದೆ.


ನಿದ್ರಾಹೀನತೆ


ಇದರ ಸೇವನೆ ನಿದ್ರಾಹೀನತೆಯನ್ನು ಉಂಟುಮಾಡುತ್ತದೆ. ರಾತ್ರಿ ವೇಳೆ ಇದನ್ನು ಕುಡಿಯುವುದು ನಿದ್ರಾಹೀನತೆಗೆ ಕಾರಣವಾಗಬಹುದು. ನಿದ್ರಾಹೀನತೆಯು ಮಾನಸಿಕ ವ್ಯವಸ್ಥೆಗೆ ಕಾರಣವಾಗುತ್ತದೆ. ಬೊಜ್ಜು ಕರಗುತ್ತೆ ಅಂತ ರಾತ್ರಿ ಹೊತ್ತು ಗ್ರೀನ್​ ಟೀ ಕುಡಿಯಬೇಡಿ


ಹೊಟ್ಟೆ ಸಂಬಂಧಿ ಕಾಯಿಲೆಗಳಿಗೆ ಕಾರಣ


ಹೆಚ್ಚಾಗಿ ಗ್ರೀನ್​ ಟೀ ಕುಡಿದ್ರೆ ಅದು ಹೊಟ್ಟೆ ನೋವು, ಮಲಬದ್ಧತೆ ಮತ್ತು ವಾಕರಿಕೆಗೆ ಕಾರಣವಾಗಬಹುದು. ಇದು ಗ್ಯಾಸ್ಟ್ರಿಕ್ ಆಮ್ಲದ ಉತ್ತೇಜಕ ಎಂದು ಸಂಶೋಧನೆ ತೋರಿಸಿದೆ. ಖಾಲಿ ಹೊಟ್ಟೆಯಲ್ಲಿ ಚಹಾವನ್ನು ಸೇವಿಸುವುದು ಮತ್ತು ಆಮ್ಲೀಯ ಪರಿಣಾಮಗಳನ್ನು ಕಡಿಮೆ ಮಾಡಲು ಹಾಲಿನೊಂದಿಗೆ ಕುಡಿಯಲು ಪ್ರಯತ್ನಿಸುವುದು ಉತ್ತಮ


ಇದನ್ನೂ ಓದಿ: Pregnancy Tips: ಗರ್ಭಧಾರಣೆ ಬಗ್ಗೆ ಗೊಂದಲ ಇದೆಯಾ? ಪ್ರೆಗ್ನೆನ್ಸಿ ಆರಂಭಿಕ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ


ನಿರ್ಜಲೀಕರಣ


ಗ್ರೀನ್ ಟೀ ನೈಸರ್ಗಿಕ ಮೂತ್ರವರ್ಧಕವಾಗಿರುವುದರಿಂದ, ನಿಮ್ಮ ದೇಹವು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಪಡೆಯುತ್ತಿದ್ದರೂ ಸಹ ಪದೇಪದೆ ಮೂತ್ರ ವಿಸರ್ಜನೆ ಮಾಡುವಂತಾಗುತ್ತದೆ. ಹೀಗಾಗಿ ದೇಹದ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ ಮತ್ತು ಎಲೆಕ್ಟ್ರೋಲೈಟ್ ಅಸಮತೋಲನವನ್ನು ಉಂಟು ಮಾಡುತ್ತದೆ. ನಿರ್ಜಲೀಕರಣವು ತಲೆನೋವು, ಹೃದಯಾಘಾತವನ್ನು ಕೂಡ ಉಂಟು ಮಾಡುತ್ತೆ.

Published by:Pavana HS
First published: