• Home
  • »
  • News
  • »
  • lifestyle
  • »
  • Frozen Embryo: IVF ನಿಂದಲೂ ಗರ್ಭಿಣಿಯರು ಸಾಕಷ್ಟು ಸಮಸ್ಯೆ ಎದುರಿಸಬಹುದು, ವೈದ್ಯರ ಎಚ್ಚರಿಕೆ!

Frozen Embryo: IVF ನಿಂದಲೂ ಗರ್ಭಿಣಿಯರು ಸಾಕಷ್ಟು ಸಮಸ್ಯೆ ಎದುರಿಸಬಹುದು, ವೈದ್ಯರ ಎಚ್ಚರಿಕೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಅಧ್ಯಯನಗಳು ತಿಳಿಸಿರುವಂತೆ ಘನೀಕರಿಸಿದ ಭ್ರೂಣದಿಂದ ಗರ್ಭಧರಿಸುವುದು ಅಪಾಯಕಾರಿಯಾದ ರಕ್ತದೊತ್ತಡ ಅಸ್ವಸ್ಥತೆಯನ್ನುಂಟು ಮಾಡುತ್ತದೆ ಹಾಗೂ ತಾಯಿಗೆ ಅಪಾಯವನ್ನುಂಟು ಮಾಡುತ್ತದೆ ಎಂದು ತಿಳಿಸಿದೆ. ನೈಸರ್ಗಿಕ ಗರ್ಭಧಾರಣೆಗೆ ಹೋಲಿಸಿದಾಗ ಘನೀಕರಿಸಿದ ಭ್ರೂಣದಿಂದ ಗರ್ಭವನ್ನು ಧರಿಸುವುದು ಅಧಿಕ ರಕ್ತದೊತ್ತಡ ಅಸ್ವಸ್ಥತೆಯನ್ನು ಅಭಿವೃದ್ಧಿಪಡಿಸುವಷ್ಟು ಅಪಾಯಕಾರಿ ಎಂಬುದು ಸಾಬೀತಾಗಿದೆ.

ಮುಂದೆ ಓದಿ ...
  • Share this:

ಭ್ರೂಣದ ಘನೀಕರಣ (Embryo freezing) ಪ್ರಕ್ರಿಯೆಯಲ್ಲಿ ಸ್ತ್ರೀಯ ಅಂಡಾಶಯದಿಂದ ಮೊಟ್ಟೆಗಳನ್ನು ತೆಗೆಯಲಾಗುತ್ತದೆ ಮತ್ತು ಪ್ರಯೋಗಾಲಯದಲ್ಲಿ ವೀರ್ಯದೊಂದಿಗೆ ಸಂಯೋಜಿಸಿ ಭ್ರೂಣಗಳನ್ನು ರೂಪಿಸಲಾಗುತ್ತದೆ. ಭ್ರೂಣಗಳನ್ನು ಹೆಪ್ಪುಗಟ್ಟಿಸಲಾಗುತ್ತದೆ ನಂತರ ಕರಗಿಸಿ ಮಹಿಳೆಯ (Women) ಗರ್ಭಾಶಯದಲ್ಲಿ ಇರಿಸಲಾಗುತ್ತದೆ. ಭ್ರೂಣದ ಘನೀಕರಣವನ್ನು ಫಲವತ್ತತೆ ಸಂರಕ್ಷಣೆಯ ವಿಧ ಎಂದು ಉಲ್ಲೇಖಿಸಲಾಗಿದೆ. ಆದರೆ ಅಧ್ಯಯನಗಳು ತಿಳಿಸಿರುವಂತೆ ಘನೀಕರಿಸಿದ ಭ್ರೂಣದಿಂದ ಗರ್ಭಧರಿಸುವುದು ಅಪಾಯಕಾರಿಯಾದ ರಕ್ತದೊತ್ತಡ (Blood Pressure) ಅಸ್ವಸ್ಥತೆಯನ್ನುಂಟು ಮಾಡುತ್ತದೆ ಹಾಗೂ ತಾಯಿಗೆ ಅಪಾಯವನ್ನುಂಟು ಮಾಡುತ್ತದೆ ಎಂದು ತಿಳಿಸಿದೆ. ನೈಸರ್ಗಿಕ ಗರ್ಭಧಾರಣೆಗೆ ಹೋಲಿಸಿದಾಗ ಘನೀಕರಿಸಿದ ಭ್ರೂಣದಿಂದ ಗರ್ಭವನ್ನು ಧರಿಸುವುದು ಅಧಿಕ ರಕ್ತದೊತ್ತಡ ಅಸ್ವಸ್ಥತೆಯನ್ನು ಅಭಿವೃದ್ಧಿಪಡಿಸುವಷ್ಟು ಅಪಾಯಕಾರಿ ಎಂಬುದು ಸಾಬೀತಾಗಿದೆ.


ಗಂಭೀರವಾದ ಗರ್ಭಾವಸ್ಥೆಯ ತೊಡಕು
ನೈಸರ್ಗಿಕ ಗರ್ಭಧಾರಣೆಯಿಂದ ಉಂಟಾಗುವ ಅಧಿಕ ರಕ್ತದೊತ್ತಡದ ಅದೇ ಅಪಾಯವು ಘನೀಕರಿಸಿದ ಭ್ರೂಣ ಗರ್ಭಧಾರಣೆಯಲ್ಲೂ ಇರುತ್ತದೆ ಎಂಬುದು ಹೋಲಿಕೆಯಿಂದ ತಿಳಿದುಬಂದಿದೆ. ಆದರೆ ಘನೀಕರಿಸಿದ ಭ್ರೂಣ ಗರ್ಭಧಾರಣೆಯಲ್ಲಿ ಅಪಾಯ ಹೆಚ್ಚಾಗಿದೆ ಎಂಬುದು ಉಲ್ಲೇಖಗೊಂಡಿದೆ.


ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡವು ಪ್ರಿಕ್ಲಾಂಪ್ಸಿಯಾದ ಸಂಕೇತವಾಗಿರಬಹುದಾಗಿದ್ದು, ಇದು ಗಂಭೀರವಾದ ಗರ್ಭಾವಸ್ಥೆಯ ತೊಡಕನ್ನುಂಟು ಮಾಡುತ್ತದೆ ಹಾಗೂ ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ.


ಘನೀಕರಿಸುವ ತಂತ್ರಜ್ಞಾನ ಅಥವಾ ಕ್ರಯೋಪ್ರೆಸರ್ವೇಶನ್ ವಿಧಾನ
IVF ಚಿಕಿತ್ಸಾ ಪ್ರಕ್ರಿಯೆಯು ಘನೀಕರಿಸಿದ ಭ್ರೂಣಗಳನ್ನು ಗರ್ಭಧಾರಣೆಗೆ ಬಳಸಿಕೊಳ್ಳುತ್ತದೆ. ಪ್ರಯೋಗಾಲಯದಲ್ಲಿ ವೀರ್ಯದ ಮೂಲಕ ಮೊಟ್ಟೆಯು ಫಲವತ್ತಾದ ನಂತರ ಕ್ರಯೋಪ್ರೆಸರ್ವೇಶನ್ (ಘನೀಕರಿಸುವ ತಂತ್ರಜ್ಞಾನ) ಪ್ರಕ್ರಿಯೆಯನ್ನು ಬಳಸಿಕೊಂಡು ಘನೀಕರಿಸಲಾಗುತ್ತದೆ ಮತ್ತು ನಂತರದ ದಿನಗಳಲ್ಲಿ ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ.


ಇದನ್ನೂ ಓದಿ: Baby Care: ನಿಮ್ಮ ಮಗು ಚೆನ್ನಾಗಿ ಊಟ ಮಾಡುತ್ತಿಲ್ಲವೇ? ಇಲ್ಲಿದೆ ಸಲಹೆ


2000 ರ ದಶಕದ ಅಂತ್ಯದಲ್ಲಿ ಪ್ರಾರಂಭವಾದ ಘನೀಕರಿಸುವ ತಂತ್ರಜ್ಞಾನ ಅಥವಾ ಕ್ರಯೋಪ್ರೆಸರ್ವೇಶನ್ ವಿಧಾನಗಳು ಮತ್ತು ಹೆಚ್ಚಿನ ರೋಗಿಗಳು ಭ್ರೂಣಗಳನ್ನು ಘನೀಕರಿಸಲು ಆಯ್ಕೆ ಮಾಡುತ್ತಿರುವುದರಿಂದ ಈ ಪ್ರಕ್ರಿಯೆಯು ಹೆಚ್ಚು ಸಾಮಾನ್ಯವಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.


ಫ್ರೀಜ್ ಆಲ್ ವಿಧಾನ
ಘನೀಕರಿಸಿದ ಭ್ರೂಣ ವರ್ಗಾವಣೆಯು ಇದೀಗ ವಿಶ್ವದಾದ್ಯಂತ ಹೆಚ್ಚು ಸಾಮಾನ್ಯವಾಗಿದೆ ಅಂತೆಯೇ ಹೆಚ್ಚಿನ ವೈದ್ಯರು ವೈದ್ಯಕೀಯ ಅಭ್ಯಾಸದಲ್ಲಿ ತಾಜಾ ಭ್ರೂಣ ವರ್ಗಾವಣೆಯ ಬದಲಿಗೆ ಎಲ್ಲಾ ಭ್ರೂಣ ಘನೀಕರಿಸಿದ ಪ್ರಕ್ರಿಯೆಯಾದ ಫ್ರೀಜ್ ಆಲ್ ವಿಧಾನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ನಾರ್ವೆಯ ಟ್ರಾಂಡ್‌ಹೈಮ್‌ನಲ್ಲಿರುವ ನಾರ್ವೇಜಿಯನ್ ಯೂನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ ಪ್ರಮುಖ ಲೇಖಕರಾದ ಸಿಂಡ್ರೆ H. ಪೀಟರ್ಸನ್ ಅವರ ಅಭಿಪ್ರಾಯವಾಗಿದೆ


ಒಂದೇ ರೀತಿಯ ಹೆರಿಗೆ ಪ್ರಕ್ರಿಯೆ
ಇದನ್ನು ತನಿಖೆ ನಡೆಸಲು ತನಿಖಾಧಿಕಾರಿಗಳು ಡೆನ್ಮಾರ್ಕ್, ನಾರ್ವೆ ಮತ್ತು ಸ್ವೀಡನ್‌ನ ವೈದ್ಯಕೀಯ ಜನನ ದಾಖಲಾತಿಗಳಿಂದ ರಾಷ್ಟ್ರೀಯ ದತ್ತಾಂಶವನ್ನು ಪರಿಶೀಲಿಸಿದರು ಹಾಗೂ 20 ರಿಂದ 44 ವರ್ಷ ವಯಸ್ಸಿನ ಮಹಿಳೆಯರು ಒಂದೇ ರೀತಿಯ ಹೆರಿಗೆ ಪ್ರಕ್ರಿಯೆ ಹೊಂದಿರುವುದನ್ನು ಅವರು ಕಂಡುಕೊಂಡಿದ್ದಾರೆ. ಇದು ನೈಸರ್ಗಿಕ ಹೆರಿಗೆ ಹಾಗೂ IVF ಗರ್ಭಧಾರಣೆ ಹೊಂದಿರುವ ಮಹಿಳೆಯರ ಹೋಲಿಕೆಯನ್ನು ಒಳಗೊಂಡಿತ್ತು.


ಅಧಿಕ ರಕತದೊತ್ತಡ ಸಮಸ್ಯೆಗೆ ತಂದೆ ತಾಯಿಯ ಅಂಶಗಳು ಕಾರಣವೇ ಅಥವಾ IVF ಚಿಕಿತ್ಸೆ ಕಾರಣವೇ ಎಂಬುದನ್ನು ಪತ್ತೆಹಚ್ಚಲು ವಿಧಾನವನ್ನು ಬಳಸಲಾಯಿತು. ಅಧ್ಯಯನವು 4.5 ಮಿಲಿಯನ್‌ಗಿಂತಲೂ ಹೆಚ್ಚು ಗರ್ಭಧಾರಣೆಗಳ ಅಂಕಿಅಂಶಗಳನ್ನು ಒಳಗೊಂಡಿತ್ತು. 4.4 ಮಿಲಿಯನ್ ನೈಸರ್ಗಿಕ ಗರ್ಭಧಾರಣೆಯ ಡೇಟಾ ಆಗಿದ್ದು 78,000 ಕ್ಕಿಂತ ಹೆಚ್ಚು ಗರ್ಭಧಾರಣೆಗಳು ತಾಜಾ ಭ್ರೂಣ ವರ್ಗಾವಣೆಗಳಾಗಿದ್ದವು ಹಾಗೂ 18,000 ಕ್ಕಿಂತಲೂ ಹೆಚ್ಚು ಘನೀಕರಿಸಿದ ಭ್ರೂಣ ವರ್ಗಾವಣೆ ಎಂಬುದು ಕಂಡುಬಂದಿದೆ.


ಇದನ್ನೂ ಓದಿ:  Piles Symptoms: ಈ ಸಮಸ್ಯೆಗಳು ನಿಮಗೆ ಪೈಲ್ಸ್ ಬರುವುದರ ಸೂಚನೆಯಂತೆ


ಪೀಟರ್ಸನ್ ಪ್ರಕಾರ ಹೆಚ್ಚಿನ IVF ಗರ್ಭಧಾರಣೆಗಳು ಆರೋಗ್ಯಕರ ಮತ್ತು ಜಟಿಲವಾದವುಗಳಲ್ಲ ಎಂದಾಗಿದೆ. ಹಾಗೂ ಘನೀರಿಸಿದ ಭ್ರೂಣ ವರ್ಗಾವಣೆಯ ಪರಿಣಾಮವಾಗಿ ಗರ್ಭಧರಿಸಿದ ಮಹಿಳೆಯರು ಸ್ವಾಭಾವಿಕವಾಗಿ ಗರ್ಭಧರಿಸಿದ ಮಹಿಳೆಯರಿಗಿಂತ ಅಧಿಕ ರಕ್ತದೊತ್ತಡ ಸಮಸ್ಯೆಗಳಿಗೆ 74% ಕ್ಕಿಂತ ಹೆಚ್ಚು ಒಳಗಾಗಿದ್ದಾರೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ.

Published by:Ashwini Prabhu
First published: