• Home
  • »
  • News
  • »
  • lifestyle
  • »
  • Brain Eating Amoeba: ಮೆದುಳು ತಿನ್ನುವ ಅಮೀಬಾ ಬಗ್ಗೆ ಗೊತ್ತಾ? ಎಷ್ಟು ವಿಚಿತ್ರ ನೋಡಿ ಈ ಕಾಯಿಲೆ

Brain Eating Amoeba: ಮೆದುಳು ತಿನ್ನುವ ಅಮೀಬಾ ಬಗ್ಗೆ ಗೊತ್ತಾ? ಎಷ್ಟು ವಿಚಿತ್ರ ನೋಡಿ ಈ ಕಾಯಿಲೆ

ಮೆದುಳು ತಿನ್ನುವ ಅಮೀಬಾ

ಮೆದುಳು ತಿನ್ನುವ ಅಮೀಬಾ

ಕೋರಿಯಾ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ಏಜನ್ಸಿ (KDCA) ಉಲ್ಲೇಖಿಸಿರುವಂತೆ ಮೃತ ವ್ಯಕ್ತಿಯು ದಕ್ಷಿಣ ಕೋರಿಯಾಗೆ ಪ್ರವೇಶಿಸುವ ಮುಂಚೆ ನಾಲ್ಕು ತಿಂಗಳ ಕಾಲ ಥೈಲ್ಯಾಂಡಿನಲ್ಲಿ ಇದ್ದರೆಂದು ಹೇಳಲಾಗಿದೆ. ಡಿಸೆಂಬರ್ 21ರಂದು ವ್ಯಕ್ತಿಯು ಮೃತ ಪಟ್ಟಿರುವುದಾಗಿ ವರದಿಯಾಗಿದೆ.

  • News18 Kannada
  • Last Updated :
  • Karnataka, India
  • Share this:

ಇತ್ತೀಚಿಗಷ್ಟೇ 50 ರ ಪ್ರಾಯದ ಸೌತ್ ಕೋರಿಯಾದ (South Korea) ವ್ಯಕ್ತಿಯೊಬ್ಬ ಬ್ರೈನ್ ಇಟಿಂಗ್ ಅಮೀಬಾದಿಂದುಂಟಾದ ವಿಪರೀತವಾದ ಲಕ್ಷಣಗಳಿಂದ ನರಳಿ ಮೃತಪಟ್ಟಿರುವಂತಹ ಸುದ್ದಿಯನ್ನು ಕೋರಿಯನ್ ಟೈಮ್ಸ್ ಎಂಬ ಮಾಧ್ಯಮವು (Media) ವರದಿ ಮಾಡಿದ್ದನ್ನು ನೋಡಿದ್ದೇವೆ. ಹಾಗಾದರೆ, ಈ ಭಯಾನಕ ಮೆದುಳು ತಿನ್ನುವಂತಹ ಅಮೀಬಾದಿಂದ ಉಂಟಾಗುವ ಲಕ್ಷಣಗಳ ಬಗ್ಗೆ ತಿಳಿಯೋಣ. ಇತ್ತೀಚಿಗಷ್ಟೇ 50 ರ ಪ್ರಾಯದ ಸೌತ್ ಕೋರಿಯಾದ ವ್ಯಕ್ತಿಯೊಬ್ಬರು ನೇಗ್ಲೇರಿಯಾ ಫೌಲೆರಿ (Naegleria fowleri) ಎಂಬ ಅಮೀಬಾದಂತಹ ಜೀವಿಯಿಂದ ಮೃತಪಟ್ಟಿರುವುದಾಗಿ ಕೋರಿಯನ್ ಟೈಮ್ಸ್ ವರದಿ (Report ಮಾಡಿದೆ. ಇದನ್ನು ಬ್ರೈನ್ ಇಟಿಂಗ್ ಅಮೀಬಾ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.


ಕೋರಿಯಾ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ಏಜನ್ಸಿ (KDCA) ಉಲ್ಲೇಖಿಸಿರುವಂತೆ ಮೃತ ವ್ಯಕ್ತಿಯು ದಕ್ಷಿಣ ಕೋರಿಯಾಗೆ ಪ್ರವೇಶಿಸುವ ಮುಂಚೆ ನಾಲ್ಕು ತಿಂಗಳ ಕಾಲ ಥೈಲ್ಯಾಂಡಿನಲ್ಲಿ ಇದ್ದರೆಂದು ಹೇಳಲಾಗಿದೆ. ಡಿಸೆಂಬರ್ 21ರಂದು ವ್ಯಕ್ತಿಯು ಮೃತ ಪಟ್ಟಿರುವುದಾಗಿ ವರದಿಯಾಗಿದೆ.


ಏನಿದು ಜೀವಿ?


ನೇಗ್ಲೇರಿಯಾ ಫೌಲೆರಿ ಎಂಬುದು ಒಂದು ಬಗೆಯ ಅಮೀಬಾ ಜೀವಿಯಾಗಿದ್ದು ಸಾಮಾನ್ಯವಾಗಿ ಕೊಳಗಳು, ನದಿಗಳು, ಕೆರೆಗಳಂತಹ ತಾಜಾ ನೀರಿನ ಪ್ರದೇಶ ಹಾಗೂ ಮಣ್ಣಿನಲ್ಲಿಯೂ ಸಹ ಕಂಡುಬರುತ್ತವೆ.


ಈ ಜೀವಿಗಳಿಂದ ಕಲುಷಿತವಾದ ನೀರು, ಮನುಷ್ಯನ ಮೂಗಿನಲ್ಲಿ ಸೇರಿಕೊಂಡಾಗ, ಮನುಷ್ಯ ಇದರಿಂದ ಸೋಂಕಿಗೆ ಒಳಗಾಗುತ್ತಾನೆ ಹಾಗೂ ಇದು ಮೆದುಳಿಗೆ ಹಾನಿ ಉಂಟು ಮಾಡುತ್ತದೆ. ಈ ಸ್ಥಿತಿಯನ್ನು ಪ್ರೈಮರಿ ಅಮೀಬಿಕ್ ಮೆನಿಂಗೋಎನ್ಸೆಫಾಲಿಟಿಸ್ (PAM) ಎಂದು ಕರೆಯಲಾಗುತ್ತದೆ.


ತಜ್ಞ ವರದಿಗಳ ಪ್ರಕಾರ, ಇದು ಮೆದುಳಿನ ಅಂಗಾಂಶಗಳನ್ನು ನಾಶಪಡಿಸುತ್ತದೆ. ಇತ್ತೀಚಿಗಷ್ಟೇ ದಕ್ಷಿಣ ಕೋರಿಯಾದ ವ್ಯಕ್ತಿ ಈ ಸೋಂಕಿನಿಂದ ಮೃತಪಟ್ಟ ಕಾರಣ ಅಲ್ಲಿನ ಸ್ಥಳೀಯ ಆಡಳಿತವು ಅಲ್ಲಿನ ಜನರನ್ನು ಕುರಿತು ಸ್ಥಳೀಯ ನೀರಿರುವ ಜಾಗಗಳಲ್ಲಿ ಈಜಾಡದಿರಲು ಸೂಚಿಸಿದ್ದಾರೆ.


ಇದನ್ನೂ ಓದಿ: Viral News: 12 ಪತ್ನಿಯರು, 102 ಮಕ್ಕಳಾದ್ಮೇಲೆ ಇವನಿಗೆ ಇನ್ನು ಮಕ್ಕಳು ಬೇಡ್ವಂತೆ!


ಲಕ್ಷಣಗಳು


ಇನ್ನು ಈ ಅಮೀಬಾದಿಂದ ಉಂಟಾಗುವ ಲಕ್ಷಣಗಳನ್ನು ದಕ್ಷಿಣ ಕೋರಿಯಾದ ವ್ಯಕ್ತಿಯ ಅನುಸಾರವಾಗಿ ವಿಶ್ಲೇಷಿಸುವುದಾದರೆ, ಬಾಧಿತರು ತೀವ್ರವಾದ ತಲೆನೋವು, ವಾಂತಿ, ಗಂಟಲಿನಲ್ಲಿ ಬಿಗಿತ ಹಾಗೂ ಮಂದಗೊಂಡ ಮಾತುಗಳ ಲಕ್ಷಣಗಳನ್ನು ತೋರುತ್ತಾರೆ. US, CDC ಪ್ರಕಾರ, ಸೋಂಕನ್ನು ಹೊಂದಿದ ಮೊದಲ 1-12 ದಿನಗಳಲ್ಲಿ ಸೋಂಕಿತರು ಈ ಲಕ್ಷಣಗಳನ್ನು ತೋರಿಸಲು ಪ್ರಾರಂಭಿಸುತ್ತಾರೆನ್ನಲಾಗಿದೆ.


ಮೇಲೆ ವಿವರಿಸಿದ ಲಕ್ಷಣಗಳನ್ನು ಹೊರತುಪಡಿಸಿ ಸೋಂಕು ತೀವ್ರವಾದಂತೆ ಜ್ವರ ಕಾಣಿಸಿಕೊಳ್ಳಬಹುದು. ಇದು ಮುಂದುವರೆದಂತೆ, ಸೋಂಕಿತ ವ್ಯಕ್ತಿಯಲ್ಲಿ ಸೆಳೆತಗಳು, ಭ್ರಾಂತಿ ಹಾಗೂ ಅಂತಿಮವಾಗಿ ಕೋಮಾ ಸಹ ಉಂಟಾಗಬಹುದು. ವ್ಯಕ್ತಿ ಸೋಂಕಿತನಾದಾಗ ಇದರ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತ ಸರಾಸರಿ ಐದು ದಿನಗಳಲ್ಲೆ ಸಾವನ್ನಪ್ಪುತ್ತಾನೆನ್ನಲಾಗಿದೆ. ಅಮೆರಿಕದ CDC ಪ್ರಕಾರ, 1962 ರಿಂದ 2021ರವರೆಗಿನ ಅವಧಿಯಲ್ಲಿ ಈ ರೀತಿಯ ಒಟ್ಟು 154 ಸೋಂಕುಗಳು ದಾಖಲಾಗಿದ್ದು ಅವುಗಳ ಪೈಕಿ ಕೇವಲ 4 ಜನರು ಮಾತ್ರವೇ ಬದುಕುಳಿದಿದ್ದಾರೆನ್ನಲಾಗಿದೆ.
ಬದುಕುಳಿದ ವ್ಯಕ್ತಿ


ಸದ್ಯ 22 ರ ಪ್ರಾಯದಲ್ಲಿರುವ ಸೆಬಾಸ್ಟಿಯನ್ ಡಿಲಿಯಾನ್ ಎಂಬ ವ್ಯಕ್ತಿ ಆ ಬದುಕುಳಿದ ನಾಲ್ಕು ಅದೃಷ್ಟಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಸುದ್ದಿ ಮಾಧ್ಯಮವೊಂದಕ್ಕೆ ಮಾತನಾಡುತ್ತ ಸೆಬಾಸ್ಟಿಯನ್ ತಮ್ಮ ಆ ಮಾರಣಾಂತಿಕ ಅನುಭವ ಹಾಗೂ ಚಿಕಿತ್ಸೆ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ಹದಿನಾರು ವರ್ಷದವರಾಗಿದ್ದಾಗ ಫ್ಲೋರಿಡಾದ ಒಂದು ಕೊಳದಲ್ಲಿ ಈಜಾಡಿದ ನಂತರ ಈ ಅಮೀಬಾದ ಸೋಂಕಿಗೆ ತುತ್ತಾಗಿದ್ದರು. ತದನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಚಿಕಿತ್ಸೆ ನೀಡಲಾಯಿತು. ಅದೃಷ್ಟವಶಾತ್ ಅವರು ಅದರಿಂದ ಚೇತರಿಸಿಕೊಂಡು ಬದುಕುಳಿದಿದ್ದಾರೆ.


ಅಸಾಮಾನ್ಯವಾದ ತಲೆನೋವು


ಸಿಬಿಎಸ್ ನ್ಯೂಸ್ ವರದಿ ಮಾಡಿರುವಂತೆ, 2016 ರಲ್ಲಿ ಸೆಬಾಸ್ಟಿಯನ್ ಈ ಸೋಂಕಿಗೆ ಒಳಗಾದಾಗ ಅಸಾಮಾನ್ಯವಾದ ತಲೆನೋವನ್ನು ಅನುಭವಿಸಿದ್ದರು. ಅದರ ತೀವ್ರತೆ ಎಷ್ಟಿತ್ತೆಂದರೆ ಸೆಬಾಸ್ಟಿಯನ್ ಅವರನ್ನು ಯಾರೇ ಆಗಲಿ ಸ್ಪರ್ಷಿಸಿದರೂ ಸಹ ಅವರಿಗೆ ಅದು ಆಗಿ ಬರುತ್ತಿರಲಿಲ್ಲ. ಈ ನೋವಿನ ಬಗ್ಗೆ ಸೆಬಾಸ್ಟಿಯನ್ ಹೀಗೆ ವಿವರಿಸುತ್ತಾರೆ, "ನನ್ನ ತಲೆಯ ಮೇಲೆ ಒಂದು ಕಲ್ಲನ್ನಿಟ್ಟು ಅದನ್ನು ಜೋರಾಗಿ ಒಳಗೆ ಒತ್ತುತ್ತಿದ್ದಾರೆಂದು ಭಾಸವಾಗುತ್ತಿತ್ತು. ನನಗೆ ರೋಲರ್ ಕೋಸ್ಟರ್ ನಲ್ಲಿ ಕುಳಿತಿದ್ದಂತಹ ಅನುಭವವಾಗುತ್ತಿತ್ತು".


ಚಿಕಿತ್ಸೆ


ಸೆಬಾಸ್ಟಿಯನ್ ಅವರನ್ನು ಪರೀಕ್ಷಿಸಿದ ವೈದ್ಯರು ತ್ವರಿತವಾಗಿ ಅದು ಅಮೀಬಾ ಎಂದು ಪತ್ತೆ ಹಚ್ಚಿದರು ಹಾಗೂ ಈ ಜೀವಿಯಿಂದ ಗುಣಪಡಿಸುವಂತಹ ಭರವಸೆಯ ಇಂಪಾವಿಡೋ ಎಂಬ ಔಷಧಿಯು ಕೇವಲ ಪ್ರೊಫೌಂಡಾ ಎಂಬ ಫಾರ್ಮಾ ಕಂಪನಿ ಹೊಂದಿತ್ತು. ಹಾಗಾಗಿ ವೈದ್ಯರು ಆ ಕಂಪನಿಯನ್ನು ಸಂಪರ್ಕಿಸಿ ಔಷಧಿಯನ್ನು ಪಡೆದರು.


ಆ ನಂತರ ಸೆಬಾಸ್ಟಿಯನ್ ಅವರಿಗೆ ಆ ಔಷಧಿಯನ್ನು ನೀಡಿ ಮಾನಿಟರ್ ಮಾಡಲಾಯಿತು. 72 ಗಂಟೆಗಳ ಕಾಲ ಕೋಮಾದಲ್ಲಿದ್ದ ಸೆಬಾಸ್ಟಿಯನ್ ನಂತರ ನಿಧಾನವಾಗಿ ಉಸಿರಾಡಲು ಪ್ರಾರಂಭಿಸಿದರು ಹಾಗೂ ಮಾತನಾಡಲು ಪ್ರಾರಂಭಿಸಿದರು.


ಆದರೆ, ಸೆಬಾಸ್ಟಿಯನ್ ಇನ್ನು ಪೂರ್ಣವಾಗಿ ಗುಣಮುಖರಾಗಿರಲಿಲ್ಲ. ಅವರ ಮೆದುಳು ಉಬ್ಬಿಕೊಂಡಿತ್ತು. ಪರಿಣಾಮದಿಂದಾಗಿ ಅವರು ತಮ್ಮ ಕೆಲ ಸಾಮರ್ಥ್ಯ, ಕೌಶಲ್ಯಗಳನ್ನು ಮರೆತಿದ್ದರು. ನಂತರ ಅವರನ್ನು ಪುನರುಜ್ಜೀವನ ಕೇಂದ್ರದಲ್ಲಿ ದಾಖಲಿಸಲಾಯಿತು. ಅಲ್ಲಿ ಅವರು, ನಡೆಯುವ, ಓಡುವ, ಬರೆಯುವ ಕೌಶಲ್ಯಗಳನ್ನು ಮತ್ತೆ ಅರಿತುಕೊಂಡರು.


ಭಾರತದಲ್ಲಿ ಈ ಅಮೀಬಾ


ನೇಗ್ಲೇರಿಯಾ ಫೌಲೆರಿ ಅಮೀಬಾ ಜಗತ್ತಿನ ಎಲ್ಲ ಖಂಡಗಳಲ್ಲಿ ಕಂಡುಬರುತ್ತವೆ ಎನ್ನಲಾಗಿದ್ದು ಇದು PAM ಆರೋಗ್ಯ ಸ್ಥಿತಿಗೆ ಪ್ರಮುಖ ಕಾರಣವಾಗಿದೆ ಎಂದು ಭಾರತ ಸಹಿತ 16 ದೇಶಗಳಲ್ಲಿ ಪರಿಗಣಿಸಲಾಗಿದೆ. 2015 ರಲ್ಲಿ ಪ್ರಕಟವಾದ ಸಂಶೋಧನಾ ಅಧ್ಯಯನವೊಂದರ ಪ್ರಕಾರ, ಈ ಅಮೀಬಾ ಹರಿಯಾಣ ರಾಜ್ಯದ ರೋಹ್ತಕ್ ಹಾಗೂ ಝಜ್ಜರ್ ಜಿಲ್ಲೆಯಲ್ಲಿರುವ ತಾಜಾ ನೀರಿನ ಪ್ರದೇಶಗಳಲ್ಲಿ ಕಂಡುಬಂದಿದೆ ಎನ್ನಲಾಗಿದೆ.

First published: