ತಲೆಹೊಟ್ಟು ಸಮಸ್ಯೆಯೇ? ಈ 3 ಸರಳ ಸಲಹೆಗಳನ್ನು ಪಾಲಿಸಿ ಸಮಸ್ಯೆಯನ್ನ ಒದ್ಡೋಡಿಸಿ

Dandruff: ನೆತ್ತಿಯಲ್ಲಿ ತುರಿಕೆ ಆರಂಭವಾಯಿತೆಂದರೆ ತಲೆಯಲ್ಲಿ ಹೊಟ್ಟು ಆಗಿದೆ ಎಂದರ್ಥ. ಒಣ ಚರ್ಮ, ಎಣ್ಣೆ ಚರ್ಮದವರು ಹೆಚ್ಚಾಗಿ ತಲೆಹೊಟ್ಟಿನ ಸಮಸ್ಯೆಗೆ ಒಳಗಾಗುತ್ತಾರೆ.

Dandruff

Dandruff

  • Share this:

ತಲೆಹೊಟ್ಟು ಪ್ರತಿಯೊಬ್ಬರನ್ನು ಕಾಡುತ್ತಿರುವ ಸಮಸ್ಯೆ. ಧೂಳು, ಕಲುಷಿತ ವಾತಾವರಣ, ನೀರು ಈ ಎಲ್ಲಾ ಕಾರಣಗಳಿಂದ ತಲೆಹೊಟ್ಟು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಮಳೆಗಾಲದಲ್ಲಿ ತಲೆಹೊಟ್ಟು ಕೊಂಚ ಜಾಸ್ತಿಯೇ. ಹವಾಮಾನದಲ್ಲಾಗುವ ಬದಲಾವಣೆಯಿಂದಾಗಿ ನಮ್ಮ ನೆತ್ತಿಯು ನೈಸರ್ಗಿಕ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಇದರಿಂದ ಕೂದಲು ಉದುರುವಿಕೆ, ತಲೆಹೊಟ್ಟು ಕಂಡು ಬರುತ್ತದೆ. ನೆತ್ತಿಯಲ್ಲಿ ತುರಿಕೆ ಆರಂಭವಾಯಿತೆಂದರೆ ತಲೆಯಲ್ಲಿ ಹೊಟ್ಟು ಆಗಿದೆ ಎಂದರ್ಥ. ಒಣ ಚರ್ಮ, ಎಣ್ಣೆ ಚರ್ಮದವರು ಹೆಚ್ಚಾಗಿ ತಲೆಹೊಟ್ಟಿನ ಸಮಸ್ಯೆಗೆ ಒಳಗಾಗುತ್ತಾರೆ.


ತಲೆಹೊಟ್ಟು ಸಮಸ್ಯೆಗೆ ಇಲ್ಲಿವೆ ಕಾರಣಗಳು:


ಕೆಳಗೆ ಹೇಳಿರುವ ಎಲ್ಲಾ ಕಾರಣಗಳು ತಲೆಹೊಟ್ಟಿಗೆ ಸಾಮಾನ್ಯ ಕಾರಣಗಳಾಗಿವೆ. ಸರಿಯಾದ ಸಮಯಕ್ಕೆ ಮುನ್ನೆಚ್ಚರಿಕೆ ತೆಗೆದುಕೊಂಡರೆ ಈ ಸಮಸ್ಯೆಯಿಂದ ದೂರವಿರಬಹುದು.


1. ಸ್ವಚ್ಛತೆಯ ಕೊರತೆ – ಕೂದಲನ್ನು ತೊಳೆಯದೇ ಇರುವುದು
2. ಕೂದಲಿಗೆ ಯಥೇಚ್ಛವಾಗಿ ಶ್ಯಾಂಪೂ ಬಳಸುವುದು
3. ಕೂದಲನ್ನು ಸರಿಯಾಗಿ ಉಜ್ಜಿಕೊಳ್ಳದಿರುವುದು
4. ಹೇರ್ ಸ್ಟೈಲಿಂಗ್ ಉತ್ಪನ್ನಗಳ ಪ್ರತಿಕೂಲ ಪರಿಣಾಮ
5. ಚರ್ಮದ ಅಲರ್ಜಿ
6. ಹಾರ್ಮೋನುಗಳ ಅಸಮತೋಲನ
7. ಪೌಷ್ಟಿಕಾಂಶದ ಕೊರತೆ


ತಲೆ ಹೊಟ್ಟಿನ ಸಮಸ್ಯೆಗೆ ಪರಿಹಾರಗಳು


1. ಕೂದಲಿಗೆ ಎಣ್ಣೆ ಬಳಸಿ


ಕೂದಲ ಪೋಷಣೆಗೆ ಎಣ್ಣೆ ತುಂಬಾ ಮುಖ್ಯ. ತಲೆಹೊಟ್ಟು ನಿವಾರಣೆಗೆ ಕೂದಲ ಆರೈಕೆಗೆ ಎಣ್ಣೆ ಪ್ರಮುಖ ಪಾತ್ರ ವಹಿಸುತ್ತದೆ. ಕೂದಲಿಗೆ ತೇವಾಂಶ ಮುಖ್ಯವಾಗಿರುವುದರಿಂದ ಎಣ್ಣೆ ಬಳಸಬೇಕಾಗುತ್ತದೆ. ಏಕೆಂದರೆ ಹವಾಮಾನ ಬದಲಾವಣೆಗಳು ನಮ್ಮ ಕೂದಲನ್ನು ಹಾನಿಗೊಳಿಸುತ್ತವೆ ಮತ್ತು ತಲೆಹೊಟ್ಟು ಉಂಟಾಗುತ್ತದೆ. ಗಿಡಮೂಲಿಕೆಗಳ ಎಣ್ಣೆ ಬಳಸಿದರೆ ಕೂದಲು ಆರೋಗ್ಯಯುತವಾಗಿರುತ್ತದೆ. ಹಾಗಾಗಿ ತಲೆಸ್ನಾನ ಮಾಡುವ ಒಂದು ಗಂಟೆ ಅಥವಾ 45 ನಿಮಿಷ ಮೊದಲೇ ಎಣ್ಣೆ ಹಾಕಿ ಮಸಾಜ್ ಮಾಡಬೇಕು. ಇದರಿಂದ ರಕ್ತಪರಿಚಲನೆಯು ಸುಧಾರಿಸುತ್ತದೆ. ನೆತ್ತಿಯ ಮೇಲೆ ಮೇದೋಗ್ರಂಥಿಗಳ ಸ್ರಾವವನ್ನು ನಿರ್ವಹಿಸುತ್ತದೆ. ಕೂದಲನ್ನು ಸೌಲ್ಯ ಅಥವಾ ಗಿಡಮೂಲಿಕೆಗಳ ಶ್ಯಾಂಪೂವನ್ನು ಬಳಸಿ ತೊಳೆಯಿರಿ. ಆರೋಗ್ಯಕರ ಕೂದಲಿಗೆ ವಾರಕ್ಕೆ ಎರಡು ಬಾರಿ ಎಣ್ಣೆ ಹಾಕಿ ತಲೆಹೊಟ್ಟು ನಿವಾರಿಸಿಕೊಳ್ಳಿ.


ಬಾಯಿ ಸಿಹಿ ಮಾಡಿದ ಕ್ಯಾಡ್​ಬರಿ; ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಮಾರ್ಬಲ್ ಚಾಕೊಲೇಟ್

2. ತಲೆಸ್ನಾನ


ತುಂಬಾ ಮಂದಿ ತಲೆಯು ಬೆವರುತ್ತದೆ. ಇದರಿಂದ ತಲೆಯಲ್ಲಿ ಕೊಳೆ ಶೇಖರಣೆಯಾಗುವ ಸಾಧ್ಯತೆ ಇರುತ್ತದೆ. ಇದರಿಂದ ತುರಿಕೆ ಮತ್ತು ತಲೆಹೊಟ್ಟು ಉಂಟಾಗುತ್ತದೆ. ಹಾಗಾಗಿ ತಲೆಹೊಟ್ಟು ನಿವಾರಣೆಗೆ ತಲೆಸ್ನಾನ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವರು ವಾರದಲ್ಲಿ ನಾಲ್ಕೈದು ಬಾರಿ ತಲೆಸ್ನಾನ ಮಾಡುತ್ತದೆ. ಇದು ಒಳ್ಳೆಯ ಅಭ್ಯಾಸವಲ್ಲ. ನಿರಂತರವಾಗಿ ತಲೆಸ್ನಾನ ಮಾಡುವುದರಿಂದ ಇದು ನಮ್ಮ ನೆತ್ತಿಯಲ್ಲಿರುವ ನೈಸರ್ಗಿಕ ತೇವಾಂಶವನ್ನು ತೆಗೆದುಹಾಕುತ್ತದೆ. ಹಾಗಾಗಿ ವಾರದಲ್ಲಿ ಎರಡು ಬಾರಿ ತಲೆಸ್ನಾನ ಮಾಡಿ. ಅಲ್ಲದೇ ತುಂಬಾ ಬಿಸಿ ನೀರಿನಿಂದ ತೊಳೆಯದೆ ತಣ್ಣೀರು ಅಥವಾ ಉಗುರು ಬೆಚ್ಚಗಿನ ನೀರನ್ನು ಬಳಸಿ. ಸಾಧ್ಯವಾದಷ್ಟು ಕೂದಲಿಗೆ ಗಿಡಮೂಲಿಕೆ ಆಧಾರಿತ ಶ್ಯಾಂಪೂ ಬಳಸಿ.


3. ತಲೆಬಾಚುವುದು


ತಲೆಬಾಚಿಕೊಳ್ಳುವುದು ಸಹ ತಲೆಹೊಟ್ಟು ತಡೆಗಟ್ಟುವಲ್ಲಿ ಒಂದು ಪ್ರಮುಖ ಹೆಜ್ಜೆ. ಹಾಗಾಗಿ ತಲೆಕೂದಲನ್ನು ಸರಿಯಾಗಿ ಬಾಚಿಕೊಳ್ಳಿ. ಇದು ನಮ್ಮ ನೆತ್ತಿಯಿಂದ ಒಣ ಪದರವನ್ನು ತೆಗೆದು ಹಾಕುತ್ತದೆ. ನೆತ್ತಿಯಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ನೆತ್ತಿಯಿಂದ ಪ್ರಾರಂಭವಾಗುವ ಕೂದಲನ್ನು ಕೆಳಮುಖವಾಗಿ ಬಾಚಿಕೊಳ್ಳಿ. ಇದು ನೆತ್ತಿಯಲ್ಲಿ ಎಣ್ಣೆಯ ಅಂಶವನ್ನು ಎಲ್ಲೆಡೆ ಹರವಲು ಸಹಾಯಕವಾಗುತ್ತದೆ. ನಮ್ಮ ಬಾಚಣಿಕೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಬೇರೆಯವರಿಗೆ ನೀಡಬೇಡಿ.


ಇನ್ನು ಕೆಲವು ಸಲಹೆಗಳು:


1. ಸಮತೋಲನ ಆಹಾರ ಸೇವಿಸಿ
2. ಎಣ್ಣೆಯುಕ್ತ, ಮಸಾಲೆಯುಕ್ತ, ಸಕ್ಕರೆ ಅಂಶವಿರುವ ಆಹಾರಗಳಿಂದ ದೂರವಿರಿ
3. ಒತ್ತಡದಿಂದ ದೂರವಿರಿ
4. ಯೋಗ ಮತ್ತು ಧ್ಯಾನ ನಿರಂತರವಾಗಿರಲಿ


ಇವುಗಳ ಜೊತೆಗೆ ಮೊಹಾ ತಲೆಹೊಟ್ಟು ನಿವಾರಣೆ ಎಣ್ಣೆ, ಮೊಹಾ ಶ್ಯಾಂಪೂ ಬಳಸಿ. ಇದು ಚರಕಾ ಫಾರ್ಮ ಎಂಬುವವರು ತಯಾರಿಸಿದ್ದು, ಆರೋಗ್ಯಯುತ ಕೂದಲ ಬೆಳವಣಿಗೆಗೆ ಇದು ಸಹಾಯಕವಾಗಲಿದೆ.


Mango Recipes: ಮಾವಿನ ಸೀಸನ್ ಮುಗಿಯುವ ಮೊದಲು ನೀವು ಪ್ರಯತ್ನಿಸಬೇಕಾದ 5 ಪಾಕಗಳು!

ಮೊಹಾ ಎಣ್ಣೆ:ದಾಸವಾಳ, ಬೇವು ಮತ್ತು ರುಸ್ಮರಿ ಸೇರಿಸಿ ತಯಾರಿಸಲಾಗಿದೆ. ಇದು ತಲೆಹೊಟ್ಟಿನ ವಿರುದ್ಧ ಹೋರಾಡುವುದರ ಜೊತೆಗೆ ಕೂದಲ ಬೇರುಗಳನ್ನು ಗಟ್ಟಿಗೊಳಿಸುತ್ತದೆ. ಕೂದಲು ಕವಲೊಡೆಯುವುದನ್ನು ತಡೆಯುತ್ತದೆ.


ಮೊಹಾ ಶ್ಯಾಂಪೂ:ಇದು ರುಸ್ಮರಿ, ಟೀ ಟ್ರೀ ಮತ್ತು ಬೇವಿನ ಮಿಶ್ರಣವಾಗಿದ್ದು, ಇದು ತಲೆಹೊಟ್ಟು ತೆಗೆದುಹಾಕಿ ಆರೋಗ್ಯಕರ ಕೂದಲನ್ನು ನೀಡುತ್ತದೆ.

First published: