• Home
  • »
  • News
  • »
  • lifestyle
  • »
  • Protein Powder: ಪ್ರತಿದಿನ ರುಚಿಕರ ಮತ್ತು ಹೆಲ್ದೀ ಪ್ರೊಟೀನ್ ಪೌಡರ್ ಮನೆಯಲ್ಲಿ ತಯಾರಿಸಿ, ಇಲ್ಲಿದೆ ರೆಸಿಪಿ

Protein Powder: ಪ್ರತಿದಿನ ರುಚಿಕರ ಮತ್ತು ಹೆಲ್ದೀ ಪ್ರೊಟೀನ್ ಪೌಡರ್ ಮನೆಯಲ್ಲಿ ತಯಾರಿಸಿ, ಇಲ್ಲಿದೆ ರೆಸಿಪಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾರುಕಟ್ಟೆಯಿಂದ ತಂದಿರುವ ಪ್ರೊಟೀನ್ ಪೌಡರ್ ಸೇವಿಸಿ ಸುಸ್ತಾಗಿದ್ದೀರಾ ಹಾಗಾದ್ರೆ ಈಗ ನೀವು ಚಿಂತಿಸಬೇಕಾಗಿಲ್ಲ. ಯಾಕಂದ್ರೆ ನೀವು ಮನೆಯಲ್ಲಿ ಪ್ರೋಟೀನ್ ಪುಡಿ ಸುಲಭವಾಗಿ ತಯಾರಿಸಿ ಹೆಲ್ದೀ ಪ್ರೊಟೀನ್ ಪೌಡರ್ ಸೇವನೆ ಮಾಡಿ.

  • Share this:

    ಹೆಚ್ಚಿನ ಜನರು (People) ಬಾಡಿ ಬಿಲ್ಡಿಂಗ್ (Body Building) ಮತ್ತು ತೂಕ ನಿಯಂತ್ರಣದ (Weight Control) ವೇಳೆ ಹೆಚ್ಚಿನ ಜನರು ಪ್ರೊಟೀನ್ (Protein) ಸೇವನೆ ಮಾಡುತ್ತಾರೆ. ಹೆಚ್ಚಿನ ಜನರು ತಮ್ಮ ದೈನಂದಿನ ಪ್ರೋಟೀನ್ ಅಗತ್ಯತೆ ಪೂರೈಸಲು ಪ್ರೋಟೀನ್ ಶೇಕ್‌ ಸೇವನೆ ಮಾಡುತ್ತಾರೆ. ದೇಹದಲ್ಲಿ ಸರಿಯಾದ ಪ್ರಮಾಣದ ಪ್ರೋಟೀನ್ ನ್ನು ಕಾಪಾಡಲು ಹಾಲೊಡಕು ಪ್ರೋಟೀನ್ ಪೌಡರ್ (Powder) ತುಂಬಾ ಪ್ರಯೋಜನಕಾರಿ ಎಂದು ನಂಬಲಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಹಲವು ಬ್ರ್ಯಾಂಡ್ ನ ಪ್ರೊಟೀನ್ ಪೌಡರ್ ಸಿಗುತ್ತವೆ. ಆದರೆ ನೀವು ಹೊರಗೆ ಮಾರುಕಟ್ಟೆಯಿಂದ ತಂದಿರುವ ಪ್ರೊಟೀನ್ ಪೌಡರ್ ಸೇವಿಸಿ ಸುಸ್ತಾಗಿದ್ದೀರಾ? ಹಾಗಾದ್ರೆ ಈಗ ನೀವು ಚಿಂತಿಸಬೇಕಾಗಿಲ್ಲ.


    ಮನೆಯಲ್ಲಿ ಪ್ರೋಟೀನ್ ಪುಡಿ ಸುಲಭವಾಗಿ ತಯಾರಿಸಿ


    ಯಾಕಂದ್ರೆ ನೀವು ಮನೆಯಲ್ಲಿ ಪ್ರೋಟೀನ್ ಪುಡಿ ಸುಲಭವಾಗಿ ತಯಾರಿಸಿ, ಹೆಲ್ದೀ ಪ್ರೊಟೀನ್ ಪೌಡರ್ ಸೇವನೆ ಮಾಡಿ. ಒಣ ಹಣ್ಣು, ಬೀಜ, ಗಿಡಮೂಲಿಕೆಗಳ ಸಹಾಯದಿಂದ ನೀವು ಮನೆಯಲ್ಲಿಯೇ ಪ್ರೋಟೀನ್ ಪುಡಿ ಸುಲಭವಾಗಿ ತಯಾರಿಸಿ ಸೇವನೆ ಮಾಡಿ.


    ಸ್ನಾಯುವಿನ ಬಲವನ್ನು ಹೆಚ್ಚಿಸಲು ಇದು ಉತ್ತಮ ಆಗಿದೆ. ಆದರೆ ನಿಮ್ಮ ಒಟ್ಟಾರೆ ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಿಸಲು ಪ್ರೊಟೀನ್ ಪೌಡರ್ ಸಹಾಯ ಮಾಡುತ್ತದೆ. ಈ ಪ್ರೋಟೀನ್ ಪುಡಿಯಲ್ಲಿರುವ ಫೈಬರ್ ಅಂಶ ನೈಸರ್ಗಿಕ ವಿರೇಚಕವಾಗಿ ಕೆಲಸ ಮಾಡುತ್ತದೆ.


    ಇದನ್ನೂ ಓದಿ: ಥೈರಾಯ್ಡ್​ನಿಂದ ಬಿಡುಗಡೆ ಹೊಂದಲು ಈ ಸೂಪರ್​ ಫುಡ್​​ಗಳು ಸಹಕಾರಿ


    ಇದು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ಮತ್ತು ಚಯಾಪಚಯ ದರ ಹೆಚ್ಚಿಸುತ್ತದೆ. ಹಾಗಾದ್ರೆ ಮನೆಯಲ್ಲಿ ಪ್ರೊಟೀನ್ ಪೌಡರ್ ನ್ನು ಹೇಗೆ ತಯಾರಿಸಬಹುದು ಎಂದು ನೋಡೋಣ.


    ಮನೆಯಲ್ಲಿ ಪ್ರೋಟೀನ್ ಪೌಡರ್ ಹೇಗೆ ತಯಾರಿಸುವುದು?


    ಬೇಕಾಗುವ ಸಾಮಗ್ರಿಗಳು


    ಅರ್ಧ ಕಪ್ ಬಾದಾಮಿ, ಸೂರ್ಯಕಾಂತಿ ಬೀಜಗಳು ಮೂರು ಟೀ ಸ್ಪೂನ್, ಒಣದ್ರಾಕ್ಷಿ ಮೂರು ಟೀಸ್ಪೂನ್, ಪಿಸ್ತಾ ಅರ್ಧ ಕಪ್, ಎಳ್ಳು ಮೂರು ಟೀಸ್ಪೂನ್, ಹಸಿರು ಏಲಕ್ಕಿ ಅರ್ಧ ಟೀಸ್ಪೂನ್, ಕೇಸರಿ ಎರಡು ಚಿಟಿಕೆ, ವಾಲ್ನಟ್ಸ್ ಅರ್ಧ ಕಪ್, ಕಲ್ಲಂಗಡಿ ಬೀಜಗಳು ಮೂರು ಟೀಸ್ಪೂನ್, ಒಣಗಿದ ಅಂಜೂರದ ಹಣ್ಣುಗಳು ಮೂರು ಟೀಸ್ಪೂನ್, ಗೋಡಂಬಿ ಅರ್ಧ ಕಪ್, ಸೋಂಪು ಒಂದು ಟೀಸ್ಪೂನ್, ತುಪ್ಪ ಒಂದು ಟೀ ಸ್ಪೂನ್ ಬೇಕು.


    ಮನೆಯಲ್ಲಿ ಸುಲಭವಾಗಿ ಪ್ರೋಟೀನ್ ಪೌಡರ್ ತಯಾರಿಸುವುದು ಹೇಗೆ?


    ನಿಮ್ಮ ಮನೆಯಲ್ಲಿ ಪ್ರೋಟೀನ್ ಪೌಡರ್ ಅನ್ನು ಸುಲಭವಾಗಿ ತಯಾರಿಸಲು ಪ್ಯಾನ್ ತೆಗೆದುಕೊಳ್ಳಿ. ಅದಕ್ಕೆ ತುಪ್ಪ ಹಾಕಿ. ತುಪ್ಪ ಬಿಸಿಯಾದ ನಂತರ ಅದಕ್ಕೆ ಬಾದಾಮಿ, ಶೇಂಗಾ ಮತ್ತು ಪಿಸ್ತಾ, ಎಳ್ಳು ಹಾಕಿ. ನಂತರ ಅದನ್ನು ಬಾಣಲೆಯಲ್ಲಿ ಚೆನ್ನಾಗಿ ಹುರಿದು ಬೇರೊಂದು ತಟ್ಟೆಗೆ ತೆಗೆದುಕೊಳ್ಳಿ.


    ನಂತರ ಡೇಟ್ಸ್, ಅಂಜೂರದ ಹಣ್ಣು ಸಣ್ಣ ತುಂಡುಗಳಾಗಿ ಕತ್ತರಿಸಿ. ಬ್ಲೆಂಡರ್ ನಲ್ಲಿ ಹುರಿದ ಬಾದಾಮಿ, ಕಡಲೆಕಾಯಿ, ಖರ್ಜೂರ, ಅಂಜೂರ, ಪಿಸ್ತಾ ಮತ್ತು ಇತರ ಬೀಜಗಳನ್ನು ಹಾಕಿ ಚೆನ್ನಾಗಿ ರುಬ್ಬಿ. ಈ ಸಂಪೂರ್ಣ ಮಿಶ್ರಣವನ್ನು ಚೆನ್ನಾಗಿ ರುಬ್ಬಿ. ಶುಂಠಿ, ಕೇಸರಿ, ಏಲಕ್ಕಿ ಪುಡಿ ಸೇರಿಸಿ ಮತ್ತು ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿ.


    ಈಗ ಈ ಮಿಶ್ರಣವನ್ನು ಟ್ರೇನಲ್ಲಿ ಹಾಕಿ ಸ್ವಲ್ಪ ಒಣಗಿಸಿ. ಪ್ರೋಟೀನ್ ಪುಡಿ ಒಣಗಿದಾಗ ಅದನ್ನು ಕಂಟೇನರ್ ನಲ್ಲಿ ಸಂಗ್ರಹಿಸಿ. ಮನೆಯಲ್ಲಿ ತಯಾರಿಸಿದ ಪ್ರೋಟೀನ್ ಪುಡಿ ಸಿದ್ಧ. ಅದನ್ನು ಒಂದು ಲೋಟ ಬೆಚ್ಚಗಿನ ಹಾಲಿನ ಜೊತೆ ಪ್ರತಿದಿನ ಸೇವಿಸಿ.


    ಮನೆಯಲ್ಲಿ ತಯಾರಿಸಿದ ಪ್ರೋಟೀನ್ ಪೌಡರ್ ಹೇಗೆ ಪ್ರಯೋಜನಕಾರಿ?


    ತೂಕ ನಷ್ಟಕ್ಕೆ ಸಹಕಾರಿ


    ಪ್ರೊಟೀನ್ ಭರಿತ ಆಹಾರ ಸೇವನೆ ಮಾಡುವುದು ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ಆಗುತ್ತದೆ. ಆಗಾಗ್ಗೆ ಅನಾರೋಗ್ಯಕರ ತಿಂಡಿ ಸೇವನೆ ತಪ್ಪಿಸಲು ಸಹಕಾರಿ. ವ್ಯಕ್ತಿಯ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.


    ಇದನ್ನೂ ಓದಿ: ಕರುಳು ಮತ್ತು ಹೊಟ್ಟೆಯನ್ನು ಸ್ವಚ್ಛಗೊಳಿಸಲು ತಜ್ಞರು ಹೇಳಿರುವ ಸುಲಭ ಪರಿಹಾರ ಹೀಗಿದೆ!


    ದೈಹಿಕ ಶಕ್ತಿ


    ಯಾವುದೇ ರೀತಿಯ ಪ್ರೋಟೀನ್ ನಿಮ್ಮ ಸ್ನಾಯುಗಳಿಗೆ ಬಲ ನೀಡಲು ಸಹಾಯ ಮಾಡುತ್ತದೆ. ಜೊತೆಗೆ, ಈ ಪ್ರೋಟೀನ್ ನಿಮ್ಮನ್ನು ದಿನವಿಡೀ ಶಕ್ತಿಯುತವಾಗಿರಿಸಲು, ಹಾನಿಗೊಳಗಾದ ಸ್ನಾಯುಗಳು ಮತ್ತು ಅಂಗಾಂಶಗಳನ್ನು ಸರಿಪಡಿಸಲು ಪ್ರೋಟೀನ್ ಸಹಾಯ ಮಾಡುತ್ತದೆ. ಮನೆಯಲ್ಲಿ ತಯಾರಿಸಿದ ಪ್ರೋಟೀನ್ಗಳು ಯಾವುದೇ ಅಡ್ಡ ಪರಿಣಾಮ ಬೀರವುದಿಲ್ಲ.

    Published by:renukadariyannavar
    First published: