Walking And Health: ತೂಕ ಇಳಿಕೆಗೆ ಪ್ರತಿದಿನ ಹತ್ತು ಸಾವಿರ ಹೆಜ್ಜೆ ನಡೆಯುವುದು ಎಷ್ಟು ಪರಿಣಾಮಕಾರಿ?

ಅನೇಕ ತೂಕ ನಷ್ಟ ಕ್ರಮಗಳಲ್ಲಿ ವಾಕಿಂಗ್ ಅನ್ನು ಕಡಿಮೆ ಪರಿಣಾಮದ ತಾಲೀಮು. ವಾಕಿಂಗ್ ಮಾಡುವುದು ತುಂಬಾ ಸರಳ ಮತ್ತ ಸುಲಭದ ಕೆಲಸವಾಗಿದೆ. ನಿಸ್ಸಂಶಯವಾಗಿ ಇದಕ್ಕಾಗಿ ಯಾರೂ ಕೂಡ ಹಣ ವೆಚ್ಚ ಮಾಡುವ ಪ್ರಮೇಯವಿಲ್ಲ. ಯಾವುದೇ ವಯಸ್ಸಿನ ಜನರು ಸಹ ವಾಕಿಂಗ್ ನ್ನು ಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದಿನವೂ ವಾಕಿಂಗ್ (Daily Walking) ಮಾಡುವುದು ಆರೋಗ್ಯ (Health) ವೃದ್ಧಿಸುತ್ತದೆ. ಜೊತೆಗೆ ಹೆಚ್ಚಿನ ತೂಕ ಇಳಿಕೆಗೆ (Weight Loss) ಸಾಕಷ್ಟು ಕೊಡುಗೆ ನೀಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರಲ್ಲೂ ಒಬ್ಬ ವ್ಯಕ್ತಿ ದಿನಕ್ಕೆ ಕನಿಷ್ಠ 10,000 ಹೆಜ್ಜೆ ನಡೆಯಬೇಕು ಎಂದು ಹೇಳಿರುವುದನ್ನು ನೀವು ಹಲವು ಬಾರಿ ಓದಿರಬಹುದು ಅಥವಾ ಕೇಳಿರಬಹುದು. ಉತ್ತಮ ಆರೋಗ್ಯಕ್ಕಾಗಿ ಕನಿಷ್ಠ ಇಷ್ಟು ವಾಕಿಂಗ್ ಮಾಡುವುದು ತುಂಬಾ ಮುಖ್ಯ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಯಾರಾದರೂ 10,000 ಹೆಜ್ಜೆ ನಡೆಯದೇ ಹೋದರೆ ಅವರು ಯಾವ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಾರೆ? ಆರೋಗ್ಯದಲ್ಲಿ ಯಾವ ಏರುಪೇರು ಆಗುವುದನ್ನು ಇದು ಹೇಳುತ್ತದೆ ಎಂದು ಇಲ್ಲಿ ನೋಡೋಣ.

    ವಾಕಿಂಗ್ ಮತ್ತು ತೂಕ ನಷ್ಟ

    ಅನೇಕ ತೂಕ ನಷ್ಟ ಕ್ರಮಗಳಲ್ಲಿ ವಾಕಿಂಗ್ ಅನ್ನು ಕಡಿಮೆ ಪರಿಣಾಮದ ತಾಲೀಮು ಎಂದು ಹೇಳುತ್ತಾರೆ. ವಾಕಿಂಗ್ ಮಾಡುವುದು ತುಂಬಾ ಸರಳ ಮತ್ತ ಸುಲಭದ ಕೆಲಸವಾಗಿದೆ. ನಿಸ್ಸಂಶಯವಾಗಿ ಇದಕ್ಕಾಗಿ ಯಾರೂ ಕೂಡ ಹಣ ವೆಚ್ಚ ಮಾಡುವ ಪ್ರಮೇಯವಿಲ್ಲ. ಯಾವುದೇ ವಯಸ್ಸಿನ ಜನರು ಸಹ ವಾಕಿಂಗ್ ನ್ನು ಮಾಡಬಹುದು.

    ತೂಕ ಇಳಿಸುವವರಿಗೆ ವಾಕಿಂಗ್ ತುಂಬಾ ಪರಿಣಾಮಕಾರಿ ತಾಲೀಮಾಗಿದೆ. ಇಲ್ಲಿ ಇನ್ನೊಂದು ವಿಶಿಷ್ಟ ಸಂಗತಿಯೆಂದರೆ ಜನರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ವಾಕಿಂಗ್ ಮಾಡಬಹುದು. ವಾಕಿಂಗ್ ಗೆ ನಿರ್ದಿಷ್ಟ ವೇಗವನ್ನು ಗುರುತಿಸಿಲ್ಲ. ಹಾಗಾಗಿ ಜನರು ತಮ್ಮದೇ ವೇಗಕ್ಕೆ ಅನುಗುಣವಾಗಿ ನಡೆಯಬಹುದು. ಇನ್ನೊಂದು ವಿಷಯವೆಂದರೆ ನಡೆಯಲು ಯಾವುದೇ ವಿಶೇಷ ಸ್ಥಳದ ಅಗತ್ಯವಿಲ್ಲ.

    ಇದನ್ನೂ ಓದಿ: ಪಿತ್ತ, ಕಫ ಸಮಸ್ಯೆ ನಿವಾರಣೆಗೆ ಮೆಂತ್ಯ ಬೀಜಗಳನ್ನು ಹೀಗೆ ಬಳಸಿದರೆ ಉತ್ತಮ!

    ನಿಮ್ಮ ಮನೆಯ ಟೇರೆಸ್, ಉದ್ಯಾನವನ, ರಸ್ತೆ ಬದಿ, ಖಾಲಿ ಬೀದಿಗಳಲ್ಲಿ, ಆಫೀಸ್, ಮಾರ್ಕೆಟ್ ಹೀಗೆ ಹಲವು ರೀತಿಯಲ್ಲಿ ನಡೆದುಕೊಂಡು ಹೋಗುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು. 10,000 ಹೆಜ್ಜೆ ನಡೆಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ನಂಬಲಾಗಿದೆ. ಅದು ಹೇಗೆಂದು ತಿಳಿಯೋಣ.

    10000 ಹೆಜ್ಜೆ ನಡಿಗೆ ತೂಕ ಇಳಿಕೆಗೆ ಸಹಕಾರಿ?

    ಪ್ರತಿನಿತ್ಯ ಇಷ್ಟು ಹೆಜ್ಜೆ ನಡೆಯುವುದರಿಂದ ತೂಕ ಇಳಿಸಬಹುದು. ವ್ಯಾಯಾಮದ ಪರಿಣಾಮವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಒಬ್ಬ ವ್ಯಕ್ತಿಯು ದಿನಕ್ಕೆ ಕೇವಲ 1000 ಹೆಜ್ಜೆಗಳನ್ನು ನಡೆಯುವ ಮೂಲಕ ತೂಕ ಕಳೆದುಕೊಳ್ಳಬಹುದು. ಅದೇ ಫಲಿತಾಂಶಕ್ಕಾಗಿ ಇನ್ನೊಬ್ಬ ವ್ಯಕ್ತಿಯು ಹೆಚ್ಚುವರಿ 1000 ಹೆಜ್ಜೆ ನಡೆಯಬೇಕಾಗುತ್ತದೆ.

    ನಡಿಗೆಯಿಂದ ದೇಹಕ್ಕೆ ಸಿಗುವ ಪ್ರಯೋಜನಗಳೇನು?

    ವಾಕಿಂಗ್ ಒಟ್ಟಾರೆ ದೇಹದ ಆರೋಗ್ಯ ಸುಧಾರಿಸುತ್ತದೆ. ಹೃದಯದ ಆರೋಗ್ಯ ಸುಧಾರಿಸುತ್ತದೆ ಮತ್ತು ಹೃದ್ರೋಗ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಇತರ ಕಾಯಿಲೆಗಳಿಂದ ರಕ್ಷಿಸುತ್ತದೆ.

    ಇದು ಸ್ನಾಯುವಿನ ಸಹಿಷ್ಣುತೆ ಹೆಚ್ಚಿಸುತ್ತದೆ. ಮೂಳೆಯ ಆರೋಗ್ಯ ಸುಧಾರಿಸುತ್ತದೆ. ಮುಂಜಾನೆ ನಡಿಗೆ ದೇಹಕ್ಕೆ ವಿಟಮಿನ್ ಡಿ ಸಿಗುತ್ತದೆ. ಒತ್ತಡ ನಿವಾರಿಸುತ್ತದೆ. ನಿಮ್ಮ ಸಾಮಾಜಿಕ ಜೀವನವನ್ನು ಸುಧಾರಿಸುತ್ತದೆ.

    ದಿನಕ್ಕೆ 10,000 ಹೆಜ್ಜೆ ನಡೆಯುವುದು ಉತ್ತಮವೇ?

    ಜಡ ಜೀವನಶೈಲಿಯನ್ನು ತೊಡೆದು ಹಾಕಿ ಉತ್ತಮ ಜೀವನಕ್ರಮ ರೂಪಿಸಿಕೊಳ್ಳಲು ವಾಕಿಂಗ್ ಮಾಡಿ. ವಾಕಿಂಗ್ ಸಾಮರ್ಥ್ಯವು ವ್ಯಕ್ತಿಯ ಆರೋಗ್ಯ, ವಯಸ್ಸು, ಲಿಂಗ ಮತ್ತು ಆರೋಗ್ಯ ತೊಂದರೆಯನ್ನು ಆಧರಿಸಿರುತ್ತದೆ. 10,000 ಹೆಜ್ಜೆ ನಡೆಯುವುದು ಅನಾರೋಗ್ಯ, ಕಾಯಿಲೆ ಇರುವವರಿಗೆ ಹಾನಿಯುಂಟು ಮಾಡುವ ಸಾಧ್ಯತೆಯಿದೆ.

    ಈ ಬಗ್ಗೆ ಸಂಶೋಧಕರು ಮಿಶ್ರ ಪ್ರತಿಕ್ರಿಯೆ ನೀಡುತ್ತಾರೆ. ಅನೇಕ ಸಂಶೋಧನೆಗಳು ದಿನಕ್ಕೆ 10,000 ಹೆಜ್ಜೆಗಳ ನಡಿಗೆಯ ಆರೋಗ್ಯ ಪ್ರಯೋಜನಗಳ ಬಗ್ಗೆ ಹೇಳುತ್ತವೆ. ಅನೇಕರು ಅದರಲ್ಲಿ ಅರ್ಧದಷ್ಟು ನಡೆಯುವುದು ಪ್ರಯೋಜನ ನೀಡುತ್ತದೆ ಎಂದು ಹೇಳಿದ್ದಾರೆ. ಹಾರ್ವರ್ಡ್ ವೈದ್ಯಕೀಯ ಶಾಲೆಯ ಅಧ್ಯಯನವು ದಿನಕ್ಕೆ 4,400 ಹೆಜ್ಜೆ ನಡೆಯುವುದು ಮಹಿಳೆಯರಲ್ಲಿ ಸಾವಿನ ಅಪಾಯ ಕಡಿಮೆ ಮಾಡುತ್ತದೆ ಎಂದು ಹೇಳಿದೆ.

    ಇದನ್ನೂ ಓದಿ: ಪ್ರತಿದಿನ ಹೆಚ್ಚು ಸಕ್ಕರೆ ಸೇವನೆ ಮಾಡುವುದು ಈ ಸಮಸ್ಯೆಗಳಿಗೆ ಕಾರಣವಾಗುತ್ತದೆ

    ದೈಹಿಕ ಚಟುವಟಿಕೆಯು ಮಾನವ ದೇಹವು ಚಲಿಸುತ್ತಲೇ ಇರಲು ಅತ್ಯಗತ್ಯವಾಗಿದೆ. ಇಂದಿನ ಜನರ ಜೀವನಶೈಲಿ ಅವರನ್ನು ಅನಾರೋಗ್ಯಕ್ಕೀಡು ಮಾಡಬಹುದು.
    Published by:renukadariyannavar
    First published: