ತೂಕ ಇಳಿಕೆಗೆ (Weight Loss) ವ್ಯಾಯಾಮ (Exercise) ಮಾಡುವುದು ತುಂಬಾ ಪರಿಣಾಮಕಾರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಧಿಕ ಬೊಜ್ಜಿನ (Over Weight) ಸಮಸ್ಯೆಯಿಂದ ಬಳಲುತ್ತಿರುವವರು, ಏನೇ ಮಾಡಿದ್ರೂ ತೂಕ ಕಡಿಮೆಯಾಗುತ್ತಿಲ್ಲ ಎಂದು ದೂರುವವರು ಪರಿಣಾಮಕಾರಿ ವ್ಯಾಯಾಮಗಳನ್ನು ತಮ್ಮ ದೈನಂದಿನ ಚಟುವಟಿಕೆಯಲ್ಲಿ ಸೇರಿಸುವುದು ತುಂಬಾ ಮುಖ್ಯ. ದಿನವೂ ವಾಕಿಂಗ್ ಮಾಡುವುದು, ಜಂಪಿಂಗ್ (Jumping), ಸ್ಕಿಪ್ಪಿಂಗ್ (Skipping) ನಂತಹ ವ್ಯಾಯಾಮಗಳು ಮತ್ತು ಕಾರ್ಡಿಯೋ ವರ್ಕೌಟ್ (Workout) ಮಾಡುವುದು ತ್ವರಿತವಾಗಿ ಮತ್ತು ವೇಗವಾಗಿ ತೂಕ ಇಳಿಕೆಗೆ ಪ್ರಯೋಜನ ನೀಡುತ್ತದೆ ಎಂಬುದು ಹಲವು ಬಾರಿ ಸಾಬೀತಾಗಿದೆ. ಅದಾಗ್ಯೂ ವಯಸ್ಸಾದವರು, ತುಂಬಾ ಬೊಜ್ಜು ಹೊಂದಿರುವವರು ಜಂಪಿಂಗ್, ಸ್ಕಿಪ್ಪಿಂಗ್ ಮತ್ತು ಕಾರ್ಡಿಯೋ ವರ್ಕೌಟ್ ಮಾಡುವುದು ಕಷ್ಟಕರ.
ತೂಕ ಇಳಿಕೆಗೆ ಕಾರ್ಡಿಯೋ ವ್ಯಾಯಾಮ
ಯಾರೆಲ್ಲಾ ಮೂಳೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೋ ಅವರೂ ಸಹ ಸ್ಕಿಪ್ಪಿಂಗ್ ಮತ್ತು ಜಂಪಿಂಗ್ ಮಾಡುವುದು ಕಷ್ಟ. ಹಾಗಾಗಿ ಅವರು ಮೊದಲು ಮೊದಲು ಲಘು ವ್ಯಾಯಾಮ ಮಾಡುತ್ತಾ, ದೇಹದ ಬೊಜ್ಜು ಇಳಿಸುವುದು ಅನಂತರದಲ್ಲಿ ಸ್ಕಿಪ್ಪಿಂಗ್ ಮತ್ತು ಜಂಪಿಂಗ್ ಹಾಗೂ ಕಾರ್ಡಿಯೋ ವರ್ಕೌಟ್ ನತ್ತ ಗಮನ ಹರಿಸುವುದು ಸೂಕ್ತ.
ತೂಕ ಇಳಿಕೆಗೆ ಸಹಕಾರಿಯಾಗುವ ಹಲವಾರು ವ್ಯಾಯಾಮಗಳಿವೆ. ಅದು ವಿಭಿನ್ನ ಪ್ರಯೋಜನ ನೀಡುತ್ತದೆ. ತಜ್ಞರ ಪ್ರಕಾರ, ತೂಕ ನಷ್ಟಕ್ಕೆ ಕಾರ್ಡಿಯೋ ವ್ಯಾಯಾಮ ಉತ್ತಮ ಎಂದು ಹೇಳುತ್ತಾರೆ. ಮೂಳೆಗಳನ್ನು ಬಲಪಡಿಸಲು ರನ್ನಿಂಗ್ ಮಾಡುವುದು ತುಂಬಾ ಮುಖ್ಯ ಎಂದು ಹೇಳುತ್ತಾರೆ.
ಇಂತಹ ಸ್ಥಿತಿಯಲ್ಲಿ ಜನರು ಯಾವ ವ್ಯಾಯಾಮ ಉತ್ತಮ ಎಂದು ತಿಳಿಯದೇ ಗೊಂದಲಕ್ಕೆ ಒಳಗಾಗುತ್ತಾರೆ. ನೀವು ಇಪ್ಪತ್ತು ನಿಮಿಷ ಪ್ರತಿದಿನ ಜಂಪಿಂಗ್ ರೋಪ್ ವ್ಯಾಯಾಮ ಮಾಡುವುದು ತೂಕ ಇಳಿಕೆಗೆ ತುಂಬಾ ಅತ್ಯುತ್ತಮ ಎನ್ನುತ್ತಾರೆ ತಜ್ಞರು. ಜಂಪಿಂಗ್ ರೋಪ್ ವ್ಯಾಯಾಮವು ದೇಹಕ್ಕೆ ಅನೇಕ ಉತ್ತಮ ಪ್ರಯೋಜನ ನೀಡುತ್ತದೆ.
ಇಪ್ಪತ್ತು ನಿಮಿಷದ ಜಂಪಿಂಗ್ ರೋಪ್ ವ್ಯಾಯಾಮ ಮಾಡಿ, ತೂಕ ಇಳಿಸಿ
ಕೇವಲ ಇಪ್ಪತ್ತು ನಿಮಿಷ ಜಂಪಿಂಗ್ ರೋಪ್ ವ್ಯಾಯಾಮ ಮಾಡಿದರೆ ಬಹಳಷ್ಟು ಕ್ಯಾಲೊರಿ ಬರ್ನ್ ಮಾಡಬಹುದು. ಜಂಪಿಂಗ್ ರೋಪ್ ಮಾಡಿದ್ರೆ ತೂಕ ನಷ್ಟವು ತುಂಬಾ ವೇಗವಾಗಿ ಆಗುತ್ತದೆ.
ತೂಕ ಇಳಿಸುವಾಗ ಎಷ್ಟು ಕ್ಯಾಲೋರಿ ತಿನ್ನುತ್ತೇವೆಯೋ, ಅದರ ದುಪ್ಪಟ್ಟು ಕ್ಯಾಲೋರಿ ಬರ್ನ್ ಮಾಡಬೇಕಾಗುತ್ತದೆ. ಮನೆಯಲ್ಲಿ ತೂಕ ತ್ವರಿತವಾಗಿ ಕಡಿಮೆ ಮಾಡಲು ಜಂಪಿಂಗ್ ರೋಪ್ ಸಹಕಾರಿಯಾಗಿದೆ. ಜಂಪಿಂಗ್ ರೋಪ್ ಮಾಡಿದ್ರೆ ಹೆಚ್ಚುವರಿ ಕೊಬ್ಬು ಕರಗಲು ಸಹಾಯವಾಗುತ್ತದೆ.
ಜಂಪಿಂಗ್ ರೋಪ್ ವ್ಯಾಯಾಮದಿಂದ ಹೃದಯ ಬಲವಾಗುತ್ತದೆ. ದೇಹದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿಸುತ್ತದೆ. ಹೃದಯ ಬಡಿತ ಮತ್ತು ಉಸಿರಾಟದ ವೇಗ ಹೆಚ್ಚಾಗುತ್ತದೆ. ಇದು ಹೃದಯದ ಕಾರ್ಯ ಹೆಚ್ಚಿಸುವ ಮೂಲಕ ಹೃದಯವನ್ನು ಆರೋಗ್ಯವಾಗಿಸಲು ಸಹಾಯ ಮಾಡುತ್ತದೆ.
ದೇಹಕ್ಕೆ ಶಕ್ತಿ ಒದಗಿಸುತ್ತದೆ
ಜಂಪಿಂಗ್ ರೋಪ್ ನಿಂದ ತೂಕ ಇಳಿಕೆ ಜೊತೆಗೆ ದೇಹದ ಶಕ್ತಿ ಸಹ ಹೆಚ್ಚುತ್ತದೆ. ಇದು ಸಂಪೂರ್ಣ ದೇಹಕ್ಕೆ ತಾಲೀಮು ನೀಡುತ್ತದೆ. ಇದರಿಮದ ಸ್ನಾಯುಗಳು ಬಲಗೊಳ್ಳುತ್ತವೆ. ಭುಜ, ಬೈಸೆಪ್ಸ್, ಕಿಬ್ಬೊಟ್ಟೆ ಸ್ನಾಯು, ತೊಡೆ, ಸೊಂಟದ ಸ್ನಾಯು ಬಲಪಡಿಸಲು, ಪ್ರತಿದಿನ ಜಂಪಿಂಗ್ ರೋಪ್ ಮಾಡಿ.
ಇದನ್ನೂ ಓದಿ: ಸ್ನಾನದ ಸಮಯದಲ್ಲಿ ಈ ಸಣ್ಣ ಮಿಸ್ಟೇಕ್ ಮಾಡಿದ್ರೆ ಹೃದಯಾಘಾತವಾಗುತ್ತಂತೆ!
ಮೂಳೆಗಳ ಬಲವರ್ಧನೆ
ಹಗ್ಗದ ಜಂಪಿಂಗ್ ನಿಂದ ಮೂಳೆಗಳ ಮೇಲೆ ಧನಾತ್ಮಕ ಒತ್ತಡ ಬೀಳುತ್ತದೆ. ಇದರಿಂದ ದೇಹ ಮೂಳೆಗಳನ್ನ ಪೋಷಿಸುತ್ತದೆ. ಇದು ಮೂಳೆಗಳ ಬಲವರ್ಧನೆಗೆ ಸಹಕಾರಿ. ದೇಹದ ಸಮತೋಲನ ಸುಧಾರಿಸುತ್ತದೆ. ಗಾಯದ ಅಪಾಯ ಕಡಿಮೆಯಾಗುತ್ತದೆ. ತೋಳು, ಕಾಲು ಸ್ನಾಯುಗಳ ಸಮತೋಲನ ಸುಧಾರಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ