Pineapple Recipe: ದಿನವೂ ಮನೆಯಲ್ಲಿ ಕೊಬ್ಬರಿ ಚಟ್ನಿ ಮಾಡಿ ಬೋರ್ ಆಗಿದ್ರೆ ಅನಾನಸ್ ಚಟ್ನಿ ಟ್ರೈ ಮಾಡಿ

ಮಕ್ಕಳಿಗೆ ಹಾಗೂ ವಯಸ್ಕರರಿಗೆ ಅನಾನಸ್ ಅಂದ್ರೆ ಬಲು ಇಷ್ಟ. ನೀವು ಅನಾನಸ್ ಹಣ್ಣು ಮತ್ತು ಜ್ಯೂಸ್ ಕುಡಿದು ಬೇಜಾರ್ ಆಗಿದ್ರೆ ಇಲ್ಲಿ ಹೇಳಲಾಗಿರುವ ಅನಾನಸ್ ಚಟ್ನಿಯನ್ನು ಪ್ರಯತ್ನಿಸಿ ಒಮ್ಮೆ ತಿಂದು ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಅನಾನಸ್ (Pineapple) ಹುಳಿ ಮತ್ತು ಸಿಹಿ ಹೊಂದಿರುವ ರಸಭರಿತ ಹಣ್ಣು (Fruit). ಅನಾನಸ್ ಸಾಮಾನ್ಯವಾಗಿ ಹೊರಗಿನಿಂದ ಹಸಿರು (Green) ಮಿಶ್ರಿತ ಮುಳ್ಳು ಮತ್ತು ಒಳಗಿನಿಂದ ಹಳದಿ ಬಣ್ಣ (Yellow Color) ಹೊಂದಿರುತ್ತದೆ. ಇದು ಆರೋಗ್ಯಕ್ಕೆ (Health) ಹೆಚ್ಚು ಪ್ರಯೋಜನಕಾರಿ (Beneficial) ಆಗಿದೆ. ಅನಾನಸ್ ನಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು, ಕ್ಯಾಲ್ಸಿಯಂ, ಫೈಬರ್, ವಿಟಮಿನ್ ಸಿ ಮತ್ತು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಅನಾನಸ್ ಔಷಧೀಯ ಗುಣಗಳ ಗಣಿ ಎಂದು ಬಣ್ಣಿತವಾಗಿದೆ. ಅನಾನಸ್‌ನ ಪೋಷಕಾಂಶಗಳು ದೇಹದ ಸಮಸ್ಯೆಗಳನ್ನು ಹೊಡೆದೋಡಿಸಲು ಸಹಕಾರಿ ಆಗಿವೆ. ಅನಾನಸ್ ನ್ನು ದೊಡ್ಡವರು, ಮಕ್ಕಳು ಹಾಗೂ ವಯಸ್ಕರರು ಸೇರಿದಂತೆ ಎಲ್ಲಾ ವಯೋಮಾನದವರು ಬಲು ಉತ್ಸಾಹದಿಂದ ತಿನ್ನುತ್ತಾರೆ.

    ಅನಾನಸ್ ಚಟ್ನಿ ಪಾಕ-ವಿಧಾನ

    ಮಕ್ಕಳಿಗೆ ಹಾಗೂ ವಯಸ್ಕರರಿಗೆ ಅನಾನಸ್ ಅಂದ್ರೆ ಬಲು ಇಷ್ಟ. ನೀವು ಅನಾನಸ್ ಹಣ್ಣು ಮತ್ತು ಜ್ಯೂಸ್ ಕುಡಿದು ಬೇಜಾರ್ ಆಗಿದ್ರೆ ಇಲ್ಲಿ ಹೇಳಲಾಗಿರುವ ಅನಾನಸ್ ಚಟ್ನಿಯನ್ನು ಪ್ರಯತ್ನಿಸಿ ಒಮ್ಮೆ ತಿಂದು ನೋಡಿ.

    ಹುಳಿ ಮತ್ತು ಸಿಹಿಯ ಪೋಷಕಾಂಶದಿಂದ ತುಂಬಿರುವ ಅನಾನಸ್ ಹಣ್ಣಿನ ಚಟ್ನಿ ತಿನ್ನಲು ಬಲು ಸೊಗಸಾಗಿರುತ್ತದೆ. ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಪರಾಠಾದ ಜೊತೆಗೆ ಅನಾನಸ್ ಚಟ್ನಿ ಸವಿಯಬಹುದು.

    ಇದನ್ನೂ ಓದಿ: ಗರ್ಭಾಶಯ ಡಿಡೆಲ್ಫಿಸ್ ಎಂದರೇನು? ಈ ಕಾಯಿಲೆ ಇದ್ದರೆ ಗರ್ಭಧಾರಣೆ ಕಷ್ಟಕರ ಏಕೆ?

    ನೀವು ಮಕ್ಕಳಿಗೆ ಪರಾಠಾ ಮತ್ತು ಚಪಾತಿಗೆ ಕೊತ್ತಂಬರಿ ಅಥವಾ ಪುದೀನ ಚಟ್ನಿ ಕೊಡುವ ಬದಲು ಹೊಸ ಮತ್ತು ಮಸಾಲೆಯುಕ್ತ ಪದಾರ್ಥ ತಯಾರಿಸಿ ನೀಡಿ, ಅದರಲ್ಲೂ ಮಕ್ಕಳು ಇಷ್ಟಪಡುವ ಅನಾನಸ್ ಚಟ್ನಿ ಮನೆಯಲ್ಲಿ ಮಾಡಿ ಕೊಡಿ. ಇದು ನಿಮ್ಮ ಮಗುವಿನ ಊಟದ ಬಯಕೆಯನ್ನು ಹೆಚ್ಚು ಮಾಡುತ್ತದೆ.

    ಮನೆಯಲ್ಲಿ ಅನಾನಸ್ ಚಟ್ನಿಯ ಸುಲಭ ಪಾಕ ವಿಧಾನ ಮಾಡಲು ಪ್ರಯತ್ನಿಸಿ. ಅನಾನಸ್ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು ಮತ್ತು ಅದನ್ನು ಹೇಗೆ ಮಾಡುವುದು ಎಂದು ಇಲ್ಲಿ ನೋಡೋಣ.

    ಅನಾನಸ್ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು

    ಸಣ್ಣದಾಗಿ ಕೊಚ್ಚಿದ ಒಂದು ಅನಾನಸ್

    ರೂನ್ ದಾಲ್ - 1 ಟೀಸ್ಪೂನ್

    ಉದ್ದಿನ ಬೇಳೆ ದಾಲ್ - 2 ಟೀಸ್ಪೂನ್

    ಕೆಂಪು ಮೆಣಸಿನಕಾಯಿ - 6 ರಿಂದ 7

    ಸಾಸಿವೆ - 1 ಟೀಸ್ಪೂನ್

    ಅಗತ್ಯವಿದ್ದಷ್ಟು ಎಣ್ಣೆ

    ಮೆಂತ್ಯ - ಅರ್ಧ ಟೀ ಚಮಚ

    ತೆಂಗಿನಕಾಯಿ - 1/2 ಟೀಸ್ಪೂನ್ (ತುರಿದ)

    ಹುಣಸೆಹಣ್ಣು - ಕಪ್

    ಬೆಲ್ಲದ ಪುಡಿ - 2 ಟೀಸ್ಪೂನ್

    ಕರಿಬೇವಿನ ಎಲೆಗಳು - 7 ರಿಂದ 8

    ಇಂಗು - 1 ಪಿಂಚ್

    ರುಚಿಗೆ ಉಪ್ಪು

    ಅನಾನಸ್ ಚಟ್ನಿ ಮಾಡುವ ವಿಧಾನ

    ಅನಾನಸ್ ಚಟ್ನಿ ಮಾಡಲು ಮೊದಲು ಬಾಣಲೆಯಲ್ಲಿ ಅನಾನಸ್ ಹಾಕಿ ಕುದಿಸಿ.

    ನಂತರ, ಬೇಳೆ, ಉದ್ದಿನ ಬೇಳೆ, ಮೆಂತ್ಯ, ಬೆಲ್ಲದ ಪುಡಿಯನ್ನು ಬಾಣಲೆಯಲ್ಲಿ ಒಣಗಿಸಿ. ನಂತರ ಒಣ ಕೆಂಪು ಮೆಣಸಿನಕಾಯಿ ಸೇರಿಸಿ.

    ಎಲ್ಲ ಹುರಿದ ನಂತರ ಗ್ಯಾಸ್ ಆಫ್ ಮಾಡಿ. ಎಲ್ಲಾ ವಸ್ತುಗಳನ್ನು ಮಿಕ್ಸಿಗೆ ಹಾಕಿ ಅದರಲ್ಲಿ ತೆಂಗಿನಕಾಯಿ ಮತ್ತು ಹುಣಸೆಹಣ್ಣು ಮಿಶ್ರಣ ಮಾಡಿ. ತೆಳುವಾದ ಪೇಸ್ಟ್ ಮಾಡಿ.

    ಇದನ್ನೂ ಓದಿ: ಬಾಲಿವುಡ್ ನಟಿ ಮಹಿಮಾ ಮಕ್ವಾನಾ ಗ್ಲಾಮರಸ್ ಲುಕ್ ಮತ್ತು ಅಂದದ ತ್ವಚೆಯ ರಹಸ್ಯ ಇಲ್ಲಿದೆ

    ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಕರಿಬೇವು ಮತ್ತು ಇಂಗು ಹಾಕಿ ಬೇಯಿಸಿ. ಪೇಸ್ಟ್ ಮತ್ತು ಅನಾನಸ್ ತುಂಡು ಹಾಕಿ, ಅದಕ್ಕೆ ಉಪ್ಪು ಸೇರಿಸಿ ಬೇಯಿಸಿ. ಸ್ವಲ್ಪ ಸಮಯದ ನಂತರ ಗ್ಯಾಸ್ ಆಫ್ ಮಾಡಿ. ಈಗ ನಿಮ್ಮ ಅನಾನಸ್ ಚಟ್ನಿ ಸಿದ್ಧವಾಗಿದೆ. ಇದನ್ನು ಪರಾಠಾ, ಚಪಾತಿ ಜೊತೆ ಸವಿಯಿರಿ.
    Published by:renukadariyannavar
    First published: