ನಿದ್ರೆ ಬರ್ತಿಲ್ವಾ? ಹಾಗಿದ್ದರೆ ಪ್ರತಿ ನಿತ್ಯ ಹೀಗೆ ಮಾಡ್ಬೇಕಂತೆ..!

ಇದರಿಂದ ಹೃದಯಾಘಾತ ಮತ್ತು ಇತರೆ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತದೆ.

news18
Updated:December 30, 2018, 6:38 PM IST
ನಿದ್ರೆ ಬರ್ತಿಲ್ವಾ? ಹಾಗಿದ್ದರೆ ಪ್ರತಿ ನಿತ್ಯ ಹೀಗೆ ಮಾಡ್ಬೇಕಂತೆ..!
ಸಾಂದರ್ಭಿಕ ಚಿತ್ರ
news18
Updated: December 30, 2018, 6:38 PM IST
ನಾನು ತುಂಬಾ ಆರೋಗ್ಯವಾಗಿದ್ದೇನೆ. ಆದರೆ ಏನು ಮಾಡಲಿ ನಿದ್ರೇನೇ ಬರಲ್ಲ. ದೇಹ ದಣಿದಿದ್ದರೂ ನಿದ್ದೆ ಮಾತ್ರ ಆವರಿಸುವುದಿಲ್ಲ. ಸ್ವಲ್ಪ ಹೊತ್ತು ನಿದ್ರೆ ಮಾಡಲು ರಾತ್ರಿ ಇಡೀ ಹಾಸಿಗೆಯ ಮೇಲೆ ನರಳಾಡಬೇಕಾಗುತ್ತದೆ. ಆದರೂ ಸಂತೃಪ್ತಿಯ ನಿದ್ದೆ ಮಾತ್ರ ಬಂದಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಹಲವು ಮಂದಿ ಇಂತಹದೊಂದು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿರುತ್ತಾರೆ. ಕೆಲವರು ಇಂತಹದೊಂದು ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದಂತೆ ನಿದ್ದೆ ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ ನೆನಪಿಟ್ಟುಕೊಳ್ಳಿ ಇದರಿಂದ ಸಮಸ್ಯೆಯು ಮತ್ತಷ್ಟು ಬಿಗಡಾಯಿಸುತ್ತದೆ. ಇದಕ್ಕಾಗಿ ಅತ್ಯಂತ ಸರಳ ಪರಿಹಾರವನ್ನು ಇಲ್ಲಿ ತಿಳಿಸಲಾಗಿದೆ. ಪ್ರತಿ ನಿತ್ಯ ಹೀಗೆ ಮಾಡಿದರೆ ನಿಮಗೆ ಸುಖ ನಿದ್ದೆ ಬರುವುದರಲ್ಲಿ ಸಂಶಯವೇ ಇಲ್ಲ ಎನ್ನುತ್ತಾರೆ ಸಂಶೋಧಕರು.

ನಿದ್ರಾಹೀನತೆಯ ಸಮಸ್ಯೆ ನಿಮ್ಮಲ್ಲಿ ಕಾಣಿಸುತ್ತಿದ್ದರೆ ನಗಬೇಕಂತೆ. ಇದನ್ನು ಕೇಳಿದರೆ ನಗು ಬರುತ್ತದೆಯಾದರೂ ಇಂತಹದೊಂದು ಪರಿಹಾರ ಸೂಚಿಸಿರುವುದು ಸಂಶೋಧಕರು. ಹೌದು, ನೀವು ಮನಸು ಬಿಚ್ಚಿ ನಕ್ಕರೆ ನಿಮ್ಮ ನಿದ್ದೆಯ ಸಮಸ್ಯೆ ದೂರವಾಗುತ್ತದೆ. ನೀವು ನಗುತ್ತಿದ್ದರೆ ದೇಹದಲ್ಲಿ ಮೆಲಾಟೊನಿನ್ ಎಂಬ ಹಾರ್ಮೋನ್​ ಉತ್ಪತ್ತಿಯಾಗುತ್ತದೆ. ಈ ಹಾರ್ಮೋನಿನ ಉತ್ಪತ್ತಿ ಹೆಚ್ಚಾದಂತೆ ದೇಹವು ವಿಶ್ರಾಂತಿಯನ್ನು ಬಯಸುತ್ತದೆ. ಇದರಿಂದ ನಿಧಾನಕ್ಕೆ ನಿದ್ರೆ ಆವರಿಸಿಕೊಳ್ಳುತ್ತದೆ ಎನ್ನುತ್ತಾರೆ ಸಂಶೋಧಕರು. ನಗುವುದರಿಂದ ಇದೊಂದೇ ಪ್ರಯೋಜನವಲ್ಲ, ಬದಲಾಗಿ ನಗುವು ಹೃದಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಇದರಿಂದ ಹೃದಯಾಘಾತ ಮತ್ತು ಇತರೆ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತದೆ.

ಇದನ್ನೂ ಓದಿ: ವರ್ಷಾಂತ್ಯದಲ್ಲಿ ಫ್ಲಿಪ್​ಕಾರ್ಟ್​ ಭರ್ಜರಿ ಆಫರ್: 30 ಸಾವಿರದ ಟಿವಿಗೆ ಕೇವಲ 19 ಸಾವಿರ ರೂ.

ದಿನವೂ ಸಂತೋಷದಿಂದಲೇ ನಗುತ್ತಿದ್ದರೆ ಸುಂದರವಾಗಿ ಕಾಣುತ್ತೀರಿ. ಇದರಿಂದ ಸ್ನಾಯುಗಳು ಕೂಡ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂಬುದು ಅಷ್ಟೇ ಸತ್ಯ ಎನ್ನುತ್ತಾರೆ ತಜ್ಞರು. ಮುಖದಲ್ಲಿ ನಗುವಿದ್ದರೆ ಮುಖದ ಭಾಗದಲ್ಲಿ ರಕ್ತ ಪರಿಚಲನೆಯು ಉತ್ತಮಗೊಳ್ಳುತ್ತದೆ. ಇದರಿಂದ ಯೌವ್ವನವನ್ನು ಕಾಪಾಡಿಕೊಳ್ಳಬಹುದು. ಅಲ್ಲದೆ ಶರೀರದ ಒತ್ತಡವನ್ನು ತೊಡೆದು ಹಾಕುವ ಅತ್ಯುತ್ತಮ ಔಷಧಿ ಎಂದರೆ ನಗು ಎಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ.

ಇದನ್ನೂ ಓದಿ: VIDEO: ಸ್ಮಾರ್ಟ್​​ಫೋನ್​ಗಳಿಗೆ ಹೇಳಿ ಗುಡ್ ಬೈ: ಬಂದಿದೆ ಕಣ್ಣ ಮುಂದೆ ಸಂಪೂರ್ಣ ಮಾಹಿತಿ ನೀಡುವ ಸ್ಮಾರ್ಟ್​ ಗ್ಲಾಸ್​

ಮುಖದಲ್ಲಿ ನಗುವಿದ್ದರೆ, ಎಲ್ಲರೊಂದಿಗೆ ಖುಷಿ ಖುಷಿಯಾಗಿ ಬೆರೆಯಲು ಸಹಾಯಕವಾಗುತ್ತದೆ. ದಿನ ಪೂರ್ತಿ ಸಂತೋಷದಿಂದ ಇದ್ದರೆ ಒತ್ತಡ ದೂರವಾಗಿ ದೇಹದ ಶಕ್ತಿ ಹೆಚ್ಚಾಗುತ್ತದೆ. ಅಲ್ಲದೆ ದೇಹದಲ್ಲಿ ಮೆಲಾಟೊನಿನ್ ಎಂಬ ಹಾರ್ಮೋನಿನ ಬಿಡುಗಡೆ ಹೆಚ್ಚಾಗುತ್ತದೆ. ಇದರಿಂದ ರಾತ್ರಿ ಆಗುವಷ್ಟರಲ್ಲಿ ದೇಹವು ವಿಶ್ರಾಂತಿ ಬಯಸುತ್ತದೆ. ಹಾಗಾಗಿ ಮಲಗಿದೊಡನೆ ಸುಖ ನಿದ್ರೆಗೆ ಜಾರಲು 'ನಗು' ಸಹಾಯಕವಾಗಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ: ರೈಲ್ವೆಯ 14033 ಹುದ್ದೆಗಳ ನೇಮಕಾತಿ: ತಿಂಗಳ ವೇತನ 35 ಸಾವಿರ ರೂ.
Loading...

First published:December 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ