HOME » NEWS » Lifestyle » DAILY HOROSCOPE JUNE MARCH 2021 ASTROLOGICAL PREDICTIONS SESR

Astrology: ಧನು ರಾಶಿಯವರು ಸಾಲ ನೀಡುವ ಮುನ್ನ ಯೋಚಿಸಿ: ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

Horoscope Today june 14: ಜನ್ಮ ರಾಶಿಗಳು ದಿನದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಆಧಾರದ ಮೇಲೆ ಯಾವ ರಾಶಿಗೆ ಧನಲಾಭ, ಯಾರಿಗೆ ನಷ್ಟ ಎಂಬ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

news18-kannada
Updated:June 15, 2021, 6:18 AM IST
Astrology: ಧನು ರಾಶಿಯವರು ಸಾಲ ನೀಡುವ ಮುನ್ನ ಯೋಚಿಸಿ: ಇಲ್ಲಿದೆ ದ್ವಾದಶ ರಾಶಿ ಭವಿಷ್ಯ
ಇಂದು ಯಾವ ರಾಶಿಗೆ ಯಾವ ಫಲ ಎಂಬ ಬಗ್ಗೆ ಇಲ್ಲಿದೆ ಮಾಹಿತಿ
  • Share this:
ಮೇಷ ರಾಶಿ: ಈ ದಿನ ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ.  ವಾದ-ವಿವಾದಗಳಿಂದ ಇಂದು ದೂರವಿರಿ. ಕಟ್ಟಡ ಗುತ್ತಿಗೆದಾರರಿಗೆ ಆರ್ಥಿಕವಾಗಿ ನಷ್ಟ ಮತ್ತು ಕಾರ್ಮಿಕರ ಕೊರತೆ ಕಾಡುವ ಸಾಧ್ಯತೆ. ಈ ಬಗ್ಗೆ ಎಚ್ಚರವಹಿಸಿ.

ವೃಷಭ ರಾಶಿ: ಇತರರು ನಿಮ್ಮ ಸಮಯವನ್ನು ಯಾಚಿಸುತ್ತಿರುವುದರಿಂದ ನಿಮ್ಮ ಸ್ವಂತ ಕೆಲಸಗಳು ನಿಧಾನ ಗತಿಯಲ್ಲಿ ಸಾಗಲಿದೆ. ಸಮಾಜದಲ್ಲಿ ಹೆಸರು ಸಂಪಾದಿಸಲು ಪೂರಕವಾದ ವಾತಾವರಣ ಮೂಡಿ ಬರಲಿದೆ. ಮಹಾಗಣಪತಿಯನ್ನು ಪೂಜಿಸಿ.

ಮಿಥುನ ರಾಶಿ: ಹೊಸ ಯೋಜನೆಗಳ ತಯಾರಿಗೆ ಒಳ್ಳೆಯ ಸಮಯ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ವಿವಾಹ ಅಪೇಕ್ಷಿಗಳಿಗೆ ಶುಭವಿರುತ್ತದೆ. ಶತ್ರುಗಳ ಬಾಧೆ ದೂರಾಗಿ ನಿಮ್ಮ ಯೋಜನೆಗಳು ಈಡೇರಲಿದೆ. ರೈತಾಪಿ ವರ್ಗದವರ ಕ್ರಿಯಾಶೀಲತೆ ಶುಭದಾಯಕವಾಗುತ್ತದೆ.

ಕರ್ಕಾಟಕ ರಾಶಿ : ಈ ದಿನ ಯಾವುದೇ ಹೊಸ ವ್ಯಕ್ತಿಗಳಿಂದ ಪ್ರಚೋದನೆಗೆ ಒಳಗಾಗದಿರಿ. ಇಂದು ಶರೀರದಲ್ಲಿ ಉಲ್ಲಾಸ ಹಾಗೂ ಕಾರ್ಯಪ್ರವೃತ್ತಿಯನ್ನು ಹೊಂದುತ್ತೀರಿ. ಅದರಿಂದ ಮನಸ್ಸಿಗೆ ನೆಮ್ಮದಿ ಕಾಣುವಿರಿ. ಗೃಹದಲ್ಲಿ ಶುಭ ಸಮಾರಂಭಗಳು ನಡೆಯುವುದು.

ಸಿಂಹ ರಾಶಿ: ಈ ದಿನದ ನಿಮ್ಮ ಆಶಾವಾದ ಮತ್ತು ಧನಾತ್ಮಕ ವರ್ತನೆ, ಹೆಜ್ಜೆಗಳು ನಿಮ್ಮ ಸುತ್ತಮುತ್ತಲಿನ ಜನರ ಕಣ್ಣನ್ನು ಕೆಂಪಾಗಿಸುತ್ತದೆ. ಸ್ಥಾನ ಲಾಭವಾಗುವುದಲ್ಲದೆ, ದಾಂಪತ್ಯ ಜೀವನ ಸುಖಮಯವಾಗಿರುವುದು, ಹೊಸ ಹುದ್ದೆಯಲ್ಲಿ ಗೌರವ ದೊರೆಯುವುದು.

ಕನ್ಯಾ ರಾಶಿ: ಹೊಸ ವಾಹನ ಖರೀದಿ ಅಗತ್ಯವೆನಿಸುತ್ತದೆ. ನಿಮ್ಮ ಮಾನಸಿಕ ಶಕ್ತಿಗಳು ಬಲಯುತವಾಗಿ ಇಂದು ನಿಮ್ಮ ಯೋಚನೆಗಳನ್ನು ಶೀಘ್ರವೇ ಕಾರ್ಯರೂಪಕ್ಕೆ ಇಳಿಸುತ್ತೀರಿ. ಕುಟುಂಬದಲ್ಲಿ ಉತ್ತಮ ವಾತಾವರಣವಿದ್ದು ಸಂತಸ ಹಾಗೂ ಸಮಾಧಾನ ತರಲಿದೆ.

ತುಲಾ ರಾಶಿ: ನಿಮ್ಮ ಆರನೆಯ ಇಂದ್ರಿಯದ ಸಹಾಯ ಇಂದು ನಿಮಗೆ ಉಪಯುಕ್ತವಾಗಲಿದೆ. ವ್ಯಾಪಾರದಲ್ಲಿ ಅತೀವ ಆಸಕ್ತಿ ಮೂಡುತ್ತದೆ. ಅದರಿಂದ ಅಧಿಕ ಲಾಭಂಶ ಹೊಂದುವಿರಿ. ದೇಹಕ್ಕೆ ಆಯಾಸವಾದಲ್ಲಿ, ಸ್ವತಃ ಆರೈಕೆ ಮಾಡಿಕೊಳ್ಳುವುದು ಉತ್ತಮ.ವೃಶ್ಚಿಕ ರಾಶಿ: ಮಗನ ವಿವಾಹ ಸಿದ್ಧತೆಗಳು ಭರದಿಂದ ಸಾಗಲಿದೆ. ಇಂದಿನ ನಿಮ್ಮ ಮೃದು ಧೋರಣೆ ಸಿಬ್ಬಂದಿ ವರ್ಗಕ್ಕೆ ಆಶ್ಚರ್ಯ ಹಾಗೂ ಸಂತೋಷವೆನಿಸುವುದು. ಕೆಲವರಿಗೆ ಸಂತಾನ ಭಾಗ್ಯವೂ ಇದೆ. ನಿಮ್ಮಗಿರುವ ಉತ್ತಮ ಹೆಸರಿನಿಂದ ಜನ ಮನ್ನಣೆ ಗಳಿಸಬಹುದು.

ಧನು ರಾಶಿ: ಯಾರಿಗೂ ಸಾಲ ಕೊಡದಿರಲು ನಿಶ್ಚಯಿಸುವುದು ಉತ್ತಮ. ಮನೆಯವರುಗಳ ಮಾತಿನಂತೆ ಕೆಲಸ ಕೈಗೊಳ್ಳುವಿರಿ. ಈ ದಿನ ಹೆಂಡತಿ ಆರೋಗ್ಯ ಸುಧಾರಿಸುತ್ತದೆ. ಹೊಸ ಕಾರ್ಯದ ಸಂಪೂರ್ಣ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ನಿಮ್ಮದಾಗಲಿದೆ.

ಮಕರ ರಾಶಿ: ಇಂದು ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಪ್ರಯತ್ನ ಬಲಕ್ಕೆ ಉತ್ತಮ ಫಲ ದೊರೆಯುವುದು. ವೃತ್ತಿ ಬದಲಾವಣೆಯ ಸಮಸ್ಯೆ ನಿವಾರಣೆಯಾಗುವುದು. ಭೂಮಿ ಖರೀದಿ ವಿಚಾರ ಮುಂದಕ್ಕೆ ಹಾಕುವ ಪರಿಸ್ಥಿತಿ ಕಂಡುಬರಬಹುದು.

ಕುಂಭ ರಾಶಿ: ಕಮಿಷನ್ ಏಜೆಂಟ್‌ಗಳಿಗೆ ಅಧಿಕ ಆದಾಯ ಉಂಟಾಗುವುದು. ಮನೆಯಲ್ಲಿ ಹಿತಕರ ವಾತಾವರಣ ಇರುತ್ತದೆ. ವಿದ್ಯಾರ್ಥಿಗಳು ಓದು ಮುಂದುವರೆಸುವುದನ್ನು ನಿರ್ಧರಿಸಿ. ನೀವು ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿದರೆ ಉತ್ತಮ.

ಮೀನಾ ರಾಶಿ: ನಿಮ್ಮ ಪ್ರಯತ್ನಗಳು ವ್ಯರ್ಥವಲ್ಲ ಎಂಬುದು ನಿಮಗೆ ಈ ದಿನ ತಿಳಿಯುವುದು. ನಿಧಾನವಾಗಿಯಾದರೂ ಅದರ ಲಾಭ ಬಂದು ಕೈ ಸೇರಿದ ಸಂತಸ. ಅವಿವಾಹಿತರಿಗೆ ಕಂಕಣ ಭಾಗ್ಯ. ಸಾಫ್ಟವೇರ್ ಹಾಗೂ ತಾಂತ್ರಿಕ ವಿದ್ಯಾರ್ಥಿಗಳಿಗೆ ನೌಕರಿ ಸಿಗುವ ಲಕ್ಷಣವಿದೆ.
Published by: Seema R
First published: June 15, 2021, 6:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories