HOME » NEWS » Lifestyle » DAILY HOROSCOPE 8 APRIL 2021 ASTROLOGICAL PREDICTIONS AST SESR

Astrology: ಸಿಂಹ ರಾಶಿಯವರಿಗೆ ವಿವಾಹ ಯೋಗ: ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

ಜನ್ಮ ರಾಶಿಗಳು ದಿನದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಆಧಾರದ ಮೇಲೆ ಯಾವ ರಾಶಿಗೆ ಧನಲಾಭಾ, ಯಾರಿಗೆ ನಷ್ಟ ಎಂಬ ಕುರಿತ ಮಾಹಿತಿ ಇಲ್ಲಿದೆ.

news18-kannada
Updated:April 8, 2021, 6:28 AM IST
Astrology: ಸಿಂಹ ರಾಶಿಯವರಿಗೆ ವಿವಾಹ ಯೋಗ: ಇಲ್ಲಿದೆ ದ್ವಾದಶ ರಾಶಿ ಭವಿಷ್ಯ
ಈ ದಿನದ 12 ರಾಶಿಗಳ ಭವಿಷ್ಯ
  • Share this:
ಮೇಷ ರಾಶಿ: ಉನ್ನತ ಸ್ಥಾನ ಮಾನ ಸಿಗುವ ಅವಕಾಶ. ಒಳ್ಳೆಯ ಸ್ಥಾನ, ಬಡ್ತಿ ಸಿಗಲಿದೆ. ಅದರಲ್ಲಿಯೂ ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಇಂದು ಲಾಭದ ದಿನ, ನೀಲಿ ಬಣ್ಣದ ಹೂವು ಆಂಜನೇಯ, ಶನಿಶ್ವೇರ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರೆ ಮತ್ತಷ್ಟು ಒಳಿತಾಗಲಿದೆ

ವೃಷಭ ರಾಶಿ: ಮಕ್ಕಳ ವಿಚಾರದಲ್ಲಿ ಶುಭ ಸುದ್ದಿ ಕೇಳುವಂತಹದ್ದು. ಮಕ್ಕಳ ವಿದ್ಯಾಭ್ಯಾಸ, ಮದುವೆ ಮತ್ತಿತ್ತರ ಮಕ್ಕಳ ವಿಚಾರದಲ್ಲಿ ಸಂತಸದ ಸುದ್ದಿ ಸಿಗಲಿದೆ. ಇವತ್ತಿನ ದಿನ ಕೆಂಪು ಬಣ್ಣದ ವಸ್ತುಗಳನ್ನು ಸುಬ್ರಹ್ಮಣ್ಯ ದೇವರಿಗೆ ಅರ್ಪಿಸಿದರೆ ಮತ್ತಷ್ಟು ಒಳಿತಾಗಲಿದೆ

ಮಿಥುನ ರಾಶಿ: ಜಗಳವಾಗುವ ಸಂಭವ ಇಂದು ಹೆಚ್ಚಿದೆ. ಮಾತಿನ ಬಗ್ಗೆ ಹಿಡಿತವಿರಲಿ. ನಿಮ್ಮ ಮಾತು ಜಗಳ ತರಲಿದೆ. ಯಾರೊಂದಿಗೆ ಮಾತನಾಡ ಬೇಕಾದರೂ ಜಾಗರುಕತೆ ಮುಖ್ಯವಾಗಿರಲಿ. ಯಾವುದೇ ಜಗಳ ಇದ್ದರೂ ಸಮಾಧಾನದಿಂದ ಬಗೆಹರಿಸಿಕೊಳ್ಳಿ.

ಕಟಕ ರಾಶಿ: ಧನಾಗಮನ ಆಗಲಿದೆ. ಹಳೆಯ ನಿಂತ ಹಣ ಮತ್ತೆ ಮರಳಲಿದೆ. ಯಾವುದೋ ಹಣ ಇಂದು ಕೈ ಸೇರುವ ಶುಭ ದಿನ. ಹೆಚ್ಚಿನ ಧನಾಗಮನಕ್ಕೆ ಮನೆಯ ಉತ್ತರ ದಿಕ್ಕಿನಲ್ಲಿರುವ ಮಹಾಲಕ್ಷ್ಮೀ ದೇವಾಲಯದಲ್ಲಿ ಇಚ್ಛೆಗೆ ಅನುಸರವಾಗಿ ಬೆಲ್ಲ ಸಮರ್ಪಣೆ ಮಾಡಿ

ಸಿಂಹ ರಾಶಿ: ವಿವಾಹ ವಿಚಾರವಾಗಿ ಶುಭಸುದ್ದಿಗಳನ್ನು ಕೇಳುತ್ತೀರಾ. ಮದುವೆಗಾಗಿ ಪ್ರಯತ್ನಿಸುತ್ತಿದ್ದರೆ ಅದು ಫಲ ನೀಡಲಿದೆ. ಬೇಗ ಮದುವೆಯಾಗುವ ಕಾಲ ಬರುತ್ತದೆ. ಪಾರ್ವತಿ ದೇವಿಯ ಪ್ರಾರ್ಥನೆ, ದುರ್ಗಾ ದೇವಿ ಪ್ರಾರ್ಥಿಸಿ

ಕನ್ಯಾ ರಾಶಿ: ದೂರದ ಪ್ರಯಾಣ ಸಾಧ್ಯತೆ ಇದೆ. ಇದು ಲಾಭವನ್ನು ತರಲಿದೆ. ವ್ಯಾಪಾರ ವ್ಯವಹಾರ ಸಂಬಂಧದ ಪ್ರಯಾಣ ಲಾಭ ವಾಗಲಿದೆ. ಈ ರಾಶಿಯವರು ಮೃತ್ಯಂಜಯ ಮಂತ್ರ ಜಪಿಸುವುದು ಉತ್ತಮ

ತುಲಾ ರಾಶಿ: ಕೋರ್ಟ್​ ವ್ಯವಹಾರದಲ್ಲಿ ಇಂದು ನೀವು ತೊಡಗಿದರೆ ಅಶುಭವಾಗಲಿದೆ. ಈ ಹಿನ್ನಲೆ ಈ ರಾಶಿಯವರು ಇಂದು ನ್ಯಾಯಲಯದ ವ್ಯವಹಾರಗಳನ್ನು ಸ್ಪಲ್ಪ ಮುಂದೂಡುವುದು ಒಳ್ಳೆಯದು. ಹೆಚ್ಚಿನ ಅಶುಭ ತರುವ ಹಿನ್ನಲೆ ದೇವಿಯನ್ನು ಅಪರಾಜಿತ ದೇವಿ ಎಂದು ಹೆಸರಿಸಿ ಪೂಜಿಸಿಧನು ರಾಶಿ: ಕೌಟಂಬಿಕವಾಗಿರುವ ಕಲಹ ಉಂಟಾಗಲಿದೆ. ತಂದೆ -ತಾಯಿ, ಮಕ್ಕಳು, ಗಂಡ ಹೆಂಡತಿ ನಡುವೆ ಜಗಳವಾಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನಲೆ ಹೆಚ್ಚು ಮೌನ ವಹಿಸಿ. ಈ ದಿನದಲ್ಲಿ ಮನೆಯ ಸದಸ್ಯರು ಕುಲದೇವರಿಗೆ ಪ್ರಾರ್ಥನೆ ಸಲ್ಲಿಸಿ. ಅರಿಶಿನ ನೀರನ್ನು ಅರಳಿಮರಕ್ಕೆ ಅರ್ಪಿಸಿದರೆ ಒಳಿತು

ಮಕರ ರಾಶಿ: ಮನೆ ಕಟ್ಟುವ ಕೆಲಸ ಕಾರ್ಯದಲ್ಲಿ ವಿಳಂಬ ಆಗಿದ್ದರೆ ಅದು ಪೂರ್ಣಗೊಳ್ಳುವ ಕಾಲ ಇಂದು. ಅರ್ಧಬಂಧ ಕಟ್ಟಿದ ಮನೆ ಪೂರ್ಣ ಮಾಡಲು ಒಳ್ಳಯ ದಿನ ಇಂದು. ಕಾಲಭೈರವನ ಪ್ರಾರ್ಥನೆ ಮಾಡಿದರೆ ನಿಮ್ಮ ಇಷ್ಟಾರ್ಥ ಸಿದ್ದಿಸಲಿದೆ

ಕುಂಭ ರಾಶಿ: ಉನ್ನತ ಸ್ಥಾನ ಮಾನ ಸಿಗುವ ಅವಕಾಶ. ಒಳ್ಳೆಯ ಸ್ಥಾನ, ಬಡ್ತಿ ಸಿಗಲಿದೆ. ಅದರಲ್ಲಿಯೂ ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಇಂದು ಲಾಭಾದ ದಿನ, ನೀಲಿ ಬಣ್ಣದ ಹೂವು ಆಂಜನೇಯ, ಶನಿಶ್ವೇರ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರೆ ಮತ್ತಷ್ಟು ಒಳಿತಾಗಲಿದೆ

ಮೀನಾ ರಾಶಿ: ಆರೋಗ್ಯದಲ್ಲಿ ಏರುಪೇರಾಗಲಿದೆ. ಏನೇ ಅನಾರೋಗ್ಯದ ಸಮಸ್ಯೆ ಇದ್ದರೆ ಶಿವನ ದೇವಾಲಯದಲ್ಲಿ ರುದ್ರಾಭಿಷೇಕ ಮಾಡಿದಿ, ಭಸ್ಮವನ್ನು ಬಾಯಲ್ಲಿ ಹಾಕಿಕೊಳ್ಳಿ
Published by: Seema R
First published: April 8, 2021, 6:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories