news18-kannada Updated:April 6, 2021, 6:13 AM IST
ಈ ದಿನದ 12 ರಾಶಿಗಳ ಭವಿಷ್ಯ
ಮೇಷ ರಾಶಿ : ಬೇಜವಾಬ್ದಾರಿ ಕಾರಣದಿಂದ ಕುಟುಂಬಕ್ಕೆ ನೋಯಿಸುವ ಸಾಧ್ಯತೆ ಹೆಚ್ಚು. ಕುಟುಂಬಸ್ಥರೊಂದಿಗೆ ವಾಗ್ವಾದ ಉಂಟಾಗಿ, ಮನಸ್ತಾಪಕ್ಕೆ ಕಾರಣವಾಗುತ್ತದೆ. ತಂದೆ ಜೊತೆ ಕಿರಿಕಿರಿ ಸಾಧ್ಯತೆ. ಕೆಲಸದಲ್ಲಿ ಸವಾಲಿನ ದಿನವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ
ವೃಷಭ ರಾಶಿ: ಆರೋಗ್ಯದ ಬಗ್ಗೆ ಜಾಗರುಕತೆ ಅವಶ್ಯ. ಅನಾಗತ್ಯ ಖರ್ಚಾಗುವ ಸಾಧ್ಯತೆ. ದೂರದ ಸಂಬಂಧಿಯಿಂದ ಅನಿರೀಕ್ಷಿತ ಉಡುಗೊರೆ ಲಭ್ಯ. ಕೆಲಸದಲ್ಲಿ ಉತ್ಸಾಹತೆ. ಹೊಸ ಕಲಿಕೆಗೆ ಶುಭ ದಿನ
ಮಿಥುನ ರಾಶಿ: ಸೌಂದರ್ಯವರ್ಧಕದ ಬಗ್ಗೆ ವೃತ್ತಾ ಹಣ ವ್ಯಯವಾಗಲಿದೆ. ಮಕ್ಕಳ ಸಮಸ್ಯೆ ಬಗ್ಗೆ ಕಾಳಜಿ ಇರಲಿ. ಅಂದುಕೊಂಡ ಯೋಜನೆಗಳು ಕೊನೆ ಕ್ಷಣದಲ್ಲಿ ಬದಲಾವಣೆಯಾಗುವ ಸಾಧ್ಯತೆ. ಕುಟುಂಬದಲ್ಲಿ ಅನಗತ್ಯ ವಿಷಯದಿಂದ ಗಂಡ ಹೆಂಡತಿ ನಡುವಿನ ಸಾಮರಸ್ಯ ಭಂಗವಾಗುವ ಸಾಧ್ಯತೆ ಹೆಚ್ಚು
ಕಟಕ ರಾಶಿ : ಆತುರದ ನಿರ್ಧಾರ ಬೇಡ. ಹಣಕಾಸಿನ ಮಾತುಕತೆ ಯಶಸ್ವಿಯಾಗಲಿದೆ. ಹೊಸ ಸ್ನೇಹಿತರಿಂದ ಸಂತಸ ಹೆಚ್ಚಲಿದೆ. ಕೆಲಸದಲ್ಲಿ ನಿಧಾನವಾದರೂ ಪ್ರಗತಿಯಾಗಲಿದೆ.
ಸಿಂಹ ರಾಶಿ: ಧ್ಯಾನ ಯೋಗ ಚಟುವಟಿಕೆಯಲ್ಲಿ ಭಾಗಿಯಾದಲ್ಲಿ ಮನಸ್ಸಿಗೆ ಸಂತೋಷ. ಹತ್ತಿರದವರೊಂದಿಗೆ ಮಾತಿನ ಚಕಮಕಿ ನಡೆಸದೇ ಸಂಯಮ ಕಾಪಾಡಿಕೊಳ್ಳಿ. ಪ್ರೇಮಿಗಳು ಹೆಚ್ಚು ಆಲೋಚನೆಯಲ್ಲಿ ಮುಳುಗುವ ಸಾಧ್ಯತೆ. ನಿಮ್ಮ ಶತ್ರುವಿನೊಡನೆ ಅಂತರ ಕಾಯ್ದುಕೊಳ್ಳಿ.
ಕನ್ಯಾ ರಾಶಿ: ಬಹುಕಾಲದ ಸಮಸ್ಯೆಗೆ ಪರಿಹಾರ ಸಿಗಲಿದೆ. ಹೂಡಿಕೆಗೆ ಸಕಾಲ. ಕೆಲಸ ಮತ್ತು ಮನೆಯಲ್ಲಿನ ಒತ್ತಡದಿಂದ ಮನಸ್ಸು ವಿಚಲಿತಗೊಳ್ಳಲಿದೆ. ವೈವಾಹಿಕ ಜೀವನ ಸುಖಕರವಾಗಲಿದೆ
ತುಲಾ ರಾಶಿ: ವೈವಾಹಿಕ ಮಾತುಕತೆಗಳು ಇಂದು ನಡೆಯಲಿದೆ. ಆರೋಗ್ಯ ಸಂಬಂಧಿತ ಸಮಸ್ಯೆಯಿಂದ ತೊಂದರೆಯಾಗುವ ಸಾಧ್ಯತೆ. ಶತ್ರು ಬಾಧೆ ಕಾಡಲಿದೆ. ಸಂಬಂಧಿಕರಿಂದ ಸಮಸ್ಯೆಯಾಗುವ ಸಾಧ್ಯತೆ
ವೃಶ್ಚಿಕ ರಾಶಿ: ರಸ್ತೆ ಸಂಚಾರದಲ್ಲಿ ಎಚ್ಚರಿಕೆ ವಹಿಸಿ. ಕುಟುಂಬದೊಂದಿಗೆ ಇಂದು ಉತ್ತಮ ದಿನವಾಗಿರಲಿದೆ. ವಿವಾಜ ಭಾಗ್ಯ ಏರ್ಪಡಲಿದೆ. ಶುಕ್ರ ಮತ್ತು ಮಂಗಳ ಗ್ರಹಗಳು ಲಾಭಾ ತರಲಿದೆ.
ಧನು ರಾಶಿ: ಪ್ರವಾಸಕ್ಕೆ ಇಂದು ಉತ್ತಮ ದಿನ. ದೂರದ ಪ್ರಯಾಣದಿಂದ ಲಾಭಾವಾಗಲಿದೆ. ಪ್ರೇಮ ನಿವೇದನೆಗೆ ಸುದಿನ. ಬಹುದಿನ ತೋಟಗಾರಿಕೆ ವೃತ್ತಿಯಲ್ಲಿ ಪ್ರಗತಿ.
ಮಕರ ರಾಶಿ : ಆಹಾರದ ವಿಚಾರದಲ್ಲಿ ಜಾಗುರುಕತೆ ವಹಿಸಿ. ಮಕ್ಕಳಿಂದ ಪಾಠ ಕಲಿಯುವ ಸಂಭವವಿದೆ. ಕೆಲಸದ ಬಗ್ಗೆ ಹೆಚ್ಚಿನ ಗಮನವಿರಲಿ. ವೃತ್ತ ಚಿಂತನೆ ವ್ಯರ್ಥವಾಗಲಿದೆ. ಆಲಸ್ಯದ ದಿನ ಇಂದಾಗಿರಲಿದೆ. ಹೆಚ್ಚಿನ ಸುತ್ತಾಟ ಸಾಧ್ಯತೆ
ಕುಂಭ ರಾಶಿ: ಅವಸರದ ನಿರ್ಧಾರ ಸಮಸ್ಯೆ ಉಂಟುಮಾಡಲಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಶಾಂತವಾಗಿ ಯೋಚಿಸಿ. ಅನಿರೀಕ್ಷಿತ ಲಾಭಾಗಳು ಎದುರಾಗಲಿದೆ. ಮನೆಯ ಕೆಲವು ಸಮಸ್ಯೆಯಿಂದ ಕಿರಿಕಿರಿಯಾಗಲಿದೆ. ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ. ಸೃಜನಶೀಲ ಕೆಲಸಗಳಿಂದ ಮನಸ್ಸಿಗೆ ಸಂತೋಷ
ಮೀನಾ ರಾಶಿ: ಬಿಡುವಿಲ್ಲದ ಕೆಲಸದಿಂದ ಆಯಾಸವಾಗಲಿದೆ. ಹಣಕಾಸಿನ ತೊಂದರೆಗಳಿಂದ ಟೀಕೆ ಮತ್ತು ವಾದ ಏರ್ಪಡಲಿದೆ. ಧಾರ್ಮಿಕ ಕಾರ್ಯಕ್ಕೆ ಚಾಲನೆ ಸಿಗಲಿದೆ.
Published by:
Seema R
First published:
April 6, 2021, 6:13 AM IST