HOME » NEWS » Lifestyle » DAILY HOROSCOPE 30 APRIL 2021 ASTROLOGICAL PREDICTIONS SESR

Astrology: ಶನಿವಾರದ ಈ ದಿನ ಯಾವ ರಾಶಿಗೆ ಯಾವ ಫಲ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

Daily Horoscope - April 30, 2021 - ಹನ್ನೆರಡು ರಾಶಿಗಳಿಗೆ ಇಂದಿನ ಫಲಾಫಲ ಹೇಗಿದೆ ಎಂಬ ವಿವರ ಇಲ್ಲಿದೆ.

news18-kannada
Updated:May 1, 2021, 7:24 AM IST
Astrology: ಶನಿವಾರದ ಈ ದಿನ ಯಾವ ರಾಶಿಗೆ ಯಾವ ಫಲ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ
ಈ ದಿನದ 12 ರಾಶಿಗಳ ಭವಿಷ್ಯ
  • Share this:
ಮೇಷ ರಾಶಿ: ಆರ್ಥಿಕವಾದ ಸುಧಾರಣೆಯಾಗುವ ದಿವಸ. ಹಣಕಾಸಿನ ಸುಧಾರಣೆಗೆ ಲಕ್ಷ್ಮೀ ನಾರಾಯಣ ಹೃದಯಾಪಾರಾಯಣವನ್ನು ವಿಷ್ಣವಿನ ಸ್ಮರಣೆ ಮಾಡಿ. ಇದರಿಂದ ಹೆಚ್ಚಿನ ಲಾಭಾವಾಗಲಿದೆ.

ವೃಷಭ ರಾಶಿ: ಸಮಾಜ ಸೇವೆ, ರಾಜಕೀಯದಲ್ಲಿ ತೊಡಗಿದ್ದರೆ ಹೆಚ್ಚಿನ ಲಾಭಾ ನಿರೀಕ್ಷೆ ಇಂದು ಆಗಲಿದೆ. ಶೀತ ಬಾಧೆ  ಹಿನ್ನಲೆ ಆರೋಗ್ಯದ ಕಡೆ ಗಮನಹರಿಸಬೇಕು. ಮೊದಲಿನಿಂದಲೂ ಶೀತ ಸಮಸ್ಯೆ ಇದ್ದರೆ ಉಲ್ಬಣವಾಗಲಿದೆ

ಮಿಥುನ ರಾಶಿ : ಷೇರು, ಹಣದ ಹೂಡಿಕೆ ಮಾಡಿದರೆ ಸಾಕಷ್ಟು ಲಾಭಾವಾಗಲಿದೆ. ಇಂದಿನ ದಿನ ಯಾವುದೇ ಬಂಡವಾಳ ಹೂಡಿದರೂ ಮುಂದೆ ಅದು ದುಪ್ಪಟ್ಟು ಲಾಭಾವಾಗಲಿದೆ. ಕೃಷಿ, ಪಶು ಸಂಗೋಪನೆ ಕೆಲಸದಲ್ಲಿದ್ದರೆ ಹೆಚ್ಚಿನ ಲಾಭ. ಕೃಷ್ಣ ಅಷ್ಟೋತ್ತರ. ಶಿವನ ಪ್ರಾರ್ಥನೆಯಿಂದ ಇನ್ನು ಹೆಚ್ಚಿನ ಯಶ ಕಾಣಬಹುದು

ಕನ್ಯಾ ರಾಶಿ: ಯಾವುದೇ ವಿದ್ಯಾರಂಭ ಕೆಲಸಕ್ಕೆ ಅಶುಭವಾಗಲಿದೆ. ಈ ಹಿನ್ನಲೆ ಈ ಕಾರ್ಯಗಳನ್ನು ವಾರಗಳ ಕಾಲ ಮುಂದೂಡಿ. ಅನಿವಾರ್ಯವಾದಲ್ಲಿ ವಿದ್ಯಾ ವಿನಾಯಕನ ಪ್ರಾರ್ಥನೆ ಮಾಡಿ ಕೆಲಸ ಆರಂಭಿಸಿ.

ಸಿಂಹ ರಾಶಿ: ಅಣ್ಣ-ತಮ್ಮ, ಅಕ್ಕ-ತಂಗಿ ವಿಚಾರದಲ್ಲಿ ಸಮಸ್ಯೆಯಾಗುತ್ತದೆ. ಹೆಚ್ಚಿನ ಜಾಗರುಕತೆ ವಹಿಸಿ. ಯಾವುದೇ ವ್ಯವಹಾರ ಮಾಡುತ್ತಿದ್ದರೆ ಅಶುಭವಾಗಲಿದೆ. ಸ್ವಲ್ಪ ಆರೋಗ್ಯದಲ್ಲಿ ಏರುಪೇರಾಗುತ್ತದೆ. ರಕ್ತದೊತ್ತಡದಂತಹ ಸಮಸ್ಯೆ ಎದುರಾಗುತ್ತದೆ

ತುಲಾ ರಾಶಿ: ಖರೀದಿಯಲ್ಲಿ ಮೋಸಹೋಗುವ ಸಾಧ್ಯತೆ. ಯಾವುದೋ ಸಮಸ್ಯೆಗೆ ನೀವಾಗಿ ನೀವು ಸಿಲುಕುವ ಸಾಧ್ಯತೆ ಇದೆ. ಇದರ ನಿವಾರಣೆಗೆ ನರಸಿಂಹ ದೇವರ ಪ್ರಾರ್ಥನೆ ಮಾಡಿ

ವೃಶ್ಚಿಕ ರಾಶಿ: ವಿವಾಹ ವಿಚಾರವಾಗಿ ಶುಭಸುದ್ದಿಗಳನ್ನು ಕೇಳುತ್ತೀರಾ. ಮದುವೆಗಾಗಿ ಪ್ರಯತ್ನಿಸುತ್ತಿದ್ದರೆ ಅದು ಫಲ ನೀಡಲಿದೆ. ಬೇಗ ಮದುವೆಯಾಗುವ ಕಾಲ ಬರುತ್ತದೆ. ಪಾರ್ವತಿ ದೇವಿಯ ಪ್ರಾರ್ಥನೆ, ದುರ್ಗಾ ದೇವಿ ಪ್ರಾರ್ಥಿಸಿಧನು ರಾಶಿ: ಸ್ತ್ರಿಯರಿಗೆ ಇಂದು ಸಮಸ್ಯೆ ಹೆಚ್ಚಾಗಿ ಕಾಡಲಿದೆ. ಅನಾರೋಗ್ಯ ಸೇರಿದಂತೆ ಯಾವುದಾದರೂ ವಿಷಯದಲ್ಲಿ ಸಮಸ್ಯೆ ಉಂಟಾಗಲಿದೆ, ಇದಕ್ಕಾಗಿ ದೇವಿಗೆ ಬಿಳಿ ಹೂವು ಅರ್ಪಿಸಿ, ಪ್ರಾರ್ಥಿಸಿ.

ಮಕರ ರಾಶಿ: ಆರ್ಥಿಕ ಪ್ರಗತಿಯಾಗಿ ಲಾಭಾ ಹೆಚ್ಚಾಲಿದೆ. ವ್ಯವಹಾರದಲ್ಲಿ ಅಧಿಕ ಲಾಭಾ ನಿರೀಕ್ಷೆ. ಆದರೆ, ಕೆಲಸಗಾರರು, ಪಾಲುದಾರರೊಂದಿಗೆ ವೈಮನಸು ಉಂಟಾಗುವ ಸಂಭವ ಹೆಚ್ಚಿರುವ ಹಿನ್ನಲೆ ಎಚ್ಚರದಿಂದ ಇರಿ

ಕುಂಭ ರಾಶಿ: ಕೆಲವು ವಿದ್ಯಾರ್ಥಿಗಳಿಗೆ ಅತಿ ವಿಶ್ವಾಸದಿಂದ ಮುಗುರಿಸುವ ಸಾಧ್ಯತೆ ಇದೆ. ಈ ಹಿನ್ನಲೆ ಜಾಗರುಕತೆ ಅತಿ ಅವಶ್ಯ. ಇದರ ನಿವಾರಣೆ ಜೇನು ತುಪ್ಪವನ್ನು ಸರಸ್ವತಿ ಮತ್ತು ಹಯಗ್ರಿವರಿಗೆ ಅರ್ಪಿಸಿ ಅದನ್ನು ಪ್ರಸಾದ ರೂಪದಲ್ಲಿ ಸೇವಿಸಿ.

ಮೀನಾ ರಾಶಿ: ಶುಭ ಮತ್ತು ಲಾಭಾಗಳಿಂದ ಕೂಡಿತ ಮಿಶ್ರಿತ ದಿನವಾಗಿರಲಿದೆ. ನಿಮಗೆ ಇಷ್ಟವಾದ ಕೆಲಸ ಅಥವಾ ವರ್ಗಾವಣೆ ಆಗಲಿದೆ. ಇಂದು ವಿಷ್ಣು ಸಹಸ್ರಾಮ ಜಪಿಸಿದರೆ ಮತ್ತಷ್ಟು ಒಳಿತಾಗಲಿದೆ
Published by: Seema R
First published: May 1, 2021, 7:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories