HOME » NEWS » Lifestyle » DAILY HOROSCOPE 29 APRIL 2021 ASTROLOGICAL PREDICTIONS SESR

Astrology: ವೃಶ್ಚಿಕ ರಾಶಿಯವರಿಗೆ ಈ ದಿನ ಶುಭವಾಗಲಿದೆ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

ಜನ್ಮ ರಾಶಿಗಳು ದಿನದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಆಧಾರದ ಮೇಲೆ ಯಾವ ರಾಶಿಗೆ ಧನಲಾಭ, ಯಾರಿಗೆ ನಷ್ಟ ಎಂಬ ಕುರಿತ ಮಾಹಿತಿ ಇಲ್ಲಿದೆ

news18-kannada
Updated:April 29, 2021, 7:29 AM IST
Astrology: ವೃಶ್ಚಿಕ ರಾಶಿಯವರಿಗೆ ಈ ದಿನ ಶುಭವಾಗಲಿದೆ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ
ಈ ದಿನದ 12 ರಾಶಿಗಳ ಭವಿಷ್ಯ
  • Share this:
ಮೇಷ ರಾಶಿ: ಭಾವನಾತ್ಮಕ ಮತ್ತಯು ಮಾನಸಿಕವಾಗಿ ಕುಗ್ಗುವ ಸಾಧ್ಯತೆ. ಇಂದು ಬಂಡಾವಳ ಹೂಡಿಕೆಯಿಂದ ಭವಿಷ್ಯದ ಆರ್ಥಿಕ ಭದ್ರತೆ ಹೆಚ್ಚಲಿದೆ. ಆತ್ಮೀಯರೊಂದಿಗೆ ಔತಣಕೂಟ ನಡೆಯುವ ಸಾಧ್ಯತೆ. ಪಾಲುದಾರಿಕೆ ವ್ಯವಹಾರದಲ್ಲಿ ಅದೃಷ್ಟ

ವೃಷಭ ರಾಶಿ: ಆಸ್ತಿ ವ್ಯವಹಾರದಲ್ಲಿ ಕಾನೂನು ಸಲಹೆ ಪಡೆಯುವುದು ಒಳಿತು. ಯಾವುದನ್ನು ಸುಲಭವಾಗಿ ನಂಬುವ ಮುನ್ನ ಸಾಕಷ್ಟು ಆಲೋಚಿಸಿ. ಸ್ನೇಹಿತರೊಂದಿಗಿನ ಬಂಧನ ಮತ್ತಷ್ಟು ವೃದ್ಧಿಯಾಗಲಿದೆ.

ಮಿಥುನ ರಾಶಿ: ಅನವಶ್ಯಕ ಆತಂಕಕ್ಕೆ ಒಳಗಾಗುವ ಸಾಧ್ಯತೆ. ಮನರಂಜನೆಯಲ್ಲಿ ಇಂದಿನ ದಿನ ಹೆಚ್ಚು ಕಳೆಯಲಿದೆ. ಪ್ರೀತಿ ವಿಷಯದಲ್ಲಿ ಸಾಕಷ್ಟು ಜಾಗ್ರತೆ ಅವಶ್ಯ. ಕಣ್ಣಿನ ನೋವಿನಿಂದ ಸಾಕಷ್ಟು ಸಮಸ್ಯೆಯಾಗಲಿದೆ. ಪ್ರೀತಿ ಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ.

ಕಟಕ ರಾಶಿ: ಆರೋಗ್ಯ ವೃದ್ಧಿಯಿಂದ ಮಾನಸಿಕ ನೆಮ್ಮದಿ. ಹೊಸ ಒಪ್ಪಂದದಿಂದ ಉದ್ಯೋಗದಲ್ಲಿ ಲಾಭಾ. ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಪ್ರೀತಪಾತ್ರರೊಂದಿಗೆ ಸಮಾಲೋಚಿಸಿ. ಕೆಲಸದಲ್ಲಿ ಉತ್ಸಾಹ

ಸಿಂಹ ರಾಶಿ: ಅಗತ್ಯಕ್ಕಿಂತ ಹೆಚ್ಚಿನ ಕೆಲಸದಿಂದ ಬಳಲುವಂತಾಗಲಿದೆ, ಅನಗತ್ಯ ಅತಿಥಿಯಿಂದ ಸಮಯ ಹರಣವಾಗಲಿದೆ. ನೇರ ಮಾತುಕತೆಯಿಂದಾಗಿ ಸಾಕಷ್ಟು ಸಮಸ್ಯೆ ಎದುರಾಗಲಿದೆ. ವಾಗ್ವಾದ ಹೆಚ್ಚಾಗುವ ಸಂಭವ ಇರುವ ಹಿನ್ನಲೆ ಮೌನ ತಾಳುವುದು ಉತ್ತಮ. ರಾಘವೇಂದ್ರನ ಪ್ರಾರ್ಥನೆಯಿಂದ ಇಷ್ಟಾರ್ಥ ಸಿದ್ಧಿ

ಕನ್ಯಾ ರಾಶಿ:  ಕುಟುಂಬದ ಇಚ್ಛೆ ವಿರುದ್ಧವಾಗಿ ನಡೆಯುವ ಪರಿಸ್ಥಿತಿ ಬಂದೊದಗಲಿದೆ. ನಿಮ್ಮ ಕೆಲ ವರ್ತನೆಗಳು ಭಾರೀ ಪರಿಣಾಮವನ್ನು ಬೀರಲಿದೆ. ಕೋಪ ಹತೋಟಿಯಲ್ಲಿರಲಿ, ಆರ್ಥಿಕ ಸಂಕಷ್ಟದಿಂದ ಸಾಕಷ್ಟು ತೊಂದರೆಯಾಗಲಿದೆ. ಲಕ್ಷ್ಮೀ ದೇವಿಯ ಜಪ ಮಾಡಿದರೆ ಈ ದಿನ ಚೆನ್ನಾಗಿರಲಿದೆ

ತುಲಾ ರಾಶಿ: ನಿರ್ಧಿಷ್ಠ ಯೋಜನೆಯಿಲ್ಲದ ಪರಿಣಾಮ ಹಣದ ಬಿಕ್ಕಟ್ಟು ಎದುರಾಗಲಿದೆ, ಅನಿರೀಕ್ಷಿತ ಒಳ್ಳೆಯ ಸುದ್ದಿಯಿಂದ ಕುಟುಂಬಕ್ಕೆ ಸಂತೋಷ. ಸಾಧನೆಗೆ ಇರುವ ಅಡೆ ತಡೆಗಳಿಂದ ಮುಕ್ತಿ. ಸಹೋದ್ಯೋಗಿಗಳಿಂದ ಉದ್ಯೋಗದಲ್ಲಿ ಪ್ರೋತ್ಸಾಹ.ವೃಶ್ಚಿಕ ರಾಶಿ: ಅಗಾಧವಾದ ವಿಶ್ವಾಸದಿಂದ ಕೆಲಸಗಳಲ್ಲಿ ಜಯ, ಸಾಮಾಜಿಕ ಮತ್ತು ಧಾರಮಿಕ ಕಾರ್ಯಗಳಿಂದ ಉತ್ತಮ ಹೆಸರು. ಬಟ್ಟೆ ವ್ಯಾಪಾರಿಗಳಿಗೆ ಈ ದಿನ ಸುದಿನ. ಮಹಿಳೆಯರಲ್ಲಿ ಆರೋಗ್ಯ ಏರುಪೇರಾಗುವ ಸಂಭವ ಹೆಚ್ಚು. ಯುವಕರಿಗೆ ಈ ದಿನ ಶುಭಫಲ ನೀಡಲಿದೆ.

ಧನು ರಾಶಿ: ಆಹಾರದ ವಿಚಾರದಲ್ಲಿ ಜಾಗುರುಕತೆ ವಹಿಸಿ. ಮಕ್ಕಳಿಂದ ಪಾಠ ಕಲಿಯುವ ಸಂಭವವಿದೆ. ಕೆಲಸದ ಬಗ್ಗೆ ಹೆಚ್ಚಿನ ಗಮನವಿರಲಿ. ವೃತ್ತ ಚಿಂತನೆ ವ್ಯರ್ಥವಾಗಲಿದೆ. ಮಕ್ಕಳ ಅನಾರೋಗ್ಯದಲ್ಲಿ ಏರುಪೇರಾಗಲಿದೆ

ಮಕರ ರಾಶಿ : ಕೌಟುಂಬಿಕ ವಿಚಾರದಲ್ಲಿ ಇಂದು ಒಳಿತಾಗಲಿದೆ. ರಾಜಕೀಯ, ಸರ್ಕಾರಿ ಕೆಲಸ ಕಾರ್ಯದಲ್ಲಿ ಹೆಚ್ಚಿನ ಲಾಭಾ ಉಂಟಾಗಲಿದೆ.ನೋವಿನಿಂದ ಕುಗ್ಗುವ ಸಾಧ್ಯತೆ. ವೈವಾಹಿಕ ಜೀವನದ ಬಗ್ಗೆ ಜಾಗರೂಕತೆ ಅವಶ್ಯ. ಮನಸಿನ ಗೊಂದಲ ನಿವಾರಣೆ. ಸಂತಾನವೃದ್ಧಿಯಾಗಲಿದೆ

ಕುಂಭ ರಾಶಿ: ವಾಗ್ವಾದದಲ್ಲಿ ತೊಡಗದಿರುವುದು ಉತ್ತಮ. ಕೆಲಸದಲ್ಲಿ ತೊಂದರೆಯಾಗುವ ಸಾಧ್ಯತೆ ಹೆಚ್ಚು. ಅಂದುಕೊಂಡ ಯೋಜನೆ ಈಡೇರುವುದಿಲ್ಲ. ಆಲಸ್ಯದ ದಿನ ಇಂದಾಗಿರಲಿದೆಇವತ್ತಿನ ದಿನದಲ್ಲಿ ಸೂರ್ಯ ನಾರಾಯಣನ ಪ್ರಾರ್ಥನೆ ಮಾಡಿ. ಸೂರ್ಯ ನಮಸ್ಕಾರ ಮಾಡಿ

ಮೀನಾ ರಾಶಿ: ಅನಿರ್ಧಿಷ್ಟ ನಡುವಳಿಕೆಯಿಂದ ನಿಮ್ಮ ಸುತ್ತಮುತ್ತಲಿನ ಜನರಿಗೆ ಕಸಿವಿಸಿ ಉಂಟಾಗಲಿದೆ. ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ತೊಡಗಿದರೆ ಲಾಭಾ. ವ್ಯಾಪಾರದಲ್ಲಿ ಮೂರನೇ ವ್ಯಕ್ತಿ ಹಸ್ತಕ್ಷೇಪದಿಂದ ನಷ್ಟವಾಗಲಿದೆ. ಪಾರ್ವತಿ ದೇವಿ ಸ್ಮರಿಸಿದರೆ ಈ ದಿನ ಒಳಿತಾಗಲಿದೆ.
Published by: Seema R
First published: April 29, 2021, 7:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories