HOME » NEWS » Lifestyle » DAILY HOROSCOPE 25 APRIL 2021 ASTROLOGICAL PREDICTIONS AST SESR

Astrology: ಭಾನುವಾರದ ಈ ದಿನದ ದ್ವಾದಶ ರಾಶಿ ಫಲದ ಸಂಪೂರ್ಣ ಮಾಹಿತಿ

Daily Horoscope - April 25, 2021 - ಹನ್ನೆರಡು ರಾಶಿಗಳಿಗೆ ಇಂದಿನ ಫಲಾಫಲ ಹೇಗಿದೆ ಎಂಬ ವಿವರ ಇಲ್ಲಿದೆ.

news18-kannada
Updated:April 30, 2021, 10:49 PM IST
Astrology: ಭಾನುವಾರದ ಈ ದಿನದ ದ್ವಾದಶ ರಾಶಿ ಫಲದ ಸಂಪೂರ್ಣ ಮಾಹಿತಿ
ಈ ದಿನದ 12 ರಾಶಿಗಳ ಭವಿಷ್ಯ
  • Share this:
ಮೇಷ ರಾಶಿ: ವಿದ್ಯಾರ್ಥಿಗಳಿಗೆ ಅಶುಭವಾಗುವ ದಿನ. ಕಾಲೇಜು, ವಿಷಯ ಬದಲಾವಣೆ ಎಂದು ಮುಂದಾದರೆ ಅದಕ್ಕೆ ಇಂದು ತಡೆ ನೀಡುವುದು ಉತ್ತಮ,. ಇಂದು ಯಾವುದೇ ವಿದ್ಯಾರಂಭ ಕೆಲಸಕ್ಕೆ ಅಶುಭವಾಗಲಿದೆ. ಈ ಹಿನ್ನಲೆ ಈ ಕಾರ್ಯಗಳನ್ನು ವಾರ ಕಾಲ ಮುಂದೂಡಿ. ಅನಿವಾರ್ಯವಾದಲ್ಲಿ ವಿದ್ಯಾ ವಿನಾಯಕನ ಪ್ರಾರ್ಥನೆ ಮಾಡಿ.

ವೃಷಭ ರಾಶಿ: ಉದ್ಯೋಗದಲ್ಲಿ ಬದಲಾವಣೆ ಮಾಡುವ ಆಲೋಚನೆ ಇದ್ದರೆ ಒಳ್ಳೆಯದಲ್ಲ. ಬೇರೆ ಕೆಲಸ ಆರಂಭ ಮಾಡುತ್ತೇನೆ. ಹುಡುಕುತ್ತೇನೆ ಎಂದರೆ ಮುಂದೂಡಿ. ಇಂದು ಕೆಲಸದ ವಿಚಾರದಕ್ಕಿ ಸಾಕಷ್ಟು ಅಶುಭ ಇದೆ.

ಮಿಥುನ ರಾಶಿ: ತಂದೆಯ ಆರೋಗ್ಯದಲ್ಲಿ ಹೆಚ್ಚು ಕಮ್ಮಿಯಾಗುವ ಸಾಧ್ಯತೆ ಇದೆ. ಇದೇ ಹಿನ್ನಲೆ , ಶಿವನದ ದೇವಾಲದಯಲ್ಲಿ ಚಂದ್ರ ಸಂಬಂಧಿತ ಆಹಾರಗಳು ಎಂದರೆ, ಹಾಲು ಮೊಸರು ಅಕ್ಕಿದಾನಮಾಡಿ ಪ್ರಾರ್ಥಿಸಿ

ಸಿಂಹ ರಾಶಿ: ಮಕ್ಕಳ ವಿಚಾರದಲ್ಲಿ ಅಶುಭ ಸುದ್ದಿ ಕೇಳುತ್ತೀರಾ. ವೈವಾಹಿಕ, ವಿದ್ಯಾಭ್ಯಾಸ ಸೇರಿದಂತೆ ಮಕ್ಕಳ ವಿಚಾರದಲ್ಲಿ ಕೆಟ್ಟ ಸುದ್ದಿ ಕೇಳುವ ಸಾಧ್ಯತೆ ಹೆಚ್ಚು. ಈ ಹಿನ್ನಲೆ ಶಿವನ ವಿಗ್ರಹಕ್ಕೆ ಜೇನುತುಪ್ಪ ಅಭಿಷೇಕ ಮಾಡಿ ಮಕ್ಕಳಿಗೆ ನೀಡಿ

ಕನ್ಯಾ ರಾಶಿ: ಅಣ್ಣ-ತಮ್ಮ, ಅಕ್ಕ-ತಂಗಿ ವಿಚಾರದಲ್ಲಿ ಸಮಸ್ಯೆಯಾಗುತ್ತದೆ. ಹೆಚ್ಚಿನ ಜಾಗುರುಕತೆ ವಹಿಸಿ. ಯಾವುದೇ ವ್ಯವಹಾರ ಮಾಡುತ್ತಿದ್ದರೆ ಅಶುಭವಾಗಲಿದೆ.ಸ್ವಲ್ಪ ಆರೋಗ್ಯದಲ್ಲಿ ಏರುಪೇರಾಗುತ್ತದೆ. ರಕ್ತದೊತ್ತಡದಂತಹ ಸಮಸ್ಯೆ ಎದುರಾಗುತ್ತದೆ.

ತುಲಾ ರಾಶಿ: ಖರ್ಚಿನ ಮೇಲೆ ಹಿಡಿತಿರಲಿ. ಬೇಡದ ಖರ್ಚು ಹೆಚ್ಚಾಗುತ್ತದೆ. ಯಾವುದೋ ವಿಚಾರಕ್ಕೆ ಹಣವ್ಯಯವಾಗುವ ಸಾಧ್ಯತೆ ಇದೆ. ಆರ್ಥಿಕವಾದ ಸುಧಾರಣೆಯಾಗುವ ದಿವಸ. ಹಣಕಾಸಿನ ಸುಧಾರಣೆಗೆ ಲಕ್ಷ್ಮೀ ನಾರಾಯಣ ಹೃದಯಾಪಾರಾಯಣ ಮಾಡಿ.

ವೃಶ್ಚಿಕ ರಾಶಿ: ಸಮಾಜ ಸೇವೆ, ರಾಜಕೀಯದಲ್ಲಿ ತೊಡಗಿದ್ದರೆ ಹೆಚ್ಚಿ ಲಾಭಾ ನಿರೀಕ್ಷೆ ಇಂದು ಆಗಲಿದೆ. ಶೀತ ಬಾಧೆ. ಈ ಹಿನ್ನಲೆ ಆರೋಗ್ಯದ ಕಡೆ ಗಮನಹರಿಸಬೇಕು. ಮೊದಲಿನಿಂದಲೂ ಶೀತ ಸಮಸ್ಯೆ ಇದ್ದರೆ ಉಲ್ಬಣಧನು ರಾಶಿ: ಈ ರಾಶಿಯ ದಂಪತಿಗಳಲ್ಲಿ ಕಲಹ ಉಂಟಾಗುವ ಸಂಭವವಿದೆ. ಯಾರೇ ಸಿಂಹ ರಾಶಿ ದಂಪತಿಗಳು ಇದ್ದರೂ ನಿಮ್ಮ ವೈಮನಸ್ಸನ್ನು ಸಮಾಧಾನದಿಂದ ಬಗೆಹರಿಸಿಕೊಳ್ಳಿ. ಇಲ್ಲವಾದಲ್ಲಿ ಇದು ವಿಕೋಪಕ್ಕೆ ತೆರಳಲಿದೆ. ಇದರ ನಿವಾರಣೆಗೆ ಪಾರ್ವತಿ ಪರಮೇಶ್ವರ ಪೂಜಿಸಿ

ಮಕರ ರಾಶಿ: ಷೇರು, ಹಣದ ಹೂಡಿಕೆ ಮಾಡಿದರೆ ಸಾಕಷ್ಟು ಲಾಭಾವಾಗಲಿದೆ. ಇಂದಿನ ದಿನ ಯಾವುದೇ ಬಂಡವಾಳ ಹೂಡಿದರೂ ಮುಂದೆ ಅದು ನಿಮಗೆ ಲಾಭಾವಾಗಲಿದೆ. ಕೃಷಿ, ಪಶು ಸಂಗೋಪನೆ ಕೆಲಸದಲ್ಲಿದ್ದರೆ ಹೆಚ್ಚಿನ ಲಾಭ. ಕೃಷ್ಣ ಅಷ್ಟೋತ್ತರ. ಶಿವನ ಪ್ರಾರ್ಥನೆಯಿಂದ ಇನ್ನು ಹೆಚ್ಚಿನ ಯಶಸ್ಸು ಕಾಣಬಹುದು

ಕುಂಭ ರಾಶಿ: ಸಾಲಬಾಧೆ ನಿವಾರಣೆಗೆ ವಿಶೇಷ ದಿನ. ಋಣ ನಿವಾರಣೆಯಾಗಲಿದೆ. ಕೊಟ್ಟ ಸಾಲ ಇಂದು ಮರಳಲಿದೆ. ಅಲ್ಲದೇ ಯಾವುದೇ ನೆರವೇರದ ಹಳೆ ಕೆಲಸ ಕೂಡ ಇಂದು ಸಂಪೂರ್ಣವಾಗಲಿದೆ

ಮೀನ ರಾಶಿ: ವ್ಯವಹಾರದಲ್ಲಿ ಲಾಭಾ. ದ್ವೀತಿಯ ಸ್ಥಾನದಲ್ಲಿರುವ ಚಂದ್ರನಿರುವ ಹಿನ್ನಲೆ ಹೆಚ್ಚಿನ ಲಾಭಾವಾಗಲಿದೆ. ಇವತ್ತು ಏನೇ ನೀವು ಹೊಸ ಕೆಲಸ ಆರಂಭ ಮಾಡಿದರೆ ಅದು ಯಶ ಕಾಣಲಿದೆ ಹೊರಗೆ ಹೋಗುವ ಸಂದರ್ಭದಲ್ಲಿ ಇಂದು ಅರಳಿ ಮರ ಪ್ರದಕ್ಷಿಣೆ ಹಾಕಿದರೆ, ಯೋಗ ಉಂಟಾಗಲಿದೆ
Published by: Seema R
First published: April 25, 2021, 6:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories