HOME » NEWS » Lifestyle » DAILY HOROSCOPE 23 APRIL 2021 ASTROLOGICAL PREDICTIONS AST SESR

Astrology: ಧನುರಾಶಿಯವರಿಗೆ ಈ ದಿನ ನಿರಾಶದಾಯಕ: ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

Daily Horoscope - April 23, 2021 - ಹನ್ನೆರಡು ರಾಶಿಗಳಿಗೆ ಇಂದಿನ ಫಲಾಫಲ ಹೇಗಿದೆ ಎಂಬ ವಿವರ ಇಲ್ಲಿದೆ.

news18-kannada
Updated:April 23, 2021, 7:17 AM IST
Astrology: ಧನುರಾಶಿಯವರಿಗೆ ಈ ದಿನ ನಿರಾಶದಾಯಕ: ಇಲ್ಲಿದೆ ದ್ವಾದಶ ರಾಶಿ ಭವಿಷ್ಯ
ಈ ದಿನದ 12 ರಾಶಿಗಳ ಭವಿಷ್ಯ
  • Share this:
ಮೇಷ ರಾಶಿ : ಕೆಲಸದ ಒತ್ತಡದಿಂದ ಕಿರಿಕಿರಿಯಾಗಲಿದೆ. ಒಂಟಿತನ ಕಾಡಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದ್ದು, ಮನೆಯಲ್ಲಿ ಸಾಮರಸ್ಯದ ವಾತಾವರಣ ಮೂಡಲಿದೆ. ಧ್ಯಾನ, ಯೋಗದಂತಹ ಚಟುವಟಿಕೆಯಿಂದ ಮನಸಿಗೆ ಉಲ್ಲಾಸ ಮೂಡಲಿದೆ. ಗಣೇಶನ ಪ್ರಾರ್ಥಿಸಿದರೆ ಈ ದಿನ ಲಾಭಾವಾಗಲಿದೆ

ವೃಷಭ ರಾಶಿ: ದುಡುಕಿನ ಕಾರ್ಯದಿಂದ ಸ್ನೇಹಿತರಿಗೆ ಸಮಸ್ಯೆಯಾಗಲಿದ್ದು, ಟೀಕೆಗೆ ಗುರಿಯಾಗುವಿರಿ. ಪ್ರೇಮಿಸಿದ ವ್ಯಕ್ತಿ ದೂರಾಗುವ ಸಂಭವ ಜಾಸ್ತಿ. ಕುಟುಂಬದಲ್ಲಿ ಘರ್ಷಣೆಯಾಗಲಿದ್ದು, ಇದರ ತಡೆಗಾಗಿ ಲಕ್ಷ್ಮೀ ನಾರಾಯಣ ಆರಾಧನೆ ಮಾಡಿದರೆ ಒಳಿತಾಗಲಿದೆ.

ಮಿಥುನ ರಾಶಿ: ಆರೋಗ್ಯ ಸಂಬಂಧಿತ ಸಮಸ್ಯೆಯಿಂದ ಬಳಲುವ ಸಾಧ್ಯತೆ ಹೆಚ್ಚು. ಅನಿರೀಕ್ಷಿತ ಒತ್ತಡಗಳು ಮತ್ತಷ್ಟಯ ಕುಗ್ಗಿಸಲಿದೆ. ವೃತ್ತಾ ಆಲೋಚನೆಯಿಂದ ಮನಸ್ಸಿಗೆ ಕಸಿವಿಸಿ. ಶಿವನ ಜಪ ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ.

ಕಟಕ ರಾಶಿ: ಅನಿರ್ಧಿಷ್ಟ ನಡುವಳಿಕೆಯಿಂದ ನಿಮ್ಮ ಸುತ್ತಮುತ್ತಲಿನ ಜನರಿಗೆ ಕಸಿವಿಸಿ ಉಂಟಾಗಲಿದೆ. ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ತೊಡಗಿದರೆ ಲಾಭಾ. ವ್ಯಾಪಾರದಲ್ಲಿ ಮೂರನೇ ವ್ಯಕ್ತಿ ಹಸ್ತಕ್ಷೇಪದಿಂದ ನಷ್ಟವಾಗಲಿದೆ. ಪಾರ್ವತಿ ದೇವಿ ಸ್ಮರಿಸಿದರೆ ಈ ದಿನ ಒಳಿತಾಗಲಿದೆ.

ಸಿಂಹ ರಾಶಿ: ಬಹುದಿನದ ಸಮಸ್ಯೆಗಳು ದೂರಾಗಲಿದೆ. ಹೂಡಿಕೆ ಯೋಜನೆಯಿಂದ ದುಪ್ಪಟು ಲಾಭಾ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮಾನಸಿಕ ನೆಮ್ಮದಿ. ಅಂದು ಕೊಂಡ ಕಾರ್ಯದಲ್ಲಿ ಜಯ ಸಿಗಲಿದೆ. ಕೃಷ್ಣನಿಗೆ ಇಂದು ಮೊಸರು ಅರ್ಪಿಸಿದರೆ ಒಳಿತು

ಕನ್ಯಾ ರಾಶಿ: ಕುಟುಂಬದ ಇಚ್ಛೆ ವಿರುದ್ಧವಾಗಿ ನಡೆಯಬೇಕು. ನಿಮ್ಮ ಕೆಲ ವರ್ತನೆಗಳು ಭಾರೀ ಪರಿಣಾಮವನ್ನು ಬೀರಲಿದೆ. ಕೋಪ ಹತೋಟಿಯಲ್ಲಿರಲಿ, ಆರ್ಥಿಕ ಸಂಕಷ್ಟದಿಂದ ಸಾಕಷ್ಟು ತೊಂದರೆಯಾಗಲಿದೆ. ಲಕ್ಷ್ಮೀ ದೇವಿಯ ಜಪ ಮಾಡಿದರೆ ಈ ದಿನ ಚೆನ್ನಾಗಿರಲಿದೆ.

ತುಲಾ ರಾಶಿ: ಕಠಿಣ ಕಾರ್ಯದಿಂದ ಮುಕ್ತಿ. ಹಿತ ಶತ್ರುಗಳಿಂದ ಜಯ. ಉದ್ಯೋಗದಲ್ಲಿ ಬಡ್ತಿ. ಪ್ರೀತಿ ಪಾತ್ರರಿಂದ ಮತ್ತಷ್ಟು ಸಿಹಿ ಸುದ್ದಿ ಸಿಗಲಿದೆ. ಸಾಕು ನಾಯಿಗಳ ಬಗ್ಗೆ ಎಚ್ಚರದಿಂದ ಇರಿ. ಮಾನಸಿಕ ನೆಮ್ಮದಿ ಬಗ್ಗೆ ಹೆಚ್ಚಿನ ಗಮನವಿರಲಿ.ವೃಶ್ಚಿಕ ರಾಶಿ: ಭಿನ್ನಾಭಿಪ್ರಾಯದಿಂದ ವ್ಯವಹಾರದಲ್ಲಿ ನಷ್ಟ, ಬೇರೆಯವಿರಿಗೆ ಸಹಾಯ ಮಾಡುವುದರಿಂದ ಭವಿಷ್ಯತ್ತಿನಲ್ಲಿ ಲಾಭಾವಾಗಲಿದೆ, ನಿಮ್ಮ ಕೆಟ್ಟ ಮೂಡ್​ನಿಂದ ಆಪ್ತರಿಗೆ ಕಷ್ಟವಾಗಲಿದೆ. ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಲಾಭಾವಾಗಲಿದೆ

ಧನು ರಾಶಿ: ಕಾರ್ಯಕ್ಷಮತೆಯ ಮಟ್ಟ ಹೆಚ್ಚಿರಲಿದೆ. ಭವಿಷ್ಯದ ಮೇಲೆ ಬಂಡಾವಳ ಹೂಡಿಕೆಯಿಂದ ಲಾಭಾ. ಮಕ್ಕಳೊಂದಿಗೆ ಕಲಹದಿಂದ ಈ ದಿನ ನಿರಾಶೆಯಾಗಲಿದೆ. ಮನರಂಜನಾ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ. ಅಂದುಕೊಂಡ ಯೋಜನೆಗಳು ಮುಂದೂಡಿಕೆಯಾಗುವ ಸಾಧ್ಯತೆ

ಮಕರ ರಾಶಿ: ಆರೋಗ್ಯ ವೃದ್ಧಿ, ಕೆಲಸಕ್ಕೆ ತಕ್ಕ ಪ್ರತಿಫಲದಿಂದ ಯಶಸ್ಸು ಸಿಗಲಿದೆ. ಸ್ನೇಹಿತರೊಂದಿಗೆ ಉತ್ತಮ ಕ್ಷಣ ಕಳೆಯುತ್ತೀರಾ. ರಂಗಭೂಮಿ ಕ್ಷೇತ್ರದಲ್ಲಿ ಉತ್ತಮ ಅವಕಾಶ. ವೈವಾಹಿಕ ಜೀವನದಲ್ಲಿ ತೊಂದರೆ

ಕುಂಭ ರಾಶಿ: ಧಾರ್ಮಿಕ ಕಾರ್ಯದಿಂದ ಸಾಕಷ್ಟು ಲಾಭ. ಮಾನಸಿಕ ನೆಮ್ಮದಿಯತ್ತ ಹೆಚ್ಚಿನ ಗಮನಹರಿಸಿ. ಅನಿರೀಕ್ಷಿತ ಉಡುಗೊರೆಗಳಿಂದು ಮನಸ್ಸು ಸಂತಸ. ವಾಹನ ಚಾಲನೆ ಬಗ್ಗೆ ಎಚ್ಚರ ವಹಿಸಿ. ಆತ್ಮೀಯರೊಂದಿಗೆ ಸಾಕಷ್ಟ ಸಮಯ ಕಳೆಯುವುದರಿಂದ ಲಾಭಾ.

ಮೀನಾ ರಾಶಿ: ಉಳಿತಾಯ ಹೆಚ್ಚಳಕ್ಕೆ ಸಕಲ. ಮಕ್ಕಳ ವರ್ತನೆ ಕಳವಳ ಮೂಡಿಸುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಅವಶ್ಯ. ಜೀವದ ಸ್ನೇಹಿತರ ಭೇಟಿಯಿಂದಾಗಿ ಲಾಭಾ, ಶೈಕ್ಷಣಿಕ ಕ್ಷೇತ್ರದವರಿಗೆ ಲಾಭಾ.
Published by: Seema R
First published: April 23, 2021, 7:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories