Astrology: ಭಾನುವಾರದ ದಿನ ರಾಶಿ ಭವಿಷ್ಯಗಳು ಬೇರೆಯದ್ದೇ ಫಲ ಕೊಡುತ್ತವೆ..! ಯಾವ ರಾಶಿಗೆ ಯಾವ ಫಲ?

Horoscope Today june 20: ಜನ್ಮ ರಾಶಿಗಳು ದಿನದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಆಧಾರದ ಮೇಲೆ ಯಾವ ರಾಶಿಗೆ ಧನಲಾಭ, ಯಾರಿಗೆ ನಷ್ಟ ಎಂಬ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

ಈ ದಿನದ 12 ರಾಶಿಗಳ ಭವಿಷ್ಯ

ಈ ದಿನದ 12 ರಾಶಿಗಳ ಭವಿಷ್ಯ

 • Share this:
  ಮೇಷ ರಾಶಿ: ವ್ಯಾಪಾರ ವ್ಯವಹಾರಗಳಲ್ಲಿ ತುಸು ಚೇತರಿಕೆ ಕಂಡುಬAದು ಮುಂದುವರಿಯಲು ಸಹಾಯವಾಗುತ್ತದೆ. ಕೆಲಸ ಮತ್ತು ದುಡಿಮೆ ಸಮೃದ್ಧಿಯಾಗಿ ಇಲ್ಲವಾದರೂ ನೆಮ್ಮದಿಗೆ ಕೊರತೆ ಕಾಣುವುದಿಲ್ಲ. ಹಂತಹAತವಾಗಿ ಸುಧಾರಿಸಲಿರುವ ಪರಿಸ್ಠಿತಿಯು ಈ ವಾರ ನಿಮಗೆ ಹೆಚ್ಚಿನ ನಿರಾಶೆಯನ್ನು ತರದು. ಆದರೂ ಕರ್ತವ್ಯ ದೃಷ್ಟಿಯಿಂದ ವೃತ್ತಿಕ್ಷೇತ್ರದಲ್ಲಿ ಒಂದೇ ಮನಸ್ಸಿನಲ್ಲಿ ದುಡಿದರೆ ಸಮಾಧಾನ ಹೆಚ್ಚುತ್ತದೆ. ಅವಿವಾಹಿತರಿಗೆ ವಿವಾಹದ ವಿಚಾರದಲ್ಲಿ ಶುಭವಾಗುವ ಲಕ್ಷಣವಿದೆ. ನಾಗ ದೇವರ ಆರಾಧನೆ ಶುಭವನ್ನು ಉಂಟುಮಾಡುತ್ತದೆ.

  ವೃಷಭ ರಾಶಿ: ಈ ವಾರ ಆರ್ಥಿಕ ಸ್ಥಿತಿಯು ಸ್ವಲ್ಪ ಮಟ್ಟಿಗೆ ಏರುತ್ತದೆ. ದೇಹದಲ್ಲಿ ವಾತದ ಬಾಧೆಯು ತುಸು ಉಪಶಮನವಾಗುವುದು. ವೃಥಾ ಅಲೆದಾಟದಿಂದ ಆಯಾಸ. ಕಾರ್ಯಕ್ಷೇತ್ರದಲ್ಲಿ ಕೆಲಸದ ಹೊರೆ ಬೆಟ್ಟದಂತೆ ಇರವುದು. ಶ್ರಮದಿಂದ ದುಡಿಯುವ ನಿಮ್ಮ ತಾಳ್ಮೆ ಮೆಚ್ಚತಕ್ಕದ್ದೇ. ಗೆಳೆಯರ ಸವಾಲಿನಲ್ಲಿ ಸದಾ ವಿಜಯ ನಿಮ್ಮದೇ ಆದ್ದರಿಂದ ಬೇಸರವಿಲ್ಲದೇ ಸಂತಸದಿಂದಿರುವಿರಿ. ಅನಿರೀಕ್ಷಿತವಾಗಿ ತೋರಿಬರುವ ಅಡ್ಡಿ-ಆತಂಕಗಳಿಗೆ ಧ್ಯೆರ್ಯಗೆಡದಿರಿ. ದೇವತಾ ಅನುಗ್ರಹ ಉತ್ತಮವಿದ್ದು ಬಂದ ಕಷ್ಟ-ನಷ್ಟಗಳು ಉಪಶಮನಗೊಳ್ಳುತ್ತದೆ.

  ಮಿಥುನ ರಾಶಿ: ಹಿತಶತ್ರುಗಳ ದ್ವೇಷ ಅಸೂಯೆಯಿಂದ ಬರುತಿದ್ದ ಮನದ ಕ್ಲೇಶವು ದೂರಾಗುತ್ತದೆ. ಕಿಂಚಿತ್ ಕಾರ್ಯಸಿದ್ದಿಯಿಂದಲೂ ನೆಮ್ಮದಿ ಕಂಡು ಬರಲಿದೆ. ಅನೇಕ ಬಗೆಯ ಶುಭವಾರ್ತೆಗಳು ನೆಮ್ಮದಿಗೆ ಕಾರಣವಾದೀತು. ಸರಕಾರಿ ಕಚೇರಿಗಳಿಗೆ ಅಲೆದಾಟವು ಹೆಚ್ಚಾಗಿ,÷ ಹಣದ ಖರ್ಚಿಗೆ ಕಾರಣವಾದೀತು. ಈ ವಾರದ ಉತ್ತರಾರ್ಧ ಉತ್ತಮ ಫಲದಾಯಕವಾಗಿ ಶುಭವಿದೆ. ಮನೆಯಲ್ಲಿ ಆನಂದದ ವಾತಾವರಣ ಉದಯವಾಗುತ್ತದೆ. ಹಾಗೆ ಹಣದ ವಿಚಾರದಲ್ಲಿ ಖರ್ಚು-ವೆಚ್ಚಗಳ ವಿಷಯದಲ್ಲಿ ಜಾಗ್ರತೆ ಇರಲಿ. ಆರ್ಥಿಕ ಸ್ಥಿತಿಯು ಕೊಂಚ ಸುಧಾರಿಸಲಿದೆ.

  ಕರ್ಕಾಟಕ ರಾಶಿ: ಅವಿವಾಹಿತ ಹೆಣ್ಣು ಮಕ್ಕಳಿಗೆ ಅನಿರೀಕ್ಷೀತವಾಗಿ ಕಂಕಣಬಲ ಕೂಡಿಬರುವುದು. ವೃತ್ತಿರಂಗದಲ್ಲಿ ಹಿತಶತ್ರುಗಳು ಮಾಡಿದ ಸಹಾಯ, ಅಪವಾದಗಳು ಪರಿಹಾರವಾಗುವಂತೆ ಮಾಡುತ್ತದೆ. ಕೈಗೂ೦ಡ ಕಾರ್ಯ ಸಫಲವಾಗಲಿದೆ. ಆರೋಗ್ಯವು ಆಹಾರದಲ್ಲಿ ಪತ್ಯ ಮಾಡುವುದರ ಪ್ರಭಾವದಿಂದ ಸುಧಾರಣೆಗೆ ಬರುತ್ತದೆ. ಸ್ನೇಹಿತರಿಂದ ಪಡೆದ ಸಾಲವನ್ನು ಮರುಪಾವತಿ ಮಾಡುವುದು ಗೌರವ ಕಾಪಾಡುತ್ತದೆ. ನಿಮ್ಮ ನೆಚ್ಚಿನ ಬರವಣಿಗೆ ಹವ್ಯಾಸ ಪುನಃ ಆರಂಭಗೊಳ್ಳುವುದು. ದೈವಾನುಗ್ರಹದಿಂದ ಸಂತಾನ ಭಾಗ್ಯದ ಸುದ್ದಿ ಕೇಳುವಿರಿ.

  ಸಿ೦ಹ ರಾಶಿ: ಸುಖ-ದುಃಖ, ಲಾಭ-ನಷ್ಟಗಳೆರಡು ಸಮಾನವಾಗಿದ್ದರೂ ಪ್ರತಿಷ್ಟಿತ ಜನರ ಸಹಕಾರದಿಂದ ಸುಧಾರಣೆ ಕಂಡು ಬರಲಿದೆ. ಹಾಗೆಯೇ ಇತರರ ಕಷ್ಟ ಸುಖಗಳಿಗೆ ನೆರವಾಗುವಿರಿ. ವೈದ್ಯರಿಗೆ ವೃತ್ತಿಯಲ್ಲಿ ಹೆಚ್ಚಿನ ಸಮಯ ಕಳೆಯಬೇಕಾದ ಅನಿವಾರ್ಯತೆ ಎದುರಾಗುವುದರ ಜೊತೆಗೆ ಅಧ್ಯಯನ ಶೀಲರಾಗಿರುವ ವೈದ್ಯರಿಗೆ ವಿದೇಶದಲ್ಲಿ ವೃತ್ತಿ ಮಾಡುವ ಅವಕಾಶ ದೊರೆತು ಸಂತೋಷವಾಗುವುದು. ಹಿಂದಿನ ದಿನಗಳಿಗೆ ಹೋಲಿಸಿದರೆ ಈ ವಾರ ಸಂಸಾರ ನಿರ್ವಹಣೆ ಸುಲಭವೆನಿಸುವುದು.

  ಕನ್ಯಾ ರಾಶಿ: ಹಣಕಾಸಿನ ವಿಚಾರದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದು. ಕಾರ್ಯ ನಿಮಿತ್ತವಾಗಿ ಅತ್ತೆ-ಸೊಸೆಯಲ್ಲಿ ಭಿನ್ನಾಭಿಪ್ರಾಯ ತೋರಿಬಂದರೂ ತಾಳ್ಮೆ, ಸಮಾಧಾನ ಇರಲಿ. ಮಕ್ಕಳ ವರ್ತನೆಯು ನಿಮ್ಮ ಮನಸ್ಸಿಗೆ ಸಂತೋಷ ತಂದುಕೊಡಲಿದೆ. ರೈತರಿಗೆ ಅತೀ ಹೆಚ್ಚಿನ ಲಾಭಾಂಶ ಅದರಲ್ಲೂ ತೆಂಗಿನಕಾಯಿ ಬೆಳೆಗಾರರಿಗೆ ತಮ್ಮ ಬೆಳೆಗೆ ಅಧಿಕ ಬೆಲೆ ಕಂಡು ಬರುತ್ತದೆ. ಕ್ರೀಡಾಪಟುಗಳ ಅಭ್ಯಾಸದ ಕೊರತೆಯು ವೈಫಲ್ಯಕ್ಕೆ ಕಾರಣವಾಗುವುದು. ದಾಂಪತ್ಯ ಜೀವನ ಪರಸ್ಪರ ಸೋಲು ಗೆಲುವಿನಿಂದ ಉತ್ತಮವಾಗಿರುತ್ತದೆ.

  ತುಲಾ ರಾಶಿ: ಈ ವಾರ ಉತ್ತಮ ದೈವ ಬಲವಿದ್ದು ಸುಖ, ಸಂಪತ್ತುಗಳು ಕೈಗೂಡುವುದು. ಗೃಹಕೃತ್ಯದಲ್ಲಿ ಅಭಿವೃದ್ಧಿಯು, ಉದ್ಯೋಗ ಹಾಗು ಜೀವನ ಪ್ರವೃತ್ತಿಯಲ್ಲಿ ಮಧ್ಯಮ ರೀತಿಯ ಪ್ರಗತಿಯು ತೋರಿಬರುವುದು. ಬುದ್ಧಿಕೌಶಲ್ಯದಿಂದ ಕಾರ್ಯಕ್ಷೇತ್ರದಲ್ಲಿ ಮುನ್ನಡೆ. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿಕೆಯಿಂದ ಮಾನಸಿಕ ಶಾಂತಿ ಹೆಚ್ಚಾಗಲಿದೆ. ವಿದ್ಯಾರ್ಥಿ ಸಮೂಹಕ್ಕೆ ಉತ್ತಮ ಅವಕಾಶಗಳು ಲಭಿಸಲಿವೆ. ಶತ್ರು ಬಾಧೆ ನಿವಾರಣೆ ಆಗಲಿದೆ. ನಿಮ್ಮ ಕೆಲಸ ಕಾರ್ಯಗಳನ್ನು ಕಾರ್ಯರೂಪಕ್ಕೆ ತರಲು ಹೆಚ್ಚಿನ ಪರಿಶ್ರಮ ಅಗತ್ಯವಿದೆ.

  ವೃಶ್ಚಿಕ ರಾಶಿ: ಈ ವಾರ ನೀವೆಣಿಸಿದ ರೀತಿಯಲ್ಲೇ ಸಮಾಜದಲ್ಲಿ ಗೌರವ ಹಾಗೂ ಕುಟು೦ಬದಲ್ಲಿ ಸ್ಥಾನಮಾನಗಳು ಲಭಿಸುತ್ತದೆ. ಹಲವು ಅಡೆತಡೆಗಳು ಮತ್ತು ಆತಂಕಕಾರಿ ವಿಚಾರಗಳು ಎದುರಾಗುವುದು. ಸದಾಕಾಲ ಪಕ್ಕದಲ್ಲಿಯೇ ಇರುವ ಶತ್ರುಗಳಿಂದ ವಂಚನಾ ಪ್ರಸಂಗವಿದ್ದರು, ಖಂಡಿತವಾಗಿ ನೀವೇ ಜಯಶಾಲಿಯಾಗುವಿರಿ. ಎಲ್ಲಾ ಸಮಸ್ಯೆಯನ್ನು ಬಗೆಹರಿಸಿಕೊಂಡು ಮುಂದಿನ ಹೆಜ್ಜೆ ಹಾಕಿ. ದಾಂಪತ್ಯ ಜೀವನದಲ್ಲಿ ತಾಳ್ಮೆ, ಹೊಂದಾಣಿಕೆ ಮುಂದುವರಿಯಲಿದೆ. ಗೃಹಿಣಿಗೆ ಸಂತೋಷದ ಸಮಯ.

  ಧನು ರಾಶಿ: ನಿಮ್ಮ ಕೆಲಸಗಳನ್ನು ಸಾಧಿಸಿಕೊಳ್ಳಲೇ ಬೇಕಿದ್ದರೆ ಅವಿರತ ಶ್ರಮ ಅಗತ್ಯ ಮತ್ತು ಅನಿವಾರ್ಯ. ನಿಮ್ಮ ಹಿತಾಸಕ್ತಿಗಳಿಗೆ ಹೆಚ್ಚಿನ ಗಮನವನ್ನು ಕೊಡಿ. ದುಡ್ಡಿನ ವಿಷಯದಲ್ಲಿ ಮೋಸ ಹೋಗುವ ಸಂಭವವಿದೆ, ಎಚ್ಚರವಾಗಿರಿ. ರಸ ಪದಾರ್ಥ, ಅಲಂಕಾರಿಕ ವಸ್ತುಗಳ ಮಾರಾಟದ ಉದ್ಯೋಗದವರು ನೆಮ್ಮದಿ ಕಾಣಬಹುದು. ಮಕ್ಕಳ ಅಗತ್ಯಗಳನ್ನು ಪೂರೈಸಿ. ನೂತನ ವಾಹನ ಕೊಳ್ಳುವುದನ್ನು ಮುಂದೂಡಿ. ಮನಸ್ಸಿನಲ್ಲಿ ಏಕಾಗ್ರತೆಯಿಂದ ಶಿವನ ನಾಮ ಸ್ಮರಣೆ ಅಥವಾ ಧ್ಯಾನ ಮಾಡುವುದು ಒಳ್ಳೆಯದು.

  ಮಕರ ರಾಶಿ: ಈ ವಾರದ ಆರಂಭದಿAದಲೇ÷ ಹಂತ ಹಂತವಾಗಿ ಪ್ರಗತಿದಾಯಕವಾಗಲಿದೆ. ಶುಭ ಮಂಗಲ ಕಾರ್ಯಗಳಿಗೆ ಅಡ್ಡಿ-ಆತಂಕ ಯಾವುದು ಇರುವುದಿಲ್ಲ. ನಿಮ್ಮ ಮನೋಭಿಲಾಷೆಗೆ ಕುಟುಂಬ ವರ್ಗದವರು ಅಭಿವೃದ್ಧಿ ದಾರಿಯನ್ನು ಕಲ್ಪಿಸುವರು÷. ಸ್ನೇಹಿತರಲ್ಲಿ ಅನಗತ್ಯವಾಗಿ ಮಾತನಾಡುವುದಕ್ಕಿಂತ ಮೌನವಾಗಿ ಇರುವುದು ಲೇಸು. ನಿಮ್ಮನ್ನು ನೀವೇ ವಿಮರ್ಶಿಕೊಳ್ಳಿ ನಿಮ್ಮ ಸರಿ ತಪುö್ಪಗಳು ನಿಮಗೇ ಅರಿವಾಗುವುದು. ಭವಿಷ್ಯತ್ತಿನ ನಿಶ್ಚಿಕತೆಯಿಂದ ಮಾನಸಿಕ ನೆಮ್ಮದಿ ಹೊಂದುವಿರಿ.

  ಕು೦ಭ ರಾಶಿ: ಅನಾವಶ್ಯಕ ಚಿಂತೆ, ದೂರ ಪ್ರವಾಸದಿಂದ ಅನಾವಶ್ಯಕ ಖರ್ಚು ಹಾಗೂ ಹಾಳು ವ್ಯಸನಗಳು ಈ ವಾರದಲ್ಲಿ ಕಮ್ಮಿಯಾಗಲಿದೆ. ದೈವಬಲದ ಕಾರಣ ಕೈಗೊಂಡ ಕೆಲಸ-ಕಾರ್ಯಗಳಲ್ಲಿ ಜಯ, ಹೊಸ ಕಾರ್ಯ ಕೈಗೊಳ್ಳಲು ಧೆöÊರ್ಯ ಮತ್ತು ಸಕಾಲ. ಎಲ್ಲದರಿ೦ದಲೂ ಧನಲಾಭವನ್ನು ಮಾತ್ರ ಯೋಚಿಸಬೇಡಿ. ಸಹಾಯ ಮಾಡುವ ಮನಸ್ಥಿತಿಯನ್ನೂ ಬೆಳೆಸಿಕೊಳ್ಳಿ. ಈ ವಾರದಲಿ ಬಂಧು-ಮಿತ್ರರ ಸಹಕಾರ ನಿಮಗೆ ದೊರೆಯಲಿದೆ. ಧನ ಹೂಡಿಕೆಯಲ್ಲಿ ಲಾಭ ಸಂಭವ.

  ಮೀನಾ ರಾಶಿ: ನಿಮ್ಮ ಸಮಸ್ಯೆಗಳು ಮು೦ದಿನ ದಿನಗಳಲ್ಲಿ ಸ್ವಲ್ಪ ಸ್ವಲ್ಪವಾಗಿ ದೂರವಾಗಲಿದೆ. ಸ್ಥಾನ ಬದಲಾವಣೆ, ಆರ್ಥಿಕ ಖರ್ಚು-ವೆಚ್ಚಗಳ ಸಮತೋಲನ, ಕುಟುಂಬದಲ್ಲೂ ತೃಪ್ತಿ, ಅರೋಗ್ಯದಿ೦ದ ಮಾನಸಿಕ ಶಾಂತಿ ಕಾಣುವಿರಿ. ಮನೆಯಲ್ಲಿ ಪತ್ನಿ, ಮಕ್ಕಳ ಅರೋಗ್ಯದ ಬಗ್ಗೆ ಗಮನ ಹರಿಸಬೇಕಾಗುತ್ತದೆ. ವಿದ್ಯಾಭ್ಯಾಸದಲ್ಲಿ ಒಳ್ಳೆಯ ಫಲಿತಾ೦ಶ. ನಿಮ್ಮ ಕಾರ್ಯವೈಖರಿ ಲಾಭಕರವಾಗಿ ಮೂಡಿ ಬರುತ್ತದೆ. ಹಾಕಿದ ಯೋಜನೆಗಳು ಸಫಲವಾಗಲಿವೆ. ನೂತನ ಗೃಹ ನಿರ್ಮಾಣದ ಯೋಜನೆಗೆ ಯೋಚಿಸಬಹುದು. ಅವಿವಾಹಿತರಿಗೆ ಕಂಕಣಬಲ ಅನಾಯಾಸವಾಗಿ ಒದಗಿ ಬರುತ್ತದೆ.
  Published by:Seema R
  First published: