HOME » NEWS » Lifestyle » DAILY HOROSCOPE 20 APRIL 2021 ASTROLOGICAL PREDICTIONS AST SESR

Astrology: ಮಿಥುನ ರಾಶಿಯವರಿಗೆ ಇಂದು ಕಾಡಲಿದೆ ದ್ವಂದ್ವ ನಿಲುವು: ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

ಜನ್ಮ ರಾಶಿಗಳು ದಿನದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಆಧಾರದ ಮೇಲೆ ಯಾವ ರಾಶಿಗೆ ಧನಲಾಭಾ, ಯಾರಿಗೆ ನಷ್ಟ ಎಂಬ ಕುರಿತ ಮಾಹಿತಿ ಇಲ್ಲಿದೆ

news18-kannada
Updated:April 20, 2021, 7:18 AM IST
Astrology: ಮಿಥುನ ರಾಶಿಯವರಿಗೆ ಇಂದು ಕಾಡಲಿದೆ ದ್ವಂದ್ವ ನಿಲುವು: ಇಲ್ಲಿದೆ ದ್ವಾದಶ ರಾಶಿ ಭವಿಷ್ಯ
ಈ ದಿನದ 12 ರಾಶಿಗಳ ಭವಿಷ್ಯ
  • Share this:
ಮೇಷ ರಾಶಿ: ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಎಚ್ಚರ. ಇಂದು ಬಂಡಾವಳ ಹೂಡಿಕೆ ಮಾಡದಿರುವುದು ಒಳಿತು. ಕೌಟುಂಬಿಕ ವಿಚಾರದಲ್ಲಿ ಇಂದು ಒಳಿತಾಗಲಿದೆ
ಕೆಲಸದಲ್ಲಿ ತೊಂದರೆಯಾಗುವ ಸಾಧ್ಯತೆ ಹೆಚ್ಚು. ಉದ್ಯಮದ ಪಾಲುದಾರರಿಂದ ಕಿರಿಕಿರಿ ಸಂಭವ. ವಾಗ್ವಾದದಲ್ಲಿ ತೊಡಗದಿರುವುದು ಉತ್ತಮ.

ವೃಷಭ ರಾಶಿ : ಸಂತೋಷದ ಒಳ್ಳೆಯ ದಿನ ಇಂದಾಗಿರಲಿದೆ. ಮನಸ್ಥಿತಿ ಬದಲಾವಣೆಯಿಂದ ತಪ್ಪು ಗ್ರಹಿಕೆ ದೂರಾಗಲಿದೆ. ಕೆಲಸದಲ್ಲಿ ಪ್ರಗತಿ. ಭವಿಷ್ಯಕ್ಕಾಗಿ ಸೃಜನಶೀಲ ಯೋಜನೆ ರೂಪಿಸಲು ಸಕಾಲ

ಮಿಥುನ ರಾಶಿ : ಸ್ವಲ್ಪ ದ್ವಂದ್ವ ನಿಲುವು ಕಾಡಾಲಿದೆ. ಇದರಿಂದ ಕಾರ್ಯ ಅಪೂರ್ಣವಾಗಲಿದೆ ಯಾವುದೇ ಮುಖ್ಯ ನಿರ್ಧಾರ ಇಂದು ಕೈ ಗೊಳ್ಳುವ ಬದಲು ಮುಂದೂಡಿ. ಈ ಚಂಚಲತೆ ನಿವಾರಣೆಗೆ ಶಿವನ ದೇವಾಲಯಕ್ಕೆ ಭೇಟಿ ನೀಡಿ.

ಕಟಕ ರಾಶಿ :  ಉದ್ಯೋಗದಲ್ಲಿ ಹೆಚ್ಚಿನ ಬದಲಾವಣೆಯಿಂದ ನಷ್ಟ ಹೆಚ್ಚಲಿದೆ. ಈ ಹಿನ್ನಲೆ ಯಾವುದೇ ಬದಲಾವಣೆ ಮಾಡದೇ ಇರುವುದು ಒಳ್ಳೆಯದು. ಬೆಳಗಿನ ಸಮಯದಲ್ಲಿ ಸೂರ್ಯನಿಗೆ ಅರ್ಗ್ಯ ನೀಡಿ. ಗಣಪತಿ ದರ್ಶನ ಮಾಡಿ

ಸಿಂಹ ರಾಶಿ : ಬಂಡವಾಳ ಹೂಡುವ ಯಾವುದೇ ಯೋಜನೆ ಮಾಡುವ ಮುನ್ನ ಜಾಗುರುಕತೆ . ಅನಿವಾರ್ಯವಾದಲ್ಲಿ ಮಾತ್ರ ಈ ಕೆಲಸ ಇಂದು ಮಾಡಿ. ಇದರ ನಿವಾರಣೆಗೆ ಮೊಸರನ್ನು ಶಿವನ ಆಲಾಯಕ್ಕೆ ಕೊಟ್ಟು ಅಭಿಷೇಕ ಮಾಡಿಸಿ

ಕನ್ಯಾ ರಾಶಿ: ವಿಭಿನ್ನ ಅಭಿಪ್ರಾಯಗಳಿಂದ ಕುಟುಂಬದಲ್ಲಿ ಕಲಹ ಏರ್ಪಡಲಿದೆ. ಯಾವುದೇ ವಿಚಾರದಲ್ಲಿ ದುಡುಕಿನ ನಿರ್ಧಾರ ಬೇಡ. ತಡೆ ಹಿಡಿದ ಕೆಲಸಗಳು ಇಂದು ಸಂಪೂರ್ಣವಾಗಲಿದೆ.ತುಲಾ ರಾಶಿ : ಭೂಮಿ ಮತ್ತು ಮನೆ ವಿಚಾರವಾಗಿ ಶುಭ. ನ್ಯಾಯಾಲಯದಲ್ಲಿ ಯಾವುದೇ ಭೂಮಿ , ಮನೆ ಪ್ರಕರಣ ನಡೆಯುತ್ತಿದ್ದೆರೆ ಇಂದು ನಿಮ್ಮ ಪರವಾಗಲಿದೆ. ಖರೀದಿ ವ್ಯವಹಾರದಲ್ಲಿಯೂ ಲಭಾವಾಗಲಿದೆ. ಇಂದು ಓಂ ಭೂಂ ಭೂವಹಾರ ನಮಃ ಮಂತ್ರ ಜಪಿಸಿ

ವೃಶ್ಚಿಕ ರಾಶಿ: ಉದ್ಯೋಗದಲ್ಲಿ ಸಾಕಷ್ಟು ವ್ಯತ್ಯಾಯ. ಏನೇ ಸಮಸ್ಯೆ ಎದುರಾದರೂ ಉದ್ವೇಗ ಬೇಡ ಇನ್ನೊಂದು ಎರಡು ದಿನಗಳಲ್ಲಿ ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿದೆ. ಮಹಾಗಣಪತಿ ನೆನೆಯಿರಿ

ಮಕರ ರಾಶಿ: ಆರೋಗ್ಯದಲ್ಲಿ ವೃದ್ಧಿ. ತೊಂದರೆಗಳನ್ನು ನಿರ್ಲಕ್ಷ್ಯಿಸದಿರಿ. ಇತರರನ್ನು ಮೆಚ್ಚಿಸಲು ಹಣ ವ್ಯಯ ಮಾಡದಿರಿ. ಕೆಲಸದಲ್ಲಿ ಹೊರಗಿನವರ ಹಸ್ತಕ್ಷೇಪದಿಂದ ಸಮಸ್ಯೆ ಉಂಟಾಗಲಿದೆ

ಕುಂಭ ರಾಶಿ: ನಿಮ್ಮ ಕಾರ್ಯಕ್ಕೆ ಕುಟುಂಬಸ್ಥರು, ಸ್ನೇಹಿತರಿಂದ ಬೆಂಬಲ ಸಿಗಲಿದೆ. ತೃಪ್ತಿದಾಯಕ ದಿನ ಇಂದು. ಒಳ್ಳೆಯ ಆಲೋಚನೆಗಳಿಂದಾಗಿ ಎಲ್ಲವೂ ಒಳಿತಾಗಲಿದೆ. ಗಣೇಶನ ಧ್ಯಾನ ಮಾಡಿ

ಮೀನಾ ರಾಶಿ: ಆರೋಗ್ಯ ಸಂಬಂಧಿತ ಸಮಸ್ಯೆಯಿಂದ ತೊಂದರೆಯಾಗುವ ಸಾಧ್ಯತೆ. ಶತ್ರು ಬಾಧೆ ಕಾಡಲಿದೆ. ಸಂಬಂಧಿಕರಿಂದ ಸಮಸ್ಯೆಯಾಗುವ ಸಾಧ್ಯತೆ.
Published by: Seema R
First published: April 20, 2021, 7:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories