HOME » NEWS » Lifestyle » DAILY HOROSCOPE 18 APRIL 2021 ASTROLOGICAL PREDICTIONS AST SESR

Astrology: ಭಾನುವಾರದ ಈ ದಿನ ಯಾವ ರಾಶಿಗೆ ಒಳಿತು ಕೆಡಕು: ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

ಜನ್ಮ ರಾಶಿಗಳು ದಿನದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಆಧಾರದ ಮೇಲೆ ಯಾವ ರಾಶಿಗೆ ಧನಲಾಭ, ಯಾರಿಗೆ ನಷ್ಟ ಎಂಬ ಕುರಿತ ಮಾಹಿತಿ ಇಲ್ಲಿದೆ. ಏಪ್ರಿಲ್ 11ರಂದು ಜನಿಸಿದವರಿಗೆ ದಿನಭವಿಷ್ಯ ಇದು

news18-kannada
Updated:April 18, 2021, 7:15 AM IST
Astrology: ಭಾನುವಾರದ ಈ ದಿನ ಯಾವ ರಾಶಿಗೆ ಒಳಿತು ಕೆಡಕು: ಇಲ್ಲಿದೆ ದ್ವಾದಶ ರಾಶಿ ಭವಿಷ್ಯ
ಈ ದಿನದ 12 ರಾಶಿಗಳ ಭವಿಷ್ಯ
  • Share this:
ಮೇಷ ರಾಶಿ: ಮನೆಯ ಕೆಲವು ಸಮಸ್ಯೆಯಿಂದ ಕಿರಿಕಿರಿಯಾಗಲಿದೆ. ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ. ಸೃಜನಶೀಲ ಕೆಲಸಗಳಿಂದ ಮನಸ್ಸಿಗೆ ಸಂತೋಷ.

ವೃಷಭ ರಾಶಿ: ಸಂಬಂಧಿಕರ ನೆರವಿನಿಂದ ಅಂದು ಕೊಂಡ ಕಾರ್ಯ ಸಿದ್ಧಿ. ವಧು ಅನ್ವೇಷಣೆಯಲ್ಲಿರುವವರಿಗೆ ಸಿಹಿ ಸುದ್ದಿ. ವಿವಾಹಕ್ಕಿದ್ದ ಅಡೆತಡೆಗಳು ನಿರ್ವಿಘ್ನವಾಗಲಿದೆ.

ಮಿಥುನ ರಾಶಿ: ಸಹೋದರಿಯರ ಭೇಟಿಯಿಂದ ಮನಸಿಗೆ ನೆಮ್ಮದಿ. ಕುಟುಂಬದಲ್ಲಿ ಸಂತಸ. ಮಕ್ಕಳ ಅಭಿವೃದ್ಧಿಯಿಂದ ಪೋಷಕರಲ್ಲಿ ನೆಮ್ಮದಿ. ದೂರ ಪ್ರಯಾಣ ಸಾಧ್ಯತೆ.

ಕಟಕ ರಾಶಿ: ನೆನೆಗುದಿಗೆ ಬಿದ್ದ ಕಾರ್ಯ ಈಡೇರಲಿದೆ. ವ್ಯಾಪಾರಿಗಳಿಗೆ ಇಂದು ಲಾಭಾದ ದಿನ. ವಾಹನ ಖರೀದಿ ಯೋಗ. ಮನೆಯಲ್ಲಿನ ಸಾಕು ಪ್ರಾಣಿಗಳ ಆರೋಗ್ಯದ ಬಗ್ಗೆ ಎಚ್ಚರ ಅವಶ್ಯಕತೆ.

ಸಿಂಹ ರಾಶಿ: ಮನೆ ದೇವರ ಕಾರ್ಯದಿಂದ ಮಾನಸಿಕ ನೆಮ್ಮದಿ. ಕುಟುಂಬ ಕಾರ್ಯದಲ್ಲಿ ಕಿರಿಕಿರಿಯಾಗುವ ಸಾಧ್ಯತೆ ಹೆಚ್ಚು. ಯಾವುದೇ ಕೆಲಸಕ್ಕೂ ಮುನ್ನ ಗಣೇಶನ ಸ್ತುತಿಸಿ.

ಕನ್ಯಾ ರಾಶಿ : ಹಠಮಾರಿತನ ಧೋರಣೆಯಿಂದ ವೈಮನಸ್ಸು, ವಸ್ತುಗಳ ಕಳೆದುಹೋಗುವ ಸಾಧ್ಯತೆ ಹೆಚ್ಚು. ಈ ಬಗ್ಗೆ ಹೆಚ್ಚಿನ ಜಾಗರುಕತೆ ಅವಶ್ಯ. ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಉತ್ತಮ ದಿನ

ತುಲಾ ರಾಶಿ: ಮಕ್ಕಳ ದೂರಾಗುವಿಕೆಯಿಂದ ಬೇಸರ. ಏಕಾಗ್ರತೆ ಭಂಗದಿಂದ ಕೆಲಸ ಕಾರ್ಯದಲ್ಲಿ ತೊಡಕು. ಮನೆ ಕಟ್ಟುವ ವಿಚಾರದಲ್ಲಿ ಎಚ್ಚರ. ಸಾಲಗಾರರಿಂದ ಕಿರಿಕಿರಿಯಾಗುವ ಸಾಧ್ಯತೆ ಹೆಚ್ಚು.ವೃಶ್ಚಿಕ ರಾಶಿ: ಅಮ್ಮನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಮಾಜ ಸೇವೆಯಿಂದ ಉತ್ತಮ ಹೆಸರು. ಆರ್ಥಿಕ ವ್ಯವಹಾರದಲ್ಲಿ ಸಾಕಷ್ಟು ಲಾಭಾ. ಲೇವಾದೇವಿಗಾರರಿಗೆ ಹಣದ ಹರಿವು

ಧನು ರಾಶಿ: ಪ್ರವಾಸಕ್ಕೆ ಇಂದು ಉತ್ತಮ ದಿನ. ದೂರದ ಪ್ರಯಾಣದಿಂದ ಲಾಭಾವಾಗಲಿದೆ. ಜಮೀನು ವ್ಯವಹಾರದಿಂದ ಲಾಭಾ. ಹೊಸ ಮನೆ ಖರೀದಿ ಯೋಗ ಸಾಧ್ಯತೆ.

ಮಕರ ರಾಶಿ: ಚಿಕ್ಕಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ವೈದ್ಯ ವೃತ್ತಿಯಲ್ಲಿರುವವರಿಗೆ ಲಾಭಾ. ಅನಾವಶ್ಯಕ ಆತಂಕಗಳು ದೂರವಾಗಲಿದೆ.

ಕುಂಭ ರಾಶಿ:  ರಸ್ತೆ ಸಂಚಾರದಲ್ಲಿ ಎಚ್ಚರಿಕೆ ವಹಿಸಿ. ಕುಟುಂಬದೊಂದಿಗೆ ಇಂದು ಉತ್ತಮ ದಿನವಾಗಿರಲಿದೆ. ವಿವಾಜ ಭಾಗ್ಯ ಏರ್ಪಡಲಿದೆ. ಶುಕ್ರ ಮತ್ತು ಮಂಗಳ ಗ್ರಹಗಳು ಲಾಭಾ ತರಲಿದೆ.

ಮೀನಾ ರಾಶಿ:  ಆತುರದ ನಿರ್ಧಾರ ಬೇಡ. ಹಣಕಾಸಿನ ಮಾತುಕತೆ ಯಶಸ್ವಿಯಾಗಲಿದೆ. ಹೊಸ ಸ್ನೇಹಿತರಿಂದ ಸಂತಸ ಹೆಚ್ಚಲಿದೆ. ಕೆಲಸದಲ್ಲಿ ನಿಧಾನವಾದರೂ ಪ್ರಗತಿಯಾಗಲಿದೆ
Published by: Seema R
First published: April 18, 2021, 7:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories