HOME » NEWS » Lifestyle » DAILY HOROSCOPE 13 APRIL 2021 ASTROLOGICAL PREDICTIONS SESR

Astrology: ಹೊಸ ಸಂವತ್ಸರದ ಈ ದಿನ ಯಾವ ರಾಶಿ ಫಲ ಹೇಗಿದೆ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

ಹೊಸ ನಾಮ ಸವಂತ್ಸರದ ಯುಗಾದಿ ಇಂದು. ಈ ದಿನ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿ ಭವಿಷ್ಯದಲ್ಲಿ ಅನೇಕ ಮಾರ್ಪಡುಗಳಾಗುತ್ತವೆ. ರಾಶಿ ಚಕ್ರಕ್ಕೆ ಅನುಗುಣವಾಗಿ 12 ರಾಶಿಗಳಲ್ಲಿ ಯಾವ ರೀತಿಯ ಬದಲಾವಣೆಗಳು ಆಗುತ್ತವೆ ಎಂಬ ವಿವರ ಇಲ್ಲಿದೆ

news18-kannada
Updated:April 13, 2021, 7:29 AM IST
Astrology: ಹೊಸ ಸಂವತ್ಸರದ ಈ ದಿನ ಯಾವ ರಾಶಿ ಫಲ ಹೇಗಿದೆ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ
ಈ ದಿನದ 12 ರಾಶಿಗಳ ಭವಿಷ್ಯ
  • Share this:
ಮೇಷ ರಾಶಿ : ಯುಗಾದಿಯ ಈ ವರ್ಷ ಮೇಷ ರಾಶಿಯವರಿಗೆ ಶುಭವಾಗಲಿದೆ. ಸೃಜನಶೀಲತೆಯಿಂದಾಗಿ ನಿಮ್ಮ ಅಪೂರ್ಣ ಕಾರ್ಯ ಪೂರ್ಣಗೊಳ್ಳಲಿದೆ. ಸಂಬಂಧಿಕರೊಂದಿಗೆ ವ್ಯವಹರಿಸುವಾಗ ಎಚ್ಚರ. ಆರೋಗ್ಯದ ಬಗ್ಗೆ ಎಚ್ಚರ. ಹೂಡಿಕೆಯಿಂದ ಲಾಭಾ ಪಡೆಯುತ್ತೀರ. ಆರ್ಥಿಕ ಲಾಭಾ. ಆಧ್ಯಾತ್ಮಿಕ ಕಾರ್ಯದಲ್ಲಿ ಆಸಕ್ತಿ.

ವೃಷಭ ರಾಶಿ : ಕೆಲವು ನಿರ್ಧಾರಗಳಿಂದ ನಿಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರಲಿದೆ. ಹೊಸ ಶಕ್ತಿಯಿಂದ ಕಾರ್ಯ ಸಿದ್ಧಿ. ಬೆಲೆ ಬಾಳುವ ವಸ್ತು ಖರೀದಿ. ಶತ್ರುವಿನೊಂದಿಗೆ ಜಯ.

ಮಿಥುನ ರಾಶಿ : ಬುದ್ಧಿವಂತಿಕೆಯಿಂದ ವರ್ತಿಸಿದರೆ ಲಾಭಾ. ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆ ಎದುರಾಗಲಿದೆ. ಆರೋಗ್ಯದ ಕಾಳಜಿವಹಿಸಬೇಕು ವಿದೇಶದಿಂದ ಲಾಭಾ. ಉದ್ಯಮಿಗಳಿಗೆ ಯಶಸ್ಸು. ಮಾನಸಿಕ ಶಾಂತಿ ಸಿಗಲಿದೆ.

ಕಟಕ ರಾಶಿ : ಯಾವುದೇ ಕಾರ್ಯದಲ್ಲೂ ತಾಳ್ಮೆ ಇರಲಿ. ವಿಳಂಬ ಕಾರ್ಯದಿಂದ ಏಕಾಗ್ರತೆಗೆ ಅಡ್ಡಿ. ನೋವಿನಿಂದ ಕುಗ್ಗುವ ಸಾಧ್ಯತೆ. ವೈವಾಹಿಕ ಜೀವನದ ಬಗ್ಗೆ ಜಾಗರೂಕತೆ ಅವಶ್ಯ. ಮನಸಿನ ಗೊಂದಲ ನಿವಾರಣೆ. ಸಂತಾನವೃದ್ಧಿಯಾಗಲಿದೆ.

ಸಿಂಹ ರಾಶಿ: ಆಧ್ಯಾತ್ಮಿಕ ಆಸಕ್ತಿ ಹೆಚ್ಚಲಿದೆ. ಆರೋಗ್ಯ ಸಮಸ್ಯೆಯಿಂದ ಮುಕ್ತಿ. ವಿದೇಶ ಪ್ರವಾಸದ ಭಾಗ್ಯ. ಒಡಹುಟ್ಟಿದವರ ಮಧ್ಯೆ ಕಲಹ ಸಾಧ್ಯತೆ. ವಾಹನ ಸಂಚಾರದ ಬಗ್ಗೆ ಎಚ್ಚರ ಇರಲಿ

ಇದನ್ನು ಓದಿ: ಯುಗಾದಿ ಸಂಭ್ರಮ; ಹಬ್ಬದ ತಿಥಿ, ಆಚರಣೆ ಬಗ್ಗೆ ಇಲ್ಲಿದೆ ಮಾಹಿತಿ

ಕನ್ಯಾ ರಾಶಿ: ಹೊಸ ಶಕ್ತಿಯಿಂದ ಅಭಿವೃದ್ಧಿ. ಪರಿಚಯಸ್ಥರು ಹಾಗೂ ಸ್ನೇಹಿತರಿಂದ ಲಾಭಾ. ಕೆಲಸದಲ್ಲಿ ಅಭಿವೃದ್ಧಿ. ಪ್ರಯಾಣದ ವಿಷಯದಲ್ಲಿ ಜಾಗ್ರತೆ ವಹಿಸಿ. ದೈಹಿಕ ತೊಂದರೆ ಎದುರಾಗುವ ಸಾಧ್ಯತೆ.ತುಲಾ ರಾಶಿ: ಕುಟುಂಬ, ಹಣಕಾಸು ಮತ್ತು ಆರೋಗ್ಯದ ಬಗ್ಗೆ ಎಚ್ಚರ. ವಾಹನಗಳ ಚಾಲನೆ ವೇಳೆ ಜಾಗ್ರತೆ. ಸಕರಾತ್ಮಕ ಚಿಂತನೆಯಿಂದ ಲಾಭಾ.

ವೃಶ್ಚಿಕ ರಾಶಿ: ಕುಟುಂಬಕ್ಕೆ ಹೆಚ್ಚಿನ ಸಮಯ ನೀಡುತ್ತೀರಾ. ಹದಗೆಟ್ಟ ಸಂಬಂಧಗಳು ಸರಿಹೊಂದಲಿದೆ. ಮಾತುಕತೆಗಳ ಮೂಲಕ ಸಮಸ್ಯೆ ಬಗೆಹರಿಯಲಿದೆ

ಧನು ರಾಶಿ : ಸರ್ಕಾರಿ ಕೆಲಸದಲ್ಲಿ ಬಡ್ತಿ. ಯುವತಿಯರಿಗೆ ವಿವಾಹ ಯೋಗ. ಮಾನಸಿಕ ಸಮಸ್ಯೆ ಎದುರಾಗುವ ಸಾಧ್ಯತೆ. ಆರೋಗ್ಯಕ್ಕಾಗಿ ಹೆಚ್ಚು ವ್ಯಯ.

ಮಕರ ರಾಶಿ: ಶನಿ ಅಧಿಪತಿಯಿಂದಾಗಿ ಈ ವರ್ಷ ಸಕಾರಾತ್ಮಕ ಬದಲಾವಣೆ ನಿಮಗೆ ಆಗಲಿದೆ, ಕೆಲಸದ ಸ್ಥಳಗಳಲ್ಲಿ ನಿಮ್ಮ ಗೌರವ ಹೆಚ್ಚಲಿದೆ, ಕೋಪ ನಿಯಂತ್ರಿಸಿ. ಪೋಷಕರಿಗೆ ತೊಂದರೆಯಾಗುವ ಸಾಧ್ಯತೆ.

ಕುಂಭ ರಾಶಿ: ಶ್ರಮಕ್ಕೆ ತಕ್ಕ ಪ್ರತಿಫಲ. ದಾಂಪತ್ಯ ಜೀವನದ ಸವಾಲುಗಳು ನಿವಾರಣೆ. ಆರ್ಥಿಕ ಲಾಭಾ. ಸಂಬಂಧಿಕರಿಂದ ಬೆಂಬಲ

ಮೀನಾ ರಾಶಿ: ಮಾನಸಿಕ ಸಂತೃಪ್ತಿ. ನಿಮ್ಮ ಆಕಾಂಕ್ಷೆಗಳು ಪೂರ್ತಿಯಾಗಲಿದೆ. ಮನೆಗೆ ಹೊಸ ಸದಸ್ಯನ ಆಗಮನ. ಸಂಗಾತಿಗಳು ಬೇರ್ಪಡುವ ಸಾಧ್ಯತೆ
Published by: Seema R
First published: April 13, 2021, 7:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories