HOME » NEWS » Lifestyle » DAILY HOROSCOPE 06 JUNE 2021 ASTROLOGICAL PREDICTIONS MAK

Astrology: ಸೋಮವಾರದ ಈ ದಿನ ಯಾವ ರಾಶಿಗೆ ಯಾವ ಫಲ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿ ಭವಿಷ್ಯದಲ್ಲಿ ಅನೇಕ ಮಾರ್ಪಡುಗಳಾಗುತ್ತವೆ. ರಾಶಿ ಚಕ್ರಕ್ಕೆ ಅನುಗುಣವಾಗಿ 12 ರಾಶಿಗಳಲ್ಲಿ ಯಾವ ರೀತಿಯ ಬದಲಾವಣೆಗಳು ಆಗುತ್ತವೆ ಎಂಬ ವಿವರ ಇಲ್ಲಿದೆ.

news18-kannada
Updated:June 7, 2021, 6:14 AM IST
Astrology: ಸೋಮವಾರದ ಈ ದಿನ ಯಾವ ರಾಶಿಗೆ ಯಾವ ಫಲ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ
ಪ್ರಾತಿನಿಧಿಕ ಚಿತ್ರ.
  • Share this:
ಮೇಷ ರಾಶಿ: ಚಂಚಲತೆಯ ಮನಸ್ಥಿತಿ ಇರಲಿದೆ. ಹೊಸತನದ ತವಕದಿಂದ ಕೈಯಲ್ಲಿರುವ ಅದೃಷ್ಟ ಕಳೆದುಕೊಳ್ಳುವಿರಿ. ಸ್ನೇಹಿತರ ಆಯ್ಕೆ ಬಗ್ಗೆ ಎಚ್ಚರದಿಂದ ಇರಿ

ವೃಷಭ ರಾಶಿ: ಕೆಲಸದ ಬಗ್ಗೆ ಹೆಚ್ಚಿನ ಗಮನವಿರಲಿ. ವೃತ್ತ ಚಿಂತನೆ ವ್ಯರ್ಥವಾಗಲಿದೆ. ಆಲಸ್ಯದ ದಿನ ಇಂದಾಗಿರಲಿದೆ. ಹೆಚ್ಚಿನ ಸುತ್ತಾಟ ಸಾಧ್ಯತೆ

ಮಿಥುನ ರಾಶಿ: ಮನೆಯ ಕೆಲವು ಸಮಸ್ಯೆಯಿಂದ ಕಿರಿಕಿರಿಯಾಗಲಿದೆ. ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ. ಸೃಜನಶೀಲ ಕೆಲಸಗಳಿಂದ ಮನಸ್ಸಿಗೆ ಸಂತೋಷ

ಕಟಕ ರಾಶಿ: ಬಹುಕಾಲದ ಸಮಸ್ಯೆಗೆ ಪರಿಹಾರ ಸಿಗಲಿದೆ. ಹೂಡಿಕೆಗೆ ಸಕಾಲ. ಕೆಲಸ ಮತ್ತು ಮನೆಯಲ್ಲಿನ ಒತ್ತಡದಿಂದ ಮನಸ್ಸು ವಿಚಲಿತಗೊಳ್ಳಲಿದೆ. ವೈವಾಹಿಕ ಜೀವನ ಸುಖಕರವಾಗಲಿದೆ.

ಸಿಂಹ ರಾಶಿ: ಧನಾಗಮನ ಆಗಲಿದೆ. ಹಳೆಯ ನಿಂತ ಹಣ ಮತ್ತೆ ಮರಳಲಿದೆ. ಯಾವುದೋ ಹಣ ಇಂದು ಕೈ ಸೇರುವ ಶುಭ ದಿನ. ಹೆಚ್ಚಿನ ಧನಾಗಮನಕ್ಕೆ ಮನೆಯ ಉತ್ತರ ದಿಕ್ಕಿನಲ್ಲಿರುವ ಮಹಾಲಕ್ಷ್ಮೀ ದೇವಾಲಯದಲ್ಲಿ ಇಚ್ಛೆಗೆ ಅನುಸರವಾಗಿ ಬೆಲ್ಲ ಸಮರ್ಪಣೆ ಮಾಡಿ

ಕನ್ಯಾ ರಾಶಿ: ಕೌಟಂಬಿಕವಾಗಿರುವ ಕಲಹ ಉಂಟಾಗಲಿದೆ. ತಂದೆ -ತಾಯಿ, ಮಕ್ಕಳು, ಗಂಡ ಹೆಂಡತಿ ನಡುವೆ ಜಗಳವಾಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನಲೆ ಹೆಚ್ಚು ಮೌನ ವಹಿಸಿ. ಈ ದಿನದಲ್ಲಿ ಮನೆಯ ಸದಸ್ಯರು ಕುಲದೇವರಿಗೆ ಪ್ರಾರ್ಥನೆ ಸಲ್ಲಿಸಿ. ಅರಿಶಿನ ನೀರನ್ನು ಅರಳಿಮರಕ್ಕೆ ಅರ್ಪಿಸಿದರೆ ಒಳಿತು

ತುಲಾ ರಾಶಿ: ರೋಗ್ಯದಲ್ಲಿ ಏರುಪೇರಾಗಲಿದೆ. ಏನೇ ಅನಾರೋಗ್ಯದ ಸಮಸ್ಯೆ ಇದ್ದರೆ ಶಿವನ ದೇವಾಲಯದಲ್ಲಿ ರುದ್ರಾಭಿಷೇಕ ಮಾಡಿದಿ, ಭಸ್ಮವನ್ನು ಬಾಯಲ್ಲಿ ಹಾಕಿಕೊಳ್ಳಿವೃಶ್ಚಿಕ ರಾಶಿ: ಉದ್ಯೋಗದಲ್ಲಿ ಸಾಕಷ್ಟು ವ್ಯತ್ಯಾಯ. ಏನೇ ಸಮಸ್ಯೆ ಎದುರಾದರೂ ಉದ್ವೇಗ ಬೇಡ ಇನ್ನೊಂದು ಎರಡು ದಿನಗಳಲ್ಲಿ ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿದೆ.ಧನು ರಾಶಿ: ಈ ದಿನ ಸವಾಲಿನ ದಿನವಾಗಿರಲಿದೆ. ಹೃದಯ ಸಮಸ್ಯೆಯಂತಹ ನೋವುಗಳು ಕಾಣಿಸಿಕೊಳ್ಳಲಿದೆ. ಅನಿರೀಕ್ಷಿತ ಹಣ ಲಾಭಾ. ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿ.

ಮಕರ ರಾಶಿ: ಸುಖಾಸುಮ್ಮನೆ ಯೋಚನೆಗಳಿಂದ ಮಾನಸಿಕ ಗೊಂದಲಕ್ಕೆ ಒಳಗಾಗುವ ಸಾಧ್ಯತೆ ಇದೆ. ಸ್ನೇಹಿತರೊಂದಿಗೆ ವಾಗ್ವಾದ ಸಾಧ್ಯತೆ. ಮೋಸ ಹೋಗುವ ಸಾಧ್ಯತೆ ಹೆಚ್ಚು ಎಚ್ಚರದಿಂದ ವ್ಯವಹಾರ ನಡೆಸಿ.

ಕುಂಭ ರಾಶಿ: ಯಾವುದೇ ಕಾರ್ಯದಲ್ಲೂ ತಾಳ್ಮೆ ಇರಲಿ. ವಿಳಂಬ ಕಾರ್ಯದಿಂದ ಏಕಾಗ್ರತೆಗೆ ಅಡ್ಡಿ. ನೋವಿನಿಂದ ಕುಗ್ಗುವ ಸಾಧ್ಯತೆ. ವೈವಾಹಿಕ ಜೀವನದ ಬಗ್ಗೆ ಜಾಗರೂಕತೆ ಅವಶ್ಯ. ಮನಸಿನ ಗೊಂದಲ ನಿವಾರಣೆ. ಸಂತಾನವೃದ್ಧಿಯಾಗಲಿದೆ.

ಮೀನಾ ರಾಶಿ: ಕೆಲವು ನಿರ್ಧಾರಗಳಿಂದ ನಿಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರಲಿದೆ. ಹೊಸ ಶಕ್ತಿಯಿಂದ ಕಾರ್ಯ ಸಿದ್ಧಿ. ಬೆಲೆ ಬಾಳುವ ವಸ್ತು ಖರೀದಿ. ಶತ್ರುವಿನೊಂದಿಗೆ ಜಯ.
Published by: MAshok Kumar
First published: June 7, 2021, 6:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories