ನೀವು ಬಿಯರ್​ ಕುಡಿತೀರಾ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ

ಟೆಕ್ಸಾಸ್ ವಿಶ್ವವಿದ್ಯಾನಿಲಯ ಹಾಗೂ ಶಾಂಡೋಂಗ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಸಂಶೋಧಕರು 8 ವರ್ಷಗಳ ಕಾಲ 3,33,247 ಅಮೆರಿಕನ್ನರನ್ನು ಅಧ್ಯಯನ ನಡೆಸಿ ಈ ವರದಿ ನೀಡಿದ್ದಾರೆ.

news18
Updated:June 23, 2019, 11:16 AM IST
ನೀವು ಬಿಯರ್​ ಕುಡಿತೀರಾ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ
ಪ್ರಾತಿನಿಧಿಕ ಚಿತ್ರ
  • News18
  • Last Updated: June 23, 2019, 11:16 AM IST
  • Share this:
ನೀವು ವೈನ್​ ಅಥವಾ ಬಿಯರ್​ ಕುಡಿಯುತ್ತೀರಾ.? ವಾರಕ್ಕೆ ಎಷ್ಟು ಬಾರಿ ಕುಡಿತೀರಾ.? ಹಾಗಿದ್ದರೆ ಈ ಸುದ್ದಿಯನ್ನು ಓದಲೇ ಬೇಕು. ವೈನ್​ ಅಥವಾ ಬಿಯರ್​ ಹೃದಯ ಸಂಬಂಧಿ ಕಾಯಿಲೆಗೆ ರಾಮಬಾಣವೆಂದು ಅಧ್ಯಯನವೊಂದು ಹೇಳಿದೆ. ಹೃದಯ ಕಾಯಿಲೆಯಿಂದ ಸಂಭವಿಸಬಹುದಾದ ಅಕಾಲಿಕ ಮರಣವನ್ನು ತಪ್ಪಿಸುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ಟೆಕ್ಸಾಸ್ ವಿಶ್ವವಿದ್ಯಾನಿಲಯ ಹಾಗೂ ಶಾಂಡೋಂಗ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಸಂಶೋಧಕರು 8 ವರ್ಷಗಳ ಕಾಲ 3,33,247 ಅಮೆರಿಕನ್ನರ ಮೇಲೆ ಅಧ್ಯಯನ ನಡೆಸಿ ಈ ವರದಿ ನೀಡಿದ್ದಾರೆ.

ಕಡಿಮೆ ಪ್ರಮಾಣದಲ್ಲಿ ಬಿಯರ್ ಹಾಗೂ ವೈನ್ ಸೇವನೆ ಮಾಡುವುದು ಹೃದಯಕ್ಕೆ ಒಳ್ಳೆಯದು. ಇದನ್ನು ಕುಡಿಯುವುದರಿಂದ ಹೃದಯ ಸಂಬಂಧಿ ಖಾಯಿಲೆಯಿಂದ ಅಕಾಲಿಕ ಮರಣ ಹೊಂದುವ ಪ್ರಮಾಣ ಶೇಕಡಾ 22ರಷ್ಟು ಕಡಿಮೆ ಎಂದು ಸಂಶೋಧಕರು ಹೇಳಿದ್ದಾರೆ.

ಇದನ್ನೂ ಓದಿ: ನಮ್ಮ ಮತ್ತು ಆನಂದ್​ಸಿಂಗ್​ ನಡುವೆ ಯಾವುದೇ ದ್ವೇಷವಿಲ್ಲ..ಅದು ಗೊಂದಲ ಅಷ್ಟೇ: ಕಂಪ್ಲಿ ಗಣೇಶ್​

ಯಾವುದೇ ಪದಾರ್ಥವಾದರೂ ಅತಿಯಾದ ಸೇವನೆ ಮಾಡುವುದು ಅಪಾಯ. ಅಂತೆಯೇ, ವೈನ್ ಹಾಗೂ ಬಿಯರ್ ಅತಿಯಾಗಿ ಸೇವನೆ ಮಾಡುವುದು ಕೂಡ ಅಪಾಯವೇ ಸರಿ. ನಿಯಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಒಳ್ಳೆಯದು ಎಂದು ಸಂಶೋಧಕರು ಹೇಳಿದ್ದಾರೆ. ಅತಿ ಹೆಚ್ಚು ಪ್ರಮಾಣದಲ್ಲಿ ಸೇವನೆ ಮಾಡಿದರೆ ಕ್ಯಾನ್ಸರ್ ರೋಗ ಕಾಡುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದ್ದಾರೆ.

First published: June 2, 2019, 8:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading