ಮೆದುಳು (Brain) ನಮ್ಮ ದೇಹದ (Body) ಅತ್ಯಂತ ಮುಖ್ಯವಾದ ಭಾಗ (Main Part). ದೇಹದ ಅತ್ಯಂತ ಶಕ್ತಿಶಾಲಿ ಭಾಗವೆಂದು ಮೆದುಳನ್ನು ಕರೆಯುತ್ತಾರೆ. ಆದರೆ ತುಂಬಾ ಜನರು (People) ಯಾವತ್ತೂ ಮೆದುಳಿನ ಆರೋಗ್ಯ ಕಾಪಾಡುವತ್ತ ಹೆಚ್ಚಿನ ಕಾಳಜಿ (Care) ಮತ್ತು ಆಸಕ್ತಿ ವಹಿಸುವುದೇ ಇಲ್ಲ. ಹಾಗಾಗಿ ಮೆದುಳಿನ ಆರೋಗ್ಯ (Health) ಕಾಪಾಡಲು ಹೆಚ್ಚು ಗಮನ ಹರಿಸುವುದು ತುಂಬಾ ಮುಖ್ಯ. ಬೆಳಗ್ಗೆ ಬೇಗ ಏಳುವುದು, ಸೂರ್ಯನ ಎಳೆ ಬಿಸಿಲಿಗೆ ಮೈಯೊಡ್ಡುವುದು, ನಿತ್ಯವೂ ನಿಯಮಿತವಾಗಿ ಧ್ಯಾನ ಮಾಡುವುದು, ಆರೋಗ್ಯ ಹಾಗೂ ತೂಕ ನಿಯಂತ್ರಣಕ್ಕೆ ಯೋಗ ಮಾಡುವುದು, ಡಯಟ್ ಮಾಡುವುದು ನಿಮ್ಮ ಮೆದುಳಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.
ಮೆದುಳಿನ ಅರೋಗ್ಯ ಕಾಪಾಡುವುದು ಹೇಗೆ?
ಯಾರೆಲ್ಲಾ ಮೆದುಳಿನ ಆರೋಗ್ಯದತ್ತ ಗಮನ ಹರಿಸುತ್ತಿಲ್ಲವೋ ಅವರೆಲ್ಲಾ ಎಚ್ಚೆತ್ತುಕೊಳ್ಳಿ. ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ಮೆದುಳು ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಮೆದುಳಿನ ಆರೋಗ್ಯದತ್ತ ಕಾಳಜಿ ವಹಿಸಿ.
ಮನಸ್ಸು ಅಂದ್ರೆ ಮೆದುಳನ್ನು ಆರೋಗ್ಯವಾಗಿರಿಸಲು ಕೆಲವು ಅಭ್ಯಾಸಗಳಿವೆ. ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ಜನರ ಮೆದುಳಿನ ಶಕ್ತಿ ಮತ್ತು ಜ್ಞಾಪಕ ಶಕ್ತಿ ಸುಧಾರಿಸುತ್ತದೆ. ನೀವು ಸಹ ತೀಕ್ಷ್ಣ ಸ್ಮರಣೆ ಮತ್ತು ಆರೋಗ್ಯಕರ ಮನಸ್ಸು ಹೊಂದಲು ಬಯಸಿದರೆ ದಿನಚರಿಯಲ್ಲಿ ಈ ಆರೋಗ್ಯಕರ ಅಭ್ಯಾಸ ಸೇರಿಸಿ.
ಒಮೆಗಾ 3 ಆಹಾರ ಸೇವನೆ ಮಾಡಿ
ಒಮೆಗಾ 3 ಕೊಬ್ಬಿನಾಮ್ಲಗಳು ಮೆದುಳಿಗೆ ಪ್ರಯೋಜನಕಾರಿ. ಮೆದುಳಿಗೆ ಗೊಬ್ಬರದಂತೆ ಕೆಲಸ ಮಾಡುತ್ತವೆ. ಈ ಪೋಷಕಾಂಶಗಳು ಮೆದುಳಿನ ಬೆಳವಣಿಗೆ ಉತ್ತೇಜಿಸುತ್ತವೆ. ಜೊತೆಗೆ ಮೆದುಳಿನ ಸಾಮರ್ಥ್ಯ ಹೆಚ್ಚಿಸುತ್ತದೆ. ಒಮೆಗಾ 3 ಪದಾರ್ಥ ಸೇವನೆಯು ಮೆದುಳಿನ ಅಸ್ವಸ್ಥತೆಯನ್ನು ದೂರ ಮಾಡುತ್ತದೆ.
ಒಮೆಗಾ 3 ಸಮೃದ್ಧ ಆಹಾರಗಳು ಹೀಗಿವೆ. ಸಾಲ್ಮನ್ ಮೀನು, ಕಾಡ್ ಲಿವರ್ ಎಣ್ಣೆ, ಅಗಸೆ ಬೀಜ, ಚಿಯಾ ಬೀಜ, ವಾಲ್ನಟ್ಸ್, ಸೋಯಾಬೀನ್ ಮತ್ತು ಪೂರಕ ಸೇವನೆ ಮಾಡಿ.
ಬೆಳಗ್ಗೆ ಸಂಗೀತ ಕೇಳುವುದನ್ನು ರೂಢಿಸಿಕೊಳ್ಳಿ
ಭಕ್ತಿ ಗೀತೆ, ಮೆಲೊಡಿಯಸ್ ಮ್ಯೂಸಿಕ್ ಕೇಳುತ್ತಾ ನಿಮ್ಮ ದಿನವನ್ನು ಆರಂಭಿಸಿ. ಸಂಗೀತ ಕೇಳುತ್ತಾ ಬೆಳಗ್ಗೆ ಏಳುವುದು ದಿನವಿಡೀ ಕಡಿಮೆ ಒತ್ತಡ ಹೊಂದಿರಲು ಸಹಕಾರಿ. ಸಂಗೀತವು ಒತ್ತಡ ವಿರೋಧಿ ಗುಣಲಕ್ಷಣ ಹೊಂದಿದೆ.
ಇದು ಮೆದುಳಿನ ಆರೋಗ್ಯ ಸುಧಾರಿಸುತ್ತದೆ. ಯಾರು ಹೆಚ್ಚು ಸಂಗೀತ ಕೇಳುತ್ತಾರೋ ಅವರು ಇತರೆ ಜನರಿಗಿಂತ ವೇಗವಾಗಿ ಮತ್ತು ಉತ್ತಮವಾಗಿ ಕಲಿಯುತ್ತಾರೆ. ಮತ್ತು ದೀರ್ಘಕಾಲದವರೆಗೆ ವಿಷಯ ನೆನಪಿಟ್ಟುಕೊಳ್ಳುತ್ತಾರೆ.
ಸಂಸ್ಕರಿಸಿದ ಸಕ್ಕರೆ ಪದಾರ್ಥ ಸೇವನೆ ಮಾಡಬೇಡಿ
ಸಂಸ್ಕರಿಸಿದ ಸಕ್ಕರೆ ಸೇವನೆ ಮಾಡುವುದು ಸ್ಮರಣೆ ಕಡಿಮೆ ಮಾಡುತ್ತದೆ. ಮೆದುಳಿಗೆ ಆಳವಾದ ಹಾನಿ ಉಂಟು ಮಾಡುತ್ತದೆ. ಮರೆವಿಗೆ ಕಾರಣವಾಗಬಹುದು. ಹಾಗಾಗಿ ಸಂಸ್ಕರಿಸಿದ ಸಕ್ಕರೆ ಸೇವನೆಯ ಬದಲು ಬೆಲ್ಲ ಮತ್ತು ಜೇನುತುಪ್ಪ ಸೇವಿಸಿ.
ಸೂರ್ಯನ ಎಳೆಬಿಸಿಲು ಪಡೆಯಿರಿ
ಪ್ರತಿದಿನ ಸೂರ್ಯನ ಬೆಳಕನ್ನು ತೆಗೆದುಕೊಳ್ಳುವ ಜನರು ಹೆಚ್ಚು ಆರೋಗ್ಯವಾಗಿರುತ್ತಾರೆ. ಅವರ ಮೆದುಳಿನಲ್ಲಿ ಡೋಪಮೈನ್ ಹಾರ್ಮೋನ್ ಮಟ್ಟವು ಸರಿಯಾಗಿ ಉಳಿಯುತ್ತದೆ. ಈ ಹಾರ್ಮೋನ್ ಮನಸ್ಸನ್ನು ಶಾಂತವಾಗಿರಿಸುತ್ತದೆ.
ಮನಸ್ಥಿತಿಯನ್ನು ಸುಧಾರಿಸುತ್ತದೆ. ಹಾಗಾಗಿ ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ 5 ರಿಂದ 10 ನಿಮಿಷ ಸೂರ್ಯನ ಬೆಳಕನ್ನು ತೆಗೆದುಕೊಳ್ಳುವ ಅಭ್ಯಾಸ ಮಾಡಿ.
ಚೆನ್ನಾಗಿ ನಿದ್ದೆ ಮಾಡಿ
ಸಾಕಷ್ಟು ನಿದ್ರೆ ಮಾಡದೇ ಹೋದ್ರೆ ಮೆದುಳು ದಣಿಯುತ್ತದೆ. ಅದರ ಕಾರ್ಯ ಸಾಮರ್ಥ್ಯ ನಿಧಾನವಾಗುತ್ತದೆ. ಪ್ರತಿನಿತ್ಯ ಎಂಟು ಗಂಟೆಗಳ ಕಾಲ ನಿದ್ರಿಸಿ. ಆಳವಾದ ನಿದ್ದೆ ಮಾಡಿ. ಇದು ನಿಮ್ಮನ್ನು ಹೆಚ್ಚು ಆರೋಗ್ಯಕರವಾಗಿ ಮತ್ತು ಕ್ರಿಯಾಶೀಲವಾಗಿರಿಸುತ್ತದೆ. ಮಲಗುವ 4 ಗಂಟೆ ಮೊದಲು ಕೆಫಿನ್ ಸೇವನೆ ಮಾಡ್ಬೇಡಿ.
ಇದನ್ನೂ ಓದಿ: 30 ವಯಸ್ಸಿನ ನಂತರ ಈ ಆಹಾರಗಳನ್ನು ಸೇವಿಸುವುದರಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ!
ಧ್ಯಾನ ಮಾಡಿ
ಧ್ಯಾನ ಸದೃಢ ಆರೋಗ್ಯಕ್ಕೆ ಒಳ್ಳೆಯ ಅಭ್ಯಾಸ. ಮನಸ್ಸನ್ನು ಚುರುಕುಗೊಳಿಸಲು ದಿನವೂ ಧ್ಯಾನ ಮಾಡಿ. ವ್ಯಾಯಾಮ ಮಾಡಿ. ಇದು ದೇಹದಲ್ಲಿ ಆಮ್ಲಜನಕ ಮತ್ತು ಪೋಷಣೆ ಹೆಚ್ಚಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ