• ಹೋಂ
 • »
 • ನ್ಯೂಸ್
 • »
 • ಲೈಫ್ ಸ್ಟೈಲ್
 • »
 • Pain Killers: ನೋವು ನಿವಾರಕ ಮಾತ್ರೆಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದೀರಾ? ಅಡ್ಡ ಪರಿಣಾಮಗಳ ಬಗ್ಗೆ ಇರಲಿ ಎಚ್ಚರ!

Pain Killers: ನೋವು ನಿವಾರಕ ಮಾತ್ರೆಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದೀರಾ? ಅಡ್ಡ ಪರಿಣಾಮಗಳ ಬಗ್ಗೆ ಇರಲಿ ಎಚ್ಚರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

"70 ಸಾವಿರ ಮಹಿಳೆಯರ ಮೇಲೆ ನಡೆಸಿದ ಹೊಸ ಅಧ್ಯಯನದ ಪ್ರಕಾರ, ದಿನ ನಿತ್ಯ ನೋವು ನಿವಾರಕ ಮಾತ್ರೆ, ಔಷಧಗಳ ಬಳಕೆಯು ಮಹಿಳೆಯರಲ್ಲಿ ಕಿವಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸಿದೆ.”

 • Share this:

  ದೇಹದ ಭಾಗಗಳಲ್ಲಿ(Body Parts)  ಉಂಟಾಗುವ  ನೋವುಗಳಿಗೆ (Pain) ಅನೇಕರು ನೋವು ನಿವಾರಕ ಮಾತ್ರೆ (Pain killers Tablets) ಗಳನ್ನು ತೆಗೆದುಕೊಳ್ಳುವುದನ್ನು ರೂಢಿಸಿಕೊಂಡಿರುತ್ತಾರೆ. ಇನ್ನು ಕೆಲವರಂತೂ ಸ್ವಲ್ಪ ತಲೆನೋವು (Headache) ಬಂದರೂ ತಡೆಯಲು ಸಾಧ್ಯವಾಗದೇ ತಕ್ಷಣಕ್ಕೆ ನೋವು ನಿವಾರಕ ಮಾತ್ರೆ ನುಂಗಿ ಬಿಡುತ್ತಾರೆ. ನೀವು ನಿವಾರಕ ಮಾತ್ರೆಗಳನ್ನು ತೆ್ಗೆದುಕೊಳ್ಳುವುದರಿಂದ ನೋವು ಬಾಧಿಸದೇ, ತಕ್ಷಣಕ್ಕೆ ಆರಾಮ ನೀಡಬಹುದು. ಆದರೆ ಅತಿಯಾಗಿ ನೋವು ನಿವಾರಕ ಮಾತ್ರೆಗಳ ಸೇವನೆ ಸಾಕಷ್ಟು ಅಡ್ಡ ಪರಿಣಾಮಗಳನ್ನು (Side Effects) ಉಂಟು ಮಾಡುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನೋವು ನಿವಾರಕ ಮಾತ್ರೆಗಳ ಅತಿಯಾದ ಸೇವನೆ ಕೆಟ್ಟ ಪರಿಣಾಮ, ಪ್ರಭಾವ ಬೀರುತ್ತವೆ. ನೋವು ನಿವಾರಕದಿಂದ ಅಡ್ಡಪರಿಣಾಮದಿಂದಾಗಿ ಸಾಮಾನ್ಯ ಸಮಸ್ಯೆಗಿಂತಲೂ ತೀವ್ರ ಮಟ್ಟದ ಆರೋಗ್ಯ ಸಮಸ್ಯೆಯು (Problem) ಕಾಡಬಹುದು.


  ಆದ್ದರಿಂದ ನೀವು ನೋವು ನಿವಾರಕ ಮಾತ್ರೆಗಳನ್ನು ಅತಿಯಾಗಿ ಸೇವಿಸುತ್ತಿದ್ದಲ್ಲಿ, ಮೊದಲು ವೈದ್ಯರನ್ನು ಭೇಟಿ ಮಾಡಿ ಇದರ ಬಗ್ಗೆ ಚರ್ಚಿಸಿ, ಸೂಕ್ತ ಸಲಹೆ ಪಡೆದುಕೊಳ್ಳಿ. ನೋವು ನಿವಾರಕವು ನೋವು ಮತ್ತು ಉರಿಯೂತವನ್ನು ಆ ಕ್ಷಣಕ್ಕೆ ಕಡಿಮೆ ಮಾಡಿ ಸ್ವಲ್ಪ ಆರಾಮ ನೀಡುತ್ತದೆ. ಆದರೆ ನೋವುಗಳು ಆದಾಗ, ಗಾಯಗಳ ನೋವಿನಿಂದ ತಕ್ಷಣ ಪರಿಹಾರಕ್ಕಾಗಿ ನೋವು ನಿವಾರಕ ಮಾತ್ರೆ ಸೇವನೆಯ ಮೊದಲು ವೈದ್ಯರ ಭೇಟಿ ಮಾಡುವುದನ್ನು ಮರೆಯದಿರಿ. ಮತ್ತು ಕೆಲವು ನೋವು ನಿವಾರಕ ಔಷಧಿ, ಮಾತ್ರೆಗಳನ್ನು ನಿರ್ದಿಷ್ಟವಾದ ನೋವುಗಳಿಗೆ ಮಾತ್ರೆ ತೆಗೆದುಕೊಳ್ಳಬೇಕು. ಸಂಧಿವಾತದ ನೋವು, ದಂತ ಸಮಸ್ಯೆ, ಹೊಟ್ಟೆ ನೋವು ಮತ್ತು ಇತರ ಹಲವಾರು ವಿಧದ ನೋವುಗಳಿವೆ.


  ವಿವೇಚನೆಯಿಲ್ಲದೆ ನೋವು ನಿವಾರಕಗಳ ಸೇವನೆ ಆರೋಗ್ಯಕ್ಕೆ ಮಾರಕ


  ಕೆಲವೊಮ್ಮೆ ದೇಹದಲ್ಲಿ ಉಂಟಾಗುವ ನೋವುಗಳು ಅದಾಗಿಯೇ ಶಮನಗೊಳ್ಳುತ್ತವೆ. ಇಂತಹ ಸಾಮಾನ್ಯ ನೋವಿಗೆ ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುವುದನ್ನು ನಿರ್ಲಕ್ಷಿಸಿ. ವೈದ್ಯರ ಸಲಹೆಯಿಲ್ಲದೆ ನೋವು ನಿವಾರಕ ಮಾತ್ರೆಗಳನ್ನು ವಿವೇಚನೆಯಿಲ್ಲದೆ ಸೇವಿಸುವುದು ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದು. “70 ಸಾವಿರ ಮಹಿಳೆಯರ ಮೇಲೆ ನಡೆಸಿದ ಹೊಸ ಅಧ್ಯಯನದ ಪ್ರಕಾರ, ದಿನ ನಿತ್ಯ ನೋವು ನಿವಾರಕ ಮಾತ್ರೆ, ಔಷಧಗಳ ಬಳಕೆಯು ಮಹಿಳೆಯರಲ್ಲಿ ಕಿವಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.” ಕಿವಿ ನೋವಿದ್ದರೆ ಅದನ್ನು ಉತ್ತೇಜಿಸುತ್ತದೆ.


  ಇದನ್ನೂ ಓದಿ: ಹೊಕ್ಕಳಲ್ಲಿ ಕೊಳೆ ತುಂಬಿಕೊಂಡಿದ್ದರೆ ನಿಜಕ್ಕೂ ಡೇಂಜರ್​.. ಕೂಡಲೇ ಈ ರೀತಿ ಕ್ಲೀನ್​ ಮಾಡಿ


  ನೋವು ನಿವಾರಕ ಮಾತ್ರೆಯ ಅಡ್ಡ ಪರಿಣಾಮ


  ಯುಎಸ್‌ನ ಬರ್ಮಿಂಗ್‌ಹ್ಯಾಮ್ ಮತ್ತು ಮಹಿಳಾ ಆಸ್ಪತ್ರೆಯ ಸಂಶೋಧಕರು ನಡೆಸಿದ ಒಂದು ಅಧ್ಯಯನದಲ್ಲಿ, ನೋವು ನಿವಾರಕ ಮಾತ್ರೆ, ಔಷಧಗಳನ್ನು ವಿವೇಚನೆಯಿಲ್ಲದೆ ತೆಗೆದುಕೊಳ್ಳುವ ಮಹಿಳೆಯರು ಸಾಮಾನ್ಯಕ್ಕಿಂತ 20 ಪ್ರತಿಶತದಷ್ಟು ಟಿನ್ನಿಟಸ್‌ ( ಕಾಯಿಲೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಅಧ್ಯಯನದ ಪ್ರಮುಖ ಲೇಖಕ ಡಾ. ಶರೋನ್ ಕರ್ಹಾನ್ ಪ್ರಕಾರ, 'ನಮ್ಮ ಅಧ್ಯಯನವು ನೋವು ನಿವಾರಕ ಮಾತ್ರೆ, ಔಷಧಗಳನ್ನು ಬಳಸುವ ಜನರು ಟಿನ್ನಿಟಸ್‌ ನ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಸೂಚಿಸುತ್ತದೆ' ಎಂದು ತಿಳಿಸಿದ್ದಾರೆ. ಈ ಅಧ್ಯಯನವನ್ನು ಜರ್ನಲ್ ಆಫ್ ಜನರಲ್ ಇಂಟರ್ನಲ್ ಮೆಡಿಸಿನ್‌ನಲ್ಲಿ ಪ್ರಕಟಿಸಲಾಗಿದೆ.


   ನೋವು ನಿವಾರಕ ಮಾತ್ರೆಯಿಂದ ಟಿನ್ನಿಟಸ್ ಅಪಾಯ


  ಇದು ಅಡ್ವಿಲ್ ಮತ್ತು ಟೈಲೆನಾಲ್ ನಂತಹ ನೋವು ನಿವಾರಕ ಮಾತ್ರೆ, ಔಷಧಗಳನ್ನು ಪಟ್ಟಿ ಮಾಡಿದೆ. ಜೊತೆಗೆ ಎನ್ಎಸ್ಎಐಡಿಗಳು ಮತ್ತು ಅಲೆವ್ನಂತಹ ಉರಿಯೂತದ ಔಷಧಗಳನ್ನು ಪಟ್ಟಿ ಮಾಡಿದೆ. ಅಧ್ಯಯನದ ಪ್ರಕಾರ, ವಾರಕ್ಕೆ ಆರು ಅಥವಾ ಏಳು ಬಾರಿ ಆಸ್ಪಿರಿನ್ ಪ್ರಮಾಣದ ಸೇವನೆ ಟಿನ್ನಿಟಸ್ ಅಪಾಯವನ್ನು ಶೇ. 20 ರಷ್ಟು ಹೆಚ್ಚಿಸಲು ಕಾರಣವಾಗುತ್ತದೆ. ಇನ್ನು ನೋವು ನಿವಾರಕ ಔಷಧಿಗಳನ್ನು ನುಂಗದಿರುವುದು ಅಥವಾ ಕಡಿಮೆ ಮಾಡುವುದರಿಂದ  ಟಿನ್ನಿಟಸ್ ರೋಗಲಕ್ಷಣಗಳನ್ನು ಕಡಿಮೆ ಮಾಡಬಹುದಾ..? ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ ಎಂದು ತಜ್ಞರು ಹೇಳಿದ್ದಾರೆ.


  ನೋವು ನಿವಾರಕಗಳ ನಿಯಮಿತ ಬಳಕೆ


  ಈ ಅಧ್ಯಯನವು ನೋವು ನಿವಾರಕಗಳ ದೈನಂದಿನ ಅಥವಾ ಆಗಾಗಾ ಬಳಕೆ ಮಾಡುವ ಬಗ್ಗೆ ಮಾತ್ರ ಹೇಳುತ್ತಿದೆ. ನೋವು ನಿವಾರಕಗಳನ್ನು ನಿಯಮಿತವಾಗಿ ಬಳಸುವುದರಿಂದ ಯಾವುದೇ ತೊಂದರೆ ಇಲ್ಲ. 2018 ರಲ್ಲಿ ಬ್ರಿಟಿಷ್ ಟಿನ್ನಿಟಸ್ ಅಸೋಸಿಯೇಷನ್‌ನ ಅಂದಾಜಿನ ಪ್ರಕಾರ, ಯುಕೆಯಲ್ಲಿ ಸುಮಾರು 6 ಮಿಲಿಯನ್ ಜನರು ಕಿವಿಗೆ ಸಂಬಂಧಿಸಿದ ಟಿನ್ನಿಟಸ್ ಸಮಸ್ಯೆಗೆ ಬಲಿಯಾಗಿದ್ದಾರೆ. ಬಹುಶಃ ಈ ಸಂಖ್ಯೆ ಈಗ ಹೆಚ್ಚಾಗಿದೆ. UK ಜನಸಂಖ್ಯೆಯ ಸುಮಾರು 10 ಪ್ರತಿಶತದಷ್ಟು ಜನರು ಇದರಿಂದ ಪ್ರಭಾವಿತರಾಗಿದ್ದಾರೆ.


  ಇದನ್ನೂ ಓದಿ: ಈ ಗುಣಗಳಿರುವ ಹುಡುಗರು ಅಂದ್ರೆ ಹುಡುಗಿಯರಿಗೆ ಇಷ್ಟವಂತೆ


  ಟಿನ್ನಿಟಸ್ ಎಂದರೇನು?


  ಕಿವಿಗೆ ಸಂಬಂಧಿಸಿದ ಟಿನ್ನಿಟಸ್ ಸಮಸ್ಯೆಯನ್ನು ಯಾವುದೇ ಒಂದು ನಿರ್ದಿಷ್ಟ ವಿಷಯಕ್ಕೆ ಜೋಡಿಸಲಾಗುವುದಿಲ್ಲ. ಕಿವಿಯಲ್ಲಿ ರಿಂಗ್ ಆದಂತೆ, ಗುಯ್ ಎನ್ನುವ  ಶಬ್ಧ ಕೇಳಿಸುವುದು, ಹಮ್ಮಿಂಗ್, ಥ್ರೋಬಿಂಗ್ ಅಥವಾ ಝೇಂಕಾರದ ವಿವಿಧ ರೀತಿಯ ಶಬ್ದಗಳ ಉತ್ಪತ್ತಿಯಾಗಿ ಕೇಳಿಸುವುದನ್ನು ಟಿನ್ನಿಟಸ್ ಎಂದು ಕರೆಯಲಾಗುತ್ತದೆ.

  Published by:renukadariyannavar
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು