Health Tips: ಸೀತಾಫಲ ಹಣ್ಣಿನ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯಕಾರಿ ಪ್ರಯೋಜನಗಳು ಇವೆ ಗೊತ್ತಾ..?

Custard apple: ಸೀತಾಫಲಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ಆವರಿಸುವ ಸಾಧ್ಯತೆಯನ್ನು ದೂರ ಮಾಡಬಹುದು. ಈ ಹಣ್ಣಿನಲ್ಲಿ ಪೊಟ್ಯಾಶಿಯಂ ಹಾಗೂ ಮೆಗ್ನೀಶಿಯಂ ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತವೆ

ಸೀತಾಫಲ

ಸೀತಾಫಲ

  • Share this:
    ಮಾರುಕಟ್ಟೆಯಲ್ಲಿ(Market) ಹಣ್ಣುಗಳು(Fruits) ಆಯಾ ಋತುಮಾನಕ್ಕನುಗುಣವಾಗಿ ಲಭಿಸುತ್ತವೆ. ಕೆಲವು ವರ್ಷಪೂರ್ತೀ ಲಭಿಸಿದರೆ ಕೆಲವು ಕೊಂಚಕಾಲ ಮಾತ್ರವೇ ಇರುತ್ತವೆ. ಕೆಲವು ಹಣ್ಣುಗಳು ವರ್ಷದ ಯಾವುದೇ ಸಮಯದಲ್ಲಿ ಲಭ್ಯವಿದ್ದರೂ ಇದರ ಬೆಲೆ ಮಾತ್ರ ಕಡಿಮೆಯಾಗುವುದಿಲ್ಲ. ಸೀತಾಫಲ (Custard apple) ಎಲ್ಲರಿಗೂ ಚಿರಪರಿಚಿತ ಹಣ್ಣು. ಇದು ತಿನ್ನಲಿಕ್ಕಷ್ಟೆ ರುಚಿಯಲ್ಲ, ನಾನಾ ಕಾಯಿಲೆಗಳಿಗೆ (Diseases) ರಾಮಬಾಣವೂ ಹೌದು. ಈ ಹಣ್ಣನ್ನು ಬೆಲೆಯ ತಕ್ಕಡಿಯಲ್ಲಿ ತೂಗದೇ ಪೋಷಕಾಂಶಗಳ ತಕ್ಕಡಿಯಲ್ಲಿ ತೂಗಿದರೆ ಇದು ಭಾರೀ ಬೆಲೆಯುಳ್ಳ ಫಲ (Costly Fruit) ಎಂಬುದೇ ಇದರ ವಿಶೇಷತೆ. ಸೀತಾಫಲ ಹಣ್ಣಿನ ತಿರುಳಿನಿಂದ ಹಿಡಿದು, ಎಲೆ, ಬೀಜಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಸೀತಾಫಲ ಹಣ್ಣಿಗೆ ಕೆಲವು ರೀತಿಯ ದೀರ್ಘಕಾಲದ ಕಾಯಿಲೆಗಳನ್ನು ಕಡಿಮೆ ಮಾಡುವ ಶಕ್ತಿ ಇದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸೀತಾಫಲವು ಜೀವರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ. ಅಮೃತ ಹಣ್ಣನ್ನು ಹೋಲುವ ಸೀತಾಫಲವನ್ನು ತಿನ್ನುವುದರಿಂದ ಬಾಯಿಯಲ್ಲಿ ಜೀರ್ಣರಸ ಹೆಚ್ಚುತ್ತದೆ. ಆ ಮೂಲಕ ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ.

    1) ಕ್ಯಾನ್ಸರ್‌ ನಿಯಂತ್ರಣ: ಸೀತಾಫಲದಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟುಗಳಿದ್ದು ದೇಹಕ್ಕೆ ಎರಗುವ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳಿಂದ ರಕ್ಷಿಸುವ ಜೊತೆಗೆ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಅಲ್ಲದೇ ಇದರಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಸಹಾ ಉತ್ತಮ ಪ್ರಮಾಣದಲ್ಲಿದ್ದು ಹೃದಯದ ಕ್ಷಮತೆ ಹೆಚ್ಚಿಸಿ ಹೃದಯಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ.

    ಇದನ್ನೂ ಓದಿ: ಈ 6 ಸೊಪ್ಪುಗಳಲ್ಲಿದೆ ನಿಮ್ಮ ಆರೋಗ್ಯವನ್ನು ಕಾಪಾಡುವ ಶಕ್ತಿ

    2) ಸೌಂದರ್ಯ ಹೆಚ್ಚಳ: ಸೀತಾಫಲದ ನಿಯಮಿತ ಸೇವನೆಯಿಂದ ತ್ವಚೆಯ ಸೆಳೆತ ಹೆಚ್ಚುತ್ತದೆ ಹಾಗೂ ಕಾಂತಿಯುಕ್ತವಾಗುತ್ತದೆ. ಪರಿಣಾಮವಾಗಿ ನೆರಿಗೆ ಮೂಡುವ ಮತ್ತು ಕಲೆಗಳು ಬೀಳುವ ಸಾಧ್ಯತೆ ಉಡುಗುತ್ತದೆ. ಇದಕ್ಕೆಲ್ಲಾ ಇದರಲ್ಲಿರುವ ವಿಟಮಿನ್ ಸಿ ಕಾರಣ. ಇದು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುವ ಮೂಲಕ ಆರೋಗ್ಯಕರ ಮತ್ತು ಕಾಂತಿಯುಕ್ತ ಹಾಗೂ ಕಲೆಯಿಲ್ಲದ ತ್ವಚೆಯನ್ನು ಪಡೆಯಲು ನೆರವಾಗುತ್ತದೆ.

    3) ಮಲಬದ್ದತೆ ಸಮಸ್ಯೆ ನಿವಾರಣೆ: ಸೀತಾಫಲ ಹಣ್ಣುಗಳಲ್ಲಿ ತಾಮ್ರದ ಅಂಶ ಮತ್ತು ನಾರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ ಎಂದು ಹೇಳುತ್ತಾರೆ. ಆರೋಗ್ಯಕರವಾದ ಜೀರ್ಣಾಂಗ ವ್ಯವಸ್ಥೆಯಲ್ಲಿ ಇದರ ಪಾತ್ರ ತುಂಬಾ ದೊಡ್ಡದು. ಮುಖ್ಯವಾಗಿ ನಾರಿನ ಅಂಶ ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಮಲಬದ್ಧತೆ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತದೆ.

    4) ದೈಹಿಕ ಆಯಾಸ ದೂರ ಮಾಡಲು: ಸೀತಾಫಲ ಹಣ್ಣು ದೇಹದಲ್ಲಿ ಹೆಚ್ಚಿನ ಶಕ್ತಿಯನ್ನು ಒಮ್ಮೆಲೆ ಉಂಟು ಮಾಡುವ ಗುಣ ಲಕ್ಷಣವನ್ನು ಪಡೆದುಕೊಂಡಿದೆ. ಹಾಗಾಗಿ ಯಾವುದೇ ಸಮಯದಲ್ಲಿ ಒಂದು ವೇಳೆ ನೀವು ಹೆಚ್ಚು ಸುಸ್ತು ಮತ್ತು ಆಯಾಸ ಕಂಡುಕೊಂಡ ಸಮಯದಲ್ಲಿ ಸೀತಾಫಲ ಹಣ್ಣನ್ನು ಸೇವನೆ ಮಾಡುವುದರಿಂದ ಅದರಲ್ಲಿರುವ ಪೊಟ್ಯಾಶಿಯಂ ಅಂಶ ಮಾಂಸಖಂಡಗಳ ದುರ್ಬಲತೆಯನ್ನು ಹೋಗಲಾಡಿಸಿ ತನ್ನಲ್ಲಿರುವ ಉತ್ತಮ ಪ್ರಮಾಣದ ಗ್ಲೈಸೆಮಿಕ್ ಸೂಚ್ಯಂಕದಿಂದ ದೇಹಕ್ಕೆ ಶಕ್ತಿಯನ್ನು ಒದಗಿಸಿ ಇಡೀ ದೇಹದ ತುಂಬಾ ಸರಾಗವಾದ ರಕ್ತಸಂಚಾರವನ್ನು ಉಂಟುಮಾಡುತ್ತದೆ. ಇದರಿಂದ ಇಡೀ ದೇಹ ಹೊಸ ಹುರುಪು ಮತ್ತು ಚೈತನ್ಯದಿಂದ ಕೂಡಿರುತ್ತದೆ.

    5) ಮಧುಮೇಹ ಸಮಸ್ಯೆಗೆ ಪರಿಹಾರ: ಸೀತಾಫಲಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ಆವರಿಸುವ ಸಾಧ್ಯತೆಯನ್ನು ದೂರ ಮಾಡಬಹುದು. ಈ ಹಣ್ಣಿನಲ್ಲಿ ಪೊಟ್ಯಾಶಿಯಂ ಹಾಗೂ ಮೆಗ್ನೀಶಿಯಂ ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತವೆ. ಹಾಗೆಯೇ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸುತ್ತವೆ. ಇದು ಮಧುಮೇಹದ ಸಮಸ್ಯೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

    6) ಶ್ವಾಸನಾಳದ ಉರಿಯೂತ ಕಡಿಮೆಯಾಗುತ್ತದೆ: ವಿಟಮಿನ್ ಬಿ 6 ಅಧಿಕವಾಗಿರುವ ಸೀತಾಫಲವನ್ನು ತಿನ್ನುವುದರಿಂದ ಶ್ವಾಸನಾಳದ ಉರಿಯೂತವನ್ನು ಕಡಿಮೆ ಮಾಡಬಹುದು. ಅಲ್ಲದೆ ಸೀತಾಫಲವು ಆಸ್ತಮಾ ಕಾಯಿಲೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಮೆಗ್ನೀಸಿಯಮ್ ಸಮೃದ್ಧವಾಗಿರುವ ಸೀತಾಫಲವು ಹೃದಯಾಘಾತದಿಂದ ರಕ್ಷಿಸುತ್ತದೆ.

    ಇದನ್ನೂ ಓದಿ: ಬಾಯಿಗೆ ಕಹಿ, ಆರೋಗ್ಯಕ್ಕೆ ಸಿಹಿಯಾಗಿರುವ ಹಾಗಲಕಾಯಿಯಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?

    7) ಕ್ಯಾಲೋರಿ ಹೆಚ್ಚಿಸಿಕೊಳ್ಳಲು ಸಹಾಯ: ತೂಕ ಹೆಚ್ಚಿಸಿಕೊಳ್ಳಬಯಸುವವರು ಸೀತಾಫಲ ರಸದಲ್ಲಿ ಜೇನುತುಪ್ಪ ಮತ್ತು ಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ತಮ್ಮ ಕ್ಯಾಲೊರಿಗಳನ್ನು ಹೆಚ್ಚಿಸಿಕೊಳ್ಳಬಹುದು. ಅತಿಯಾದ ತೂಕ ಮತ್ತು ಅತಿಯಾದ ತೂಕ ಇಳಿಕೆ ಎರಡು ದೇಹಕ್ಕೆ ಒಳ್ಳೆಯದಲ್ಲ. ಹೀಗಾಗಿ ತುಂಬಾ ತೆಳ್ಳಗಿರುವವರು ಸೀತಾಫಲ ಸೇವಿಸಿ.
    Published by:ranjumbkgowda1 ranjumbkgowda1
    First published: