• Home
  • »
  • News
  • »
  • lifestyle
  • »
  • Curd Rice: ನಟಿ ಮಲೈಕಾಗೆ ಮೊಸರನ್ನ ಅಂದ್ರೆ ತುಂಬಾ ಇಷ್ಟವಂತೆ, ಇದರ ಪ್ರಯೋಜನಗಳನ್ನೂ ಹೇಳಿದ್ದಾರೆ ನೋಡಿ

Curd Rice: ನಟಿ ಮಲೈಕಾಗೆ ಮೊಸರನ್ನ ಅಂದ್ರೆ ತುಂಬಾ ಇಷ್ಟವಂತೆ, ಇದರ ಪ್ರಯೋಜನಗಳನ್ನೂ ಹೇಳಿದ್ದಾರೆ ನೋಡಿ

ಮೊಸರನ್ನ

ಮೊಸರನ್ನ

ಬೇಸಿಗೆಯ ಶಾಖವನ್ನು ಸೋಲಿಸಲು ಉತ್ತಮ ಆಹಾರಗಳಲ್ಲಿ ಮೊಸರು ಒಂದಾಗಿದೆ, ಇದನ್ನು ಅನೇಕ ನಟ ನಟಿಯರು ಸಹ ಇಷ್ಟ ಪಡುತ್ತಾರೆ ಮತ್ತು ಶಿಫಾರಸ್ಸು ಮಾಡುತ್ತಾರೆ. ಬಾಲಿವುಡ್ ನಟಿ ಮಲೈಕಾ ಅರೋರಾ ಸಹ ಮೊಸರನ್ನವನ್ನು ತುಂಬಾನೇ ಇಷ್ಟ ಪಡುತ್ತಾರಂತೆ.

  • Share this:

ಸಾಮಾನ್ಯವಾಗಿ ನಾವು ಬೇಸಿಗೆಯಲ್ಲಿ (Summer) ನಮ್ಮ ದೇಹವನ್ನು ತಂಪಾಗಿರಿಸಿಕೊಳ್ಳಲು ನಮ್ಮ ಊಟದಲ್ಲಿ ಮೊಸರನ್ನು (Curd) ಹೆಚ್ಚಾಗಿ ಬಳಸುತ್ತೇವೆ. ಹೀಗೆ ಮಾಡುವುದರಿಂದ ಈ ಬಿಸಿಲ ತಾಪಮಾನದಿಂದ (Temperature) ನಮ್ಮ ದೇಹವನ್ನು ತಂಪಾಗಿರಿಸಿಕೊಳ್ಳಬಹುದು ಎಂದು ಅನೇಕರು ನಂಬುತ್ತಾರೆ. ಈ ಸುಡುವ ಬಿಸಿಲಿನ ವಾತಾವರಣದಲ್ಲಿ ದೇಹವನ್ನು ತಂಪಾಗಿಸುವ ಮತ್ತು ಆರೋಗ್ಯ ಪ್ರಯೋಜನಗಳಿಂದ (Health Benefits) ತುಂಬಿರುವ ಆಹಾರಗಳನ್ನು ಸೇವಿಸುವುದು ಬೇಸಿಗೆಯಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಪ್ರಮುಖ ಮಾರ್ಗಗಳಾಗಿವೆ. ಬೇಸಿಗೆಯ ಶಾಖವನ್ನು ಸೋಲಿಸಲು ಉತ್ತಮ ಆಹಾರಗಳಲ್ಲಿ (Food) ಮೊಸರು ಒಂದಾಗಿದೆ, ಇದನ್ನು ಅನೇಕ ನಟ ನಟಿಯರು ಸಹ ಇಷ್ಟ ಪಡುತ್ತಾರೆ ಮತ್ತು ಶಿಫಾರಸ್ಸು ಮಾಡುತ್ತಾರೆ. ಬಾಲಿವುಡ್ ನಟಿ ಮಲೈಕಾ ಅರೋರಾ ಸಹ ಮೊಸರನ್ನವನ್ನು ತುಂಬಾನೇ ಇಷ್ಟ ಪಡುತ್ತಾರಂತೆ.


ಅವರಂತೆ ನೀವು ಸಹ ಮೊಸರನ್ನವನ್ನು ಈ ಬೇಸಿಗೆಯಲ್ಲಿ ಸೇವಿಸಬಹುದು. 48 ವರ್ಷದ ಅವರು ಇತ್ತೀಚೆಗೆ ತಮ್ಮ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಸ್ಟೋರೀಸ್ ನಲ್ಲಿ ತಮ್ಮ ಊಟದ ತಟ್ಟೆಯ ಒಂದು ಫೋಟೋವನ್ನು ಹಂಚಿ ಕೊಂಡಿದ್ದಾರೆ.


ಉತ್ತಮ ಆರೋಗ್ಯಕ್ಕೆ ಮೊಸರನ್ನ
"ಉತ್ತಮ ಆರೋಗ್ಯಕ್ಕೆ ಮೊಸರನ್ನ" ಎಂದು ಅವರು ಆ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಮೊಸರನ್ನವು ದೇಹದ ಮೇಲೆ ತಂಪಾಗಿಸುವ ಪರಿಣಾಮವನ್ನು ಬೀರುತ್ತದೆ ಮತ್ತು ವಿಶೇಷವಾಗಿ ಬೇಸಿಗೆಯಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಗರಿಷ್ಠ ಪ್ರಯೋಜನಗಳಿಗಾಗಿ ಇದನ್ನು ಮಧ್ಯಾಹ್ನದ ಹೊತ್ತಿನಲ್ಲಿ ಊಟಕ್ಕೆ ಸೇವಿಸಲು ತಜ್ಞರು ಸಲಹೆ ನೀಡುತ್ತಾರೆ.


ಇದನ್ನೂ ಓದಿ:  Health Tips: ಹೆಸರೇ ಹೇಳುವಂತೆ ಸರ್ವರೋಗಕ್ಕೂ ಅಮೃತ ಈ ಅಮೃತಬಳ್ಳಿ! ಯಾವೆಲ್ಲಾ ರೋಗಕ್ಕೆ ಇದು ಬೆಸ್ಟ್?


ನೀವು ಮೊಸರನ್ನು ಏಕೆ ಸೇವಿಸಬೇಕು ಎಂದು ನೀವು ಇನ್ನೂ ಯೋಚಿಸುತ್ತಿದ್ದರೆ, ಆಹಾರ ಚಿಕಿತ್ಸಕಿ ಡಾ.ರಿಯಾ ಬ್ಯಾನರ್ಜಿ ಅಂಕೋಲಾ ಅವರು ತಮ್ಮ ಸಾಮಾಜಿಕ ಮಾಧ್ಯಮವಾದ ಇನ್ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಮೊಸರು ಹೇಗೆ ಆರೋಗ್ಯಕ್ಕೆ ಪ್ರಯೋಜನ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


ಮೊಸರು ಜೀರ್ಣಕ್ರಿಯೆಗೆ ಒಳ್ಳೆಯದು
ಡಾ. ರಿಯಾ ಅವರ ಪ್ರಕಾರ, ಮೊಸರು ಜೀರ್ಣಕ್ರಿಯೆಗೆ ಒಳ್ಳೆಯದು. "ಪ್ರೋಬಯಾಟಿಕ್ ಹಾಲಿನ ಉತ್ಪನ್ನವಾಗಿರುವುದರಿಂದ, ಮೊಸರು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಉರಿಯೂತದ ಅಥವಾ ಹೊಟ್ಟೆಯುಬ್ಬರವನ್ನು ಶಾಂತಗೊಳಿಸುತ್ತದೆ. ಮೊಸರು ಲ್ಯಾಕ್ಟಿಕ್ ಆಮ್ಲದಂತಹ ಸಾವಯವ ಆಮ್ಲಗಳಿಂದ ತುಂಬಿದೆ, ಇದು ಪೋಷಕಾಂಶಗಳು ಮತ್ತು ಸೂಕ್ಷ್ಮ ಖನಿಜಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಸ್ಟಿರಾಯ್ಡ್ ಹಾರ್ಮೋನುಗಳು ಅಥವಾ ಕಾರ್ಟಿಸೋಲ್ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ, ಆ ಮೂಲಕ ಬೊಜ್ಜಿನ ಅಪಾಯವನ್ನು ನಿಯಂತ್ರಿಸುತ್ತದೆ" ಎಂದು ಅವರು ಹೇಳುತ್ತಾರೆ.


ಪ್ರೋಟೀನ್ ನ ಉತ್ತಮ ಮೂಲ
ಅಷ್ಟೇ ಅಲ್ಲದೇ ಇದು "ಪ್ರೋಟೀನ್ ನ ಉತ್ತಮ ಮೂಲವಾಗಿದೆ". "ಇದು ತೂಕ ಇಳಿಕೆಯ ನಿರ್ಣಾಯಕ ಭಾಗವಾಗಿದೆ. ಪ್ರೋಟೀನ್ ಸಂತೃಪ್ತಿಯನ್ನು ಪ್ರಚೋದಿಸುತ್ತದೆ ಮತ್ತು ಹಸಿವಿನ ಹಾರ್ಮೋನ್ ಗ್ರೆಲಿನ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ಹಸಿವಿನ ಅತಿಯಾದ ಬಯಕೆಗಳನ್ನು ನಿಯಂತ್ರಣದಲ್ಲಿಡುತ್ತದೆ.


ಇದನ್ನೂ ಓದಿ:  Soybean Benefits: ಪ್ರತಿದಿನ ಸೋಯಾಬಿನ್ ತಿಂದ್ರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತಂತೆ


ಇದು ಕೆಲವು ಉತ್ತಮ ಕೊಬ್ಬುಗಳನ್ನು ಸಹ ಹೊಂದಿರುತ್ತದೆ, ಇದು ನಿಮ್ಮ ಹಸಿವನ್ನು ನಿಯಂತ್ರಣದಲ್ಲಿಡುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ2, ವಿಟಮಿನ್ ಬಿ12, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ" ಎಂದು ಅವರು ಹೇಳಿದರು. ಮೊಸರನ್ನವನ್ನು ಮಧ್ಯಾಹ್ನ ಊಟಕ್ಕೆ ಅಥವಾ ಉಪಾಹಾರವಾಗಿಯೂ ಸಹ ನೀವು ಸೇವಿಸಬಹುದು ಎಂದು ಅವರು ಉಲ್ಲೇಖಿಸಿದ್ದಾರೆ.


ನೀವು ಯಾವ ರೀತಿಯ ಮೊಸರನ್ನು ಸೇವಿಸಬೇಕು?
ತುಂಬಾ ಜನರಿಗೆ ಯಾವ ರೀತಿಯ ಮೊಸರು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಗೊಂದಲವಿರುತ್ತದೆ. ದಯವಿಟ್ಟು ಕೊಬ್ಬು ಮುಕ್ತ ಅಥವಾ ಕಡಿಮೆ ಕೊಬ್ಬಿನ ಮೊಸರನ್ನು ಖರೀದಿಸಬೇಡಿ. ಇದು ಹೆಚ್ಚು ಸಂಸ್ಕರಿಸಲ್ಪಟ್ಟಿದೆ ಮತ್ತು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.


ಯಾರು ಮೊಸರನ್ನವನ್ನು ತಿನ್ನಬಾರದು?
ಇದನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೊದಲು, ನಿಮ್ಮ ವೈದ್ಯರನ್ನು ಒಮ್ಮೆ ಸಂಪರ್ಕಿಸಿ ಸೂಕ್ತವಾದ ಸಲಹೆಯನ್ನು ಪಡೆಯಿರಿ. "ನಿಮಗೆ ಮೊಸರಿನ ಅಲರ್ಜಿ ಇದ್ದರೆ, ಅಥವಾ ಮೊಸರನ್ನು ಅನುಮತಿಸದ ಯಾವುದೇ ಚಿಕಿತ್ಸೆಯಲ್ಲಿ, ನೀವು ಅದರಿಂದ ದೂರವಿರಬೇಕು" ಎಂದು ಅವರು ಉಲ್ಲೇಖಿಸಿದ್ದಾರೆ.

Published by:Ashwini Prabhu
First published: