ಜೀರಿಗೆಯನ್ನು ಬಳಸಿ ಸುಲಭವಾಗಿ ದೇಹ ತೂಕ ಕಡಿಮೆ ಮಾಡಿಕೊಳ್ಳಿ

news18
Updated:May 19, 2018, 4:37 PM IST
ಜೀರಿಗೆಯನ್ನು ಬಳಸಿ ಸುಲಭವಾಗಿ ದೇಹ ತೂಕ ಕಡಿಮೆ ಮಾಡಿಕೊಳ್ಳಿ
news18
Updated: May 19, 2018, 4:37 PM IST
ನ್ಯೂಸ್ 18 ಕನ್ನಡ

ದೇಹದ ತೂಕವನ್ನು ಇಳಿಸಲು ನಾನಾ ರೀತಿಯ ಕಸರತ್ತು ಮಾಡುವವರೇ ಹೆಚ್ಚು. ಕೆಲವರು ಜಿಮ್​ನಲ್ಲಿ ಕಾಲ ಕಳೆದರೆ ಮತ್ತೆ ಕೆಲವರು ಆಹಾರದ ನಿಯಂತ್ರಣಕ್ಕೆ ಮುಂದಾಗುತ್ತಾರೆ. ಇದರ ಹೊರತಾಗಿಯೂ ಜೀರಿಗೆಯಿಂದ ಕೂಡ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ತೂಕವನ್ನು ಕಡಿಮೆ ಮಾಡಿಕೊಳ್ಳಲು ಜೀರಿಗೆಯನ್ನು ಹೇಗೆ ಬಳಸಬೇಕೆಂಬ ಮಾಹಿತಿ ಇಲ್ಲಿವೆ.

ರಾತ್ರಿ ಮಲಗುವ ವೇಳೆ ಗ್ಲಾಸಿನಲ್ಲಿ ಒಂದು ಚಮಚ ಜೀರಿಗೆಯನ್ನು ನೆನೆಸಿಡಿ. ಬೆಳಿಗ್ಗೆ ಆ ಜೀರಿಗೆ ನೀರನ್ನು ಕುದಿಸಿ ಕುಡಿಯಿರಿ. ದಿನನಿತ್ಯ ಹೀಗೆ ಮಾಡುವುದರಿಂದ ಹೊಟ್ಟೆಯ ಕೊಬ್ಬು ವೇಗವಾಗಿ ಕರಗುತ್ತದೆ.

ಜೀರಿಗೆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರ ಬಳಿಕ ಒಂದು ಗಂಟೆಯ ತನಕ ಏನನ್ನೂ ತಿನ್ನದಿರಿ. ಹೀಗೆ ಮಾಡುವುದರಿಂದ ದೇಹದ ತೂಕವನ್ನು ಕಡಿಮೆಗೊಳಿಸಬಹುದು.

ಜೀರಿಗೆ ನೀರನ್ನು ಮತ್ತಷ್ಟು ರುಚಿಯಾಗಿಸಲು ಕರಿದ ಜೀರಿಗೆಗೆ ನಿಂಬೆ ರಸವನ್ನು ಮಿಶ್ರಣ ಮಾಡಿ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ಜೀರಿಗೆಯನ್ನು ಮೊಸರಲ್ಲಿ ಸೇರಿಸಿ ತಿನ್ನುವುದರಿಂದ ಕೂಡ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಒಂದು ಚಮಚದಷ್ಟು ಜೀರಿಗೆಯನ್ನು ಫ್ರೈ ಮಾಡಿ. ಅದನ್ನು ಜೇನುತುಪ್ಪದಲ್ಲಿ ಬೆರೆಸಿ ನಿಧಾನವಾಗಿ ಅಗಿಯುತ್ತಾ ಸೇವಿಸಿ. ಇದರಿಂದ ಜೀರ್ಣಕ್ರಿಯೆ ಉತ್ತಮಗೊಂಡು, ತೂಕ ಕಡಿಮೆಯಾಗುತ್ತದೆ.
Loading...

ತರಕಾರಿ ಸೂಪ್​ನಲ್ಲಿ ಜೀರಿಗೆ ಪುಡಿಯನ್ನು ಮಿಶ್ರಣ ಮಾಡಿ ಕುಡಿಯಬಹುದು. ಇದು ಸೂಪ್​ನ ರುಚಿ ಹೆಚ್ಚಿಸುವುದಲ್ಲದೆ, ದೇಹಕ್ಕೆ ಬೇಕಾದ ಉತ್ತಮ ಕ್ಯಾಲೊರಿ ಮತ್ತು ಫೈಬರ್​ಗಳನ್ನು ಒದಗಿಸುತ್ತದೆ.

ಜೀರಿಗೆ ಪುಡಿ, ಶುಂಠಿ ಮತ್ತು ನಿಂಬೆಯ ರಸದ ಮಿಶ್ರಣದಿಂದ ಸಹ ತೂಕ ಕಡಿಮೆ ಮಾಡಿಕೊಳ್ಳಬಹುದು. ಬೆಚ್ಚಗಿನ ನೀರಿನಲ್ಲಿ ಶುಂಠಿ, ಜೀರಿಗೆ ಪುಡಿ ಮತ್ತು ನಿಂಬೆ ರಸವನ್ನು ಬೆರೆಸಿ ಕುಡಿಯಿರಿ. ಇದರ ಬಳಿಕ ಒಂದು ಗಂಟೆಯ ತನಕ ಏನನ್ನೂ ತಿನ್ನದಿರುವುದು ಉತ್ತಮ.

ರಕ್ತಹೀನತೆಗೆ ಜೀರಿಗೆ ಸೇವನೆ ಅತ್ಯುತ್ತಮ ಮದ್ದಾಗಿದೆ. 13-14 ವಯಸ್ಸಿನವರು ಪಿರಿಯಡ್ಸ್ ಸಂದರ್ಭದಲ್ಲಿ ಜೀರಿಗೆಯನ್ನು ಸೇವಿಸುವುದರಿಂದ ರಕ್ತಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು.
First published:May 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...