Cucumber Idli: ದಿನಾಲೂ ಅದೇ ಇಡ್ಲಿ ತಿಂದು ಬೇಜಾರಾಗಿದ್ರೆ, ಒಂದ್ಸಲ ಸೌತೆಕಾಯಿ ಇಡ್ಲಿ ಟ್ರೈ ಮಾಡಿ..!

ನಿಮಗೆ ಇದ್ದಕ್ಕಿದ್ದಂತೆ ಇಡ್ಲಿ ತಿನ್ನಬೇಕು ಎಂದು ಅನ್ನಿಸಿದರೆ ಮತ್ತು ಕೈಯಲ್ಲಿ ಇಡ್ಲಿ ಹಿಟ್ಟು ಇಲ್ಲದಿದ್ದರೆ, ತಕ್ಷಣಕ್ಕೆ ನೀವು ಸೌತೆಕಾಯಿ ಇಡ್ಲಿ ಮಾಡಿಕೊಂಡು ಅದನ್ನು ತಿನ್ನಬಹುದು. ಹೇಗಪ್ಪಾ ಇಷ್ಟು ಬೇಗ ಮಾಡಿಕೊಳ್ಳುವುದು ಅಂತೀರಾ? ಇಲ್ಲಿದೆ ನೋಡಿ ಮಾಡುವ ವಿಧಾನ.

ಸೌತೆಕಾಯಿ ಇಡ್ಲಿ

ಸೌತೆಕಾಯಿ ಇಡ್ಲಿ

  • Share this:
ಪ್ರತಿದಿನ ಬೆಳಗ್ಗೆ ಎದ್ದು ಏನಪ್ಪಾ ತಿಂಡಿ ಮಾಡುವುದು, ಯಾವ ತಿಂಡಿ ಮಾಡಿದರೆ ಮನೆ ಮಂದಿಗೆಲ್ಲಾ ಇಷ್ಟವಾಗುತ್ತದೆ ಮತ್ತು ಮೇಲಾಗಿ ಬೆಳಗ್ಗೆ ಬೆಳಗ್ಗೆ ಎಣ್ಣೆಯಲ್ಲಿ ಕರಿದಂತಹ ತಿಂಡಿಯನ್ನು ಉಪಾಹಾರಕ್ಕೆ ಮನೆಯವರ ಮುಂದೆ ಇಡುವಂತಿಲ್ಲ.ಅದಕ್ಕಾಗಿ ಹೆಚ್ಚಿನ ಗೃಹಿಣಿಯರು ಎಣ್ಣೆ ಪದಾರ್ಥಗಳನ್ನು ಬಿಟ್ಟು ಬೇರೆ ಒಂದು ಆರೋಗ್ಯಕರ ಉಪಾಹಾರ ಮಾಡುವುದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾ ಇರುವುದನ್ನು ನಾವೆಲ್ಲಾ ಸಹಜವಾಗಿ ನಮ್ಮ ಮನೆಯಲ್ಲಿ ನೋಡಿರುತ್ತೇವೆ.ಇಡ್ಲಿ ಎಂದರೆ ಬಹುತೇಕರು ಇಷ್ಟಪಡುವ ಉಪಹಾರವಾಗಿದ್ದು, ಇದನ್ನು ಯಾರು ಬೇಡ ಎನ್ನುವುದು ಅಷ್ಟೊಂದು ಸುಲಭದ ಮಾತಲ್ಲ.

ಇಡ್ಲಿಗಳನ್ನು ಬಿಸಿ ಸಾಂಬಾರ್ ಮತ್ತು ಅದರ ಬದಿಯಲ್ಲಿ ಸ್ವಲ್ಪ ಹಚ್ಚಿಕೊಳ್ಳಲು ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ನುವುದೇ ಒಂದು ಮಜಾ. ಇಡ್ಲಿ ಬಹುತೇಕವಾಗಿ ಎಲ್ಲಾ ರೀತಿಯಲ್ಲೂ ನಮ್ಮ ದೇಹಕ್ಕೆ ಒಳ್ಳೆಯದು. ರುಚಿಕರವಾಗಿರುವುದರ ಜೊತೆಗೆ ಇಡ್ಲಿಯೂ ಆರೋಗ್ಯಕರ ಮತ್ತು ಹೊಟ್ಟೆಯೂ ತಿಂದ ಮೇಲೆ ಹಗುರವಾಗಿರುತ್ತದೆ, ಅಷ್ಟೊಂದು ಭಾರ ಎನಿಸುವುದಿಲ್ಲ.

ಈ ರುಚಿಕರವಾದ ದಕ್ಷಿಣ ಭಾರತದ ಉಪಾಹಾರ ತಯಾರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಎನ್ನುವುದೊಂದು ಬಿಟ್ಟರೆ ಇಡ್ಲಿ ತುಂಬಾ ಒಳ್ಳೆಯ ಉಪಾಹಾರ ಎಂದು ಹೇಳಬಹುದು.ಇಡ್ಲಿ ಮಾಡಲು ಅಕ್ಕಿ ನೆನೆಸುವುದರಿಂದ ಹಿಡಿದು ಇಡ್ಲಿ ತಯಾರಾಗಿ ರೆಡಿಯಾಗುವವರೆಗೆ ನಿಗಾ ವಹಿಸಬೇಕಾಗುತ್ತದೆ.



ಇದನ್ನೂ ಓದಿ:JEE Main 2021 Result: ನಾಳೆಯೊಳಗೆ ಜೆಇಇ ಮೇನ್ 2021 ಫಲಿತಾಂಶ ಪ್ರಕಟ ಸಾಧ್ಯತೆ; ರಿಸಲ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ನಿಮಗೆ ಇದ್ದಕ್ಕಿದ್ದಂತೆ ಇಡ್ಲಿ ತಿನ್ನಬೇಕು ಎಂದು ಅನ್ನಿಸಿದರೆ ಮತ್ತು ಕೈಯಲ್ಲಿ ಇಡ್ಲಿ ಹಿಟ್ಟು ಇಲ್ಲದಿದ್ದರೆ, ತಕ್ಷಣಕ್ಕೆ ನೀವು ಸೌತೆಕಾಯಿ ಇಡ್ಲಿ ಮಾಡಿಕೊಂಡು ಅದನ್ನು ತಿನ್ನಬಹುದು. ಹೇಗಪ್ಪಾ ಇಷ್ಟು ಬೇಗ ಮಾಡಿಕೊಳ್ಳುವುದು ಅಂತೀರಾ? ಇಲ್ಲಿದೆ ನೋಡಿ ಮಾಡುವ ವಿಧಾನ.

ಸೌತೆಕಾಯಿ ಇಡ್ಲಿ ಮಾಡುವುದು ತುಂಬಾನೇ ಸುಲಭವಾಗಿದೆ. ಈ ಉಪಹಾರ ಕರ್ನಾಟಕದಲ್ಲಿನ ಕೊಂಕಣಿ ಭಾಗದಲ್ಲಿ ತುಂಬಾ ಜನಪ್ರಿಯ ಉಪಾಹಾರ.

ಈ ಸೌತೆಕಾಯಿ ಇಡ್ಲಿಯನ್ನು ತಯಾರಿಸುವ ವಿಧಾನದಲ್ಲಿ ಯಾವುದೇ ರೀತಿಯ ಹುದುಗುವಿಕೆ, ನೆನೆಸುವಿಕೆ ಅಥವಾ ಆ ಯಾವುದೇ ಸುದೀರ್ಘ ಪ್ರಕ್ರಿಯೆಯ ಅಗತ್ಯವಿಲ್ಲ. ಸ್ವಲ್ಪ ಸೌತೆಕಾಯಿ ಮತ್ತು ರವೆಯೊಂದಿಗೆ ರುಚಿಕರವಾದ ಸೌತೆಕಾಯಿ ಇಡ್ಲಿಯನ್ನು ಬೇಗನೆ ತಯಾರಿಸಿಕೊಳ್ಳಬಹುದಾಗಿದೆ.

ಸೌತೆಕಾಯಿಯು ದೇಹಕ್ಕೆ ತುಂಬಾ ಒಳ್ಳೆಯದು ಮತ್ತು ದೇಹಕ್ಕೆ ಇದು ತಂಪಾಗಿರುತ್ತದೆ, ನೀವು ಸೌತೆಕಾಯಿ ಇಡ್ಲಿಯನ್ನು ಮಸಾಲೆಯುಕ್ತ ಚಟ್ನಿಯೊಂದಿಗೆ ಸೇವಿಸಬಹುದು.

ಸೌತೆಕಾಯಿ ಇಡ್ಲಿ ಮಾಡುವ ವಿಧಾನ

ಸ್ವಲ್ಪ ಸೌತೆಕಾಯಿಗಳನ್ನು ತೆಗೆದುಕೊಂಡು ಚೆನ್ನಾಗಿ ತುರಿದು, ನೀರನ್ನು ಹಿಂಡಿ. ಒಂದು ಬಟ್ಟಲಿನಲ್ಲಿ ತುರಿದ ಸೌತೆಕಾಯಿ, ರವೆ, ತುರಿದ ತೆಂಗಿನಕಾಯಿ, ಉಪ್ಪು ಮತ್ತು ಇತರ ಪದಾರ್ಥಗಳನ್ನು ಸೇರಿಸಿ ಮತ್ತು ಸ್ವಲ್ಪ ಸಮಯದವರೆಗೆ ನೆನೆಯಲು ಬಿಡಿ.

ನಂತರ ಇದಕ್ಕೆ ಬೇಕಾದಲ್ಲಿ ಕೊತ್ತಂಬರಿ ಸೊಪ್ಪು ಮತ್ತು ಹಸಿ ಮೆಣಸಿನಕಾಯಿಯನ್ನು ಮಿಶ್ರಣದಲ್ಲಿ ಬೆರೆಸಿಕೊಳ್ಳಿ. ನಿಮ್ಮ ಇಡ್ಲಿ ಮಾಡುವ ಚಿಕ್ಕ ಕುಕ್ಕರ್‌ನಲ್ಲಿ 20 ನಿಮಿಷಗಳ ಕಾಲ ಇಟ್ಟು ಬೇಯಿಸಿ. ನಂತರ ಅದನ್ನು ತೆಗೆದು ನಿಮ್ಮ ತಟ್ಟೆಗೆ ಬಡಿಸಿಕೊಳ್ಳಿ ಬಿಸಿ ಬಿಸಿಯಾದ ಸೌತೆಕಾಯಿ ಇಡ್ಲಿ.
Published by:Latha CG
First published: