CRPF Recruitment: ಕೇಂದ್ರ ಮೀಸಲು ಪೊಲೀಸ್​ ಪಡೆ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- ಅಭ್ಯರ್ಥಿಯು ಕಾನ್‌ಸ್ಟೆಬಲ್ ಹುದ್ದೆಯಲ್ಲಿ ಕನಿಷ್ಠ 4 ವರ್ಷ ಕೆಲಸ ಮಾಡಿರಬೇಕು. - ಅಭ್ಯರ್ಥಿಗಳು ಪಿಯುಸಿ ಅಥವಾ 12ನೇ ತರಗತಿ ಪಾಸ್ ಆಗಿರಬೇಕು.

news18-kannada
Updated:February 14, 2020, 3:49 PM IST
CRPF Recruitment: ಕೇಂದ್ರ ಮೀಸಲು ಪೊಲೀಸ್​ ಪಡೆ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
job
  • Share this:
CRPF Recruitment 2020: ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಹೆಡ್ ಕಾನ್‌ಸ್ಟೇಬಲ್ (ಜನರಲ್ ಡ್ಯೂಟಿ) ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಈ ನೇಮಕಾತಿಯಲ್ಲಿ ಸಿಆರ್​ಪಿಎಫ್ ಪುರುಷರು ಮತ್ತು ಮಹಿಳೆ ಕಾನ್​ಸ್ಟೆಬಲ್​ ಭರ್ತಿ ಪ್ರಕ್ರಿಯೆ ನಡೆಯಲಿದೆ.

ಈ ಹುದ್ದೆಗಳಿಗೆ ನೇಮಕಾತಿ ಲಿಮಿಟೆಡ್ ಡಿಪಾರ್ಟ್​ಮೆಂಟ್ ಕಾಂಪಿಟೆಟಿವ್ ಎಕ್ಸಾಂ (LDCE) ಮೂಲಕ ನಡೆಯಲಿದೆ. ಅಂದರೆ ಈ ಖಾಲಿ ಹುದ್ದೆಯು ಸಿಆರ್‌ಪಿಎಫ್‌ನಲ್ಲಿ ಕಾನ್‌ಸ್ಟೆಬಲ್ ಹುದ್ದೆಯಲ್ಲಿ ಉದ್ಯೋಗದಲ್ಲಿರುವವರು ಅರ್ಜಿ ಸಲ್ಲಿಸಬಹುದು. ಪುರುಷರಿಗೆ 1331 ಮತ್ತು ಮಹಿಳೆಯರಿಗೆ 81 ಹುದ್ದೆಗಳು ಸೇರಿದಂತೆ ಒಟ್ಟು 1412 ಹುದ್ದೆಗಳನ್ನು ನೇಮಕಾತಿ ನಡೆಯಲಿದೆ. ಈ ಹುದ್ದೆಗಳ ಕುರಿತಾದ ಹೆಚ್ಚಿನ ಮಾಹಿತಿ ಈ ಕೆಳಗಿನಂತಿವೆ.

ಒಟ್ಟು ಪೋಸ್ಟ್‌ಗಳ ಸಂಖ್ಯೆ:
1412 ಹುದ್ದೆಗಳು

ಅರ್ಹತೆ:
- ಸಿಆರ್‌ಪಿಎಫ್‌ನಲ್ಲಿ ಕಾನ್‌ಸ್ಟೇಬಲ್ ಹುದ್ದೆಯಲ್ಲಿ ಪೋಸ್ಟ್ ಮಾಡಿದವರು ಅರ್ಜಿ ಸಲ್ಲಿಸಬಹುದು.
- ಅಭ್ಯರ್ಥಿಯು ಕಾನ್‌ಸ್ಟೆಬಲ್ ಹುದ್ದೆಯಲ್ಲಿ ಕನಿಷ್ಠ 4 ವರ್ಷ ಕೆಲಸ ಮಾಡಿರಬೇಕು.- ಅಭ್ಯರ್ಥಿಗಳು ಪಿಯುಸಿ ಅಥವಾ 12ನೇ ತರಗತಿ ಪಾಸ್ ಆಗಿರಬೇಕು.

ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಆಯ್ಕೆಗಾಗಿ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಹಾಗೆಯೇ ದೈಹಿಕ ದಕ್ಷತೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಕೂಡ ನಡೆಯಲಿದೆ. ಈ ಎಲ್ಲಾ ಹಂತಗಳ ನಂತರ, ಅರ್ಹತಾ ಪಟ್ಟಿಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಅರ್ಜಿಯನ್ನು ತಮ್ಮ ಘಟಕ / ಕಚೇರಿಗೆ ಸಲ್ಲಿಸಬೇಕು.

ಪ್ರಮುಖ ದಿನಾಂಕಗಳು:
ಅರ್ಜಿ ಪ್ರಾರಂಭ ದಿನಾಂಕ: 07/02/2020
ಲಿಖಿತ ಪರೀಕ್ಷೆಯ ದಿನಾಂಕ: 19/04/2020

ಇದನ್ನೂ ಓದಿ: ದರ್ಶನ್ ಇಂದ್ರ ಚಿತ್ರದ ನಾಯಕಿ ನಮಿತಾ ಈಗೇನು ಮಾಡುತ್ತಿದ್ದಾರೆ ಗೊತ್ತಾ?

First published: February 14, 2020, 3:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading