ನಾವು ಗೋಧಿ ಹಿಟ್ಟಿನಿಂದ (Wheat Flour) ಮಾಡಿದ ಚಪಾತಿಯನ್ನು ನಿಯಮಿತವಾಗಿ ಸೇವಿಸುತ್ತಾ (Eating) ಬಂದಿದ್ದೇವೆ. ಆದರೆ ನೀವು ಗೋಧಿ ಹಿಟ್ಟಿನಿಂದ ಮಾಡಿದ ಗರಿಗರಿಯಾದ (Crispy) ಮತ್ತು ರುಚಿಕರವಾದ (Tasty) ಗೋಧಿ ದೋಸೆಯನ್ನು (Wheat Dosa) ಬೆಳಗಿನ ತಿಂಡಿಗೆ ಮಾಡಿ, ಸೇವಿಸಿದ್ದೀರಾ? ತೆಳುವಾದ, ಸುಂದರವಾದ ಮತ್ತು ಟೇಸ್ಟೀ ಗೋಧಿ ದೋಸೆ ತಿನ್ನೋಕೆ ಸಾಕಷ್ಟು ಲೈಕ್ ಆಗಿರುತ್ತದೆ. ದಕ್ಷಿಣ ಭಾರತದಲ್ಲಿ ಗೋಧುಮಾ ದೋಸೆ ಎಂದು ಗೋಧಿ ದೋಸೆ ಜನಪ್ರಿಯವಾಗಿದೆ. ಮನೆಯಲ್ಲಿ ನೀವು ಗೋಧಿ ದೋಸೆ ಮಾಡಿ ಸೇವಿಸುವುದು, ಅದರಲ್ಲೂ ಬೆಳಗಿನ ತಿಂಡಿಗೆ ಮಾಡಿ ಸೇವನೆ ಮಾಡಿದರೆ, ಅದು ನಿಮ್ಮನ್ನು ದಿನವಿಡೀ ಪೂರ್ಣವಾಗಿರಿಸುತ್ತದೆ. ಮತ್ತು ಕಡು ಬಯಕೆಗಳನ್ನು ಶಾಂತಗೊಳಿಸುತ್ತದೆ.
ಗೋಧಿ ದೋಸೆ ಉತ್ತಮ ಉಪಹಾರ
ಗೋಧಿ ದೋಸೆ ಉತ್ತಮ ಉಪಹಾರವಾಗಿದೆ. ಇದನ್ನು ನೀವು ಉತ್ತಮ ಚಟ್ನಿ, ಪೋಡಿ ಅಥವಾ ಉಪ್ಪಿನಕಾಯಿಯೊಂದಿಗೆ ಸವಿಯಬಹುದು. ಒಮ್ಮೆ ನೀವು ರುಚಿಕರ ಗೋಧಿ ದೋಸೆಯನ್ನು ತಿಂದರೆ ಮತ್ತೆ ಮತ್ತೆ ತಿನ್ನುವ ಬಯಕೆ ಉಂಟಾಗುತ್ತದೆ. ಅದರಲ್ಲೂ ದೋಸೆ ಪ್ರಿಯರಿಗೆ ಗೋಧಿ ದೋಸೆ ತುಂಬಾ ಇಷ್ಟವಾಗುತ್ತದೆ.
ಅದಾಗ್ಯೂ ದೋಸೆಯಲ್ಲಿ ಬಹಳಷ್ಟು ವಿಧಗಳಿವೆ. ಅಕ್ಕಿ ಹಿಟ್ಟಿನ ದೋಸೆ, ರವಾ ದೋಸೆ ಮತ್ತು ಓಟ್ಸ್ ದೋಸೆ. ಅವುಗಳಲ್ಲಿ ಗೋಧಿ ದೋಸೆ ಮಾಡೋದು ತುಂಬಾ ಸುಲಭ. ಯಾಕೆಂದರೆ ಇಲ್ಲಿ ಗೋಧಿ ನೆನೆಸಿ ಇಡಬೇಕಾಗಲ್ಲ. ಗೋಧಿ ದೋಸೆಯನ್ನು ನೀವು ತ್ವರಿತವಾಗಿ ಮಾಡಿ ತಿನ್ನಬಹುದು.
ಇದನ್ನೂ ಓದಿ: ಜೀರ್ಣಕ್ರಿಯೆ ಮತ್ತು ರಕ್ತಹೀನತೆ ಸೇರಿದಂತೆ ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ ಕಮಲ ಹೂವಿನ ಬೇರುಗಳು
ಗೋಧಿ ದೋಸೆ
ಗೋಧಿ ದೋಸೆಗೆ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಮಸಾಲೆ, ತರಕಾರಿ, ಮಜ್ಜಿಗೆ, ಈರುಳ್ಳಿ ಮತ್ತು ತುರಿದ ಕ್ಯಾರೆಟ್ ಸೇರಿದಂತೆ ನಿಮಗಿಷ್ಟದ ತರಕಾರಿಯನ್ನೂ ಸೇರಿಸಿ ಮಾಡಿ ಸೇವಿಸಬಹುದು. ದಕ್ಷಿಣ ಭಾರತದ ಬಹಳಷ್ಟು ಮನೆಗಳಲ್ಲಿ, ಈ ತ್ವರಿತ ಗೋಧಿ ದೋಸೆಗಳನ್ನು ಸಾಮಾನ್ಯವಾಗಿ ಮಹಿಳೆಯರು ತಮ್ಮ ಉಪವಾಸ ಭೋಜನಕ್ಕೆ ಮಾಡುತ್ತಾರೆ.
ಗೋಧಿ ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು
ಗರಿಗರಿಯಾದ, ರುಚಿಕರವಾದ ಗೋಧಿ ದೋಸೆ ಮಾಡಲು ಕೇವಲ 2 ಹಂತಗಳಿವೆ. ಹಿಟ್ಟು ಕಲೆಸಿ, ಅದಕ್ಕೆ ಬೇಕಾದ ಪದಾರ್ಥ ಸೇರಿಸಿ, ತವೆ ಮೇಲೆ ಹಾಕಿ ಬೇಯಿಸುವುದು.
½ ಕಪ್ ಗೋಧಿ ಹಿಟ್ಟು
¼ ಕಪ್ ಅಕ್ಕಿ ಹಿಟ್ಟು
1/8 ಟೀಚಮಚ ಉಪ್ಪು
1/8 ಟೀಚಮಚ ಹಿಂಗ್
1 ಚಿಟಿಕೆ ಜೀರಿಗೆ
½ ಟೀಚಮಚ ತುರಿದ ಶುಂಠಿ
ಸಣ್ಣಗೆ ಹೆಚ್ಚಿದ ಕ್ಯಾರೆಟ್,
ಸಣ್ಣಗೆ ಹೆಚ್ಚಿದ ಈರುಳ್ಳಿ
ಸಣ್ಣಗೆ ಹೆಚ್ಚಿದ ಟೊಮೆಟೊ
ಸಣ್ಣಗೆ ಹೆಚ್ಚಿದ ಮೆನಸಿಣಕಾಯಿ
ಸಣ್ಣಗೆ ಹೆಚ್ಚಿದ ಕರಿಬೇವು, ಕೊತ್ತಂಬರಿ
ಅಗತ್ಯವಿರುವಷ್ಟು ನೀರು
ಮಜ್ಜಿಗೆ ಅಥವಾ ಮೊಸರು ಸೇರಿಸಬಹುದು.
ನೀವು ಒಂದು ಕಪ್ ಗೋಧಿ ಹಿಟ್ಟಿಗೆ 2 tbps ಹಾಲು ಸೇರಿಸಬಹುದು.
ಗೋಧಿ ದೋಸೆ ಮಾಡುವ ವಿಧಾನ
ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ಒಂದು ಮಿಕ್ಸಿಂಗ್ ಬೌಲ್ ಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ 10 ನಿಮಿಷ ನೆನೆಯಲು ಬಿಡಿ. ಈಗ ತವಾ ಒಲೆಯ ಮೇಲಿಡಿ. ಪ್ಯಾನ್ ಅನ್ನು ಬಿಸಿ ಮಾಡಿ, ನಂತರ ಸ್ವಲ್ಪ ಎಣ್ಣೆ ಹಚ್ಚಿ. ಈಗ ಮಿಶ್ರಣ ಮಾಡಿಕೊಂಡಿದ್ದ ಹಿಟ್ಟನ್ನು ತವೆಯ ಮೇಲೆ ಹಾಕಿ,
ಇದನ್ನೂ ಓದಿ: ಮಧುಮೇಹ ಮೂತ್ರಪಿಂಡ ಕಾಯಿಲೆ ಯಾರಲ್ಲಿ ಮತ್ತು ಯಾವಾಗ ಸಂಭವಿಸುತ್ತದೆ? ಇದರ ಲಕ್ಷಣಗಳು ಹೀಗಿವೆ
ವೃತ್ತಾಕಾರವಾಗಿ ಹರಡಿ. ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಎರಡೂ ಬದಿಯಲ್ಲಿ ಚೆನ್ನಾಗಿ ಬೇಯಿಸಿ. ಈಗ ನಿಮ್ಮ ರುಚಿಯಾದ ಹಾಗೂ ಗರಿಗರಿಯಾದ ಗೋಧಿ ದೋಸೆ ರೆಡಿ. ಇದನ್ನು ನೀವು ನಿಮಗಿಷ್ಟದ ಚಟ್ನಿಯೊಂದಿಗೆ ಸೇವಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ