ಬರೀ ಹಲ್ಲುಜ್ಜುವುದಲ್ಲ, ಟೂತ್​ಪೇಸ್ಟ್​ನಿಂದ ಪಡೆಯಬಹುದು ಇನ್ನೂ ಹಲವು ಪ್ರಯೋಜನಗಳು

TOOTHPASTE TRICKS: ಇಂತಹ ಕಲೆಗಳ ಮೇಲೆ ಟೂತ್​ಪೇಸ್ಟ್​ ಹಚ್ಚಿ 15 ರಿಂದ 20 ನಿಮಿಷಗಳ ಕಾಲ ಬಿಡಿ. ಅದಾದ ಬಳಿಕ ಬಟ್ಟೆ ತೊಳೆದರೆ ಕಲೆಗಳು ಮಾಯವಾಗುತ್ತದೆ.

zahir | news18-kannada
Updated:August 21, 2019, 1:19 PM IST
ಬರೀ ಹಲ್ಲುಜ್ಜುವುದಲ್ಲ, ಟೂತ್​ಪೇಸ್ಟ್​ನಿಂದ ಪಡೆಯಬಹುದು ಇನ್ನೂ ಹಲವು ಪ್ರಯೋಜನಗಳು
Toothpaste
  • Share this:
ನಾವು ಪ್ರತಿನಿತ್ಯ ಬಳಸುವ ವಸ್ತುಗಳಲ್ಲಿ ಟೂತ್​ಪೇಸ್ಟ್​ ಕೂಡ ಒಂದು. ಆಧುನಿಕ ಜೀವನ ಶೈಲಿಯಲ್ಲಿ ಪೇಸ್ಟ್ ಇಲ್ಲದೆ ಹಲ್ಲುಜ್ಜುವವರು ವಿರಳ. ಆದರೆ ಹಲ್ಲುಜ್ಜುವ ಪೇಸ್ಟ್​ನಿಂದ ಇನ್ನು ಹಲವಾರು ರೀತಿಯ ಪ್ರಯೋಜನಗಳನ್ನು ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ?. ಹೌದು, ಬಾಲ್ಯದಲ್ಲಿ ಜಾಮ್ ಎಂದು ತಿನ್ನುತ್ತಿದ್ದ ಟೂತ್​ಪೇಸ್ಟ್​ನ್ನು ವಿಭಿನ್ನವಾಗಿ ಬಳಸಿ ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅಂತಹ ಕೆಲವೊಂದು ಟ್ರಿಕ್ಸ್​ಗಳು ಇಲ್ಲಿ ನೀಡಲಾಗಿದೆ.

- ಸುಟ್ಟ ಗಾಯಕ್ಕೆ ಮನೆ ಮದ್ದು:

ನಿಮ್ಮ ಚರ್ಮಕ್ಕೆ ಸುಟ್ಟ ಗಾಯವಾದರೆ ತಕ್ಷಣವೇ ಟೂತ್​ಪೇಸ್ಟ್​ ಹಚ್ಚಿಕೊಳ್ಳಿ. ಇದರಿಂದ ಸುಟ್ಟಗಾಯದಿಂದ ಉಂಟಾಗುವ ಉರಿಯಿಂದ ಮುಕ್ತಿ ಪಡೆಯಬಹುದು. ಹಾಗೆಯೇ ಈ ಗಾಯಗಳು ಸಣ್ಣ ಪುಟ್ಟದಾಗಿದ್ದರೆ ಟೂತ್​ಪೇಸ್ಟ್​ ಹಚ್ಚುವುದರಿಂದ ಮುಂದೆ ಕಲೆಗಳು ಉಳಿಯುವುದಿಲ್ಲ.

- ಬಟ್ಟೆಯ ಕಲೆಗಳಿಗೆ ಗುಡ್​ಬೈ
ಬಟ್ಟೆಗಳ ಮೇಲಿನ ಹಲವು ಕಲೆಗಳನ್ನು ಟೂತ್​ಪೇಸ್ಟ್​ನಿಂದ ತೆಗೆಯಬಹುದು. ಸಾಮಾನ್ಯವಾಗಿ ಟೀ, ಕಾಫಿ ಪಾನೀಯಗಳಿಂದ ಕಲೆಗಳಾಗುತ್ತದೆ. ಇಂತಹ ಕಲೆಗಳ ಮೇಲೆ ಟೂತ್​ಪೇಸ್ಟ್​ ಹಚ್ಚಿ 15 ರಿಂದ 20 ನಿಮಿಷಗಳ ಕಾಲ ಬಿಡಿ. ಅದಾದ ಬಳಿಕ ಬಟ್ಟೆ ತೊಳೆದರೆ ಕಲೆಗಳು ಮಾಯವಾಗುತ್ತದೆ. ಇದನ್ನು ಎಲ್ಲಾ ರೀತಿಯ ಕಲೆಗಳ ಮೇಲೂ ಅನ್ವಯಿಸಬಹುದು.

- ಸೌಂದರ್ಯವರ್ಧಕ
ಟೂತ್​ಪೇಸ್ಟ್​ನ್ನು ಸೌಂದರ್ಯವರ್ಧಕವಾಗಿಯು ಕೂಡ ಬಳಸಬಹುದು. ನಿಮ್ಮ ಚರ್ಮದ ಟೋನ್​ಗಳಿಗೆ ಅಥವಾ ಫೇಸ್​ಪ್ಯಾಕ್ ಆಗಿ ಟೂತ್​ಪೇಸ್ಟ್​ನ್ನು ಹಚ್ಚಬಹುದು. ಇದನ್ನು ಹಚ್ಚುವಾಗ ಟೂತ್​​ಪೇಸ್ಟ್​ನಲ್ಲಿ ನಿಂಬೆ ರಸವನ್ನು ಮಿಶ್ರಣ ಮಾಡಬೇಕು. ಇದರಿಂದ ಸುಟ್ಟ ತ್ವಚೆ, ಸುಕ್ಕುಗಳು ಮತ್ತು ಕಪ್ಪು ಕಲೆಗಳನ್ನು ಅಳಿಸಿಹಾಕಬಹುದು.-ಮೊಡವೆಗಳಿಗೆ ಮುಕ್ತಿ:
ಟೂತ್​ಪೇಸ್ಟ್​ ಚರ್ಮದ ಔಷಧಿಯಾಗಿ ಕಾರ್ಯ ನಿರ್ವಹಿಸುತ್ತದೆ. ನಿಮ್ಮ ಮುಖದಲ್ಲಿ ಮೊಡವೆಗಳಿದ್ದರೆ ರಾತ್ರಿ ಮಲಗುವ ಮುನ್ನ ಟೂತ್​ಪೇಸ್ಟ್​ಗಳನ್ನು ಹಚ್ಚಿ. ಬೆಳ್ಳಿಗ್ಗೆ ಎದ್ದಮೇಲೆ ಮುಖವನ್ನು ಚೆನ್ನಾಗಿ ತೊಳೆಯಿರಿ. ಇದರಿಂದ ಶೀಘ್ರದಲ್ಲೇ ನಿಮ್ಮ ಮುಖದ ಮೊಡವೆಗಳು ಮಾಯವಾಗುತ್ತದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ


First published: August 21, 2019, 1:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading