Heels Care: ಒಡೆಯುವ ಹಾಗೂ ಬಿರಿಯುವ ಹಿಮ್ಮಡಿಗೆ ಕಾರಣವೇನು? ತಡೆಯಲು ಏನು ಮಾಡಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹುಡುಗಿಯರು ಸಣ್ಣ ಉಡುಪು, ಶಾರ್ಟ್ಸ್ ಅಥವಾ ತೆರೆದ ಪಾದರಕ್ಷೆ ಧರಿಸಿದಾಗ ನಿಮ್ಮ ಹಿಮ್ಮಡಿಯಲ್ಲಿ ಉಂಟಾಗುವ ಕೆಟ್ಟ ಸ್ಥಿತಿ ಹಿಮ್ಮಡಿಯ ನೋಟವನ್ನು ಹಾಳು ಮಾಡುತ್ತವೆ. ಕೆಲವರ ಹಿಮ್ಮಡಿಗಳು ವಿಶೇಷವಾಗಿ ಬೇಸಿಗೆ, ಚಳಿಗಾಲ ಮತ್ತು ಮಳೆಗಾಲದಲ್ಲೂ ಬಿರುಕು ಬಿಡುತ್ತವೆ.

  • Share this:

     ಹಿಮ್ಮಡಿ ಒಡೆಯುವುದು (Cracked Heels) ಸಾಮಾನ್ಯ ಸಮಸ್ಯೆ (Problem). ಆದರೆ ಇದು ಹಿಮ್ಮಡಿಯ ಹಾಗೂ ಪಾದದ (Feet) ಅಂದವನ್ನು (Beauty) ಹಾಳು ಮಾಡಿ ಬಿಡುತ್ತದೆ. ಬೇಸಿಗೆ ಹಾಗೂ ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದು ಸಾಮಾನ್ಯವಾಗಿ ಬಹುತೇಕರನ್ನು ಕಾಡುತ್ತದೆ. ಜನರ ತ್ವಚೆ ತುಂಬಾ ಒಣಗಿದಾಗ ಹಿಮ್ಮಡಿಯು ಒಣಗಿ, ಸಿಪ್ಪೆ ಏಳುತ್ತದೆ. ಹಿಮ್ಮಡಿ ಬಿರಿಯುತ್ತದೆ. ಇದು ಕೆಲವೊಮ್ಮೆ ತುಂಬಾ ನೋವು ಉಂಟು ಮಾಡುತ್ತದೆ. ದೇಹದಲ್ಲಿ ನೀರಿನ ಕೊರತೆ ಉಂಟಾದಾಗಲೂ ಹಿಮ್ಮಡಿ ಬಿರಿಯುತ್ತದೆ. ಚರ್ಮದಲ್ಲಿ ತೇವಾಂಶ ಕಡಿಮೆಯಾದಾಗ ಹಿಮ್ಮಡಿ ಸಮಸ್ಯೆ ಹೆಚ್ಚಾಗುತ್ತದೆ. ಅಂತಹ ಸ್ಥಿತಿಯಲ್ಲಿ, ಕಣಕಾಲುಗಳ ಬಿರುಕು ಸಮಸ್ಯೆ ಹಾಗೂ ಹಿಮ್ಮಡಿ ಬಿರಿಯುವುದು ತುಂಬಾ ಕಾಡುತ್ತದೆ.


    ಹಿಮ್ಮಡಿ ಒಡೆಯುವುದರ ಹಿಂದಿವೆ ಹಲವು ಕಾರಣಗಳು


    ಹುಡುಗಿಯರು ಸಣ್ಣ ಉಡುಪು, ಶಾರ್ಟ್ಸ್ ಅಥವಾ ತೆರೆದ ಪಾದರಕ್ಷೆ ಧರಿಸಿದಾಗ ನಿಮ್ಮ ಹಿಮ್ಮಡಿಯಲ್ಲಿ ಉಂಟಾಗುವ ಕೆಟ್ಟ ಸ್ಥಿತಿ ಹಿಮ್ಮಡಿಯ ನೋಟವನ್ನು ಹಾಳು ಮಾಡುತ್ತವೆ. ಕೆಲವರ ಹಿಮ್ಮಡಿಗಳು ವಿಶೇಷವಾಗಿ ಬೇಸಿಗೆ, ಚಳಿಗಾಲ ಮತ್ತು ಮಳೆಗಾಲದಲ್ಲೂ ಬಿರುಕು ಬಿಡುತ್ತವೆ. ಇದರ ಹಿಂದೆ ಹಲವು ಕಾರಣಗಳು ಇರಬಹುದು.


    ದೇಹದಲ್ಲಿ ವಿಟಮಿನ್ ಸಿ, ವಿಟಮಿನ್ ಇ ಮತ್ತು ವಿಟಮಿನ್ ಬಿ-3 ಕೊರತೆ ಉಂಟಾದಾಗಲೂ ಹಿಮ್ಮಡಿಗಳು ಬಿರುಕು ಬಿಡುತ್ತವೆ. ಅದೇ ವೇಳೆ ಶುಷ್ಕತೆ ಮತ್ತು ಬೇಸಿಗೆಯಲ್ಲಿ ಕಡಿಮೆ ನೀರು ಕುಡಿಯುವುದರಿಂದ, ಹಿಮ್ಮಡಿಗಳು ಬಿರಿಯುತ್ತವೆ. ಹಿಮ್ಮಡಿಗಳ ಬಿರುಕು ಸಮಸ್ಯೆ ಏಕೆ ಉಂಟಾಗುತ್ತದೆ ಮತ್ತು ಅದನ್ನು ಹೇಗೆ ಸರಿಪಡಿಸುವುದು ಎಂದು ನಾವು ಇಲ್ಲಿ ತಿಳಿಯೋಣ..


    ಇದನ್ನೂ ಓದಿ: ಬಾಲಿವುಡ್ ಕಿರುತೆರೆಯ ನಟಿಯರ ಆಹಾರ ಯೋಜನೆ ಕ್ರಮ ಹಾಗೂ ಫಿಟ್ನೆಸ್ ರಹಸ್ಯ ಹೀಗಿದೆ


    ಒಡೆಯುವ ಹಿಮ್ಮಡಿ ತಡೆಯಲು ಯಾವ ಜೀವಸತ್ವಗಳಲ್ಲಿ ಸಮೃದ್ಧವಾಗಿರುವ ಆಹಾರ ಸೇವಿಸಬೇಕು?


    ದೇಹದಲ್ಲಿ ವಿಟಮಿನ್ ಸಿ, ವಿಟಮಿನ್ ಇ ಮತ್ತು ವಿಟಮಿನ್ ಬಿ -3 ಕೊರತೆಯಿಂದಾಗಿ ಚರ್ಮವು ಒಣಗಲು ಪ್ರಾರಂಭಿಸುತ್ತದೆ. ಚರ್ಮವು ಒಣಗುತ್ತದೆ ಮತ್ತು ತೇವಾಂಶದ ನಷ್ಟವು ಒಡೆದ ಹಿಮ್ಮಡಿಗಳ ಮೂಲಕ ಎದ್ದು ಕಾಣುತ್ತದೆ. ದೇಹದಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಬಿ 3 ಕೊರತೆಯಿದ್ದರೆ, ಚರ್ಮವು ಬಿರುಕು ಬಿಡಲು ಪ್ರಾರಂಭಿಸುತ್ತದೆ.


    ಮತ್ತೊಂದೆಡೆ ವಿಟಮಿನ್ ಇ ಕೊರತೆಯು ಚರ್ಮದಲ್ಲಿ ಬಿರುಕು ಉಂಟು ಮಾಡಬಹುದು. ಈ ಜೀವಸತ್ವಗಳು ಉತ್ತಮ ಚರ್ಮಕ್ಕಾಗಿ ಬಹಳ ಮುಖ್ಯ. ಅವು ಕಾಲಜನ್ ಉತ್ಪಾದನೆ ಹೆಚ್ಚು ಮಾಡುತ್ತವೆ.  ಮತ್ತು ಚರ್ಮಕ್ಕೆ ರಕ್ಷಣೆ ನೀಡುತ್ತವೆ. ಕೆಲವೊಮ್ಮೆ ಚರ್ಮದಲ್ಲಿ ಶುಷ್ಕತೆ ಖನಿಜಗಳು, ಸತು ಮತ್ತು ಒಮೆಗಾ 3, ಕೊಬ್ಬಿನಾಮ್ಲಗಳ ಕೊರತೆಯಿಂದಲೂ ಉಂಟಾಗುತ್ತದೆ.


    ಹಿಮ್ಮಡಿಗಳು ಬಿರುಕು ಬಿಟ್ಟರೆ ಏನು ಮಾಡಬೇಕು?


    ಬೇಸಿಗೆಯಲ್ಲಿ ಶುಷ್ಕತೆಯಿಂದ ಹಿಮ್ಮಡಿಗಳು ಬಿರುಕು ಬಿಡುತ್ತವೆ. ಇದಕ್ಕಾಗಿ, ದಿನದಲ್ಲಿ ಸಾಕಷ್ಟು ನೀರು ಕುಡಿಯಿರಿ.


    ಬೇಸಿಗೆಯಲ್ಲಿ, ನೀರಿನಂಶವಿರುವ ಹಣ್ಣುಗಳು ಮತ್ತು ಜ್ಯೂಸ್, ತೆಂಗಿನ ನೀರು, ನಿಂಬೆ ಪಾನಕದಂತಹ ದ್ರವಗಳ ಸೇವನೆ ಹೆಚ್ಚು ಮಾಡಿ. ಇದರಿಂದ ಚರ್ಮ ಮೃದುವಾಗುತ್ತದೆ.


    ಅನೇಕ ಬಾರಿ ತೆರೆದ ಪಾದರಕ್ಷೆ ಧರಿಸುವುದು ಕಣಕಾಲುಗಳಲ್ಲಿ ಕೊಳಕು ಉಂಟು ಮಾಡುತ್ತದೆ. ಇದು ನಿಮ್ಮ ಹಿಮ್ಮಡಿಗಳು ಬಿರಿಯಲು ಕಾರಣವಾಗುತ್ತದೆ. ನೀವು ಚೆನ್ನಾಗಿ ಉಜ್ಜುವ ಮೂಲಕ ಕಣಕಾಲುಗಳನ್ನು ಸ್ವಚ್ಛ ಮಾಡಿಕೊಳ್ಳಿ.


    ರಾತ್ರಿಯಲ್ಲಿ ಮಲಗುವಾಗ ನೀವು ಹಿಮ್ಮಡಿಗೆ ಮುಲಾಮು ಹಚ್ಚಿರಿ. moisturize ಮತ್ತು ಎಫ್ಫೋಲಿಯೇಟ್ ಮಾಡಲು ಇದು ನಿಮ್ಮ ಹಿಮ್ಮಡಿಯನ್ನು ಸಾಫ್ಟ್ ಮಾಡುತ್ತದೆ.


    ಸ್ವಲ್ಪ ಸಮಯದವರೆಗೆ ಉಗುರು ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ನೆನೆಸಿಟ್ಟು ನಂತರ ಪ್ಯೂಮಿಸ್ ಕಲ್ಲಿನಿಂದ ಹಿಮ್ಮಡಿಗಳನ್ನು ಸ್ವಚ್ಛ ಮಾಡುವುದು ಪ್ರಯೋಜನಕಾರಿ ಆಗಿದೆ.


    ಆಹಾರದಲ್ಲಿ ಸತು ಸತ್ವವಿರುವ ಪದಾರ್ಥಗಳನ್ನು ಸೇರಿಸಿ, ಸೇವಿಸಿ. ಇದು ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.


    ಹಿಮ್ಮಡಿಯ ಜೀವಕೋಶಗಳಿಗೆ ಹಾನಿ ಮಾಡುವ ಪ್ರಕ್ರಿಯೆ ನಿಧಾನಗೊಳಿಸಲು ವಿಟಮಿನ್ ಇ ಸಹಕಾರಿ ಆಗಿದ್ದು, ಕೆಲವು ಬೀಜಗಳನ್ನು ಆಹಾರದಲ್ಲಿ ಬಳಸಿ.


    ಇದನ್ನೂ ಓದಿ: ಅನ್ನನಾಳ ಕ್ಯಾನ್ಸರ್ ರೋಗಿಗಳು ಎದುರಿಸುವ ಸಮಸ್ಯೆಗಳು ಯಾವವು? ಸಂಶೋಧನೆ ಏನು ಹೇಳುತ್ತದೆ? 


    ಶುಷ್ಕತೆ ಕಡಿಮೆ ಮಾಡಲು ವಿಟಮಿನ್ ಸಿ ಸೇವನೆ ಮಾಡಿ. ಇದರ ಆಸ್ಕೋರ್ಬಿಕ್ ಆಮ್ಲವು ಟ್ರಾನ್ಸ್-ಎಪಿಡರ್ಮಲ್ ನೀರಿನ ನಷ್ಟದ ಮೇಲೆ ಕಾರ್ಯ ನಿರ್ವಹಿಸುತ್ತದೆ. ಆಹಾರದಲ್ಲಿ ಸಿಟ್ರಸ್ ಹಣ್ಣುಗಳನ್ನು ಸೇರಿಸಿ ಸೇವನೆ ಮಾಡುವುದು ಪ್ರಯೋಜನ ನೀಡುತ್ತದೆ.

    Published by:renukadariyannavar
    First published: