HOME » NEWS » Lifestyle » COW MILK VS BUFFALO MILK WHICH IS BETTER FOR YOU STG LG

ಹಸುವಿನ ಹಾಲು ಮತ್ತು ಎಮ್ಮೆಯ ಹಾಲು; ಇವೆರಡರಲ್ಲಿ ನಿಮ್ಮ ಆರೋಗ್ಯಕ್ಕೆ ಉತ್ತಮ ಯಾವುದು ಗೊತ್ತಾ?

ಹಸುವಿನ ಹಾಲಿಗಿಂತ ಎಮ್ಮೆ ಹಾಲಿನಲ್ಲಿ ಹೆಚ್ಚು ಕೊಬ್ಬಿನ ಅಂಶ ಇರುತ್ತದೆ. ಇನ್ನು ಎಮ್ಮೆಯ ಹಾಲಿನಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗಿರುವುದರಿಂದ ಹಾಲು ದಪ್ಪ ಮತ್ತು ಕೆನೆಭರಿತ ಮೊಸರು ಆಗುತ್ತದೆ. ಎಮ್ಮೆ ಹಾಲು 7-8 ಪ್ರತಿಶತದಷ್ಟು ಕೊಬ್ಬನ್ನು ಹೊಂದಿದ್ದರೆ, ಹಸುವಿನ ಹಾಲು 3-4 ಪ್ರತಿಶತದಷ್ಟು ಕೊಬ್ಬನ್ನು ಹೊಂದಿರುತ್ತದೆ.

news18-kannada
Updated:February 20, 2021, 11:33 AM IST
ಹಸುವಿನ ಹಾಲು ಮತ್ತು ಎಮ್ಮೆಯ ಹಾಲು; ಇವೆರಡರಲ್ಲಿ ನಿಮ್ಮ ಆರೋಗ್ಯಕ್ಕೆ ಉತ್ತಮ ಯಾವುದು ಗೊತ್ತಾ?
ಸಾಂದರ್ಭಿಕ ಚಿತ್ರ
  • Share this:
ತಂತ್ರಜ್ಞಾನ ಬೆಳೆದಂತೆ ವ್ಯಕ್ತಿಗಳು ಕೂಡ ದಿನನಿತ್ಯ ತಮ್ಮ ಕೆಲಸ ಕಾರ್ಯಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಕೆಲಸದ ಒತ್ತಡದಲ್ಲಿಯೂ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೆಲವರಿಗೆ ಸವಾಲಾಗಿ ಪರಿಣಮಿಸುತ್ತದೆ. ದೇಹಕ್ಕೆ ಹೆಚ್ಚು ಪೌಷ್ಟಿಕ ಅಂಶ ಪಡೆಯಲು ಹಾಲು ಕುಡಿಯುವವರು ಹೆಚ್ಚು. ಆದರೆ, ಇತ್ತೀಚಿನ ದಿನದಲ್ಲಿ ಹಸುವಿನ ಹಾಲು ಮತ್ತು ಎಮ್ಮೆ ಹಾಲು ಎರಡು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಹಸುವಿನ ಹಾಲು ಮತ್ತು ಎಮ್ಮೆಯ ಹಾಲಿನಲ್ಲಿರುವ ಭಿನ್ನವಾಗಿವೆ.

ಆರೋಗ್ಯಕರ ಆಹಾರದಲ್ಲಿ ಹಾಲು ಕೂಡ ಭಾಗವಾಗಿದೆ. ಹಾಲಿನಲ್ಲಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಹೆಚ್ಚಾಗಿದೆ. ಇದು ಮೂಳೆಗಳು ಮತ್ತು ಹಲ್ಲುಗಳಿಗೆ ಬಹಳ ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತದೆ. ಹಾಲಿನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬುಗಳ ಅಂಶವಿದೆ. ಆದರೆ, ಇತ್ತೀಚಿನ ದಿನದಲ್ಲಿ ಹಸುವಿನ ಹಾಲಿನ ಜೊತೆಗೆ ಎಮ್ಮೆಯ ಹಾಲು ಕೂಡ ಕುಡಿಯುವವರ ಸಂಖ್ಯೆ ಜಾಸ್ತಿ ಆಗುತ್ತಿದೆ. ಆದರೆ, ಹಸುವಿನ ಹಾಲು ಮತ್ತು ಎಮ್ಮೆಯ ಹಾಲು ಎರಡು ಬೇರೆ ಬೇರೆ ಅಂಶಗಳನ್ನು ಒಳಗೊಂಡಿವೆ.

ಹಾಲಿನ ಬಣ್ಣ

ಎಮ್ಮೆ ಹಾಲು ಬಿಳಿ ಬಣ್ಣದಲ್ಲಿರುತ್ತದೆ ಮತ್ತು ಕೆನೆ ಹಾಗೂ ದಪ್ಪವಾದ ಸ್ಥಿರತೆಯನ್ನು ಹೊಂದಿರುತ್ತದೆ. ಬೀಟಾ ಕ್ಯಾರೋಟಿನ್ ಇರುವ ಕಾರಣ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ, ಇದು ಯಾವುದೇ ಬಣ್ಣವನ್ನು ಹೊಂದಿಲ್ಲ, ಆದರೆ ಹಸುವಿನ ಹಾಲು ಹಳದಿ-ಬಿಳಿ ಬಣ್ಣವನ್ನು ಹೊಂದಿರುತ್ತದೆ.

Petrol Diesel Price: 12 ದಿನಗಳಿಂದ ನಿರಂತರವಾಗಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ; ಇಂದಿನ ದರವೆಷ್ಟು?

ಕೊಬ್ಬು

ಹಸುವಿನ ಹಾಲಿಗಿಂತ ಎಮ್ಮೆ ಹಾಲಿನಲ್ಲಿ ಹೆಚ್ಚು ಕೊಬ್ಬಿನ ಅಂಶ ಇರುತ್ತದೆ. ಇನ್ನು ಎಮ್ಮೆಯ ಹಾಲಿನಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗಿರುವುದರಿಂದ ಹಾಲು ದಪ್ಪ ಮತ್ತು ಕೆನೆಭರಿತ ಮೊಸರು ಆಗುತ್ತದೆ. ಎಮ್ಮೆ ಹಾಲು 7-8 ಪ್ರತಿಶತದಷ್ಟು ಕೊಬ್ಬನ್ನು ಹೊಂದಿದ್ದರೆ, ಹಸುವಿನ ಹಾಲು 3-4 ಪ್ರತಿಶತದಷ್ಟು ಕೊಬ್ಬನ್ನು ಹೊಂದಿರುತ್ತದೆ.ಎಮ್ಮೆ ಹಾಲು ಬೇಗನೆ ಕೆಡುವುದಿಲ್ಲ

ಹಸುವಿನ ಹಾಲು ಮತ್ತು ಎಮ್ಮೆಯ ಹಾಲು ಎರಡು ಹಾಳು ಆಗುವುದರಲ್ಲಿಯೂ ಸಮಯ ವಿಭಿನ್ನವಾಗಿದೆ. ಎರಡು ದಿನದಲ್ಲಿ ಹಸುವಿನ ಹಾಲು ಕೆಟ್ಟು ಹೋಗುತ್ತದೆ. ಆದರೆ ಎಮ್ಮೆಯ ಹಾಲು ಹೆಚ್ಚು ದಿನಗಳವರೆಗೆ ಹಾಳು ಆಗುವುದಿಲ್ಲ. ಇನ್ನು, ಹಾಲು ಸೇವಿಸುವಾಗ ಹಾಳಾಗಿರುವ ಹಾಲನ್ನು ಸೇವನೆ ಮಾಡಬಾರದು.

ಕೊಲೆಸ್ಟ್ರಾಲ್‌

ಹಸುವಿನ ಹಾಲಿಗಿಂತಲೂ ಎಮ್ಮೆಯ ಹಾಲಿನಲ್ಲಿ ಕಡಿಮೆ ಕೊಲೆಸ್ಟ್ರಾಲ್‌ ಇರುತ್ತದೆ. ಆದರೆ, ಹೆಚ್ಚಾಗಿ ಜನರು ಹಸುವಿನ ಹಾಲು ಸೇವನೆ ಮಾಡುತ್ತಾರೆ. ಬೊಜ್ಜು, ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆ, ಮೂತ್ರಪಿಂಡಗಳ ಸಮಸ್ಯೆ ಸೇರಿದಂತೆ ಹಲವು ಕಾಯಿಲೆಗಳು ಇದ್ದವರು ಹಸುವಿನ ಹಾಲು ಸೇವನೆ ಬದಲಾಗಿ ಎಮ್ಮೆಯ ಹಾಲನ್ನು ಸೇವಿಸುವುದು ಸೂಕ್ತ.

ಕೊನೆಯ ಮಾತು

ಉತ್ತಮ ಆರೋಗ್ಯಕ್ಕಾಗಿ ಎಮ್ಮೆಯ ಹಾಲು ಮತ್ತು ಹಸುವಿನ ಹಾಲು ಸೇವನೆ ಎರಡು ಆರೋಗ್ಯಕರ. ಆದರೆ, ಆರೋಗ್ಯ ಉತ್ತಮ ಆಗಿದ್ದರೆ ಹಸುವಿನ ಹಾಲು ಸೇವಿಸುವುದು ಉತ್ತಮ. ಅನಾರೋಗ್ಯ ಸಮಸ್ಯೆ ಇದ್ದವರು ಎಮ್ಮೆಯ ಹಾಲು ಸೇವಿಸುವುದು ಸೂಕ್ತ. ಹಾಲಿನಲ್ಲಿ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಇರುವುದರಿಂದ ಹಾಲು ನಿಮ್ಮ ಆಹಾರದ ಒಂದು ಭಾಗವಾಗಿರಲಿ.
Published by: Latha CG
First published: February 20, 2021, 11:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories