Covid-19: ಕೊರೋನಾದಿಂದ ಮುಕ್ತಿ ಪಡೆದರೂ ಈ ಸಮಸ್ಯೆ ಬೆಂಬಿಡದೇ ಕಾಡುತ್ತೆ, ಅಧ್ಯಯನದಲ್ಲಿ ಆಘಾತಕಾರಿ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೋವಿಡ್-19 ವ್ಯಕ್ತಿಗಳು ಹೃದಯ ಕಾಯಿಲೆಗಳನ್ನು ಹೊಂದಿದ್ದರು ಹಾಗೂ ಹೃದಯದ ಮೇಲೆ ಕೋವಿಡ್-19 ಪರಿಣಾಮಗಳೇನು, ಇದಕ್ಕೆ ಕಾರಣವೇನು. ಆರೋಗ್ಯವಾಗಿದ್ದ ಹೃದಯ ನಂತರ ಅನಾರೋಗ್ಯಕ್ಕೆ ತುತ್ತಾಯಿತೇ ಮೊದಲಾದ ವಿಷಯಗಳನ್ನು ಸಂಶೋಧನಾ ತಂಡದಿಂದ ಪರೀಕ್ಷಿಸಲಾಗಿದೆ.

  • Trending Desk
  • 5-MIN READ
  • Last Updated :
  • Share this:

ಕೋವಿಡ್‌ನ (Covid 19) ಪರಿಣಾಮಗಳು ಉಸಿರಾಟ ವ್ಯವಸ್ಥೆ ಹಾಗೂ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಹಲವಾರು ಸಂಶೋಧನೆಗಳು ಹಾಗೂ ಅಧ್ಯಯನಗಳಿಂದ ಖಾತ್ರಿಗೊಂಡಿದ್ದು ಇದೀಗ ವೈರಸ್‌ನ ಪರಿಣಾಮಗಳು ಹೃದಯದ ಮೇಲೂ ದೀರ್ಘಕಾಲವಾಗಿ ಇರುತ್ತವೆ ಎಂಬುದಾಗಿ ಕೆಲವೊಂದು ಪುರಾವೆಗಳು ದೃಢಪಡಿಸಿವೆ. ವೈರಸ್‌ನಿಂದ (Virus) ಚೇತರಿಸಿಕೊಂಡವರು ಕೆಲವೊಂದು ಹೃದಯ ಸಮಸ್ಯೆಗಳನ್ನು ಹೊಂದಿರುವುದು ನಿಜ ಎಂಬುದಾಗಿ ಸಂಶೋಧಕರು ತಿಳಿಸಿದ್ದಾರೆ. ಅನಾರೋಗ್ಯದಿಂದ ಸಾವನ್ನಪ್ಪಿದ ಕೋವಿಡ್-19 ವ್ಯಕ್ತಿಗಳು ಹೃದಯ ಕಾಯಿಲೆಗಳನ್ನು ಹೊಂದಿದ್ದರು ಹಾಗೂ ಹೃದಯದ (Heart) ಮೇಲೆ ಕೋವಿಡ್-19 ಪರಿಣಾಮಗಳೇನು, ಇದಕ್ಕೆ ಕಾರಣವೇನು (Reason)? ಆರೋಗ್ಯವಾಗಿದ್ದ ಹೃದಯ ನಂತರ ಅನಾರೋಗ್ಯಕ್ಕೆ ತುತ್ತಾಯಿತೇ ಮೊದಲಾದ ವಿಷಯಗಳನ್ನು ಸಂಶೋಧನಾ ತಂಡದಿಂದ ಪರೀಕ್ಷಿಸಲಾಗಿದೆ.


ಕೋವಿಡ್‌ನಿಂದ ಮೃತರಾದ ವ್ಯಕ್ತಿಗಳ ಶವಪರೀಕ್ಷೆಗಳನ್ನು ವಿಜ್ಞಾನಿಗಳು ನಡೆಸಿದ್ದು ಹಾಗೂ ಕೆಲವೊಂದು ಬದಲಾವಣೆಗಳನ್ನು ಸೂಚಿಸಿದ್ದು ಇದರಲ್ಲಿ ಹೃದಯ ಕೋಶಗಳು ಕ್ಯಾಲ್ಸಿಯಂ ಅನ್ನು ನಿಯಂತ್ರಿಸುವ ವಿಧಾನದಲ್ಲಿ ಅಸಹಜ ಮಾರ್ಪಾಡುಗಳನ್ನು ಹೊಂದಿರುವುದು ಕಂಡುಬಂದಿವೆ ಎಂದು ಸೂಚಿಸಿದ್ದಾರೆ.


ಹೃದಯ ಅಂಗಾಂಶಗಳಲ್ಲಿ ಹೋಲಿಕೆ ಇದೆ


ಕೊಲಂಬಿಯಾ ವಿಶ್ವವಿದ್ಯಾನಿಲಯದ ಶರೀರಶಾಸ್ತ್ರ ವಿಭಾಗದ ಅಧ್ಯಕ್ಷರಾದ ಆ್ಯಂಡ್ರ್ಯೂ ಮಾರ್ಕ್ಸ್, ಕೋವಿಡ್‌ ಹೃದಯದ ಮೇಲೆ ಅಸಹಜತೆಗಳನ್ನು ಉಂಟುಮಾಡಿವೆ ಎಂಬುದನ್ನು ತಿಳಿಸಿದ್ದಾರೆ. ಆದರೆ ಇದನ್ನು ಖಾತ್ರಿಪಡಿಸಲು ಇನ್ನಷ್ಟು ಸಂಶೋಧನೆಗಳು ಹಾಗೂ ಅಧ್ಯಯನಗಳನ್ನು ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.


ಕ್ಯಾಲ್ಸಿಯಂ ರಚನೆಗಳ ಅಂಶವನ್ನೇ ತೆಗೆದುಕೊಂಡಾಗ ಕೋವಿಡ್-19 ನಿಂದ ಮೃತರಾದ ವ್ಯಕ್ತಿಗಳ ಹೃದಯ ಅಂಗಾಂಶ ಹಾಗೂ ಹೃದಯ ವೈಫಲ್ಯ ಹೊಂದಿದ ರೋಗಿಗಳ ಹೃದಯ ಅಂಗಾಂಶಕ್ಕೆ ಹೋಲುತ್ತದೆ ಎಂದು ಆ್ಯಂಡ್ರ್ಯೂ ತಿಳಿಸಿದ್ದಾರೆ. ಕೋವಿಡ್-19 ರೋಗಿಗಳ ಹೃದಯದಲ್ಲಿ ಕ್ಯಾಲ್ಸಿಯಂ ನಿರ್ವಹಣೆಯಲ್ಲಿ ಅಸಹಜತೆಗಳು ಕಂಡುಬಂದಿವೆ ಎಂದು ಆ್ಯಂಡ್ರ್ಯೂ ತಿಳಿಸಿದ್ದಾರೆ.


ಕ್ಯಾಲ್ಸಿಯಂ ಸೋರಿಕೆಯಿಂದ ಹೃದಯ ಸ್ನಾಯುವಿಗೆ ಅಪಾಯ


ಹೃದಯದಲ್ಲಿ ಕೆಲವೊಂದು ಮಾರ್ಪಾಡುಗಳು ಉಂಟಾಗಿವೆ ಎಂದು ಅಂಕಿಅಂಶಗಳು ತೋರಿಸುತ್ತವೆ ಎಂದು ಮಾರ್ಕ್ಸ್ ತಿಳಿಸಿದ್ದಾರೆ. ಆದರೆ ಇದಕ್ಕೆ ನಿಖರವಾದ ಕಾರಣ ಮತ್ತು ದೀರ್ಘಾವಧಿಯ ಪರಿಣಾಮಗಳನ್ನು ಹೆಚ್ಚು ಅಧ್ಯಯನ ಮಾಡಬೇಕಾಗಿದೆ ಎಂದು ಸುದ್ದಿಮಾಧ್ಯಮಕ್ಕೆ ಮಾರ್ಕ್ಸ್ ತಿಳಿಸಿದ್ದಾರೆ.


ಇದನ್ನೂ ಓದಿ: ಹೃದಯದ ಸಮಸ್ಯೆಯಿಂದ ಕ್ಯಾನ್ಸರ್​ವರೆಗೆ ಕಪ್ಪು ಬೆಳ್ಳುಳ್ಳಿ ಪ್ರಯೋಜನಗಳಿವು!


ಹೃದಯದಲ್ಲಿರುವ ಸ್ನಾಯುಗಳು ಸೇರಿದಂತೆ ಎಲ್ಲಾ ಸ್ನಾಯುಗಳ ಸಂಕೋಚನಕ್ಕೆ ಕ್ಯಾಲ್ಸಿಯಂ ಅವಶ್ಯಕ. ಕ್ಯಾಲ್ಸಿಯಂ ಅನ್ನು ಸ್ನಾಯು ಕೋಶಗಳಲ್ಲಿ ಸಂಗ್ರಹಿಸಲಾಗುತ್ತದೆ, ನಂತರ ಅದನ್ನು ಬೇಕಾದ ಹಾಗೆ ಬಿಡುಗಡೆ ಮಾಡಲು ವಿಶೇಷ ಚಾನಲ್‌ಗಳು ತೆರೆಯಲ್ಪಡುತ್ತವೆ. ಹೃದಯ ವೈಫಲ್ಯದ ಸಮಯದಲ್ಲಿ ಹೃದಯ ಸ್ನಾಯುವಿನ ಸಂಕೋಚನಕ್ಕೆ ನೆರವು ನೀಡಲು ಈ ಚಾನಲ್ ತೆರೆದಿರುತ್ತದೆ.


ಕ್ಯಾಲ್ಸಿಯಂ ಸೋರಿಕೆಯು ಅಂತಿಮವಾಗಿ ಕ್ಯಾಲ್ಸಿಯಂ ನಿಕ್ಷೇಪಗಳನ್ನು ಹೊರಹಾಕುತ್ತದೆ, ಸ್ನಾಯುವನ್ನು ದುರ್ಬಲಗೊಳಿಸುತ್ತದೆ.


ಹೆಚ್ಚಿನ ಅಧ್ಯಯನ ಅಗತ್ಯವಿದೆ


ಇಲಿಗಳು ಹಾಗೂ ಇತರ ದಂಶಕಗಳ ಹೃದಯಗಳ ಮೇಲೆ ರೋಗವು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪರಿಶೀಲಿಸುವ ಮೂಲಕ, SARS-CoV-2 ಉಂಟುಮಾಡಬಹುದಾದ ಹೃದಯದ ಬದಲಾವಣೆಗಳನ್ನು ಇನ್ನಷ್ಟು ತನಿಖೆ ಮಾಡಲು ಮಾರ್ಕ್ಸ್ ಬಯಸಿರುವುದಾಗಿ ತಿಳಿಸಿದ್ದಾರೆ.


ಪ್ರಾಣಿಗಳು ಸೋಂಕಿಗೆ ಒಳಗಾದಾಗ ಮತ್ತು ಅವು ಚೇತರಿಸಿಕೊಂಡ ನಂತರ, ಹೀಗೆ ಹಂತ ಹಂತವಾಗಿ ಪರಿಣಾಮಗಳನ್ನು ಮಾಪನ ಮಾಡಲಾಗುತ್ತದೆ ಎಂದು ಮಾರ್ಕ್ಸ್ ಸೂಚಿಸಿದ್ದಾರೆ.


ಹಿಂದಿನ ತನಿಖೆಗಳ ಪ್ರಕಾರ, ಕೋವಿಡ್ -19 ಸೋಂಕುಗಳು ಮತ್ತು ಹೃದಯ ಸಂಬಂಧಿ ಸಮಸ್ಯೆಗಳ ನಡುವೆ ಸಂಪರ್ಕವಿದೆ ಎಂಬುದು ತಿಳಿದು ಬಂದಿದೆ.




ಕೋವಿಡ್-19 ಹೊಂದಿರುವ ವ್ಯಕ್ತಿಗಳು ಅನಿಯಮಿತ ಹೃದಯ ಬಡಿತಗಳು, ಹೃದಯಾಘಾತಗಳು ಮತ್ತು ಪಾರ್ಶ್ವವಾಯುಗಳಂತಹ ಹಲವಾರು ಹೃದಯ-ಸಂಬಂಧಿತ ಅಪಾಯಗಳ ಹೆಚ್ಚಿನ ಪ್ರಮಾಣವನ್ನು ಹೊಂದಿದ್ದಾರೆ ಹಾಗೂ ಈ ಅಪಾಯಗಳಿಗೆ ಹೆಚ್ಚು ತುತ್ತಾಗಿರುವುದು ಕಂಡುಬಂದಿದೆ.


ಈ ರೋಗಿಗಳಲ್ಲಿ ಕೆಲವರು COVID-19 ನಿಂದ ಚೇತರಿಸಿಕೊಂಡಿದ್ದರೆ ಇನ್ನೂ ಕೆಲವರಲ್ಲಿ ರೋಗನಿರ್ಣಯ ಅಸಾಧ್ಯವಾಗಿದೆ ಎಂಬುದು ತಿಳಿದುಬಂದಿದೆ.

First published: