• Home
  • »
  • News
  • »
  • lifestyle
  • »
  • COVID Symptoms: ಗಂಟಲು ಕೆರೆತ, ಮೂಗು ಸೋರುವಿಕೆ ಇನ್ಮುಂದೆ ಕೋವಿಡ್ ಲಕ್ಷಣಗಳಲ್ವಂತೆ! ಏನಿದರ ಹೊಸ ಲಕ್ಷಣ ನೋಡಿ

COVID Symptoms: ಗಂಟಲು ಕೆರೆತ, ಮೂಗು ಸೋರುವಿಕೆ ಇನ್ಮುಂದೆ ಕೋವಿಡ್ ಲಕ್ಷಣಗಳಲ್ವಂತೆ! ಏನಿದರ ಹೊಸ ಲಕ್ಷಣ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈಗ ಬಹುತೇಕ ಜನರು ವಾರಗಟ್ಟಲೆ ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರೂ ಅದು ಕೋವಿಡ್ ಆಗಿರಬಹುದೆಂಬ ಮೊದಲಿನಂತಹ ಭಯ ಈಗ ಅಷ್ಟೊಂದಾಗಿ ಕಾಣುತ್ತಿಲ್ಲ ಎನ್ನಬಹುದು.

  • Trending Desk
  • 4-MIN READ
  • Last Updated :
  • Share this:

ಎರಡೂವರೆ ವರ್ಷಗಳ ಹಿಂದೆ ಯಾರಾದರೂ ಬಂದು ನಮ್ಮ ಹತ್ತಿರ ಕೆಮ್ಮಿದರೆ, ಸೀನಿದರೆ ಅವರ ಮುಖವನ್ನು ನಾವು ಒಂದು ರೀತಿ ಭಯದಿಂದಲೇ ನೋಡುತ್ತಿದ್ದೆವು. ಹೌದು,  ವಿಪರೀತ ನೆಗಡಿ, ಕೆಮ್ಮು, ಗಂಟಲು ಕೆರೆತ ಮತ್ತು ಮೂಗು ಸೋರುವಿಕೆ ಎಲ್ಲವೂ ಕೋವಿಡ್-19 (Covid 19) ಸಾಂಕ್ರಾಮಿಕ ರೋಗದ ಸಾಮಾನ್ಯವಾದ ರೋಗಲಕ್ಷಣಗಳಾಗಿದ್ದವು ಅಂತ ಹೇಳಬಹುದು. ಆದರೆ ಈಗ ಬಹುತೇಕ ಜನರು ವಾರಗಟ್ಟಲೆ ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರೂ ಅದು ಕೋವಿಡ್ ಆಗಿರಬಹುದೆಂಬ ಮೊದಲಿನಂತಹ ಭಯ (Fear) ಈಗ ಅಷ್ಟೊಂದಾಗಿ ಕಾಣುತ್ತಿಲ್ಲ ಎನ್ನಬಹುದು. ಹಾಗಾಗಿ ಈ ರೋಗಲಕ್ಷಣಗಳ ಬಗ್ಗೆ ನಾವು ಅಷ್ಟಾಗಿ ತಲೆ ಕೆಡೆಸಿಕೊಳ್ಳುತ್ತಿಲ್ಲ ಅಂತ ಹೇಳಬಹುದು. ಹೌದು, ನಿಯಮಿತ ಮಧ್ಯಂತರಗಳಲ್ಲಿ ಹೊಸ ಕೋವಿಡ್ ತಳಿಗಳು ಅಪ್ಪಳಿಸುತ್ತಿರುವುದರಿಂದ ಮತ್ತು ಸೋಂಕಿಗೆ ಸಂಬಂಧಿಸಿದ ರೋಗಲಕ್ಷಣಗಳು ಕಾಲಾನಂತರದಲ್ಲಿ ಬದಲಾಗುತ್ತಿರುವುದರಿಂದ, ರೋಗವನ್ನು ಗುರುತಿಸುವುದು ಈಗ ಮೊದಲಿಗಿಂತ ಕಷ್ಟಕರವಾಗಿದೆ.


ಕೋವಿಡ್ ಸೋಂಕಿಗೆ ಸಂಬಂಧಿಸಿದ ರೋಗಲಕ್ಷಣಗಳು ಈಗ ತುಲನಾತ್ಮಕವಾಗಿ ಸೌಮ್ಯವಾಗಿದ್ದರೂ, ಅದರ ದೀರ್ಘಕಾಲೀನ ಪರಿಣಾಮಗಳು ಇನ್ನೂ ಕಳವಳಕಾರಿಯಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


ಅಲ್ಲದೆ, ಕೋವಿಡ್ ನಿಮ್ಮ ಹೃದಯ ಮತ್ತು ನರವ್ಯೂಹ ಸೇರಿದಂತೆ ನಿಮ್ಮ ಎಲ್ಲಾ ಅಂಗಗಳ ಮೇಲೆ ಪರಿಣಾಮ ಬೀರಬಹುದು, ಇದು ತೀವ್ರ ಕಾಯಿಲೆಗಳಿಗೆ ಕಾರಣವಾಗಬಹುದು. ಇದು ಈಗ ರೋಗವನ್ನು ಗುರುತಿಸಲು ಮತ್ತು ಚಿಕಿತ್ಸೆ ಪಡೆಯಲು ನಿಮಗೆ ಸಹಾಯ ಮಾಡುವ ಮುಖ್ಯವಾದ ರೋಗಲಕ್ಷಣ ಎಂದು ಪರಿಗಣಿಸಲಾಗಿದೆ.


ಬದಲಾಗಿವೆ ಕೋವಿಡ್-19 ಸಾಂಕ್ರಾಮಿಕ ರೋಗದ ಲಕ್ಷಣಗಳು


ಕೋವಿಡ್ ಸೋಂಕು ಮೊದಲನೇ ಬಾರಿಗೆ ಹರಡಲು ಶುರುವಾದಾಗ ವಾಸನೆ ಮತ್ತು ರುಚಿಯ ನಷ್ಟ, ತೀವ್ರ ಜ್ವರ ಮತ್ತು ಉಸಿರಾಟದ ತೊಂದರೆಯನ್ನು ಮುಖ್ಯವಾದ ರೋಗಲಕ್ಷಣಗಳು ಎಂದು ಪರಿಗಣಿಸಲಾಗಿತ್ತು.


ಆದರೆ ಒಮಿಕ್ರಾನ್ ಹೊರ ಹೊಮ್ಮುತ್ತಿದ್ದಂತೆ ಮತ್ತು ಹೆಚ್ಚು ಜನರು ಲಸಿಕೆಯನ್ನು ಹಾಕಿಸಿಕೊಂಡ ನಂತರದಲ್ಲಿ, ಸೋಂಕಿಗೆ ಸಂಬಂಧಿಸಿದ ರೋಗಲಕ್ಷಣಗಳು ಬದಲಾದವು. ವ್ಯಾಪಕವಾಗಿ ವರದಿಯಾದ ರೋಗಲಕ್ಷಣಗಳಲ್ಲಿ ಗಂಟಲು ನೋವು, ಮೂಗು ಸೋರುವಿಕೆ, ತಲೆನೋವು ಮತ್ತು ಆಯಾಸ ಸೇರಿವೆ.


ಈಗ, ಕೋವಿಡ್-ಸಂಬಂಧಿತ ರೋಗಲಕ್ಷಣಗಳು ಮತ್ತೆ ಬದಲಾಗಿವೆ ಎಂದು ತೋರುತ್ತದೆ, ಈಗ ಅನೇಕರು ಭುಜಗಳು ಮತ್ತು ಕಾಲುಗಳಲ್ಲಿ ತೀಕ್ಷ್ಣವಾದ ನೋವನ್ನು ವರದಿ ಮಾಡಿದ್ದಾರೆ, ಇದನ್ನು ಮಯಾಲ್ಜಾ ಎಂದು ಕರೆಯಲಾಗುತ್ತದೆ.


ಏನಿದು ಮಯಾಲ್ಜಾ?


ಸ್ನಾಯು ನೋವುಗಳು ಎಂದೂ ಕರೆಯಲ್ಪಡುವ ಮಯಾಲ್ಜಾ, ವೈರಸ್ ಗೆ ಪ್ರತಿಕ್ರಿಯೆಯಾಗಿ ಪ್ರತಿರಕ್ಷಣಾ ಕೋಶಗಳು ಬಿಡುಗಡೆ ಮಾಡುವ ಉರಿಯೂತದ ಅಣುಗಳ ಪರಿಣಾಮಗಳಿಂದ ಉದ್ಭವಿಸುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ: ಬೆಳ್ಳುಳ್ಳಿ ಎಲ್ಲರಿಗೂ ಸುರಕ್ಷಿತವಲ್ಲ, ಈ ಸಮಸ್ಯೆಗಳಿದ್ದವರು ಸೇವಿಸಬಾರದು


ಆರಂಭದಿಂದಲೂ ಕೋವಿಡ್ ರೋಗಲಕ್ಷಣಗಳನ್ನು ಟ್ರ್ಯಾಕ್ ಮಾಡುತ್ತಿರುವ ಜೋ ಕೋವಿಡ್ ಅಪ್ಲಿಕೇಶನ್ ಪ್ರಕಾರ, ಮಯಾಲ್ಜಾವನ್ನು ಕೋವಿಡ್ ನ ಮುಖ್ಯವಾದ ಲಕ್ಷಣವೆಂದು ಪರಿಗಣಿಸಲಾಗಿದೆ ಮತ್ತು ಈಗ ವ್ಯಾಪಕವಾಗಿ ವರದಿಯಾಗಿದೆ.


ಒಮಿಕ್ರಾನ್ ರೂಪಾಂತರವನ್ನು ಮೊದಲು ಪತ್ತೆ ಹಚ್ಚಿದ ಡಾ.ಏಂಜಲಿಕ್ ಕೊಯೆಟ್ಜಿ, ಮಯಾಲ್ಜಾ ಸ್ಥಿತಿಯು ಲಸಿಕೆ ಪಡೆಯದ ರೋಗಿಗಳ ಮೇಲೆ ಹೆಚ್ಚು ತೀವ್ರವಾಗಿ ಪರಿಣಾಮ ಬೀರುತ್ತದೆ ಎಂದಿದ್ದಾರೆ.


ಈ ಸ್ನಾಯುಗಳ ನೋವು ಎಷ್ಟು ಕೆಟ್ಟದಾಗಿರುತ್ತದೆ?


ಕೋವಿಡ್-ಸಂಬಂಧಿತ ಸ್ನಾಯು ನೋವು ಆಗಾಗ್ಗೆ ಭುಜಗಳು ಅಥವಾ ಕಾಲುಗಳ ಮೇಲೆ ಪರಿಣಾಮ ಬೀರುತ್ತದೆ, ಇದು ಜನರನ್ನು ತೀವ್ರವಾದ ಸಂಕಷ್ಟಕ್ಕೆ ದೂಡುತ್ತದೆ ಎಂದು ಅಧ್ಯಯನವು ಹೇಳುತ್ತದೆ.


What is another name for Corona, covid symptoms , these are not covid symptoms , What does symptoms mean in medical terms, What are the common symptoms, medical report to corona, kannada news, karnataka news, ಕನ್ನಡ ನ್ಯೂಸ್​, ಕರ್ನಾಟಕ ನ್ಯೂಸ್​, ಕೋವಿಡ್​ 19 ವೈರಸ್​ ಯಾವುದು, ಕೊರೊನಾ ವೈರಸ್​ ಅಂದ್ರೆ ಏನು, ಕೋವಿಡ್​ 19 ಅಂದ್ರೆ ಏನು, ಕೋವಿಡ್​ ಇಂದ ಬಚಾವ್​ ಆಗೋದು ಹೇಗೆ
ಸಾಂದರ್ಭಿಕ ಚಿತ್ರ


"ಕೋವಿಡ್-ಸಂಬಂಧಿತ ಸ್ನಾಯು ನೋವುಗಳು ಸೌಮ್ಯದಿಂದ ಸಾಕಷ್ಟು ತೀವ್ರವಾಗಿ ಮನುಷ್ಯನನ್ನು ದುರ್ಬಲಗೊಳಿಸಬಹುದು" ಎಂದು ಅಧ್ಯಯನ ಅಪ್ಲಿಕೇಶನ್ ಹೇಳುತ್ತದೆ.


"ಕೆಲವು ಜನರಿಗೆ, ಈ ಸ್ನಾಯು ನೋವು ಅವರನ್ನು ದೈನಂದಿನ ಕೆಲಸಗಳನ್ನು ಮಾಡದಂತೆ ತಡೆಯುತ್ತದೆ" ಎಂದು ಹೇಳುತ್ತದೆ. ಕೋವಿಡ್ ನಿಂದಾಗಿ ಸಂಭವಿಸುವ ಮಯಾಲ್ಜಾ ಸರಾಸರಿ ಎರಡರಿಂದ ಮೂರು ದಿನಗಳವರೆಗೆ ಇರುತ್ತದೆ ಎಂದು ಹೇಳಲಾಗುತ್ತದೆ.


ನೀವು ಅಂತಹ ನೋವನ್ನು ಅನುಭವಿಸುತ್ತಿದ್ದರೆ, ಕೂಡಲೇ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಒಳ್ಳೆಯದು.

First published: