• Home
  • »
  • News
  • »
  • lifestyle
  • »
  • Coronavirus Symptoms: ಲಸಿಕೆ ಹಾಕಿಸಿಕೊಂಡವರನ್ನೂ ಬಿಡಲ್ಲ ಕೊರೋನಾ, ಈ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ

Coronavirus Symptoms: ಲಸಿಕೆ ಹಾಕಿಸಿಕೊಂಡವರನ್ನೂ ಬಿಡಲ್ಲ ಕೊರೋನಾ, ಈ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

COVID Symptom In Vaccinated People: ಲಸಿಕೆ ಪಡೆದ ವ್ಯಕ್ತಿಗಳು ಮತ್ತೆ ಸೋಂಕಿಗೆ ಒಳಗಾಗಲು ಸಾಧ್ಯವಿಲ್ಲ ಎಂಬ ನಂಬಿಕೆಗೆ ವಿರುದ್ಧವಾಗಿದೆ, ಯುಕೆಯ ಜೊಇ ಕೋವಿಡ್ ಅಧ್ಯಯನವು ಕರೋನವೈರಸ್ ವಿರುದ್ಧ ಲಸಿಕೆ ಪಡೆದ ಜನರಲ್ಲಿ ಕಂಡು ಬರುವ ಐದು ಸಾಮಾನ್ಯ ರೋಗಲಕ್ಷಣಗಳನ್ನು ಪಟ್ಟಿ ಮಾಡಿದೆ.

ಮುಂದೆ ಓದಿ ...
  • Share this:

ಕೋವಿಡ್-19 (Covid 19) ಸಾಂಕ್ರಾಮಿಕ ರೋಗದ (Pandemic) ರೋಗಲಕ್ಷಣಗಳು ಇದೀಗ ನಿಧಾನವಾಗಿ ಬದಲಾಗುತ್ತಿರುವುದನ್ನ ನಾವು ನೋಡುತ್ತಿದ್ದೇವೆ. ಕೋವಿಡ್ ಸೋಂಕಿನ (Coronavirus) ಬೇರೆ ಬೇರೆ ರೂಪಾಂತರಗಳು ಬೇರೆ ಬೇರೆ ರೋಗಲಕ್ಷಣಗಳನ್ನು (Symptoms) ಹೊಂದಿರುವುದನ್ನು ಸಹ ನಾವು ನೋಡುತ್ತಿದ್ದೇವೆ. ಹಿಂದಿನ ಅಲೆಯಲ್ಲಿ ಕಂಡು ಬಂದ ರೋಗಲಕ್ಷಣಗಳು ಪ್ರಸ್ತುತ ತರಂಗದಲ್ಲಿ ಕಡಿಮೆ ಸಾಮಾನ್ಯವಾಗಿರುತ್ತವೆ. ಅಲ್ಲದೆ, ಲಸಿಕೆ ಪಡೆದ ಮತ್ತು ಲಸಿಕೆ (Vaccination)  ಪಡೆಯದ ಜನರಲ್ಲಿ ರೋಗಲಕ್ಷಣಗಳು ಕಂಡು ಬರುವ ರೀತಿಯಲ್ಲಿ ಸಹ ವ್ಯತ್ಯಾಸವಿದೆ ಎನ್ನಲಾಗುತ್ತಿದೆ.


ಲಸಿಕೆ ಪಡೆದ ವ್ಯಕ್ತಿಗಳಿಗೂ ಸಹ ಕೋವಿಡ್ ಬರುತ್ತದೆ..


ಲಸಿಕೆ ಪಡೆದ ವ್ಯಕ್ತಿಗಳು ಮತ್ತೆ ಸೋಂಕಿಗೆ ಒಳಗಾಗಲು ಸಾಧ್ಯವಿಲ್ಲ ಎಂಬ ನಂಬಿಕೆಗೆ ವಿರುದ್ಧವಾಗಿದೆ, ಯುಕೆಯ ಜೊಇ ಕೋವಿಡ್ ಅಧ್ಯಯನವು ಕರೋನವೈರಸ್ ವಿರುದ್ಧ ಲಸಿಕೆ ಪಡೆದ ಜನರಲ್ಲಿ ಕಂಡು ಬರುವ ಐದು ಸಾಮಾನ್ಯ ರೋಗಲಕ್ಷಣಗಳನ್ನು ಪಟ್ಟಿ ಮಾಡಿದೆ.


ಓಮಿಕ್ರಾನ್ ರೂಪಾಂತರದ ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು 'ಬ್ರೇಕ್ ಥ್ರೂ' ಸೋಂಕುಗಳು ಸಾಮಾನ್ಯವಾಗಿವೆ. ಆದರೆ, ಲಸಿಕೆಯನ್ನು ಹಾಕಿಸಿಕೊಂಡ ಜನರಿಗೆ ತೀವ್ರ ಕಾಯಿಲೆಗಳಿಂದ ರಕ್ಷಣೆ ಒದಗುತ್ತದೆ ಎಂದು ತಜ್ಞರು ಹೇಳಿದ್ದಾರೆ.


ಆದ್ದರಿಂದ, ಈ ಜನರು ತಿಳಿದಿರಬೇಕಾದ ಐದು ರೋಗಲಕ್ಷಣಗಳು ಇಲ್ಲಿವೆ ನೋಡಿ. ಇದನ್ನು ಗಮನಿಸಿ ಮತ್ತು ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಿ ಮತ್ತು ರೋಗಲಕ್ಷಣಗಳು ಸಂಪೂರ್ಣವಾಗಿ ದೂರವಾಗುವವರೆಗೆ ಪ್ರತ್ಯೇಕವಾಗಿರಿ.


1. ಗಂಟಲು ಕೆರತ


ಗಂಟಲಿನಲ್ಲಿ ನೋವು ಅಥವಾ ತುರಿಕೆಯಂತಹ  ಸಮಸ್ಯೆ ಸಾಮಾನ್ಯವಾಗಿ ಜನರಲ್ಲಿ ಕೋವಿಡ್ ಬಂದಾಗ ಕಂಡು ಬರುತ್ತದೆ. ಈ ರೋಗಲಕ್ಷಣವು ಓಮಿಕ್ರಾನ್ ಅಲೆಯ ಆರಂಭಿಕ ಹಂತದಲ್ಲಿ ಅತ್ಯಂತ ಸಾಮಾನ್ಯ ರೋಗಲಕ್ಷಣಗಳಲ್ಲಿ ಒಂದಾಗಿತ್ತು.


ಲಸಿಕೆ ಪಡೆದ ವ್ಯಕ್ತಿಗಳಲ್ಲಿ ಗಂಟಲು ನೋವು ಕೋವಿಡ್ ನ ಅತ್ಯಂತ ಸಾಮಾನ್ಯ ಲಕ್ಷಣಗಳಾಗಿವೆ ಎಂದು ವರದಿಯಾಗಿದೆ ಎಂದು ಜೊಇ ಕೋವಿಡ್ ಅಧ್ಯಯನವು ಹೇಳಿದೆ. ಮಾತನಾಡಲು ಕಷ್ಟವಾಗುವುದು, ಆಹಾರವನ್ನು ನುಂಗುವಾಗ ನೋವು ಮತ್ತು ಗಂಟಲಿನಲ್ಲಿ ನಿರಂತರವಾಗಿ ಸುಡುವ ಸಂವೇದನೆ ಈ ರೋಗಲಕ್ಷಣದ ಲಕ್ಷಣಗಳಾಗಿವೆ.
2. ಮೂಗು ಸೋರುವುದು


ಇದು ಹಿಂದಿನ ಕೋವಿಡ್ ಅಲೆಗಳಲ್ಲಿಯೂ ಕಂಡು ಬಂದ ಸಾಮಾನ್ಯ ಸಂಕೇತವಾಗಿದೆ. ಇದು ಉಸಿರಾಟದ ಕಾಯಿಲೆಯಾಗಿರುವುದರಿಂದ, ಜನರು ಸರಿಯಾಗಿ ಲಸಿಕೆ ಪಡೆದಾಗಲೂ ಸಹ ಅವರ ಮೂಗು ಸೋರಬಹುದು.


ವೈರಸ್ ನಿಂದ ಉಂಟಾಗುವ ಸೋಂಕಿನಿಂದಾಗಿ ಮೂಗಿನಿಂದ ನೀರಿನಂತಹ ಹೊರಹರಿವು ದಿನವಿಡೀ ಕಂಡು ಬರುತ್ತದೆ. ನಿಮಗೆ ಕೋವಿಡ್ ಇದ್ದಾಗ ಮತ್ತು ಈ ಲಕ್ಷಣ ಕಂಡು ಬಂದರೆ ಗಂಟಲು ಮತ್ತು ಮೂಗಿನಲ್ಲಿ ಸೋಂಕಿನಿಂದಾಗಿ ಮೂಗಿನಲ್ಲಿ ಕಿರಿಕಿರಿ ಅಂತ ಅನ್ನಿಸುತ್ತದೆ.


ಇದನ್ನೂ ಓದಿ: ನಿಮ್ಮ ಲೈಫ್​ಸ್ಟೈಲ್​ ಈ ರೀತಿ ಬದಲಾದ್ರೆ ಮಧುಮೇಹ ಕಂಟ್ರೋಲ್ ಮಾಡ್ಬೋದು


3. ಮೂಗು ಕಟ್ಟುವುದು


ಮೂಗು ಕಟ್ಟುವುದರಿಂದ ಸುಗಮವಾಗಿ ಉಸಿರಾಡಲು ಕಷ್ಟವಾಗುತ್ತದೆ. ಕುಳಿತಿರುವಾಗಲೂ ವ್ಯಕ್ತಿಯು ಉಸಿರಾಟಕ್ಕಾಗಿ ಏದುಸಿರು ಬಿಡುತ್ತಾನೆ. ಮೂಗು ಕಟ್ಟಿರುವುದರಿಂದ ವ್ಯಕ್ತಿಯು ಸರಿಯಾಗಿ ಉಸಿರಾಡಲು ಮತ್ತು ನಿದ್ರೆಗೆ ಹೋಗಲು ಕಷ್ಟವಾಗುತ್ತದೆ.


ಹೀಗಾಗಿ ಚೆನ್ನಾಗಿ ನಿದ್ರೆ ಮಾಡುವುದಕ್ಕೂ ಸಹ ಆಗುವುದಿಲ್ಲ. ಮೂಗಿಗೆ ಡ್ರಾಪ್ಸ್ ಗಳು ತಾತ್ಕಾಲಿಕ ಪರಿಹಾರವನ್ನು ನೀಡಬಹುದು, ಆದರೆ ರೋಗಕಾರಕಗಳಿಂದ ಮೂಗಿನ ಮಾರ್ಗವನ್ನು ಸ್ವಚ್ಛವಾಗಿಡಲು ಹಬೆಯನ್ನು ತೆಗೆದುಕೊಳ್ಳಿರಿ.


4. ನಿರಂತರ ಕೆಮ್ಮು


ಕೋವಿಡ್ ಸಮಯದಲ್ಲಿ ವ್ಯಕ್ತಿಯು ನಿರಂತರವಾಗಿ ಕೆಮ್ಮುವುದನ್ನು ನಾವು ನೋಡಿರುತ್ತೇವೆ. ಇದು ಅನೇಕ ಜನರಲ್ಲಿ ಕಂಡು ಬರದಿದ್ದರೂ, ಇತರರಲ್ಲಿ ಇದು ತೀವ್ರವಾದ ರೋಗಲಕ್ಷಣವಾಗಿದೆ. ನಿರಂತರ ಕೆಮ್ಮಿನ ದೀರ್ಘ ಸಮಸ್ಯೆಗಳು ಒಬ್ಬ ವ್ಯಕ್ತಿಯನ್ನು ನಿರ್ಲಿಪ್ತರನ್ನಾಗಿ ಮಾಡಬಹುದು.


ಇದು ವ್ಯಕ್ತಿಯ ದೇಹದಿಂದ ಶಕ್ತಿಯನ್ನು ಹೊರ ಹಾಕಬಹುದು ಮತ್ತು ಅವನು ಅಥವಾ ಅವಳು ದೈನಂದಿನ ಕೆಲಸಗಳನ್ನು ಸಹ ಮಾಡಲು ಅಸಮರ್ಥರಾಗುವಂತೆ ಮಾಡುತ್ತದೆ. ಈ ನಿರಂತರವಾಗಿ ಕಾಡುವ ಕೆಮ್ಮನ್ನು ಗಿಡಮೂಲಿಕೆಗಳ ಪರಿಹಾರಗಳೊಂದಿಗೆ ಮನೆಯಲ್ಲಿಯೇ ಗುಣಪಡಿಸಿಕೊಳ್ಳಬಹುದು. ಕೆಮ್ಮು ಪ್ರಾರಂಭವಾಗುವ ಹಂತದಲ್ಲಿದ್ದಾಗ ಅದನ್ನು ಕಡಿಮೆ ಮಾಡಲು ಶುಂಠಿ ಚಹಾವನ್ನು ಸೇವಿಸಿರಿ.


ಇದನ್ನೂ ಓದಿ: ತೂಕ ಇಳಿಸೋಕೆ ಊಟ ಬಿಡೋದು ಈ ಸಮಸ್ಯೆಗಳಿಗೆ ಕಾರಣವಾಗಬಹುದು


5. ತಲೆನೋವು


ಗಂಟಲು ಕೆರತ, ಕೆಮ್ಮು ಮತ್ತು ಮೂಗು ಕಟ್ಟಿಕೊಂಡಿರುವುದರಿಂದ ತಲೆನೋವು ಸ್ಪಷ್ಟವಾಗಿ ಅನುಭವಕ್ಕೆ ಬರುತ್ತದೆ. ಮೂಲವಾಗಿ ಉಸಿರಾಟವಾಡಲು ಕಷ್ಟವಾಗುವುದು ತಲೆಯ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಅಲ್ಲದೆ, ಸೋಂಕು ತಲೆನೋವನ್ನು ಹೆಚ್ಚು ಮಾಡಬಹುದು. ಗಿಡಮೂಲಿಕೆ ಪರಿಹಾರಗಳು ಕೆಲಸ ಮಾಡದಿದ್ದರೆ ಅಥವಾ ನೋವು ಜಾಸ್ತಿಯಾದರೆ ವೈದ್ಯರನ್ನು ಕಾಣುವುದು ಒಳ್ಳೆಯದು.

Published by:Sandhya M
First published: