• Home
  • »
  • News
  • »
  • lifestyle
  • »
  • COVID mRNA ವ್ಯಾಕ್ಸಿನೇಷನ್‌ ಹಾಕಿಸಿಕೊಂಡರೆ ಜೀವಕ್ಕೆ ಆಪತ್ತು! 28 ದಿನಗಳಲ್ಲೇ ನಿಲ್ಲುತ್ತಾ ಹೃದಯ ಬಡಿತ?

COVID mRNA ವ್ಯಾಕ್ಸಿನೇಷನ್‌ ಹಾಕಿಸಿಕೊಂಡರೆ ಜೀವಕ್ಕೆ ಆಪತ್ತು! 28 ದಿನಗಳಲ್ಲೇ ನಿಲ್ಲುತ್ತಾ ಹೃದಯ ಬಡಿತ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಕೊರೋನಾ ವ್ಯಾಕ್ಸಿನೇಷನ್‌ ನಿಂದ ಕೆಲವೊಂದು ಅಡ್ಡ ಪರಿಣಾಮಗಳು ಇವೆ ಅನ್ನೋದಂತೂ ಸತ್ಯ. ಆದ್ರೆ COVID mRNA ವ್ಯಾಕ್ಸಿನೇಷನ್‌ ಹಾಕಿಸಿಕೊಂಡರೆ ಜೀವಕ್ಕೆ ಆಪತ್ತು ಎನ್ನುತ್ತಾರೆ ಸಂಶೋಧಕರು.

  • Share this:

ಕಳೆದ ಎರಡು ವರ್ಷಗಳ ಹಿಂದೆ ಆರಂಭವಾದ ಕೊರೋನಾ (Corona) ಮಹಾಮಾರಿ ಇಡೀ ಜಗತ್ತನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿತ್ತು. ಅಂತೂ ಇಂತೂ ಕೊನೆಗೂ ಬಂದ ಕೊರೋನಾ ಲಸಿಕೆ (Corona Vaccine) ಹಲವರ ಪ್ರಾಣ ಕಾಪಾಡಿತು. ಆದ್ರೆ ಈ ಕೊರೋನಾ ವ್ಯಾಕ್ಸಿನೇಷನ್‌ ನಿಂದ ಕೆಲವೊಂದು ಅಡ್ಡ ಪರಿಣಾಮಗಳು ಇವೆ ಅನ್ನೋದಂತೂ ಸತ್ಯ. ಆದ್ರೆ COVID mRNA ವ್ಯಾಕ್ಸಿನೇಷನ್‌ ಹಾಕಿಸಿಕೊಂಡರೆ ಜೀವಕ್ಕೆ ಆಪತ್ತು ಎನ್ನುತ್ತಾರೆ ಸಂಶೋಧಕರು. ಹೌದು, COVID ವ್ಯಾಕ್ಸಿನೇಷನ್ ನಂತರ 28 ದಿನಗಳಲ್ಲಿ ಹೃದಯ ಸಂಬಂಧಿ ಸಾವಿನ ಘಟನೆಗಳಲ್ಲಿ 84% ಹೆಚ್ಚಳವನ್ನು ಅಧ್ಯಯನವು ಕಂಡುಹಿಡಿದಿದೆ.


COVID mRNA ಲಸಿಕೆಗಳು ಹೃದಯ ಸಂಬಂಧಿ ಸಾವಿನ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ ಎನ್ನಲಾಗಿದೆ. ಅದರಲ್ಲೂ ವಿಶೇಷವಾಗಿ 18 ರಿಂದ 39 ವರ್ಷ ವಯಸ್ಸಿನ ಪುರುಷರಲ್ಲಿ. ಅವುಗಳ ಬಳಕೆಯ ವಿರುದ್ಧ ಮಾತನಾಡುತ್ತಾ, ಕೆಲವು ಹೃದಯ ಸಂಬಂಧಿ ಕಾಯಿಲೆಗಳಿರುವ ಜನರು ಈ ಲಸಿಕೆಗಳನ್ನು ತೆಗೆದುಕೊಳ್ಳುವ ಮೊದಲು ತಮ್ಮ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.


ಹೃದಯ ಸಂಬಂಧಿ ಸಾವಿನ ಅಪಾಯ ಹೆಚ್ಚು!


ಫ್ಲೋರಿಡಾ ಸರ್ಜನ್ ಜನರಲ್ ಡಾ. ಜೋಸೆಫ್ ಎ ಲಡಾಪೋ, "ಇಂದು, ಸಾರ್ವಜನಿಕರು ತಿಳಿದಿರಬೇಕಾದ COVID-19 mRNA ಲಸಿಕೆಗಳ ಕುರಿತು ನಾವು ವಿಶ್ಲೇಷಣೆಯನ್ನು ಬಿಡುಗಡೆ ಮಾಡಿದ್ದೇವೆ. ಈ ವಿಶ್ಲೇಷಣೆಯು 18-39 ಪುರುಷರಲ್ಲಿ ಹೃದಯ ಸಂಬಂಧಿ ಸಾವಿನ ಹೆಚ್ಚಿನ ಅಪಾಯವನ್ನು ತೋರಿಸಿದೆ. ಸತ್ಯದ ಬಗ್ಗೆ ಮೌನವಾಗಿರಿ" ಎಂದು ಲಡಾಪೋ ಟ್ವೀಟ್ ಮಾಡಿದ್ದಾರೆ. ವಿಶ್ಲೇಷಣೆಯನ್ನು ಫ್ಲೋರಿಡಾ ಡಿಪಾರ್ಟ್ಮೆಂಟ್ ಆಫ್ ಹೆಲ್ತ್ (ಇಲಾಖೆ) ಸ್ವಯಂ-ನಿಯಂತ್ರಿತ ಕೇಸ್ ಸರಣಿಯ ಮೂಲಕ ನಡೆಸಿತು, ಇದು ಮೂಲತಃ ಲಸಿಕೆ ಸುರಕ್ಷತೆಯನ್ನು ಮೌಲ್ಯಮಾಪನ ಮಾಡಲು ಅಭಿವೃದ್ಧಿಪಡಿಸಿದ ತಂತ್ರವಾಗಿದೆ.


mRNA ಚುಚ್ಚುಮದ್ದಿನ ನಂತರ 28 ದಿನಗಳಲ್ಲಿ 18-39 ವರ್ಷ ವಯಸ್ಸಿನ ಪುರುಷರಲ್ಲಿ ಹೃದಯ ಸಂಬಂಧಿ ಸರಾಸರಿ ಸಾವಿನ ಪ್ರಮಾಣ 84% ಹೆಚ್ಚಳವಾಗಿರುವುದನ್ನು ಅಧ್ಯಯನ ಕಂಡುಹಿಡಿದಿದೆ.


ಇದನ್ನೂ ಓದಿ: ತಾತನ ಜೊತೆ ಪಿರಿಯಡ್ಸ್​ ಬಗ್ಗೆ ಮಾತನಾಡ್ತಾರಂತೆ ಬಿಗ್​ ಬಿ ಮೊಮ್ಮಗಳು ನವ್ಯ ನವೇಲಿ


ಲಸಿಕೆ ತೆಗೆದುಕೊಳ್ಳುವ ಬಗ್ಗೆ ಯಾರು ಜಾಗರೂಕರಾಗಿರಬೇಕು?


ಮಯೋಕಾರ್ಡಿಟಿಸ್ ಮತ್ತು ಪೆರಿಕಾರ್ಡಿಟಿಸ್‌ನಂತಹ ಮೊದಲೇ ಅಸ್ತಿತ್ವದಲ್ಲಿರುವ ಹೃದಯ ಸಂಬಂಧಿ ಕಾಯಿಲೆಗಳನ್ನು ಹೊಂದಿರುವ ರೋಗಿಗಳು ವ್ಯಾಕ್ಸಿನೇಷನ್ ಅನ್ನು ಪರಿಗಣಿಸುವಾಗ ಹೆಚ್ಚು ಜಾಗರೂಕರಾಗಿರಬೇಕು. ಅಂಥವರು ಅಗತ್ಯವಾಗಿ ವೈದ್ಯರೊಂದಿಗೆ ಚರ್ಚಿಸಬೇಕು. COVID-19 ಗೆ ಹೆಚ್ಚಿನ ಮಟ್ಟದ ಜಾಗತಿಕ ರೋಗನಿರೋಧಕ ಶಕ್ತಿಯೊಂದಿಗೆ, ಈ ವಯಸ್ಸಿನ ಪುರುಷರಲ್ಲಿ ಹೃದಯ ಸಂಬಂಧಿ ಸಾವಿನ ಅಸಹಜವಾಗಿ ಹೆಚ್ಚಿನ ಅಪಾಯ ಉಂಟುಮಾಡುತ್ತದೆ. ಆದರೆ mRNA ಅಲ್ಲದ ಲಸಿಕೆಗಳು ಈ ಹೆಚ್ಚಿನ ಅಪಾಯಗಳನ್ನು ಹೊಂದಿರುವುದಿಲ್ಲ.


"ಲಸಿಕೆಗಳು ಸೇರಿದಂತೆ ಯಾವುದೇ ಔಷಧಿಗಳ ಸುರಕ್ಷತೆ ಮತ್ತು ಪರಿಣಾಮವನ್ನು ಅಧ್ಯಯನ ಮಾಡುವುದು ಸಾರ್ವಜನಿಕ ಆರೋಗ್ಯದ ಪ್ರಮುಖ ಅಂಶವಾಗಿದೆ" ಎಂದು ಸರ್ಜನ್ ಜನರಲ್ ಡಾ ಜೋಸೆಫ್ ಲಡಾಪೋ ಅಭಿಪ್ರಾಯ ಪಟ್ಟಿದ್ದಾರೆ."ಇಲ್ಲಿ ಸುರಕ್ಷತೆಗೆ ಕಡಿಮೆ ಗಮನವನ್ನು ನೀಡಲಾಗಿದೆ ಮತ್ತು ಅನೇಕ ವ್ಯಕ್ತಿಗಳ ಕಳವಳಗಳನ್ನು ತಳ್ಳಿಹಾಕಲಾಗಿದೆ - ಇವು ಫ್ಲೋರಿಡಿಯನ್ನರಿಗೆ ತಿಳಿಸಬೇಕಾದ ಪ್ರಮುಖ ಸಂಶೋಧನೆಗಳಾಗಿವೆ" ಎಂದೂ ಅವರು ಹೇಳಿದ್ದಾರೆ.


ಇದನ್ನೂ ಓದಿ: ಹೃದಯಾಘಾತವಾದಾಗ ನಿಮಗೆ ನೀವೇ CPR ನೀಡಬಹುದಾ? ವೈದ್ಯರು ಹೇಳೋದು ಹೀಗೆ


ಈ ಮಧ್ಯೆ, ಭಾರತದ ಮೊದಲ mRNA ಕೋವಿಡ್ -19 ಲಸಿಕೆ Gennova ನ GEMCOVAC-19 ತುರ್ತು ಬಳಕೆಗಾಗಿ ಶೀಘ್ರದಲ್ಲೇ ಲಭ್ಯವಿರುತ್ತದೆ. ಲಸಿಕೆ ಸುರಕ್ಷತೆ, ಇಮ್ಯುನೊಜೆನಿಸಿಟಿ ಮತ್ತು ಟೋಲರೆಬಿಲಿಟಿ ಮೌಲ್ಯಮಾಪನ ಮಾಡಲು ಕಂಪನಿಯು 4000 ಜನರ ಮೇಲೆ ಮೇಲೆ ಹಂತ 2 ಮತ್ತು ಹಂತ 3 ಡೇಟಾ ಪ್ರಯೋಗಗಳನ್ನು ನಡೆಸಿದೆ. ಭಾರತದ ಔಷಧ ನಿಯಂತ್ರಕ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಶೀಘ್ರದಲ್ಲೇ ಲಸಿಕೆಗೆ EUA ನೀಡುವ ನಿರೀಕ್ಷೆಯಿದೆ.

Published by:ವಾಸುದೇವ್ ಎಂ
First published: