• Home
  • »
  • News
  • »
  • lifestyle
  • »
  • Early Puberty: ಹೆಣ್ಣು ಮಕ್ಕಳಲ್ಲಿ ಅಕಾಲಿಕ ಪ್ರೌಢಾವಸ್ಥೆಗೆ ಕಾರಣವಾಗ್ತಿದೆ ಕೊರೋನಾ, ಸಂಶೋಧನೆಯಲ್ಲಿ ಬಹಿರಂಗ

Early Puberty: ಹೆಣ್ಣು ಮಕ್ಕಳಲ್ಲಿ ಅಕಾಲಿಕ ಪ್ರೌಢಾವಸ್ಥೆಗೆ ಕಾರಣವಾಗ್ತಿದೆ ಕೊರೋನಾ, ಸಂಶೋಧನೆಯಲ್ಲಿ ಬಹಿರಂಗ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Covid 19 Causing Early Periods: ಒಳ್ಳೆಯ ಸ್ಪರ್ಶ ಕೆಟ್ಟ ಸ್ಪರ್ಶದ ಬಗ್ಗೆ ಮಾಹಿತಿಯನ್ನು ಹೊರತುಪಡಿಸಿ ಈಗ 9 ವರ್ಷ ವಯಸ್ಸಿನ ಮಗುವಿಗೆ ಅನಗತ್ಯ ಗರ್ಭಧಾರಣೆ ಹಾಗೂ ಪಿರಿಯಡ್ಸ್​ ಬಗ್ಗೆ ಸಂಪೂರ್ಣ ಪಾಠವನ್ನು ಹೇಳಿಕೊಡಬೇಕು.

  • Share this:

ಕೋವಿಡ್-19 ಸಾಂಕ್ರಾಮಿಕ (Corona Pandemic) ರೋಗವು ಕೆಲವು ಹುಡುಗಿಯರಲ್ಲಿ (Girls) ಆರಂಭಿಕ ಪ್ರೌಢಾವಸ್ಥೆಗೆ (Early Puberty) ಕಾರಣವಾಗಬಹುದು ಎಂಬ ಅಂಶವೊಂದು ಬಹಿರಂಗವಾಗಿದೆ. ಏಕಾಏಕಿ ಅಕಾಲಿಕ ಲೈಂಗಿಕ ಬೆಳವಣಿಗೆಯನ್ನು ಅನುಭವಿಸುತ್ತಿರುವ ಹುಡುಗಿಯರ ಸಂಖ್ಯೆಯು ಕಳೆದ 2 ವರ್ಷಗಳಿಂದ ಹೆಚ್ಚಾಗುತ್ತಿದೆ ಎಂದು ಹಲವಾರು ಅಧ್ಯಯನಗಳು (Studies) ಸೂಚಿಸಿದ್ದು, ಆದರೆ ಇದಕ್ಕೆ ಕಾರಣವೇನು ಎಂಬುದನ್ನು ಮಾತ್ರ ತಜ್ಞರು ಖಚಿತವಾಗಿ ಹೇಳಿಲ್ಲ.  ಇತ್ತೀಚಿನ ಅಧ್ಯಯನಗಳ ಪ್ರಕಾರ, ಜರ್ಮನಿಯ ಬಾನ್ ವಿಶ್ವವಿದ್ಯಾನಿಲಯದ ಸಂಶೋಧಕರು, ಒಂದೇ ವೈದ್ಯಕೀಯ ಕೇಂದ್ರದಲ್ಲಿ ಆರಂಭಿಕ ಪ್ರೌಢಾವಸ್ಥೆಗೆ ಗುರಿಯಾಗಿರುವ ಹುಡುಗಿಯರ ಸಂಖ್ಯೆಯು 2015 ಮತ್ತು 2019 ರ ನಡುವೆ ವರ್ಷಕ್ಕೆ ಹೇಗಿದೆ ಎನ್ನುವ ಬಗ್ಗೆ ವರದಿ ನೀಡಿದೆ.


ಏನಿದು ಅಕಾಲಿಕ ಪ್ರೌಢಾವಸ್ಥೆ?


ಯುರೋಪಿಯನ್ ಸೊಸೈಟಿ ಫಾರ್ ಪೀಡಿಯಾಟ್ರಿಕ್ ಎಂಡೋಕ್ರೈನಾಲಜಿ 2022 ಸಭೆಯಲ್ಲಿ ಪ್ರಸ್ತುತಪಡಿಸಿದ ಫಲಿತಾಂಶಗಳ ಪ್ರಕಾರ, ಇದು 2020 ರಲ್ಲಿ 23, ಕೋವಿಡ್ -19 ಏಕಾಏಕಿ ವಿಶ್ವಾದ್ಯಂತ ಹಿಡಿತ ಸಾಧಿಸಿದಾಗ, 2021 ರಲ್ಲಿ 30 ಕ್ಕೆ ಇನ್ನೂ ಏರಿದೆ ಎಂದು ಮಾಹಿತಿ ನೀಡಿದೆ.  ಪೂರ್ವಭಾವಿ ಪ್ರೌಢಾವಸ್ಥೆ ಅಥವಾ ವಯಸ್ಸಿಗೆ ಮೊದಲೇ ಪ್ರೌಢಾವಸ್ಥೆ ಎಂದರೆ,  ವೈದ್ಯಕೀಯವಾಗಿ ಗಮನಿಸಿದ ಸೂಕ್ತ ವಯಸ್ಸಿನ ಮೊದಲು ಮಗುವಿನ ದೇಹವು ವಯಸ್ಕ ದೇಹಕ್ಕೆ ಬದಲಾಗಲು ಪ್ರಾರಂಭಿಸುವುದು ಎಂದರ್ಥ. ಸಾಮಾನ್ಯ ಹಾಗೂ ಸರಳ ಭಾಷೆಯಲ್ಲಿ ಹೇಳುವುದಾದರೆ ಹೆಣ್ಣು ಮಗು ಒಂದು ಸಾಮಾನ್ಯ ವಯಸ್ಸಿಗೆ ಮೊದಲೇ ಪಿರಿಯಡ್ಸ್​ ಆಗುವುದು ಎಂದು ಸಹ ಹೇಳಬಹುದು. ಇದು ಸದ್ಯ ಸಾಮಾನ್ಯವಾಗಿದೆ.


ಸಾಂಕ್ರಾಮಿಕ ರೋಗದ ನಂತರ, ದೆಹಲಿಯ ಹುಡುಗಿಯರಲ್ಲಿ ಆರಂಭಿಕ ಪ್ರೌಢಾವಸ್ಥೆಯ ಪ್ರಕರಣಗಳಲ್ಲಿ ಅಪಾಯಕಾರಿ ಏರಿಕೆಯನ್ನು ಗಮನಿಸಿದೆ. ಕೆಲವೊಮ್ಮೆ, 5 ವರ್ಷ ವಯಸ್ಸಿನ ಹುಡುಗಿಯರು ಸಹ ಪ್ರೌಢಾವಸ್ಥೆಗೆ ಬಂದಿರುವ ಘಟನೆಗಳು ನಡೆದಿದೆ.  ಬದಲಾದ ಜೀವನಶೈಲಿಯ ಕಾರಣದಿಂದ ಈ ಪ್ರಾರಂಭಿಕ ಪ್ರೌಢಾವಸ್ಥೆಯ ಪ್ರಕರಣಗಳು ಹೊಸದಾಗಿರಲಿಲ್ಲ. ಆದರೆ, ಮುಖ್ಯವಾದ ಸಂಗತಿಯೆಂದರೆ, ಸಾಂಕ್ರಾಮಿಕ ರೋಗಕ್ಕೆ ಮುಂಚೆಯೇ ಆರಂಭಿಕ ಪ್ರೌಢಾವಸ್ಥೆಗೆ ಒಳಗಾದ 10 ರೋಗಿಗಳನ್ನು ನೋಡಿದ್ದರೆ, ಈಗ ಅದು ಸುಲಭವಾಗಿ 30 ಪ್ರಕರಣಗಳಿಗೆ ಏರಿಕೆಯಾಗಿದೆ ಎನ್ನುತ್ತಾರೆ ವೈದ್ಯರು.


ಕೊರೊನಾ ನಂತರ ಹೆಚ್ಚಾಗ್ತಿದೆ ಈ ಸಮಸ್ಯೆ


ಇನ್ನೊಬ್ಬ ವೈದ್ಯರ ಪ್ರಕಾರ ಈ ಮೊದಲು 30 ಪ್ರಕರಣಗಳು ಬಂದರೆ, ಅವರಲ್ಲೊ ಈಗ 90 ಜನರು ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ವಿಚಿತ್ರ ಸ್ಥಿತಿ ಇರುವುದು ಭಾರತ ಮಾತ್ರವಲ್ಲ. ಈ ಮೊದಲೇ ಹೇಳಿದಂತೆ ಬೇರೆ ದೇಶಗಳಲ್ಲಿ ಸಹ ಇದೆ. ಇಟಲಿಯಿಂದ ಟರ್ಕಿಯಿಂದ ಯುನೈಟೆಡ್ ಸ್ಟೇಟ್ಸ್‌ವರೆಗೆ ಪ್ರಪಂಚದಾದ್ಯಂತದ ಮಕ್ಕಳ ವೈದ್ಯರು ಅಕಾಲಿಕ ಪ್ರೌಢಾವಸ್ಥೆಯ ಪ್ರಕರಣಗಳಲ್ಲಿ ಹೆಚ್ಚಳವಾಗಿರುವುದನ್ನ ಗಮನಿಸಿದ್ದಾರೆ.


ಇದನ್ನೂ ಓದಿ: ಈ ರೀತಿ ಮಾಡಿದ್ರೆ ದಿನಕ್ಕೆ ಸಾವಿರ ಕ್ಯಾಲೋರಿ ಬರ್ನ್ ಮಾಡಬಹುದು


"5 ವರ್ಷ ವಯಸ್ಸಿನ ಹುಡುಗಿಯರಲ್ಲಿ ಸ್ತನಗಳ ಅಭಿವೃದ್ಧಿ ಆಗುತ್ತಿದೆ ಮತ್ತು 8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕೆಲವರಲ್ಲಿ ಪಿರಿಯಡ್ಸ್​ ಸಹ ಆರಂಭವಾಗಿದೆ ಎನ್ನುವ ಆಘಾತಕಾರಿ ಅಂಶ ಬಹಿರಂಗವಾಗಿದೆ.
ದಿ ಇಟಾಲಿಯನ್ ಜರ್ನಲ್ ಆಫ್ ಪೀಡಿಯಾಟ್ರಿಶಿಯನ್ಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, "ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಲಾಕ್‌ಡೌನ್ ಸಮಯದಲ್ಲಿ ಹುಡುಗಿಯರಲ್ಲಿ ಪೂರ್ವಭಾವಿ ಪ್ರೌಢಾವಸ್ಥೆಯ ಪ್ರಕರಣಗಳ ಗಮನಾರ್ಹವಾಗಿ ಹೆಚ್ಚಳವಾಗಿದೆ.  ಟರ್ಕಿಯ ಪೀಡಿಯಾಟ್ರಿಕ್ ಎಂಡೋಕ್ರೈನಾಲಜಿ ಮತ್ತು ಮೆಟಾಬಾಲಿಸಮ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯಿಂದಲೂ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ.


ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ


ಆರಂಭಿಕ ಪ್ರೌಢಾವಸ್ಥೆ, ವಿಶೇಷವಾಗಿ ಹುಡುಗಿಯರ ಆರಂಭಿಕ ಪಿರಿಯಡ್ಸ್ ಕೆಲವು ರೋಗಿಗಳಿಗೆ ಮತ್ತು ಅವರ ಪೋಷಕರಿಗೆ ಆಘಾತಕಾರಿ ಎಂಬುದು ಸುಳ್ಳಲ್ಲ.  ಪ್ರೌಢಾವಸ್ಥೆಯು ಹಾರ್ಮೋನ್ ಮಟ್ಟವನ್ನು ಬದಲಾಯಿಸುತ್ತದೆ, ಆದ್ದರಿಂದ ಇದು ರೋಗಿಯ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಮತ್ತೆ ಹೇಳಬೇಕಾಗಿಲ್ಲ.


ಚಿಕ್ಕ ಮಕ್ಕಳಿಗೆ ರಕ್ತವನ್ನು ನೋಡುವುದು ಆಘಾತಕಾರಿ ವಿಚಾರ. ಹೆಚ್ಚಿನವರು ಮುಟ್ಟಿನ ದಿನಗಳನ್ನು ನಿಭಾಯಿಸುವಷ್ಟು ಪ್ರಬುದ್ಧರಾಗಿರುವುದಿಲ್ಲ. ಹಾಗಾಗಿ, ಇದು ನಿಜಕ್ಕೂ ಚಿಂತೆಯ ವಿಚಾರ ಎನ್ನುತ್ತಾರೆ ಸಂಶೋಧಕರು.


ಇದನ್ನೂ ಓದಿ: ನಿಮ್ಮ ಚರ್ಮದ ಸರ್ವ ಸಮಸ್ಯೆಗಳಿಗೆ ಈ ಒಂದು ಮಾತ್ರೆಯಲ್ಲಿದೆ ಪರಿಹಾರ


ಒಳ್ಳೆಯ ಸ್ಪರ್ಶ ಕೆಟ್ಟ ಸ್ಪರ್ಶದ ಬಗ್ಗೆ ಮಾಹಿತಿಯನ್ನು ಹೊರತುಪಡಿಸಿ ಈಗ 9 ವರ್ಷ ವಯಸ್ಸಿನ ಮಗುವಿಗೆ ಅನಗತ್ಯ ಗರ್ಭಧಾರಣೆ ಹಾಗೂ ಪಿರಿಯಡ್ಸ್​ ಬಗ್ಗೆ ಸಂಪೂರ್ಣ ಪಾಠವನ್ನು ಹೇಳಿಕೊಡಬೇಕು.

Published by:Sandhya M
First published: