Immunity Power: ನಿಮ್ಮ ದೇಹದಲ್ಲಿರುವ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ ಅಂತೀರಾ? ಇಲ್ಲಿವೆ ಕೆಲವು ಟಿಪ್ಸ್

Probiotic Food: ಚಳಿಗಾಲದಲ್ಲಿ ಪದೇ ಪದೇ ಶೀತ ಮತ್ತು ಫ್ಲೂ, ಅಲರ್ಜಿ, ಆಸ್ತಮಾ ಅಥವಾ ಸೋಂಕು ಇವೆಲ್ಲವೂ ದುರ್ಬಲ ರೋಗನಿರೋಧಕ ವ್ಯವಸ್ಥೆಯಿಂದಾಗಿ ಬರುತ್ತವೆ ಎಂದು ಹೇಳಲಾಗಿದೆ. ಆದ್ದರಿಂದ, ನಾವು ಅನಾರೋಗ್ಯದಿಂದ ಬಳಲುತ್ತಿರುವಾಗ ಅಥವಾ ಚಳಿಗಾಲದಲ್ಲಿ ಮಾತ್ರವಲ್ಲದೆ, ವರ್ಷವಿಡೀ ನಮ್ಮ ರೋಗನಿರೋಧಕತೆಯ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯವಾಗುತ್ತದೆ.

ಪ್ರಾತಿನಿಧಿಕ ಚಿತ್ರ (Photo: Google)

ಪ್ರಾತಿನಿಧಿಕ ಚಿತ್ರ (Photo: Google)

  • Share this:
Immunity Power: ಕಳೆದ ಒಂದೂವರೆ ವರ್ಷದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ನಾವೆಲ್ಲರೂ ‘ರೋಗನಿರೋಧಕ ಶಕ್ತಿ’ ಎಂಬ ಪದವನ್ನು ತುಂಬಾನೇ ಕೇಳಿರುತ್ತೇವೆ. ವಿಶೇಷವಾಗಿ ಈ ಸಂದರ್ಭದಲ್ಲಿ ನಮ್ಮ ದೇಹದಲ್ಲಿರುವ ರೋಗನಿರೋಧಕ ಶಕ್ತಿಯೇ ನಮ್ಮನ್ನು ಇದುವರೆಗೂ ರಕ್ಷಿಸಿದೆ ಎಂದರೆ ಅತಿಶಯೋಕ್ತಿಯಲ್ಲ. ದುರ್ಬಲ ರೋಗನಿರೋಧಕ ವ್ಯವಸ್ಥೆ ಹೊಂದಿರುವವರು ಈ ಕೋವಿಡ್ ರೋಗಕ್ಕೆ ತುಂಬಾ ಸುಲಭವಾಗಿ ತುತ್ತಾಗುತ್ತಾರೆ ಎಂದು ಹೇಳುವುದನ್ನು ನಾವು ಟಿವಿಯಲ್ಲಿ ಅನೇಕ ಬಾರಿ ನೋಡಿದ್ದೇವೆ. ಅದಕ್ಕಾಗಿ ನಮ್ಮ ದೇಹದಲ್ಲಿರುವ ರೋಗನಿರೋಧಕ ಶಕ್ತಿ ಪ್ರಬಲವಾಗಿಟ್ಟುಕೊಳ್ಳುವುದು ಅವಶ್ಯಕವಾಗಿದೆ.

ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (ಸಿಡಿಸಿ) ಪ್ರಕಾರ, ದುರ್ಬಲ ರೋಗನಿರೋಧಕ ವ್ಯವಸ್ಥೆ ಹೊಂದಿರುವ ಜನರು ಪದೇ ಪದೇ ತುಂಬಾ ತೀವ್ರವಾದ ಅನಾರೋಗ್ಯಕ್ಕೆ ತುತ್ತಾಗುತ್ತಿರುತ್ತಾರೆ.

ಅಷ್ಟೇ ಅಲ್ಲದೆ, ಚಳಿಗಾಲದಲ್ಲಿ ಪದೇ ಪದೇ ಶೀತ ಮತ್ತು ಫ್ಲೂ, ಅಲರ್ಜಿ, ಆಸ್ತಮಾ ಅಥವಾ ಸೋಂಕು ಇವೆಲ್ಲವೂ ದುರ್ಬಲ ರೋಗನಿರೋಧಕ ವ್ಯವಸ್ಥೆಯಿಂದಾಗಿ ಬರುತ್ತವೆ ಎಂದು ಹೇಳಲಾಗಿದೆ. ಆದ್ದರಿಂದ, ನಾವು ಅನಾರೋಗ್ಯದಿಂದ ಬಳಲುತ್ತಿರುವಾಗ ಅಥವಾ ಚಳಿಗಾಲದಲ್ಲಿ ಮಾತ್ರವಲ್ಲದೆ, ವರ್ಷವಿಡೀ ನಮ್ಮ ರೋಗನಿರೋಧಕತೆಯ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯವಾಗುತ್ತದೆ.

ದೇಹದ ರೋಗನಿರೋಧಕ ವ್ಯವಸ್ಥೆಯ ಸುಮಾರು 70 ಪ್ರತಿಶತ ನೆಲೆಯಾಗಿರುವುದು ನಿಮ್ಮ ಕರುಳಿನ ಆರೈಕೆ ಮೇಲೆ ಮತ್ತು ಆಹಾರದಲ್ಲಿ ಪ್ರೋಬಯಾಟಿಕ್‌ ಅಂಶ ಒಳಗೊಂಡಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿದರೆ ಬಲವಾದ ರೋಗನಿರೋಧಕ ವ್ಯವಸ್ಥೆ ಹೊಂದಬಹುದು. ಈ ಪ್ರೋಬಯಾಟಿಕ್‌ಗಳು ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸುತ್ತವೆ.

ರೋಗನಿರೋಧಕ ಶಕ್ತಿ ಕಡಿಮೆ ಆಗಲು ಕಾರಣವೇನು..?

ನಮ್ಮ ದೈನಂದಿನ ಜೀವನದಲ್ಲಿ ನಾವು ತೆಗೆದುಕೊಳ್ಳುವ ಆಹಾರ, ಆಹಾರ ಕ್ರಮ, ಕೆಲಸದ ಒತ್ತಡ, ಮಾನಸಿಕ ಒತ್ತಡ ಹೀಗೆ ಒಟ್ಟಾಗಿ ಹೇಳುವುದಾದರೆ ನಮ್ಮ ಇಂದಿನ ಜೀವನಶೈಲಿಯೇ ನಮ್ಮ ದೇಹದಲ್ಲಿರುವಂತಹ ರೋಗನಿರೋಧಕ ಶಕ್ತಿಯು ದುರ್ಬಲವಾಗುವುದಕ್ಕೆ ಪ್ರಮುಖವಾದ ಕಾರಣ ಎಂದು ಹೇಳಿದರೆ ತಪ್ಪಾಗಲಾರದು.

ಇವುಗಳಲ್ಲದೇ, ಅಸಮತೋಲಿತ ಆಹಾರ, ನಿದ್ರೆ ಮತ್ತು ವ್ಯಾಯಾಮದ ಕೊರತೆ ಮತ್ತು ವಯಸ್ಸಾಗುವಿಕೆ ಇವೆಲ್ಲವೂ ನಮ್ಮ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತವೆ. ನಮ್ಮ ಆಹಾರ ಮತ್ತು ಜೀವನಶೈಲಿಯನ್ನು ಕೊಂಚ ಬದಲಾಯಿಸಿಕೊಳ್ಳುವುದು ಉತ್ತಮ. ನಮ್ಮ ರೋಗನಿರೋಧಕತೆ ಬಲಪಡಿಸಿಕೊಳ್ಳಲು ಪ್ರೋಬಯಾಟಿಕ್ ಒಳಗೊಂಡಿರುವ ಹಾಲನ್ನು ನೀವು ಪ್ರತಿದಿನ ಸೇವಿಸುವ ಆಹಾರ ಪಟ್ಟಿಯಲ್ಲಿ ಸೇರಿಸಿಕೊಳ್ಳುವುದು ಉತ್ತಮ.

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?

ವಿಟಮಿನ್ ಸಿ ಹೊಂದಿರುವಂತಹ ವಿವಿಧ ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಪ್ರತಿದಿನ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಇವುಗಳೊಂದಿಗೆ, ಪ್ರೋಬಯಾಟಿಕ್‌ಗಳು ಸಹ ರೋಗ ನಿರೋಧಕಶಕ್ತಿ ಹೆಚ್ಚಿಸುವಲ್ಲಿ ಮುಖ್ಯವಾದ ಪಾತ್ರ ವಹಿಸುತ್ತದೆ.

ಯುಕೆಯಲ್ಲಿ ದುರ್ಬಲ ರೋಗನಿರೋಧಕತೆ ಹೊಂದಿರುವ ಕ್ರೀಡಾಪಟುಗಳ ಬಗ್ಗೆ ಅಧ್ಯಯನ ನಡೆಸಲಾಯಿತು. 16 ವಾರಗಳ ಕಾಲ ಹಾಲಿನ ಪಾನೀಯವನ್ನು (ಯಾಕುಲ್ಟ್) ಪ್ರತಿದಿನ ಸೇವಿಸುವುದರಿಂದ ಅವರ ರೋಗನಿರೋಧಕ ಶಕ್ತಿಯು ಹೆಚ್ಚಾಗಿರುವುದು ಅಧ್ಯಯನದಿಂದ ತಿಳಿದು ಬಂದಿದೆ.

ನಿಮಗೆ ರೋಗನಿರೋಧಕ ಶಕ್ತಿ ಕಡಿಮೆ ಇರುವುದು ಹೇಗೆ ಗೊತ್ತಾಗುತ್ತದೆ?

ತುಂಬಾ ಒತ್ತಡ: ದೀರ್ಘಕಾಲದ ಒತ್ತಡವು ನಮ್ಮ ನಿದ್ರೆಯನ್ನು ಹಾಳು ಮಾಡುತ್ತದೆ, ಇದು ನಮ್ಮ ದೇಹದ ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ ಮತ್ತು ದೇಹದ ಹಾರ್ಮೋನುಗಳಲ್ಲಿ ಅಸಮತೋಲನ ಉಂಟಾಗುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈ ಎಲ್ಲಾ ಅಂಶಗಳು ದುರ್ಬಲ ರೋಗನಿರೋಧಕ ವ್ಯವಸ್ಥೆಗೆ ಕಾರಣವಾಗುತ್ತವೆ ಮತ್ತು ಸೋಂಕಿನ ವಿರುದ್ಧ ಹೋರಾಡಲು ದೇಹದ ಶಕ್ತಿ ಕಡಿಮೆ ಮಾಡುತ್ತದೆ.

ಆಗಾಗ್ಗೆ ಸೋಂಕುಗಳು ಕಾಣಿಸಿಕೊಳ್ಳುವುದು: ನಿಮ್ಮ ಕಿವಿ, ಮೂಗು, ಗಂಟಲಿನಲ್ಲಿ ಪದೇ ಪದೇ ಸೋಂಕುಗಳು ಕಾಣಿಸಿಕೊಳ್ಳುತ್ತಿದ್ದರೆ, ಇದು ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುವತ್ತ ಗಮನ ಹರಿಸುವ ಎಚ್ಚರಿಕೆಯ ಸಂಕೇತವಾಗಿರುತ್ತದೆ. ನಿಮ್ಮ ದೇಹವು ತನ್ನ ನೈಸರ್ಗಿಕ ಪ್ರತಿಕಾಯಗಳೊಂದಿಗೆ ಈ ಆರೋಗ್ಯ ಅಪಾಯಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಬೇಕು.

Read Also⇒ YouTube Stop Working: ಸೆ. 27ರಿಂದ ಈ ಆ್ಯಂಡ್ರಾಯ್ಡ್​ ಫೋನ್​ಗಳಲ್ಲಿ ಯ್ಯುಟೂಬ್​ ಕಾರ್ಯನಿರ್ವಹಿಸುದಿಲ್ಲ!

ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ: ದುರ್ಬಲ ರೋಗನಿರೋಧಕ ವ್ಯವಸ್ಥೆ ಹೊಂದಿದ್ದರೆ ನೀವು ಆಗಾಗ ಅನಾರೋಗ್ಯಕ್ಕೆ ತುತ್ತಾಗಬಹುದು ಮತ್ತು ಸೋಂಕುಗಳಿಂದ ನಿಧಾನವಾಗಿ ಚೇತರಿಸಿಕೊಳ್ಳಲು ಸಹ ಕಾರಣವಾಗಿದೆ.

ಆಯಾಸವಾಗುವುದು: ಸಾಕಷ್ಟು ನಿದ್ರೆ ಇದ್ದರೂ ದುರ್ಬಲ ರೋಗನಿರೋಧಕ ವ್ಯವಸ್ಥೆಯು ನಿಮ್ಮನ್ನು ಸದಾ ಆಯಾಸ ಗೊಂಡಿರುವಂತೆ ಮಾಡುತ್ತದೆ. ನೀವು ಏನು ಕೆಲಸ ಮಾಡದಿದ್ದರೂ ನಿಮಗೆ ಆಯಾಸವಾಗುತ್ತದೆ.
First published: