• Home
  • »
  • News
  • »
  • lifestyle
  • »
  • Coronavirus: ಕೊರೋನಾದಿಂದ ಹೆಚ್ಚಾಗಿದೆ ಈ ಗಂಭೀರ ಸಮಸ್ಯೆ, ಅಧ್ಯಯನದಲ್ಲಿ ಆಘಾತಕಾರಿ ಅಂಶ ಬಯಲು

Coronavirus: ಕೊರೋನಾದಿಂದ ಹೆಚ್ಚಾಗಿದೆ ಈ ಗಂಭೀರ ಸಮಸ್ಯೆ, ಅಧ್ಯಯನದಲ್ಲಿ ಆಘಾತಕಾರಿ ಅಂಶ ಬಯಲು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Covid 19 And Blood Clotting: ಕೋವಿಡ್‌ ನಿಂದ ಸಾಕಷ್ಟು ಜನರಿಗೆ ಬೇರೆ ಬೇರೆ ರೀತಿಯ ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದು, ಅಂಥವರು ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದರು ಒಳ್ಳೆಯದು ಎಂಬುದು ತಜ್ಞರ ಅಭಿಪ್ರಾಯ.

  • Share this:

ಕೋವಿಡ್‌ (covid) ಅನ್ನೋ ಸಾಂಕ್ರಾಮಿಕ ರೋಗ (Pandemic) ಜಗತ್ತನ್ನು ಸಾವಿನ (Death)  ದವಡೆಗೆ ನೂಕಿದ್ದಲ್ಲದೇ ಹಲವಾರು ಅವಾಂತರಗಳಿಗೆ ಕಾರಣವಾಗಿದೆ. ಕೋವಿಡ್‌ ಗೆ ತುತ್ತಾದವರಲ್ಲಿ, ವ್ಯಾಕ್ಸಿನೇಷನ್‌ (Vaccination) ಪಡೆದುಕೊಂಡವರಲ್ಲಿ ಹೀಗೆ ನಾನಾ ಬಗೆಯ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಅದರಲ್ಲೂ ಕೋವಿಡ್-19 ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸಿದೆ ಎಂದು ಇತ್ತೀಚಿಗಿನ ಅಧ್ಯಯನವು ಕಂಡುಹಿಡಿದಿದೆ. ಕೋವಿಡ್‌ 19 ಯಾವುದೇ ಹಂತದಲ್ಲಿದ್ದರೂ ರೋಗಿಗಳ ರಕ್ತನಾಳಗಳಲ್ಲಿ ಪ್ರಾರಂಭವಾಗುವ ಮತ್ತು ಹೃದಯ, ಶ್ವಾಸಕೋಶಗಳು ಮತ್ತು ದೇಹದ ಇತರ ಭಾಗಗಳಿಗೆ ಪ್ರಯಾಣಿಸುವ ಅಪಾಯಕಾರಿ ರಕ್ತ ಹೆಪ್ಪುಗಟ್ಟುವಿಕೆಗೆ (Blood Clotting) ಕಾರಣವಾಗುತ್ತದೆ ಎಂದು ಲಂಡನ್‌ ನಲ್ಲಿ ನಡೆದ ಅಧ್ಯಯನವೊಂದು ಹೇಳಿದೆ.


ಹೌದು, ಆಸ್ಪತ್ರೆಗೆ ದಾಖಲಾಗದ ಕೋವಿಡ್ ರೋಗಿಗಳಲ್ಲಿ ವೇನಸ್‌ ಥ್ರಂಬೋಎಂಬೊಲಿಸಮ್ ಎಂಬ ಅಪಾಯಕಾರಿ ಹೆಪ್ಪುಗಟ್ಟುವಿಕೆ ಸಾಧ್ಯತೆ 2.7 ಪಟ್ಟು ಹೆಚ್ಚಾಗಿದೆ. ಅಲ್ಲದೇ ರೋಗದಿಂದ ತಪ್ಪಿಸಿಕೊಂಡ ವ್ಯಕ್ತಿಗಳಿಗಿಂತ ಸಾಯುವ ಸಾಧ್ಯತೆ 10 ಪಟ್ಟು ಹೆಚ್ಚು ಎಂದು ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿದ್ದಾರೆ. ಈ ಸಂಶೋಧನೆಯಲ್ಲಿ ಸುಮಾರು 54,000 ಜನರನ್ನು ಸುಮಾರು 4 1/2 ತಿಂಗಳುಗಳ ಕಾಲ ಅಧ್ಯಯನ ನಡೆಸಲಾಗಿದೆ. ರೋಗವು ಪ್ರಾರಂಭವಾದ ಮೊದಲ 30 ದಿನಗಳಲ್ಲಿ ಅಪಾಯದ ಹೆಚ್ಚಳವು ಅತ್ಯಧಿಕವಾಗಿದ್ದು, ಅದು ದೀರ್ಘಕಾಲ ಉಳಿಯಬಹುದು ಎಂದು ಸಂಶೋಧಕರು ಹೇಳಿದ್ದಾರೆ.


ಅಪಾಯದ ಸಾಧ್ಯತೆ ಅಧಿಕ!


ರಕ್ತ ಹೆಪ್ಪುಗಟ್ಟುವಿಕೆ ವೈರಸ್‌ನ ಗುಪ್ತ ಅಪಾಯಗಳ ಮತ್ತೊಂದು ಚಿಹ್ನೆಯಾಗಿದ್ದು, ಅದು ಸಣ್ಣ ಪ್ರಕರಣಗಳಿಂದ ಕೂಡ ಉಂಟಾಗುತ್ತದೆ ಎನ್ನಲಾಗಿದೆ. ಇನ್ನು, ಕೋವಿಡ್‌ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಇಂಥ ಅಪಾಯಗಳು ಗಮನಾರ್ಹವಾಗಿ ಹೆಚ್ಚಾಗಿವೆ. ಅವರು ವೇನಸ್‌ ಥ್ರಂಬೋಎಂಬೊಲಿಸಮ್‌ನ 28 ಪಟ್ಟು ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ. ಅಲ್ಲದೇ, ಹೃದಯಾಘಾತದ ಅಪಾಯವನ್ನು 22 ಪಟ್ಟು ಹೆಚ್ಚು ಹೊಂದಿದ್ದಾರೆ. ಅಲ್ಲದೇ, 18 ಪಟ್ಟು ಹೆಚ್ಚಿನ ಪಾರ್ಶ್ವವಾಯು ಅಪಾಯವನ್ನು ಹೊಂದಿದ್ದಾರೆ. ಕೋವಿಡ್‌ ಸೋಂಕು ತಾಕದಿರುವವರಿಗೆ ಹೋಲಿಸಿದರೆ ಅಂಥವರ ಮರಣದ ಸಾಧ್ಯತೆ 118 ಪಟ್ಟು ಹೆಚ್ಚಾಗಿದೆ ಎಂದು ಅಧ್ಯಯನ ಹೇಳಿದೆ.


ಯುಕೆ ಬಯೋಬ್ಯಾಂಕ್ ಅಧ್ಯಯನದಲ್ಲಿ ಭಾಗವಹಿಸಿದವರಿಂದ ದೇಶದ ಮೊದಲ ಎರಡು ಕೋವಿಡ್ ಅಲೆಗಳ ಸಮಯದಲ್ಲಿ ಸಂಗ್ರಹಿಸಲಾದ ಡೇಟಾವನ್ನು ಆಧರಿಸಿ ಈ ಸಂಶೋಧನೆ ನಡೆಸಲಾಗಿದೆ. ಹಾರ್ಟ್ ಜರ್ನಲ್‌ನಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದ್ದು, ಇದು ರಕ್ತನಾಳಗಳನ್ನು ಹಾನಿಗೊಳಿಸುವ ಮತ್ತು ಮಾರಣಾಂತಿಕ ಹೆಪ್ಪುಗಟ್ಟುವಿಕೆಯನ್ನು ಉಂಟುಮಾಡುವ ಕೋವಿಡ್‌ನ ಪ್ರವೃತ್ತಿಯ ಬಗ್ಗೆ ಹೇಳುತ್ತದೆ.


ಇದನ್ನೂ ಓದಿ: ಚಳಿಗಾಲದಲ್ಲಿ ನೆಲ್ಲಿಕಾಯಿಯನ್ನು ಈ ರೀತಿ ತಿನ್ಬೇಕಂತೆ, ಆರೋಗ್ಯಕ್ಕೆ ಒಳ್ಳೆಯದು


ಕೋವಿಡ್‌ ಇನ್ನೂ ನಿರ್ಮೂಲನೆಯಾಗಿಲ್ಲ!


"ನಮ್ಮ ಸಂಶೋಧನೆಗಳು ಹಿಂದಿನ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಹೃದಯ ರಕ್ತನಾಳದ ಅಪಾಯವನ್ನು ತೋರಿಸುತ್ತವೆ. ಅಲ್ಲದೇ, ವರ್ಧಿತ ಹೃದಯ ರಕ್ತನಾಳದ ಅಪಾಯವು ಮುಂದುವರಿಯುವ ಅವಧಿಯನ್ನು ವಿವರಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ “ ಎಂದು ಕ್ವೀನ್‌ ವಿಶ್ವವಿದ್ಯಾಲಯದಲ್ಲಿ ಕ್ಲಿನಿಕಲ್ ರಿಸರ್ಚ್ ತರಬೇತಿ ಸಹವರ್ತಿ ಜಹ್ರಾ ರೈಸಿ-ಎಸ್ತಾಬ್ರಾಗ್ ಮೇರಿ ಮತ್ತು ಸಹ ಲೇಖಕರು ಬರೆದಿದ್ದಾರೆ.
ಅಂದಹಾಗೆ, ಆಸ್ಪತ್ರೆಗೆ ದಾಖಲಾಗದ ಕೋವಿಡ್ ರೋಗಿಗಳಲ್ಲಿ  ಹೆಚ್ಚಿದ ಸಾವಿನ ಅಪಾಯವು ಇನ್ನೊಂದು ಗಮನಾರ್ಹ ಸಂಗತಿಯಾಗಿದೆ. ಅನೇಕ ದೇಶಗಳಲ್ಲಿ ಕೋವಿಡ್ ಸೋಂಕು ಸಾಮಾನ್ಯ ಸ್ಥಿತಿಗೆ ಬಂದಿದೆ ಎಂದು ಅನಿಸಿದರೂ, ಕೋವಿಡ್ ವಿಚಾರದಲ್ಲಿ ಯಾವುದೂ ಸಾಮಾನ್ಯವಾಗಿಲ್ಲ ಎಂದು ಸಂಶೋಧನೆಯ ಮುಖ್ಯಸ್ಥ ಜಿಯಾದ್ ಅಲ್-ಅಲಿ ಹೇಳಿದ್ದಾರೆ.


"ಸೋಂಕು ಹರಡುವುದನ್ನ ನಿರ್ಬಂಧಿಸುವ ಮತ್ತು ಈ ವೈರಸ್‌ನ ಬದಲಾಗುತ್ತಿರುವ ರೂಪಾಂತರಗಳನ್ನು ಮೀರಿಸುವ ಯಾವುದೇ ಪರಿಹಾರ ತಂತ್ರವಿಲ್ಲದೆ ನಾವು ನಿಜವಾಗಿಯೂ ಈ ಸಾಂಕ್ರಾಮಿಕ ರೋಗದಿಂದ ಹೊರಬರಲು ಸಾಧ್ಯವಿಲ್ಲ. ನಮಗೆ ತುರ್ತಾಗಿ ರೂಪಾಂತರ-ನಿರೋಧಕ ತಂತ್ರ ಮತ್ತು ಹರಡುವಿಕೆ ಕಡಿಮೆ ಮಾಡುವ ಲಸಿಕೆಗಳ ಅಗತ್ಯವಿದೆ" ಎಂದು ಅಲ್-ಅಲಿ ಅಭಿಪ್ರಾಯ ಪಟ್ಟಿದ್ದಾರೆ.


ಇದನ್ನೂ ಓದಿ: ಆಹಾರ ಪ್ರಿಯರ ಫೇವರೇಟ್ ಈ ಮಿಲಿಟರಿ ಹೋಟೆಲ್​ಗಳು, ಇದರ ಇತಿಹಾಸ ರೋಚಕ


ಒಟ್ಟಾರೆ, ಕೋವಿಡ್‌ ನಿಂದ ಸಾಕಷ್ಟು ಜನರಿಗೆ ಬೇರೆ ಬೇರೆ ರೀತಿಯ ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದು, ಅಂಥವರು ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದರು ಒಳ್ಳೆಯದು ಎಂಬುದು ತಜ್ಞರ ಅಭಿಪ್ರಾಯ.

Published by:Sandhya M
First published: