ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕೆ? ಹಾಗಿದ್ರೆ ಚಿಂತಿಸಬೇಡಿ

ಕರಿಮೆಣಸು: ಮಾಲಿನ್ಯದಿಂದ ಕಫ ಮತ್ತು ಕೆಮ್ಮು ಹೆಚ್ಚಾಗಿದ್ದರೆ ಕರಿಮೆಣಸನ್ನು ಜೇನುತುಪ್ಪದಲ್ಲಿ ಮಿಶ್ರ ಮಾಡಿ ಸೇವಿಸಿ. ಇದರಿಂದ ಕೆಮ್ಮು ಕಡಿಮೆಯಾಗುವುದಲ್ಲದೆ ದೇಹದಲ್ಲಿರುವ ವಿಷಕಾರಿ ಮಾಲಿನ್ಯ ಕಡಿಮೆಯಾಗುತ್ತದೆ.

ಕರಿಮೆಣಸು: ಮಾಲಿನ್ಯದಿಂದ ಕಫ ಮತ್ತು ಕೆಮ್ಮು ಹೆಚ್ಚಾಗಿದ್ದರೆ ಕರಿಮೆಣಸನ್ನು ಜೇನುತುಪ್ಪದಲ್ಲಿ ಮಿಶ್ರ ಮಾಡಿ ಸೇವಿಸಿ. ಇದರಿಂದ ಕೆಮ್ಮು ಕಡಿಮೆಯಾಗುವುದಲ್ಲದೆ ದೇಹದಲ್ಲಿರುವ ವಿಷಕಾರಿ ಮಾಲಿನ್ಯ ಕಡಿಮೆಯಾಗುತ್ತದೆ.

ಕೊರೋನಾ ವೈರಸ್‌ನಿಂದಾಗಿ, ದೇಶದ ಹೆಚ್ಚಿನ ಜನರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ನೀವು ಕರಿಮೆಣಸನ್ನು ತಿಂಡಿಗಳೊಂದಿಗೆ ಬಳಸಬಹುದು.

  • Share this:

ಸಾಂಬಾರು ಪದಾರ್ಥಗಳ ರಾಜ ಎಂದು ಪರಿಗಣಿಸುವ ಕರಿಮೆಣಸು ಎಲ್ಲಾ ಅಡುಗೆ ಮನೆಯಲ್ಲೂ ಕಾಣಸಿಗುತ್ತದೆ. ವಿದೇಶಿಯರು ಕೂಡ ಈ ಮಸಾಲೆ ಪದಾರ್ಥವನ್ನು ಹೆಚ್ಚಾಗಿ ಬಳಸಲಾರಂಭಿಸಿದ್ದಾರೆ. ಇಂಗ್ಲಿಷ್​ನಲ್ಲಿ Black pepper ಎಂದು ಕರೆಯಲ್ಪಡುವ ಕರಿಮೆಣಸು ಆಹಾರದ ರುಚಿಯನ್ನು ಮಾತ್ರವಲ್ಲ, ಆರೋಗ್ಯವನ್ನೂ ಹೆಚ್ಚಿಸುತ್ತದೆ. ಅದರಲ್ಲೂ ನಿಯಮಿತವಾಗಿ ಆಹಾರದಲ್ಲಿ ಕರಿಮೆಣಸನ್ನು ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.


ಕೊರೋನಾ ವೈರಸ್ ಸೋಂಕಿನ ಹರಡುವಿಕೆಯ ಬಳಿಕ, ಪ್ರತಿಯೊಬ್ಬರೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳತ್ತ ಮುಖ ಮಾಡಿದ್ದಾರೆ. ದೈನಂದಿನ ಆಹಾರದ ಪದ್ಧತಿಯೊಂದಿಗೆ ರಸ, ಅರಿಶಿನ, ಹಾಲು ಸೇರಿದಂತೆ ತರಕಾರಿಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇದೀಗ ಲಾಕ್‌ಡೌನ್ ಆಗಿರುವುದರಿಂದ, ತರಕಾರಿಗಳು ಮತ್ತು ಹಣ್ಣುಗಳನ್ನು ಲಭ್ಯವಾಗುತ್ತಿಲ್ಲ. ಹೀಗಾಗಿ ನೀವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕರಿಮೆಣಸು ಬಳಸಬಹುದು.


ಹೆಲ್ತ್‌ಲೈನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕರಿಮೆಣಸನ್ನು ನಿಯಮಿತವಾಗಿ ಸೇವಿಸುವುದರಿಂದ ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಇದರ ಜೊತೆಗೆ ದೀರ್ಘಕಾಲದ ಕಾಯಿಲೆಗಳ ವಿರುದ್ಧ ಹೋರಾಡಲು ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ.


ಜೇನುತುಪ್ಪ ಮತ್ತು ಮೆಣಸು:
ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೀವು ಜೇನುತುಪ್ಪದೊಂದಿಗೆ ಕರಿಮೆಣಸು ಪುಡಿಯನ್ನು ಬಳಸಬಹುದು. ಕರಿಮೆಣಸು ಮತ್ತು ಜೇನುತುಪ್ಪ ಮಿಶ್ರಣವನ್ನು ದಿನಕ್ಕೆ ಒಂದು ಸ್ಪೂನ್ ತಿನ್ನುವುದರಿಂದ ಕಫ, ಶೀತದಂತಹ ಸಮಸ್ಯೆಗಳು ಉಂಟಾಗುವುದಿಲ್ಲ.


ತರಕಾರಿ ಬಳಸಿ:
ಕರಿಮೆಣಸಿನಲ್ಲಿ ಜೇನುತುಪ್ಪವನ್ನು ಬಳಸಲಾಗದವರು ತರಕಾರಿಯಲ್ಲಿ ಮಸಾಲೆಯಾಗಿ ಬಳಸಬಹುದು. ತರಕಾರಿಯಲ್ಲಿ ಕರಿಮೆಣಸನ್ನು ಮಸಾಲೆಯಾಗಿ ಬಳಸಲು, ಮೊದಲು ಅದನ್ನು ಹುರಿಯಿರಿ ಮತ್ತು ಪುಡಿಮಾಡಿ. ಇದನ್ನು ನಿಮಗೆ ಬೇಕಾದ ಆಹಾರ ಪದಾರ್ಥದಲ್ಲಿ ಬಳಸುವುದರಿಂದ ಆರೋಗ್ಯವನ್ನು ಹೆಚ್ಚಿಸಬಹುದು.

top videos


    ತಿಂಡಿಗಳಲ್ಲಿ ಬಳಸಿ:
    ಕೊರೋನಾ ವೈರಸ್‌ನಿಂದಾಗಿ, ದೇಶದ ಹೆಚ್ಚಿನ ಜನರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ನೀವು ಕರಿಮೆಣಸನ್ನು ತಿಂಡಿಗಳೊಂದಿಗೆ ಬಳಸಬಹುದು. ಸಂಜೆ, ಟೋಸ್ಟ್ ತಿನ್ನುವಾಗ, ಸ್ಯಾಂಡ್‌ವಿಚ್, ಸಲಾಡ್, ಕರಿಮೆಣಸು ಪುಡಿ ಸೇರಿಸಿ ನಂತರ ತಿನ್ನಿರಿ. ಇದರಿಂದ ಕೂಡ ನಿಮ್ಮ ದೇಹ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು.

    First published: