Marriage: ಮದುವೆ ಆಗ್ತಿರೋ ಜೋಡಿ ತಮ್ಮ ಸಂಗಾತಿಯಲ್ಲಿ ಈ 10 ಗುಣಗಳನ್ನ ನಿರೀಕ್ಷೆ ಮಾಡ್ತಾರಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತೀಯರು ಮದುವೆ ಆಗುವಾಗ ತಮ್ಮ ಆದ್ಯತೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ ಮತ್ತು ಯಾವುದೇ ಬದ್ಧತೆಗೆ ಒಳಗಾಗುವ ಮೊದಲು ಅದೇ ರೀತಿಯ ಮನಸ್ಥಿತಿಯನ್ನು ಹೊಂದಿರುವ ಜನರನ್ನು ತಮ್ಮ ಸಂಗಾತಿಗಳಾಗಿ ಆರಿಸಿಕೊಳ್ಳುತ್ತಿದ್ದಾರೆ.

  • Trending Desk
  • 3-MIN READ
  • Last Updated :
  • Share this:

ಕೆಲವು ದಶಕಗಳ ಹಿಂದೆ ಈ ಮದುವೆಗಳು (Marriages) ಈಗಿರುವ ಹಾಗೆ ಇರಲಿಲ್ಲ ಅಂತ ಹೇಳಬಹುದು. ಎಂದರೆ ಮೊದಲೆಲ್ಲಾ ಮನೆಯಲ್ಲಿ ಅಪ್ಪ ಅಮ್ಮ (Parents) ತೋರಿಸಿದ ಹುಡುಗ ಅಥವಾ ಹುಡುಗಿಯನ್ನು ಒಮ್ಮೆ ನೋಡಿ ಮದುವೆಯನ್ನು ನಿಶ್ಚಯ ಮಾಡುತ್ತಿದ್ದರು. ಬಹುತೇಕ ಸಂದರ್ಭಗಳಲ್ಲಿ ವಧು ವರರಿಗೆ (Bride And Groom) ಪರಸ್ಪರ ಮಾತಾಡಲು ಅವಕಾಶ ಸಿಗುತ್ತಿದ್ದು, ಮದುವೆಯಾದ (After Marriage Life) ನಂತರ ಅಂತ ಹೇಳಿದರೆ ತಪ್ಪಾಗುವುದಿಲ್ಲ. ನಂತರ ಸ್ವಲ್ಪ ಸಮಯ ಬದಲಾದಂತೆ ಹುಡುಗ ಹುಡುಗಿ ಇಬ್ಬರು ಮದುವೆ ನಿಶ್ಚಯವಾಗುವ ಮುಂಚೆ ಪರಸ್ಪರರ ಇಷ್ಟ ಕಷ್ಟಗಳನ್ನು ಮಾತಾಡಿ ತಿಳಿದುಕೊಳ್ಳಲು ಅವಕಾಶ ಸಿಕ್ಕಿತು ಅಂತ ಹೇಳಬಹುದು.


ಆದರೆ ಈಗ ವೈವಾಹಿಕ ಜೀವನಕ್ಕೆ ಕಾಲಿಡುವ ಭಾರತೀಯರು ನಂಬಿಕೆ ಮತ್ತು ಗೌರವದ ತಳಹದಿಯ ಮೇಲೆ ನಿರ್ಮಿಸಲಾದ ಅರ್ಥಪೂರ್ಣ ಮತ್ತು ಸಂತೃಪ್ತಿಕರ ಸಂಬಂಧವನ್ನು ಹುಡುಕುತ್ತಿದ್ದಾರೆ ಅಂತ ಹೇಳಬಹುದು.


ಇದರರ್ಥ ಇಂದು ಭಾರತೀಯರು ಮದುವೆ ಆಗುವಾಗ ತಮ್ಮ ಆದ್ಯತೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ ಮತ್ತು ಯಾವುದೇ ಬದ್ಧತೆಗೆ ಒಳಗಾಗುವ ಮೊದಲು ಅದೇ ರೀತಿಯ ಮನಸ್ಥಿತಿಯನ್ನು ಹೊಂದಿರುವ ಜನರನ್ನು ತಮ್ಮ ಸಂಗಾತಿಗಳಾಗಿ ಆರಿಸಿಕೊಳ್ಳುತ್ತಿದ್ದಾರೆ.


ಯುವ ಭಾರತೀಯರು ತಮ್ಮ ಸಂಭಾವ್ಯ ಸಂಗಾತಿಯಲ್ಲಿ ಬಯಸುವ 10 ಗುಣಗಳು ಇಲ್ಲಿವೆ ನೋಡಿ:


1.ಮದುವೆಗೂ ಮುನ್ನ ಸ್ನೇಹಪರ ಬಂಧವನ್ನು ಬೆಳೆಸುವುದು


ಸಂತೋಷದ ಮತ್ತು ಆರೋಗ್ಯಕರ ದಾಂಪತ್ಯದ ಅತ್ಯಂತ ನಿರ್ಣಾಯಕ ಅಡಿಪಾಯವೆಂದರೆ ಪರಸ್ಪರ ಬಲವಾದ ಸ್ನೇಹವನ್ನು ಸ್ಥಾಪಿಸುವುದು. ಸಂಗಾತಿಗಳಾಗುವ ಮುಂಚೆ ಸ್ನೇಹಿತರಾಗಿರುವುದು ಒಳ್ಳೆಯದು ಮತ್ತು ಇಬ್ಬರ ನಡುವೆ ಆರಾಮದಾಯಕ ಭಾವನೆಯನ್ನು ಬೆಳೆಸುತ್ತದೆ.


ಒಂದು ಬಂಧವನ್ನು ಬಲಪಡಿಸಲು ಮತ್ತು ಸುಧಾರಿಸಲು ಈ ಸ್ನೇಹ ಸಂಬಂಧ ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಭಾರತೀಯರು ಈಗ ಮದುವೆ ಮಾಡಿಕೊಳ್ಳುವಾಗ ಮದುವೆಗೂ ಮುಂಚೆ ಆ ವ್ಯಕ್ತಿಯನ್ನು ಮೊದಲು ಸ್ನೇಹಿತರಾಗಿ ಅರ್ಥಮಾಡಿಕೊಳ್ಳಲು ಬಯಸುತ್ತಿದ್ದಾರೆ ಮತ್ತು ಅವರು ನಿಜವಾಗಿಯೂ ಸರಿಯಾಗಿ ಹೊಂದಿಕೊಳ್ಳುವರೆ ಅಂತ ನೋಡುತ್ತಿದ್ದಾರೆ.


2.ಸತ್ಯಾಸತ್ಯತೆಯನ್ನು ನಿರೀಕ್ಷಿಸುವುದು


ಮದುವೆಯಾಗುವ ಮುಂಚೆ ಹುಡುಗ ಮತ್ತು ಹುಡುಗಿ ತಾನು ಕೈ ಹಿಡಿಯುವ ಸಂಗಾತಿಯ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿದುಕೊಂಡು ಒಂದು ವಿಶ್ವಾಸಾರ್ಹತೆಯ ಅಡಿಪಾಯದ ಮೇಲೆ ಮದುವೆಯ ಸಂಬಂಧವನ್ನು ನಿಲ್ಲಿಸಲು ನೋಡುತ್ತಾರೆ.


ನಿಮ್ಮ ನಿಜವಾದ ವ್ಯಕ್ತಿತ್ವವನ್ನು ತೋರಿಸದೆ, ಎಚ್ಚರಿಕೆಯಿಂದಿರುವ ನಡವಳಿಕೆಯನ್ನು ಕಾಪಾಡಿಕೊಂಡರೂ ಸಹ ಸಂಬಂಧದ ಒಂದು ಹಂತದಲ್ಲಿ ಅದು ಹೊರಗೆ ಬೀಳುತ್ತದೆ. ಇದು ಅಂತಿಮವಾಗಿ ನಿಮ್ಮ ಸಂಗಾತಿ ನಿಮ್ಮನ್ನು ಸಂಪೂರ್ಣವಾಗಿ ತಿಳಿದುಕೊಳ್ಳದಿರಲು ಕಾರಣವಾಗುತ್ತದೆ.


3.ಮುಕ್ತವಾಗಿ ಮಾತಾಡುವುದು


ವಿವಾಹ ಸಂಬಂಧವನ್ನು ಬಲಿಷ್ಠವಾಗಿಡಲು ಅಥವಾ ಮುರಿಯುವ ಅತಿದೊಡ್ಡ ಅಂಶವೆಂದರೆ ಸಂವಹನ ಅಂತ ಹೇಳಬಹುದು. ಎಂದರೆ ಮುಕ್ತವಾಗಿ ಮಾತಾಡುವುದು, ಇದು ಅತ್ಯಂತ ಪ್ರಮುಖ ಅಂಶವಾಗಿದೆ ಮತ್ತು ಪ್ರತಿಯೊಬ್ಬರೂ ತಮ್ಮ ಸಂಬಂಧದಲ್ಲಿ ಬಯಸುವ ವಿಷಯವಾಗಿದೆ.


ಇಬ್ಬರು ವ್ಯಕ್ತಿಗಳು ಒಟ್ಟಿಗೆ ಇದ್ದಾಗ, ಒಬ್ಬ ವ್ಯಕ್ತಿಯು ಇಷ್ಟಪಡಬಹುದಾದ ಅನೇಕ ಅಂಶಗಳು ಇರುತ್ತವೆ ಮತ್ತು ಇನ್ನೊಬ್ಬನು ಸಂಪೂರ್ಣವಾಗಿ ಇಷ್ಟಪಡದಿರಬಹುದು. ನಡವಳಿಕೆ, ಆಯ್ಕೆಗಳು ಅಥವಾ ನಿರ್ಣಾಯಕ ನಿರ್ಧಾರಗಳು, ಸಂವಹನವು ಪ್ರತಿಯೊಂದು ಸನ್ನಿವೇಶಕ್ಕೂ ಮುಖ್ಯವಾಗಿದೆ ಅಂತ ಹೇಳಬಹುದು.


ನಿಮ್ಮ ಸಂಗಾತಿಯ ಬಯಕೆಗಳು ಮತ್ತು ಅಗತ್ಯಗಳ ಬಗ್ಗೆ ಗಮನ ಹರಿಸಿ, ಅವರು ಎಂತಹ ಒಂದು ಪರಿಸರದಿಂದ ಬರುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ ಮತ್ತು ಇದಕ್ಕೆ ನಿಮ್ಮ ಪ್ರತಿಕ್ರಿಯೆಗಳನ್ನು ಗೌರವಯುತವಾಗಿ ಅವರಿಗೆ ಮುಕ್ತವಾಗಿ ಮಾತಾಡುವ ಮೂಲಕ ತಿಳಿಸಿರಿ.


4.ಪರಸ್ಪರರ ಸಂಬಂಧದ ಶೈಲಿಯನ್ನು ಅರ್ಥಮಾಡಿಕೊಳ್ಳುವುದು


ಹುಡುಗ ಮತ್ತು ಹುಡುಗಿ ಇಬ್ಬರು ವಿಭಿನ್ನವಾದ ಕುಟುಂಬದಲ್ಲಿ ಮತ್ತು ಸನ್ನಿವೇಶಗಳಲ್ಲಿ ಬೆಳೆದಿರುತ್ತಾರೆ ಮತ್ತು ವಿಭಿನ್ನ ವ್ಯಕ್ತಿತ್ವಗಳಿಗೆ ಹೊಂದಿಕೊಳ್ಳುತ್ತಾರೆ. ಯಾವುದೇ ಇಬ್ಬರು ವ್ಯಕ್ತಿಗಳು ಒಂದೇ ರೀತಿಯ ಮನೋಭಾವನೆಯನ್ನು ಹೊಂದಿರುವುದಿಲ್ಲ. ಈ ವ್ಯತ್ಯಾಸಗಳನ್ನು ಒಪ್ಪಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತವೆ.


ಉದಾಹರಣೆಗೆ, ವಾದ ಅಥವಾ ಜಗಳದ ಸಮಯದಲ್ಲಿ, ಒಬ್ಬ ಸಂಗಾತಿಯು ಮೌನವಾಗಿರಲು ಆಯ್ಕೆ ಮಾಡಬಹುದು ಮತ್ತು ಸಮಸ್ಯೆಯನ್ನು ಪರಿಹರಿಸಲು ಸ್ಪಷ್ಟವಾದ ಸಮಯ ತೆಗೆದುಕೊಂಡು ಮಾತಾಡಬಹುದು. ಆದರೆ ಇನ್ನೊಬ್ಬರು ಹಠಾತ್ ಆಗಿರಬಹುದು ಮತ್ತು ತಕ್ಷಣವೇ ಒಂದು ಇತ್ಯರ್ಥವನ್ನು ಬಯಸುವವರಾಗಿರಬಹುದು.


ಅಂತಹ ಪರಿಸ್ಥಿತಿಯು ಯಾವುದೇ ಸಂಬಂಧದಲ್ಲಿ ದೊಡ್ಡ ಪ್ರಕ್ಷುಬ್ಧತೆಯನ್ನು ಉಂಟು ಮಾಡಬಹುದು. ಇದಕ್ಕಾಗಿಯೇ ನಿಮ್ಮ ಸಂಗಾತಿಯು ಬೇರೆ ಬೇರೆ ಸಂದರ್ಭಗಳಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ.


5.ತಪ್ಪು ಮಾಡಿದಾಗ ಒಪ್ಪಿಕೊಳ್ಳುವುದು


ನಾವು ಯಾವಾಗಲೂ ಸರಿಯಾಗಿರುತ್ತೇವೆ ಅಂತ ಬಹುತೇಕರು ಅಂದು ಕೊಳ್ಳುತ್ತಾರೆ. ಆದರೆ ಅದು ತಪ್ಪು ಅಂತ ಹೇಳಬಹುದು. ಕೆಲವೊಮ್ಮೆ ನಾವು ತಪ್ಪಾಗಬಹುದು ಮತ್ತು ಬಹಳಷ್ಟು ಜನರಿಗೆ ಅದನ್ನು ಒಪ್ಪಿಕೊಳ್ಳುವುದು ಸಹ ಅಸಾಧ್ಯವಾಗಬಹುದು. ಆದರೆ ಪ್ರತಿಯೊಬ್ಬ ವ್ಯಕ್ತಿಯು ತಾವು ತಪ್ಪು ಮಾಡಿದಾಗ ಒಪ್ಪಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ.


ನೀವು ತಪ್ಪು ಮಾಡಿದ್ದೀರಿ ಎಂದು ಒಪ್ಪಿಕೊಳ್ಳಿ (ಕೆಲವೊಮ್ಮೆ ನೀವು ನಿಜವಾಗಿಯೂ ಮಾಡಿದ ಸಮಯಗಳಲ್ಲಿ) ಮತ್ತು ಅದೇ ಸಮಯದಲ್ಲಿ ಸೌಮ್ಯವಾಗಿರಿ ಮತ್ತು ನಿಮ್ಮ ಸಂಗಾತಿಯು ತಪ್ಪು ಮಾಡಿದಾಗ ದ್ವೇಷವನ್ನು ಬಿಟ್ಟುಬಿಡಿ.


6.ಆತ್ಮವಿಶ್ವಾಸ ಮತ್ತು ಸುರಕ್ಷಿತ ಭಾವನೆ


ಯುವ ಭಾರತೀಯರು ತಮ್ಮನ್ನು ಕೈ ಹಿಡಿಯುವ ಸಂಗಾತಿ ಆತ್ಮವಿಶ್ವಾಸ ಉಳ್ಳವರು ಮತ್ತು ಸುರಕ್ಷಿತ ಭಾವನೆಯನ್ನು ಮೂಡಿಸುವವರಾಗಿರಬೇಕು ಅಂತ ನಿರೀಕ್ಷೆ ಮಾಡುತ್ತಾರೆ. ಸಂಗಾತಿಯ ಕೆಲಸದ ಜೀವನದ ಬಗ್ಗೆ ಸುರಕ್ಷಿತವಾಗಿರುವ ಮತ್ತು ಸಂಬಂಧಗಳ ವಿಷಯಕ್ಕೆ ಬಂದಾಗ ಅವರು ಏನನ್ನು ನಿರೀಕ್ಷಿಸುತ್ತಾರೆ ಎಂದು ನಿಖರವಾಗಿ ತಿಳಿದಿರುವ ಯಾರನ್ನಾದರೂ ಭೇಟಿಯಾಗುವುದು ಅತ್ಯಂತ ನಿರಾಳವಾಗಿದೆ.


indian marriages, couple seeks qualikty, relationship qualities, kannada news, karnataka news, ಭಾರತೀಯರಮ ಮದುವೆಗಳು, ಜೋಡಿಗಳ ಗುಣಗಳು
ಸಾಂದರ್ಭಿಕ ಚಿತ್ರ


7.ಪರಸ್ಪರರ ವೈಯಕ್ತಿಕ ಜೀವನವನ್ನು ಗೌರವಿಸುವುದು


ನಿಮ್ಮ ಜೀವನದ ಎಲ್ಲಾ ಅಂಶಗಳು ಒಟ್ಟಿಗೆ ಹೆಣೆದುಕೊಂಡಿದ್ದರೂ ಸಹ, ಇಬ್ಬರು ವ್ಯಕ್ತಿಗಳು ಸಂಬಂಧ ಅಥವಾ ವೈವಾಹಿಕ ಜೀವನಕ್ಕೆ ಪ್ರವೇಶಿಸಿದಾಗ, ನಿಮ್ಮ ಸಂಗಾತಿಗೆ ಇನ್ನೂ ಸ್ವಲ್ಪ ವೈಯಕ್ತಿಕ ಸ್ಥಳದ ಅಗತ್ಯವಿದೆ ಎಂದು ತಿಳಿದುಕೊಳ್ಳಿ.


ಅವರ ಕುಟುಂಬ ಸದಸ್ಯರು, ಅವರು ಪರಸ್ಪರ ಹೊಂದಿರುವ ಚಲನಶೀಲತೆ ಮತ್ತು ಅವರ ವೈಯಕ್ತಿಕ ಆಯ್ಕೆಗಳು ಇನ್ನೂ ಅವರ ವೈಯಕ್ತಿಕ ಜೀವನದ ದೊಡ್ಡ ಭಾಗವಾಗಿದೆ ಮತ್ತು ಸಂಗಾತಿಯು ಅದಕ್ಕೆ ಅವಕಾಶ ನೀಡಬೇಕು. ಎಲ್ಲವನ್ನೂ ಹಂಚಿಕೊಳ್ಳಬೇಕಾಗಿಲ್ಲ ಮತ್ತು ಅದನ್ನು ಗೌರವಿಸುವುದು ಮದುವೆಯಲ್ಲಿ ಯುವ ವಯಸ್ಕರು ಹುಡುಕುವ ದೊಡ್ಡ ಗುಣವಾಗಿದೆ.


ಇದನ್ನೂ ಓದಿ:  Mehendi Hacks: ಕೈಯಲ್ಲಿ ಉಳಿದ ಅರ್ಧಂಬರ್ಧ ಮೆಹೆಂದಿ ತೆಗೆಯಲು ಇಲ್ಲಿವೆ ಸಿಂಪಲ್ ಟಿಪ್ಸ್​


8.ತನ್ನನ್ನು ತಾನೇ ನೋಡಿ ನಗುವ ಸಾಮರ್ಥ್ಯ


ಮದುವೆ ಜೀವನದಲ್ಲಿ ಹಾಸ್ಯ ಇರಲೇಬೇಕು, ಇದು ಮದುವೆ ಜೀವನಕ್ಕೆ ಉತ್ತಮ ಸೇರ್ಪಡೆಯಾಗಿದೆ. ಯಾರು ತಮ್ಮನ್ನು ತಾವು ನೋಡಿಕೊಂಡು ನಗಲು ಶಕ್ತರಾಗಿದ್ದಾರೋ, ಅವರು ಎಂತಹ ವಿಷಯಗಳನ್ನು ಸಹ ಸುಲಭವಾಗಿ ತೆಗೆದುಕೊಳ್ಳಬಲ್ಲರು ಮತ್ತು ಗಂಭೀರ ಸಂದರ್ಭಗಳನ್ನು ತಮ್ಮ ಹೃದಯಕ್ಕೆ ತೆಗೆದುಕೊಳ್ಳುವುದಿಲ್ಲ. ಅಂತಹ ಸಂದರ್ಭಗಳಲ್ಲಿ ತಮಾಷೆ ಮಾಡಿ ಪರಿಸ್ಥಿತಿಯನ್ನು ಹಗುರವಾಗಿಸುತ್ತಾರೆ.


9.ಯಾವಾಗಲೂ ತಮ್ಮನ್ನು ತಾವು ತಿದ್ದಿಕೊಳ್ಳುವ ಮನಸ್ಥಿತಿಯಿರುವ ವ್ಯಕ್ತಿಯನ್ನು ಹುಡುಕುತ್ತಾರೆ


ಮದುವೆಯಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಜೀವನದಲ್ಲಿ ಅನೇಕ ವಿಷಯಗಳನ್ನು ಹಂಚಿಕೊಂಡರೂ, ಅವರು ಇನ್ನೂ ವೈಯಕ್ತಿಕ ಗುರುತುಗಳು ಬೇರೆ ಆಗಿರುತ್ತವೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಎಲ್ಲವೂ ನಿಮ್ಮ ಸಂಗಾತಿಯ ಸುತ್ತ ಸುತ್ತುವುದಿಲ್ಲ. ಒಂದು ಸಂಬಂಧವು ತಮ್ಮ ಅತ್ಯುತ್ತಮ ಆವೃತ್ತಿಯಾಗಲು ಅವರನ್ನು ತಡೆಯಲು ಬಿಡಬಾರದು.


couple seeks these 10 quality in a marriage stg mrq
ಸಾಂದರ್ಭಿಕ ಚಿತ್ರ


ಇದು ನಿಮ್ಮ ವೃತ್ತಿಜೀವನವಾಗಿರಲಿ, ನಿಮ್ಮ ವೈಯಕ್ತಿಕ ಗುರಿಗಳಾಗಿರಲಿ ಅಥವಾ ನಿಮ್ಮ ಭಾವನಾತ್ಮಕ ವರ್ತನೆಯಾಗಿರಲಿ, ನಿಮ್ಮನ್ನು ನೀವು ತಿದ್ದಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಮತ್ತು ಯುವ ಇದು ವಯಸ್ಕರು ಮದುವೆಯಲ್ಲಿ ಹುಡುಕುವ ಪ್ರಮುಖ ಗುಣವಾಗಿದೆ.


10.ಪ್ರಗತಿಪರ ಮನಸ್ಥಿತಿ


ನೀವು ಒಂದು ನಿರ್ದಿಷ್ಟ ರೀತಿಯ ಸಂಬಂಧವನ್ನು ನೋಡುತ್ತಾ ಬೆಳೆದಿದ್ದೀರಿ. ನಿಮ್ಮ ಹಿಂದಿನ ಸಂಬಂಧದಲ್ಲಿ ನೀವು ನಿಮ್ಮದೇ ಆದ ಒಂದು ಅನುಭವವನ್ನು ಕಟ್ಟಿಕೊಂಡಿರುತ್ತೀರಿ. ಹಾಗಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಅವರ ಅನುಭವಗಳು ಬೇರೆ ಬೇರೆ ಆಗಿರುತ್ತವೆ ಅಂತ ಹೇಳಬಹುದು.


ಇಬ್ಬರು ಜನರು ಒಟ್ಟಿಗೆ ಸೇರಿದಾಗ ಅವರು ಅನನ್ಯ ಸಾಮರಸ್ಯದಲ್ಲಿ ಒಟ್ಟಿಗೆ ಸೇರುತ್ತಾರೆ. ಇತರ ಜನರು ಸಹ ಇದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಮುಂದೆ ಸಾಗಬೇಕು. ಜೀವನವು ಅದರ ಪಾಠಗಳಲ್ಲಿ ಬದಲಾಗಬಹುದು; ಆದರೆ ಪ್ರಗತಿಪರ ಮನಸ್ಥಿತಿಯನ್ನು ಹೊಂದಿರುವ ಯಾರಾದರೂ ತ್ವರಿತವಾಗಿ ಕಲಿಯಲು ಮತ್ತು ಮುಂದುವರಿಯಲು ಸಾಧ್ಯವಾಗುತ್ತದೆ.


ಇದನ್ನೂ ಓದಿ: Manicure Benefits: ಮೆನಿಕ್ಯೂರ್ ಉಗುರಿನ ಅಂದ ಹೆಚ್ಚಿಸೋದು ಮಾತ್ರ ಅಲ್ಲ, ಆರೋಗ್ಯ ಕಾಪಾಡೋಕೂ ಸಹಾಯ ಮಾಡುತ್ತೆ


ಯಾವುದರಲ್ಲಾದರೂ ಸಿಕ್ಕಿ ಹಾಕಿಕೊಳ್ಳುವುದರಲ್ಲಿ ಯಾವುದೇ ಸಂತೋಷವಿಲ್ಲ ಮತ್ತು ಇಂದಿನ ಯುವ ಭಾರತೀಯರು ಈ ಆಲೋಚನೆಯಿಂದ ಹೊರ ಬರಲು ಬಯಸುತ್ತಾರೆ, ಅವರು ಮುಂದೆ ನೋಡುವಷ್ಟು ಪ್ರಬುದ್ಧರಾಗಿದ್ದಾರೆ ಎಂದು ಹೇಳಬಹುದು.


ಅನೇಕ ವಿಧಗಳಲ್ಲಿ, ಇವುಗಳಲ್ಲಿ ಹೆಚ್ಚಿನವು ಮೊದಲು ನಿಮ್ಮನ್ನು ಅರ್ಥಮಾಡಿಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತವೆ. ಇಂದಿನ ಯುವ ಪೀಳಿಗೆ ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅಂತ ಹೇಳಬಹುದು.

First published: