HOME » NEWS » Lifestyle » COUPLE PAID FINED FOR HAVING SEX IN CAR STG SESR

ಸಾರ್ವಜನಿಕ ರಸ್ತೆಯಲ್ಲಿ ಕಾರ್‌ನಲ್ಲೇ ರೋಮ್ಯಾನ್ಸ್‌: ಕೋವಿಡ್ -19 ನಿಯಮ ಉಲ್ಲಂಘನೆ ಹೆಸರಲ್ಲಿ ಬಿತ್ತು 40,000 ರೂ. ದಂಡ..!

ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಪತಿಗೆ ಅಧಿಕಾರಿಗಳು 400 ಪೌಂಡ್‌ ಅಂದರೆ ಬರೋಬ್ಬರಿ 40,000 ರೂ. ದಂಡ ವಿಧಿಸಿದ್ದಾರೆ.

news18-kannada
Updated:March 6, 2021, 8:26 PM IST
ಸಾರ್ವಜನಿಕ ರಸ್ತೆಯಲ್ಲಿ ಕಾರ್‌ನಲ್ಲೇ ರೋಮ್ಯಾನ್ಸ್‌: ಕೋವಿಡ್ -19 ನಿಯಮ ಉಲ್ಲಂಘನೆ ಹೆಸರಲ್ಲಿ ಬಿತ್ತು 40,000 ರೂ. ದಂಡ..!
ಸಾಂದರ್ಭಿಕ ಚಿತ್ರ
  • Share this:
ಕೊರೊನಾ ಸಾಂಕ್ರಾಮಿಕ ಇಡೀ ಜಗತ್ತನ್ನೇ ಕಾಡುತ್ತಿದ್ದು, ಲಕ್ಷಾಂತರ ಜನರನ್ನು ಬಲಿಯನ್ನೂ ಪಡೆದಿದೆ. ಈ ಹಿನ್ನೆಲೆ ಮಹಾಮಾರಿ ಕೊರೊನಾ ನಿಯಂತ್ರಿಸಲು ಅನೇಕ ದೇಶಗಳು ಲಾಕ್‌ಡೌನ್‌, ಕೋವಿಡ್ - 19 ನಿಯಮಾವಳಿಗಳನ್ನು ವಿಧಿಸಿವೆ. ಆದರೆ, ಸಾರ್ವಜನಿಕರು ಇದನ್ನು ಉಲ್ಲಂಘಿಸುತ್ತಲೇ ಇರುತ್ತಾರೆ. ಇದೇ ರೀತಿ, ಯುಕೆಯಲ್ಲಿ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಇದು ಮಾಮೂಲಿ ಅಂತೀರಾ.. ಆದರೆ, ದಂಡ ವಿಧಿಸಲು ಇರುವ ಕಾರಣ ಕೇಳಿದರೆ ನೀವು ನಗುವುದು ಗ್ಯಾರಂಟಿ. 

ಲಾಕ್‌ಡೌನ್ ಮತ್ತು ಕಟ್ಟುನಿಟ್ಟಾದ ಕ್ವಾರಂಟೈನ್‌ ನಿಯಮಗಳನ್ನು ಅನುಸರಿಸುವುದು  ಕಷ್ಟ. ಆದರೆ ಕೆಲವೊಮ್ಮೆ ಜನರು ಕೋವಿಡ್ -19 ಲಾಕ್‌ಡೌನ್ ನಿಯಮಗಳನ್ನು ಅತ್ಯಂತ ಮುಜುಗರದ ರೀತಿಯಲ್ಲಿ ಉಲ್ಲಂಘಿಸುತ್ತಾರೆ. ರೇಡಿಯೋ, ಟಿವಿ, ಸೋಷಿಯಲ್ ಮೀಡಿಯಾ, ಪತ್ರಿಕೆ ಮತ್ತು ಅಂತರ್ಜಾಲದಲ್ಲಿ ಮಾರ್ಗಸೂಚಿಗಳನ್ನು ಪದೇ ಪದೇ ಹೇಳಿದರೂ, ಜನರು ಅನ್ಯೋನ್ಯತೆಯ ಕೆಲವು ಕ್ಷಣಗಳವರೆಗೆ ಅದನ್ನೆಲ್ಲ ಅಪಾಯಕ್ಕೆ ದೂಡುತ್ತಾರೆ. ಅಂತಹ ಒಂದು ವಿಲಕ್ಷಣ ಘಟನೆ ಯುಕೆಯ ಡರ್ಬಿಯಲ್ಲಿ ನಡೆದಿದೆ.

ಮಾರ್ಚ್ 1, ಸೋಮವಾರ ರಾತ್ರಿ ರಸ್ತೆಯ ಲೇ - ಬೈನಲ್ಲಿ ಲೈಂಗಿಕ ಸಂಬಂಧ ಹೊಂದಿದ್ದ ದಂಪತಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಹಿನ್ನೆಲೆ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಪತಿಗೆ ಅಧಿಕಾರಿಗಳು 400 ಪೌಂಡ್‌ ಅಂದರೆ ಬರೋಬ್ಬರಿ 40,000 ರೂ. ದಂಡ ವಿಧಿಸಿದ್ದಾರೆ. ಅವರ ಪ್ರಯಾಣ ಅನಗತ್ಯವಾಗಿತ್ತು ಎಂದೂ ಅವರು ಪರಿಗಣಿಸಿದ್ದಾರೆ. ದಂಪತಿ ಬೆತ್ತಲೆಯಾಗಿರುವುದನ್ನು ಡರ್ಬಿ ಬಳಿಯ ಮೊರ್ಲಿ ಪ್ರದೇಶದಲ್ಲಿ ಡರ್ಬಿಶೈರ್ ಪೊಲೀಸರು ನೋಡಿದ್ದಾರೆ. ಬಳಿಕ ದಂಪತಿ ಮುಜುಗರ ಅನುಭವಿಸಿದ್ದಾರೆ ಎಂದೂ ಪೊಲೀಸ್ ವಕ್ತಾರರು ವಿವರಿಸಿದ್ದಾರೆ.

ಈ ಜೋಡಿಗೆ ತಲಾ 200 ಪೌಂಡ್‌ ದಂಡ ವಿಧಿಸಲಾಗಿದೆ. ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಿಗದಿತ ದಂಡದ ನೋಟಿಸ್ ಮತ್ತು ಡರ್ಬಿಶೈರ್ ಪೊಲೀಸ್ ಅಧಿಕಾರಿಗಳು ಗಾಂಜಾ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇದನ್ನು ಓದಿ: ತೃತೀಯ ಲಿಂಗಿಗಳು ರಕ್ತದಾನ ಮಾಡುವ ಹಾಗಿಲ್ಲ: 2017 ರ ಮಾರ್ಗಸೂಚಿ ಬಗ್ಗೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ನೋಟಿಸ್

ಎರೆವಾಶ್ ಪ್ರತಿಕ್ರಿಯೆ ಘಟಕ ಟ್ವಿಟ್ಟರ್‌ ಪೇಜ್‌ನಲ್ಲಿ ಈ ಬಗ್ಗೆ ಟ್ವೀಟ್‌ ಅನ್ನೂ ಮಾಡಲಾಗಿದೆ. ಈ ಟ್ವೀಟ್‌ಗೆ ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಗಳನ್ನೂ ನೀಡಿದ್ದಾರೆ.

ಈ ಹಿಂದೆಯೂ ಸಾರ್ವಜನಿಕ ಪ್ರದೇಶಗಳಲ್ಲಿ ರೊಮ್ಯಾನ್ಸ್ ಮಾಡಿದ ಸಂಬಂಧ ಪೊಲೀಸರು ಹಲವರಿಗೆ ದಂಡ ವಿಧಿಸಿದ್ದಾರೆ. ಕಳೆದ ತಿಂಗಳು ನಡೆದ ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, ದಕ್ಷಿಣ ಡರ್ಬಿಶೈರ್ ಪೊಲೀಸರು ಕಾರಿನಲ್ಲಿ ಲೈಂಗಿಕ ಸಂಬಂಧ ಹೊಂದಿದ್ದಕ್ಕಾಗಿ ದಂಪತಿಗೆ ದಂಡ ವಿಧಿಸಿದ್ದರು. ಆಸ್ಟ್ರೇಲಿಯದ ಮೆಲ್ಬೋರ್ನ್‌ ಬಳಿಯ ಸ್ಟಾಂಟನ್ ಹೆರಾಲ್ಡ್ ಜಲಾಶಯದಲ್ಲಿ ಗೆಳತಿಯನ್ನು ಭೇಟಿಯಾಗಲು 100 ಮೈಲಿ ವಾಹನ ಚಲಾಯಿಸಿಕೊಂಡು ಹೋಗಿದ್ದ ವ್ಯಕ್ತಿ, ಗೆಳತಿ ಜತೆ ರೊಮ್ಯಾನ್ಸ್ ಮಾಡುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.ಇಂಗ್ಲೆಂಡ್‌ನ ವಿಲ್ಲಿಂಗ್ಟನ್‌ ಮರ್ಸಿಯಾ ಮರೀನಾದಲ್ಲಿ ಫಿಯಟ್‌ ಕಾರಿನಲ್ಲಿ ಮತ್ತೊಬ್ಬ ದಂಪತಿ ಸಹ ಲೈಂಗಿಕ ಸಂಬಂಧ ಹೊಂದಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.
Published by: Seema R
First published: March 6, 2021, 8:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories